Congress 1

Congress: ಸಾರಥಿ ಯಾರು…? ಕೈ ನಲ್ಲಿ ಕಚ್ಚಾಟ……

 ʻ ಕೈ ʼ ಸಾರಥಿ ಯಾರು…?  ʻ ಕೈ ʼ ನಲ್ಲಿ ಕಚ್ಚಾಟ…… ಕಾಂಗ್ರೆಸ್‌ ಪಕ್ಷದಲ್ಲಿ ಗಾಂಧಿ ಕುಟುಂಬದ ನಾಯಕತ್ವ ಪ್ರಶ್ನಿಸುತ್ತಿರುವುದು ದುರದೃಷ್ಟಕರ – ಸಿದ್ದರಾಮಯ್ಯ ಗಾಂಧಿ ಕುಟುಂಬಕ್ಕೆ ನನ್ನ ನಿಷ್ಟೆ – ಡಿಕೆಶಿ ಬೆಂಗಳೂರು : –   ಎಐಸಿಸಿ ಅಧ್ಯಕ್ಷಸ್ಥಾನಕ್ಕೆ   ಪಕ್ಷದೊಳಗೆ ಆಂತರಿಕ ಕಿತ್ತಾಟ ಶುರುವಾಗಿದೆ ಗಾಂಧಿ ಕುಟುಂಬದ ನಾಯಕತ್ವ ಪ್ರಶ್ನೆ ಮಾಡುವ ಅಂತ ತಲುಪಿದೆ. ಕಳೆದ ಲೊಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಹೀನಾಯವಾಗಿ ಸೋತ ಬಳಿಕ ಎಐಸಿಸಿ ಅಧ್ಯಕ್ಷರಾಗಿದ್ದ ರಾಹುಲ್‌ ಗಾಂಧಿ ಅವರು ಆ ಸ್ಥಾನಕ್ಕೆ […]

Continue Reading
C202005113496

NRA:ರಾಷ್ಟ್ರೀಯ ನೇಮಕಾತಿ ಸಂಸ್ಥೆ ಸ್ಥಾಪನೆಗೆ ಕೇಂದ್ರ ಅನುಮೋದನೆ..

ಕೇಂದ್ರ ಸರ್ಕಾರದ ಉದ್ಯೋಗ ನೇಮಕಾತಿ ಪ್ರಕ್ರಿಯೆಯಲ್ಲಿ ಸುಧಾರಣೆಗೆ ದಾರಿ ಮಾಡಿಕೊಟ್ಟಿದೆ ಎನ್ಆರ್ಎ: ಸಿಬ್ಬಂದಿ ಆಯ್ಕೆ ಆಯೋಗ (ಎಸ್ಎಸ್ಸಿ), ರೈಲ್ವೆ ನೇಮಕಾತಿ ಮಂಡಳಿಗಳು (ಆರ್ಆರ್ಬಿ) ಮತ್ತು ಬ್ಯಾಂಕಿಂಗ್ ಸಿಬ್ಬಂದಿ ಸೇವಾ ಸಂಸ್ಥೆ (ಐಬಿಪಿಎಸ್) ಗಳ ಮೊದಲ ಹಂತದ ಪರೀಕ್ಷೆಯನ್ನು ಒಳಗೊಳ್ಳುವ ಬಹು-ಏಜೆನ್ಸಿ ಸಂಸ್ಥೆ ಎಸ್ಎಸ್ಸಿ, ಆರ್ಆರ್ಬಿ ಮತ್ತು ಐಬಿಪಿಎಸ್ಗೆ ಮೊದಲ ಹಂತದಲ್ಲಿ ಅಭ್ಯರ್ಥಿಗಳಿಗೆ ಸಾಮಾನ್ಯ ಅರ್ಹತಾ ಪರೀಕ್ಷೆ (ಸಿಇಟಿ)   ಸಿಇಟಿ: ಕಂಪ್ಯೂಟರ್ ಆಧಾರಿತ ಆನ್ಲೈನ್ ಸಾಮಾನ್ಯ ಅರ್ಹತಾ ಪರೀಕ್ಷೆ (ಸಿಇಟಿ) ಪದವೀಧರ, ಹೈಯರ್ ಸೆಕೆಂಡರಿ (12 ನೇ […]

Continue Reading
IMG 20200817 201158

ಖ್ಯಾತ ಗಾಯಕ ಪಂಡಿತ್ ಜಸರಾಜ್ ವಿಧಿವಶ..

