ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋಕಾನ್ಫರೆನ್ಸಿಂಗ್ ಮೂಲಕ ಇಂದು ರಾಜ್ಯ ಮತ್ತು ಜಿಲ್ಲೆಗಳಕ್ಷೇತ್ರಾಧಿಕಾರಿಗಳೊಂದಿಗೆ ಕೋವಿಡ್ -19 ಸಾಂಕ್ರಾಮಿಕದನಿರ್ವಹಣೆಯಲ್ಲಿನ ಅನುಭವ ಕುರಿತಂತೆ ಸಂವಾದನಡೆಸಿದರು. ಈ ಸಂವಾದದಲ್ಲಿ ಕೋವಿಡ್ -19 ವಿರುದ್ಧದಹೋರಾಟದಲ್ಲಿ ವಿವಿಧ ಜಿಲ್ಲೆಗಳಲ್ಲಿ ಕ್ಷೇತ್ರ ಮಟ್ಟದಲ್ಲಿಪಾಲ್ಗೊಳ್ಳುತ್ತಿರುವವರು ಭಾಗಿಯಾಗಿದ್ದರು.
ಸಂವಾದದ ವೇಳೆ ಅಧಿಕಾರಿಗಳು ಕೋವಿಡ್ ಎರಡನೇಅಲೆಯ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿನಿಂತು ಮಾರ್ಗದರ್ಶನ ಮಾಡುತ್ತಿರುವಪ್ರಧಾನಮಂತ್ರಿಯವರಿಗೆ ಧನ್ಯವಾದ ಅರ್ಪಿಸಿದರು. ತಮ್ಮಅನುಭವಗಳನ್ನು ಪ್ರಧಾನಮಂತ್ರಿಯವರೊಂದಿಗೆಹಂಚಿಕೊಂಡ ಅಧಿಕಾರಿಗಳು, ಇತ್ತೀಚೆಗೆ ಹೆಚ್ಚಳವಾದಪ್ರಕರಣಗಳನ್ನು ತಗ್ಗಿಸಲು ಕೈಗೊಂಡ ನಾವಿನ್ಯಪೂರ್ಣಕ್ರಮಗಳ ಬಗ್ಗೆಯೂ ವಿವರಿಸಿದರು. ವೈದ್ಯಕೀಯಮೂಲಸೌಕರ್ಯ ವರ್ಧನೆ ಮತ್ತು ಗ್ರಾಮೀಣಪ್ರದೇಶಗಳಲ್ಲಿ ಸಾಮರ್ಥ್ಯವರ್ಧನೆಗೆ ಕೈಗೊಂಡಿರುವಕ್ರಮಗಳ ಬಗ್ಗೆಯೂ ಮಾಹಿತಿ ನೀಡಿದರು. ಉತ್ತಮರೂಢಿಗಳನ್ನು ಮತ್ತು ನಾವಿನ್ಯ ಪೂರ್ಣ ಕ್ರಮಗಳನ್ನುಕ್ರೋಡೀಕರಿಸುವಂತೆ ತಿಳಿಸಿದ ಪ್ರಧಾನಮಂತ್ರಿಯವರು, ಅವುಗಳು ದೇಶದ ಇತರ ಜಿಲ್ಲೆಗಳಲ್ಲೂಬಳಸಬಹುದೆಂದರು.
