ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಾಗೂ ಗರ್ಭಿಣಿಯರಿಗೆ ಆಹಾರ ಹಾಗೂ ಹಣ್ಣು ಹಂಪಲು ವಿತರಣೆ.
ಪಾವಗಡ.ದೇಶಾದ್ಯಂತ ಲಾಕ್‌ಡೌನ್ ಇರುವ ಹಿನ್ನೆಲೆಯಲ್ಲಿ ಬಡವರು, ಭಿಕ್ಷುಕರು, ನಿರ್ಗತಿಕರು, ಕೂಲಿ ಕಾರ್ಮಿಕರು ಒಂದು ಹೊತ್ತಿನ ಊಟ ಮಾಡುವುದಕ್ಕೂ ಪರದಾಡುತ್ತಿದ್ದಾರೆ. ಹೀಗಾಗಿ ಬಡವರ ಹೊಟ್ಟೆ ತುಂಬಿಸಲು ಕರ್ನಾಟಕ ರಕ್ಷಣಾ ವೇದಿಕೆ ( ಪ್ರವೀಣ್ ಶೆಟ್ಟಿ ಬಳಗದ ವತಿಯಿಂದ) ಆಹಾರ ಸಿದ್ಧಪಡಿಸಿದ ಆಹಾರ ಹಾಗೂ ಹಣ್ಣು ಹಂಪಲು ಪಟ್ಟಣದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಾಗೂ ಗರ್ಭಿಣಿಯರಿಗೆ ಬಡವರಿಗೆ ಹಂಚುತ್ತಿದ್ದಾರೆ
ಆಹಾರವನ್ನು ಬಡವರು, ನಿರ್ಗತಿಕರು ಹಾಗೂ ಹಸಿದವರಿಗೆ ವಿತರಣೆ ಮಾಡಿದರು ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನ ಕಾರ್ಯದರ್ಶಿ ಓಂಕಾರನಾಯಕ ಮಾತನಾಡಿ ಮಹಾಮಾರಿ ಕೊರೋನಾ 2 ಭೀತಿ ಹಿನ್ನೆಲೆ ಲಾಕ್ ಡೌನ್ ಆದ ಪರಿಣಾಮ ಬಡವರಿಗೆ, ನಿರ್ಗತಿಕರಿಗೆ, ಕೂಲಿ ಕಾರ್ಮಿಕರಿಗೆ ಆಹಾರದ ತೊಂದರೆ ಉಂಟಾಗಿದ್ದು ಈ ಸಂದರ್ಭದಲ್ಲಿ ನಮ್ಮ ಸಂಘಟನೆ ವತಿಯಿಂದ ಕೈಲಾದಷ್ಟು ಸಹಾಯ ಮಾಡುವುದರ ಜೊತೆಗೆ ಈಗಾಗಲೇ ಈ ಹಿಂದೆಯೂ ಸಹ ನಮ್ಮ ಕೈಲಾದ ಸಹಾಯ ಮಾಡೀದ್ದೇವೆ ಲಾಕ್‌ಡೌನ್ ಜಾರಿಯಿಂದ ಬಡವರು, ಕೂಲಿ ಕಾರ್ಮಿಕರು ಜೀವನ ನಡೆಸುವುದು ಕಷ್ಟವಾಗಿದ್ದು, ಸರಕಾರ ತಕ್ಕ ಮಟ್ಟಿನ ನೆರವು ನೀಡುತ್ತಿದೆ. ಸಾಮಾಜಿಕ ಕಳಕಳಿ ಹೊಂದಿರುವ ಎಲ್ಲರೂ ಕೈಲಾದಷ್ಟು ಸಹಾಯ ಮಾಡಬೇಕು ಎಂದು ಹೇಳಿದರು ಅಧ್ಯಕ್ಷ ಲಕ್ಷ್ಮೀನಾರಾಯಣ.
ಉಪಾಧ್ಯಕ್ಷ ನರಸಿಪಾಟೀಲ್ ಯೂತ್ ಅಧ್ಯಕ್ಷ ಪ್ರಶಾಂತ್. ಯೂತ್ ಉಪಾಧ್ಯಕ್ಷ ಗೋಪಾಲಕೃಷ್ಣ ರಾಮಾಂಜಿ ನಾಯಕ ಅಶೋಕ್ ಕುಮಾರ್ ಕುಮಾರ್. ರಂಗನಾಥ್.
ಪ್ರಧಾನ ಕಾರ್ಯದರ್ಶಿ ಓಂಕಾರನಾಯಕ,ನರಸಿಂಹ ದುಬ್ಬಿ
ಪ್ರಶಾಂತ್ ಅನಿಲ್ ಕುಮಾರ್ ಯಾದವ್ಮಹಿಳಾ ಅಧ್ಯಕ್ಷೆ
ಶಶಿಕಲಾ, ಹನುಮಂತ, ನಾಗರಾಜು,ಶ್ರೀನಿವಾಸ ನಾಯಕ
ನಾಗೇಂದ್ರ, ಅಘೋರ ರಂಗನಾಯಕ, ಮಂಜುನಾಥ್, ನರೇಶ್, ಹರೀಶ್ ಕುಮಾರ್ ಮಂಜು ಹಾಜರಿದ್ದರು.
ವರದಿ: ಬುಲೆಟ್ ವೀರಸೇನ ಯಾದವ್