ಖ್ಯಾತ ಗಾಯಕ ಪದ್ಮವಿಭೂಷಣ, ಪಂಡಿತ್  ಜಸರಾಜ್  ನಿಧನ. ವಿಶ್ವವಿಖ್ಯಾತ ಭಾರತೀಯ ಶಾಸ್ತ್ರೀಯ ಸಂಗೀತ ಗಾಯಕ ಪಂಡಿತ್ ಜಸ್ ರಾಜ್ ಅಮೆರಿಕದ ನ್ಯೂ ಜರ್ಸಿ ಯಲ್ಲಿ ಇಂದು  ವಿಧಿವಶರಾದರು.ಈ ವರ್ಷದ ಜನವರಿಗೆ 90 ವರ್ಷ ತುಂಬಿತ್ತು.14 ನೇ ವಯಸ್ಸಿನಲ್ಲೇ ಗಾಯಕರಾಗಿ ತರಬೇತಿ ಆರಂಭಿಸಿದ್ದರು. ಇವರ ನಿಧನದಿಂದ  ಭಾರತೀಯ ಸಂಗೀತ ಲೋಕ ಬಡವಾಗಿದೆ. ತಮ್ಮ 80 ವರ್ಷಗಳ ಕಲಾಸೇವೆಯಲ್ಲಿ ಅಸಂಖ್ಯಾತ ಅಭಿಮಾನಿ ಬಳಗವನ್ನು ಗಳಿಸಿದ್ದ ಅವರು ಹಲವಾರು ಗಾಯಕರಿಗೆ ಮಾರ್ಗದರ್ಶಕರಾಗಿದ್ದರು. ಪಂಡಿತ್ ಜಸ್ ರಾಜ್ ಪಂಡಿತ್ ಜಸ್ ರಾಜ್ ರವರು […]

Continue Reading
IMG 20200817 WA0061

ರಾಷ್ಟ್ರೀಯ ಜಲ ನೀತಿ ರೂಪಿಸಲು ಮನವಿ…!

ರಾಷ್ಟ್ರೀಯ ಜಲ ನೀತಿ ರೂಪಿಸಲು ಮನವಿ…! ಅತಿವೃಷ್ಟಿಯನ್ನು ತಡೆಯಲು ನದಿಗಳ ಜೋಡಣೆ ಸಹಕಾರಿ… ನವದೆಹಲಿ : ರಾಷ್ಟ್ರೀಯ ಜಲ ನೀತಿಯನ್ನು ರೂಪಿಸುವುದು ಮತ್ತು ಅತಿವೃಷ್ಟಿಯನ್ನು ತಡೆಯಲು ನದಿಗಳ ಜೋಡಣೆ ಮಾಡುವ ಯೋಜನೆ ರೂಪಿಸುವ ದೃಷ್ಟಿಯಿಂದ ಪಕ್ಷವು ನಿರ್ದಿಷ್ಟ ಕಾರ್ಯಕ್ರಮ ರೂಪಿಸಬೇಕೆಂದು ರಾಜ್ಯದ ಜಲಸಂಪನ್ಮೂಲ ಸಚಿವರಾದ *ಶ್ರೀ ರಮೇಶ್ ಜಾರಕಿಹೊಳಿ‌* ಅವರು ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷರಾದ *ಶ್ರೀ ಜಗತ್ ಪ್ರಕಾಶ್ ನಡ್ಡಾ* ಅವರಿಗೆ ಮನವಿ ಮಾಡಿದರು. ನವದೆಹಲಿಯ ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆದ ಈ ಭೇಟಿಯ […]