ಸಂವಾದದ ಬಳಿಕ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದಪ್ರಧಾನಮಂತ್ರಿಯವರು, ಈ ಸಂಕಷ್ಟದ ಸಮಯದಲ್ಲಿರಾಷ್ಟ್ರದ ಆರೋಗ್ಯ ಕಾರ್ಯಕರ್ತರು, ಮುಂಚೂಣಿಕಾರ್ಯಕರ್ತರು ಮತ್ತು ಆಡಳಿತಗಾರರು ತೋರಿದಸಮರ್ಪಣೆ ಮತ್ತು ಪರಿಶ್ರಮವನ್ನು ಶ್ಲಾಘಿಸಿದರು ಮತ್ತುಇದೇ ರೀತಿಯ ಚೈತನ್ಯದಿಂದ ಮುಂದುವರಿಯುವಂತೆಅವರನ್ನು ಆಗ್ರಹಿಸಿದರು. ದೇಶದ ಪ್ರತಿಯೊಂದುಜಿಲ್ಲೆಯೂ ವಿಭಿನ್ನವಾಗಿದ್ದು, ತನ್ನದೇ ಆದ ವಿಶಿಷ್ಟಸವಾಲುಗಳನ್ನು ಎದುರಿಸುತ್ತಿದೆ ಎಂದ ಪ್ರಧಾನಮಂತ್ರಿ “ನಿಮ್ಮ ಜಿಲ್ಲೆಯ ಸವಾಲುಗಳನ್ನು ನೀವು ಚೆನ್ನಾಗಿಅರ್ಥಮಾಡಿಕೊಂಡಿದ್ದೀರಿ. ಆದ್ದರಿಂದ ನಿಮ್ಮ ಜಿಲ್ಲೆ ಗೆದ್ದಾಗ, ದೇಶವು ಗೆಲ್ಲುತ್ತದೆ. ನಿಮ್ಮ ಜಿಲ್ಲೆಯು ಕರೋನಾವನ್ನುಮಣಿಸಿದಾಗ, ದೇಶವು ಕರೋನಾವನ್ನು ಮಣಿಸುತ್ತದೆ.” ಎಂದು ಪ್ರಧಾನಮಂತ್ರಿಯವರು ಅಧಿಕಾರಿಗಳಿಗೆತಿಳಿಸಿದರು. ಕೋವಿಡ್ -19 ಸೋಂಕಿನ ನಡುವೆಯೂರಜೆಯನ್ನೂ ಪಡೆಯದೆ ಕಾರ್ಯ ನಿರ್ವಹಿಸುತ್ತಿರುವಅಧಿಕಾರಿಗಳನ್ನು ಅವರು ಪ್ರಶಂಸಿಸಿದರು. ಅವರುಹಲವರಿಗೆ ಸ್ಫೂರ್ತಿಯಾಗಿದ್ದಾರೆ ಮತ್ತು ಅವರ ತ್ಯಾಗವನ್ನುತಾವು ಅರ್ಥ ಮಾಡಿಕೊಳ್ಳುವುದಾಗಿ ತಿಳಿಸಿದರು.
ಕೊರೊನಾ ವಿರುದ್ಧ ದೇಶ ನಡೆಸುತ್ತಿರುವ ಈಹೋರಾಟದಲ್ಲಿ ಫೀಲ್ಡ್ ಕಮಾಂಡರ್ ಗಳಂತೆ ಮಹತ್ವದಪಾತ್ರವನ್ನು ಎಲ್ಲ ಅಧಿಕಾರಿಗಳು ವಹಿಸುತ್ತಿದ್ದಾರೆ ಎಂದುಪ್ರಧಾನಮಂತ್ರಿ ಹೇಳಿದರು. ಸ್ಥಳೀಯ ಕಂಟೈನ್ಮೆಂಟ್ವಲಯಗಳು, ತೀವ್ರ ಪರೀಕ್ಷೆ ಮತ್ತು ಜನರಿಗೆ ಸಂಪೂರ್ಣಮತ್ತು ಸರಿಯಾದ ಮಾಹಿತಿ ನೀಡುವುದು ಈವೈರಾಣುವಿನ ವಿರುದ್ಧದ ಅಸ್ತ್ರಗಳಾಗಿವೆ ಎಂದರು. ಈಸಮಯದಲ್ಲಿ, ಕೆಲವು ರಾಜ್ಯಗಳಲ್ಲಿ ಕೊರೊನಾ ಸೋಂಕುಇಳಿಮುಖವಾಗುತ್ತಿದ್ದರೆ, ಮತ್ತೆ ಹಲವು ರಾಜ್ಯಗಳಲ್ಲಿಹೆಚ್ಚಳವಾಗುತ್ತಿದೆ ಎಂದರು. ಈ ನಿಟ್ಟಿನಲ್ಲಿ ಸೋಂಕುತಗ್ಗಿಸುವ ವಿಚಾರದಲ್ಲಿ ಹೆಚ್ಚು ಜಾಗರೂಕರಾಗಿರುವಂತೆತಿಳಿಸಿದರು. ಈ ಹೋರಾಟ ಪ್ರತಿಯೊಬ್ಬರ ಜೀವವನ್ನುಉಳಿಸುವತ್ತ ಗಮನ ಹರಿಸಬೇಕು ಮತ್ತು ಗ್ರಾಮೀಣಮತ್ತು ದುರ್ಗಮ ಪ್ರದೇಶಗಳ ಬಗ್ಗೆ ಹೆಚ್ಚಿನ ಗಮನಇಡಬೇಕು ಎಂದರು. ಗ್ರಾಮೀಣ ಜನರಿಗೆ ಪರಿಹಾರಸಾಮಗ್ರಿಗಳು ಸುಲಭವಾಗಿ ದೊರಕುವಂತೆ ಮಾಡುವಂತೆಅವರು ಅಧಿಕಾರಿಗಳಿಗೆ ಆಗ್ರಹಿಸಿದರು.
