1611762110915 WhatsApp Image 2021 01 27 at 1.44.33 PM

ಜನವರಿ 28 ರಿಂದ ಫೆಬ್ರವರಿ 5 ರವರೆಗೆ ಅಧಿವೇಶನ….!

STATE Genaral

ಜನವರಿ 28 ರಿಂದ ಫೆಬ್ರವರಿ 5 ರವರೆಗೆ ಅಧಿವೇಶನ

ಬೆಂಗಳೂರು, ಜನವರಿ 27 (ಕರ್ನಾಟಕ ವಾರ್ತೆ):
ಜನವರಿ 28 ರಂದು ಆರಂಭವಾಗುವ ಉಭಯ ಸದನಗಳ ಜಂಟಿ ಅಧಿವೇಶನವನ್ನುದ್ದೇಶಿಸಿ ರಾಜ್ಯಪಾಲ ವಜೂಭಾಯಿ ವಾಲಾ ಅವರು ಭಾಷಣ ಮಾಡಲಿದ್ದು,  ಈ ಅಧಿವೇಶನ ಫೆಬ್ರವರಿ 5 ರವರೆಗೆ ಒಟ್ಟು 7 ದಿನಗಳ ಕಾಲ ನಡೆಯಲಿದೆ ಎಂದು ರಾಜ್ಯ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇಂದು ಇಲ್ಲಿ ತಿಳಿಸಿದರು.

ಇಂದು ವಿಧಾನ ಸೌಧದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅಧಿವೇಶನದ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಳ್ಳಲಾಗಿದ್ದು ನಾಳಿನ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಲು ರಾಜ್ಯಪಾಲರನ್ನು ಸಹಾ ಆಹ್ವಾನಿಸಲಾಗಿದೆ.  ರಾಜ್ಯಪಾಲರ ಭಾಷಣದ ನಂತರ ಇತ್ತೀಚೆಗೆ ನಿಧನರಾದ ಗಣ್ಯವ್ಯಕ್ತಿಗಳಿಗೆ ಸಂತಾಪ ಸಲ್ಲಿಸಲಾಗುವುದು ಎಂದು ಹೇಳಿದರು.

1611762126391 WhatsApp Image 2021 01 27 at 12.00.34

ಒಟ್ಟು 7 ದಿನಗಳ ಅಧಿವೇಶನದಲ್ಲಿ 6 ದಿನಗಳನ್ನು ಪ್ರಶ್ನೋತ್ತರ ಕಲಾಪಗಳಿಗಾಗಿ ಮೀಸಲಿರಿಸಲಾಗಿದ್ದು, ಈವರೆಗೆ ಸರ್ಕಾರದಿಂದ 11 ವಿಧೇಯಕಗಳು ಚರ್ಚೆಗಾಗಿ ಸಲ್ಲಿಸಲಾಗಿದೆ.  ಇದೇ ಅಧಿವೇಶನದಲ್ಲಿ ಒಂದು ದೇಶ ಒಂದು ಚುನಾವಣೆ ವಿಷಯವನ್ನು ಚರ್ಚಿಸಲು ನಿರ್ಧರಿಸಲಾಗಿದ್ದು ದಿನಾಂಕವನ್ನು ಶೀಘ್ರದಲ್ಲಿ ತಿಳಿಸಲಾಗುವುದು.
ಕೋವಿಡ್ ಹಿನ್ನೆಲೆಯಲ್ಲಿ ಈ ಭಾರಿಯ ಅಧಿವೇಶನದಲ್ಲಿ ಈ ಹಿಂದಿನ ಅಧಿವೇಶನಗಳಂತೆ ಮುನ್ನಚ್ಚರಿಕೆ ಕ್ರಮಗಳನ್ನು ವಹಿಸಲಾಗಿದ್ದು ಅಧಿವೇಶನ ನೋಡಲು ಸಾರ್ವಜನಿಕರಿಗೆ ಪ್ರವೇಶವಿರುವುದಿಲ್ಲ.  ಅಧಿವೇಶನದಲ್ಲಿ ಪಾಲ್ಗೊಳ್ಳಲು ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಹಾಗೂ

ಮಾಧ್ಯಮಪ್ರತಿನಿಧಿಗಳಿಗೆ ಕಡ್ಡಾಯ ಕೋವಿಡ್ ಪರೀಕ್ಷೆಯ ಅವಶ್ಯಕತೆ ಇರುವುದಿಲ್ಲ.  ಆದರೆ, ಮಾಸ್ಕ್, ಸ್ಯಾನಿಟೈಸರ್ ಸೇರಿದಂತೆ ಮುಂಜಾಗರೂಕತಾ ಕ್ರಮಗಳನ್ನು ಪಾಲಿಸಬೇಕು, ಅನಾರೋಗ್ಯ ಅಥವಾ ಕೋವಿಡ್ ಲಕ್ಷಣಗಳು ಕಂಡು ಬಂದಲ್ಲಿ ಅಧಿವೇಶನದ ಆವರಣದಲ್ಲಿ ಸ್ಥಾಪಿಸಲಾಗಿರುವ ಕೋವಿಡ್ ಪರೀಕ್ಷೆ ವಿಶೇಷ ಘಟಕದಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬಹುದು ಎಂದು ತಿಳಿಸಿದರು.
ಮಾರ್ಚ್ ಮೊದಲವಾರದಲ್ಲಿ ಬಜೆಟ್ ಅಧಿವೇಶನ ಆರಂಭವಾಗಲಿದ್ದು ಈ ಕುರಿತು ಸರ್ಕಾರ ಶೀಘ್ರದಲ್ಲಿಯೇ ದಿನಾಂಕವನ್ನು ಪ್ರಕಟಿಸಲಿದೆ. 1611762132780 1611762099582 WhatsApp Image 2021 01 27 at 12.00.35

ಜನವರಿ 26 ರಂದು ನವದೆಹಲಿಯಲ್ಲಿ ನಡೆದ ರೈತ ಚಳುವಳಿಯ ಹಿಂಸಾತ್ಮಕ ಘಟನೆಯನ್ನು ಖಂಡಿಸುತ್ತೇನೆ. ಸಂವಿಧಾನಾತ್ಮಕವಾಗಿ ಪ್ರತಿಭಟನೆ ಮಾಡಲು ಎಲ್ಲರಿಗೂ ಅವಕಾಶವಿದ್ದು ಈ ರೀತಿಯ ಘಟನೆ ಮರುಕಳಿಸದಂತೆ ಎಲ್ಲರೂ ಜವಾಬ್ದಾರಿ ವಹಿಸಬೇಕಾದ ಅವಶ್ಯಕತೆ ಇದೆ ಎಂದು ಅಭಿಪ್ರಾಯವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ವಿಧಾನ ಸಭೆಯ ಕಾರ್ಯದರ್ಶಿ ಶ್ರೀಮತಿ ಎಂ.ಕೆ. ವಿಶಾಲಾಕ್ಷಿ ಅವರು ಉಪಸ್ಥಿತರಿದ್ದರು.