Continue Reading
IMG 20200815 204943

ಅಂತರರಾಷ್ಟ್ರೀಯ ಕ್ರಿಕೆಟ್‌ ಗೆ ದೋನಿ ವಿದಾಯ

  ಅಂತರರಾಷ್ಟ್ರೀಯ ಕ್ರಿಕೆಟ್‌ ಗೆ ವಿದಾಯ ಹೇಳಿದ ದೋನಿ…. ಭಾರತೀಯ ಕ್ರಿಕೆಟ್ ತಂಡದ ಖ್ಯಾತ ಕ್ರಿಕೆಟ್ ಆಟಗಾರ ಮಹೇಂದ್ರ ಸಿಂಗ್ ದೋನಿ ಇಂದು ಅಂತರರಾಷ್ಟ್ರೀಯ ಕ್ರಿಕೆಟ್‌ ಗೆ ವಿದಾಯ ಹೇಳಿದ್ದಾರೆ. ತಮ್ಮ Instagram ಖಾತೆಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ವನ್ನು ಪ್ರಕಟಿಸಿದ್ದಾರೆ. ಎರಡು ಬಾರಿ ವಿಶ್ವಕಪ್ ಗೆದ್ದಿದ್ದ ದೋನಿ, 2004 ರಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು, ಬಾಂಗ್ಲಾದೇಶದ ವಿರುದ್ಧ ಮೊದಲು ಬ್ಯಾಟ್ ಬೀಸಿದ್ದ   ಈ ಆಟಗಾರ ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಸಿಕ್ಸರ್ ವೀರ […]

Continue Reading
IMG 20200815 191725

Modi: ಪ್ರತಿಯೊಬ್ಬ ಭಾರತೀಯನಿಗೂ ಹೆಲ್ತ್ ಕಾರ್ಡ್…!