ತಮ್ಮ ಜಿಲ್ಲೆಯಲ್ಲಿನ ಪ್ರತಿಯೊಬ್ಬ ನಾಗರಿಕರ ಸುಗಮಜೀವನದ ಬಗ್ಗೆಯೂ ಕಾಳಜಿ ವಹಿಸುವಂತೆಪ್ರಧಾನಮಂತ್ರಿಯವರು ಅಧಿಕಾರಿಗಳಿಗೆ ತಿಳಿಸಿದರು. ಸೋಂಕು ಹರಡದಂತೆ ತಡೆಯುವುದು ಅಗತ್ಯವಾಗಿದೆಎಂದು ಒತ್ತಿ ಹೇಳಿದ ಅವರು, ಅದೇ ವೇಳೆ ಅಗತ್ಯವಸ್ತುಗಳ ಪೂರೈಕೆಯಲ್ಲಿ ತಡೆಯಾಗದಂತೆಖಾತ್ರಿಪಡಿಸುವುದೂ ಮುಖ್ಯ ಎಂದರು. ಪಿ.ಎಂ. ಕೇರ್ಸ್ನಿಧಿಯ ಮೂಲಕ ದೇಶದ ಪ್ರತಿಯೊಂದು ಜಿಲ್ಲೆಯಲ್ಲಿಯಆಸ್ಪತ್ರೆಯಲ್ಲಿಯೂ ಆಮ್ಲಜನಕ ಉತ್ಪಾದನಾಸ್ಥಾವರಗಳನ್ನು ಸ್ಥಾಪಿಸುವ ಕಾಮಗಾರಿ ತ್ವರಿತವಾಗಿನಡೆಯುತ್ತಿದೆ ಎಂದು ಮಾಹಿತಿ ನೀಡಿದ ಅವರು, ಹಲವುಆಸ್ಪತ್ರೆಗಳಲ್ಲಿ ಈ ಸ್ಥಾವರಗಳು ಈಗಾಗಲೇ ಕಾರ್ಯಾರಂಭಮಾಡಿವೆ ಎಂದು ತಿಳಿಸಿದರು.
ಲಸಿಕೆ ಹಾಕುವುದು ರೋಗದ ತೀವ್ರತೆಯನ್ನು ಕಡಿಮೆಮಾಡಲು ಮತ್ತು ಆಸ್ಪತ್ರೆಗೆ ದಾಖಲಾಗುವುದನ್ನು ಮತ್ತುಮರಣ ಪ್ರಮಾಣವನ್ನು ತಗ್ಗಿಸಲು ಹೇಗೆ ಸಹಾಯಮಾಡುತ್ತದೆ ಎಂಬ ಕುರಿತಂತೆ ಪ್ರಧಾನಮಂತ್ರಿಮಾತನಾಡಿದರು. ಕರೋನಾ ಲಸಿಕೆ ಪೂರೈಕೆಯನ್ನು ಬಹಳದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಲು ನಿರಂತರ ಪ್ರಯತ್ನಗಳುನಡೆಯುತ್ತಿವೆ ಎಂದರು. ಲಸಿಕೆ ಹಾಕುವ ವ್ಯವಸ್ಥೆ ಮತ್ತುಪ್ರಕ್ರಿಯೆಯನ್ನು ಆರೋಗ್ಯ ಸಚಿವಾಲಯಸುವ್ಯವಸ್ಥಿತಗೊಳಿಸುತ್ತಿದೆ ಎಂದು ಅವರು ತಿಳಿಸಿದರು. ರಾಜ್ಯಗಳಿಗೆ 15 ದಿನಗಳ ಮುಂಚಿತವಾಗಿಯೇ ವೇಳಾಪಟ್ಟಿನೀಡುವ ಪ್ರಯತ್ನಗಳು ನಡೆಯುತ್ತಿವೆ ಎಂದ ಅವರು, ಲಸಿಕೆ ವ್ಯರ್ಥವಾಗುವುದನ್ನು ತಡೆಯುವ ಅಗತ್ಯದ ಬಗ್ಗೆಒತ್ತಿ ಹೇಳಿದರು. ಹಾಸಿಗೆ ಮತ್ತು ಲಸಿಕೆ ಲಭ್ಯತೆಯಮಾಹಿತಿ ಸುಲಭವಾಗಿ ದೊರೆತಾಗ ಜನರಿಗೆಅನುಕೂಲವಾಗುತ್ತದೆ ಎಂದರು. ಅದೇ ರೀತಿಯಲ್ಲಿ, ಕಾಳಸಂತೆ ಮಾರಾಟ ನಿಗ್ರಹಿಸಬೇಕು ಮತ್ತು ಹಾಗೆಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಮುಂಚೂಣಿ ಕಾರ್ಯಕರ್ತರ ಆತ್ಮ ಸ್ಥೈರ್ಯ ಹೆಚ್ಚಿಸುವಮೂಲಕ ಸಜ್ಜುಗೊಳಿಸಬೇಕು ಎಂದರು. ಹೇಗೆಗ್ರಾಮೀಣರು ವ್ಯಕ್ತಿಗತ ಅಂತರ ಕಾಪಾಡಿಕೊಂಡುಕೃಷಿಯಲ್ಲಿ ತೊಡಗಿದ್ದಾರೆ ಎಂಬುದನ್ನು ಉಲ್ಲೇಖಿಸಿಪ್ರಧಾನಮಂತ್ರಿಯವರು ಶ್ಲಾಘಿಸಿದರು. ಗ್ರಾಮಗಳುಮಾಹಿತಿಯನ್ನು ಗ್ರಹಿಸುತ್ತವೆ ಮತ್ತು ಅವರ ಅಗತ್ಯಗಳಿಗೆಅನುಗುಣವಾಗಿ ಮಾರ್ಪಡಿಸಿಕೊಳ್ಳುತ್ತವೆ ಎಂದು ಅವರುಹೇಳಿದರು. ಇದು ಹಳ್ಳಿಗಳ ಶಕ್ತಿಯಾಗಿದೆ. ಕೊರೊನಾವೈರಾಣು ವಿರುದ್ಧ ನಾವು ಉತ್ತಮ ರೂಢಿಗಳನ್ನುಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು. ನೀವುಯಾವುದೇ ಉತ್ತಮ ಕ್ರಮ ಕೈಗೊಳ್ಳಲು ಮುಕ್ತರಾಗಿದ್ದೀರಿಎಂದ ಅವರು, ನೀತಿ ಬದಲಾವಣೆಗಳ ಅಗತ್ಯ ಇದ್ದರೆಸೂಚಿಸಿ ಎಂದು ತಿಳಿಸಿದರು. ಕೋವಿಡ್ ಪ್ರಕರಣಗಳುಕಡಿಮೆಯಾಗುತ್ತಿದ್ದರೂ ಎಚ್ಚರವಾಗಿರಬೇಕು ಎಂದುಅವರು ಮನವಿ ಮಾಡಿದರು.
ಸಭೆಯಲ್ಲಿ ಗೃಹ ಸಚಿವರು, ರಕ್ಷಣಾ ಸಚಿವರು, ಆರೋಗ್ಯಸಚಿವರು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ನೀತಿಆಯೋಗದ (ಆರೋಗ್ಯ)ಸದಸ್ಯರು, ಆರೋಗ್ಯಕಾರ್ಯದರ್ಶಿ, ಔಷಧ ಕಾರ್ಯದರ್ಶಿ, ಮತ್ತುಪ್ರಧಾನಮಂತ್ರಿಗಳ ಕಾರ್ಯಾಲಯದ, ಕೇಂದ್ರ ಸರ್ಕಾರದಸಚಿವಾಲಯಗಳು ಮತ್ತು ಇಲಾಖೆಗಳ ಇತರಅಧಿಕಾರಿಗಳು ಭಾಗವಹಿಸಿದ್ದರು.