  74ನೇ ಸ್ವಾತಂತ್ರ್ಯ ದಿನ – ಕೆಂಪುಕೋಟೆಯ ವೇದಿಕೆಯಿಂದ ದೇಶವನ್ನುದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ ಭಾಷಣದ ಮುಖ್ಯಾಂಶಗಳು: ನನ್ನ ಪ್ರೀತಿಯ ದೇಶವಾಸಿಗಳೇ, ಈ ಮಹೋನ್ನತ ಸಂದರ್ಭದಲ್ಲಿ, ನಿಮ್ಮಲ್ಲರಿಗೂ ಶುಭಾಶಯಗಳು ಮತ್ತು ಅಭಿನಂದನೆಗಳು. ಕೊರೊನಾದ ಈ ಅಸಾಮಾನ್ಯವಾದ ಸಮಯದಲ್ಲಿ, ಕೊರೊನಾ ಯೋಧರು “ಸೇವಾ ಪರಮೋ ಧರ್ಮ’ ಎಂಬ ಮಂತ್ರದೊಂದಿಗೆ ಜೀವಿಸುತ್ತಿದ್ದಾರೆ. ನಮ್ಮ ವೈದ್ಯರು, ದಾದಿಯರು, ಅರೆ ವೈದ್ಯಕೀಯ ಸಿಬ್ಬಂದಿ, ಆಂಬುಲೆನ್ಸ್ ಸಿಬ್ಬಂದಿ, ನೈರ್ಮಲ್ಯ ಕಾರ್ಯಕರ್ತರು, ಪೊಲೀಸರು, ಸೇವಾ ಸಿಬ್ಬಂದಿ ಮತ್ತು ಹಲವು ಜನರು ದಿನವಿಡೀ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಪ್ರಾಕೃತಿಕ ವಿಪತ್ತುಗಳಿಂದಾಗಿ ದೇಶದ ವಿವಿಧ ಭಾಗಗಳಲ್ಲಿ ಆಗಿರುವ ಪ್ರಾಣಹಾನಿ ಬಗ್ಗೆ ದುಃಖ ವ್ಯಕ್ತಪಡಿಸಿದ ಅವರು, ಅಗತ್ಯವಿರುವ ಈ ಸಮಯದಲ್ಲಿ ದೇಶವಾಸಿಗಳಿಗೆ ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಿದರು. ಭಾರತದ ಸ್ವಾತಂತ್ರ್ಯ ಹೋರಾಟ ಇಡೀ ಜಗತ್ತಿಗೆ ಸ್ಫೂರ್ತಿ ನೀಡಿದೆ. ವಿಸ್ತರಣಾವಾದದ ಕಲ್ಪನೆಯು ಕೆಲವು ದೇಶಗಳನ್ನು ಗುಲಾಮರನ್ನಾಗಿ ಮಾಡಿತು. ಭೀಕರ ಯುದ್ಧಗಳ ನಡುವೆಯೂ ಭಾರತ ತನ್ನ ಸ್ವಾತಂತ್ರ್ಯ ಚಳವಳಿಯನ್ನು ಕ್ಷೀಣಿಸಲು ಬಿಡಲಿಲ್ಲ. ಕೋವಿಡ್ ಸಾಂಕ್ರಾಮಿಕದ ನಡುವೆಯೂ, 130 ಕೋಟಿ ಭಾರತೀಯರು ಸ್ವಾವಲಂಬಿಗಳಾಗಬೇಕೆಂಬ ಸಂಕಲ್ಪವನ್ನು ಕೈಗೊಂಡರು, ಮತ್ತು ‘ಆತ್ಮನಿರ್ಭರ ಭಾರತ್’ ಎಂಬುದು ಭಾರತದ ಮನಸ್ಸಿನಲ್ಲಿ ಮೂಡಿದೆ. ಈ ಕನಸು ಸಂಕಲ್ಪವಾಗಿ ಬದಲಾಗುತ್ತಿದೆ. 130 ಕೋಟಿ ಭಾರತೀಯರಿಗೆ ಆತ್ಮನಿರ್ಭರ ಭಾರತ್ ಇಂದು ‘ಮಂತ್ರ’ವಾಗಿ ಮಾರ್ಪಟ್ಟಿದೆ. ನನ್ನ ದೇಶವಾಸಿಗಳ ಸಾಮರ್ಥ್ಯ, ವಿಶ್ವಾಸ ಮತ್ತು ದಕ್ಷತೆಯ ಬಗ್ಗೆ ನನಗೆ ವಿಶ್ವಾಸವಿದೆ. ಒಮ್ಮೆ ನಾವು ಏನನ್ನಾದರೂ ಮಾಡಲು ನಿರ್ಧರಿಸಿದರೆ, ನಾವು ಆ ಗುರಿಯನ್ನು ಸಾಧಿಸುವವರೆಗೆ ವಿರಮಿಸುವುದಿಲ್ಲ. ಇಂದು, ಇಡೀ ಜಗತ್ತು ಪರಸ್ಪರ ಸಂಪರ್ಕಿತವಾಗಿದೆ ಮತ್ತು ಪರಸ್ಪರ ಅವಲಂಬಿತವೂ ಆಗಿದೆ. ಜಾಗತಿಕ ಆರ್ಥಿಕತೆಯಲ್ಲಿ ಭಾರತಕ್ಕೆ ಪ್ರಮುಖ ಪಾತ್ರ ವಹಿಸುವ ಸಮಯ ಇದಾಗಿದೆ. ಇದಕ್ಕಾಗಿ ಭಾರತ ಸ್ವಾವಲಂಬಿಯಾಗಬೇಕು. ಕೃಷಿ, ಬಾಹ್ಯಾಕಾಶದಿಂದ ಆರೋಗ್ಯ ಆರೈಕೆಯವರೆಗೆ ಭಾರತವು ಸ್ವಾವಲಂಬಿ ಭಾರತ ನಿರ್ಮಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಬಾಹ್ಯಾಕಾಶ ಕ್ಷೇತ್ರವನ್ನು ಮುಕ್ತಗೊಳಿಸುವಂತಹ ಕ್ರಮಗಳು ನಮ್ಮ ಯುವಕರಿಗೆ ಅನೇಕ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ ಮತ್ತು ಅವರ ಕೌಶಲ್ಯ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಲು ಹೆಚ್ಚಿನ ಅವಕಾಶಗಳನ್ನು ಒದಗಿಸುತ್ತದೆ ಎಂಬ ವಿಶ್ವಾಸ ನನಗಿದೆ. ಕೆಲವೇ ತಿಂಗಳುಗಳ ಹಿಂದೆ ನಾವು ಎನ್ -95 ಮಾಸ್ಕ್ ಗಳು, ಪಿಪಿಇ ಕಿಟ್ ಗಳು ಮತ್ತು ವೆಂಟಿಲೇಟರ್ ಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದೆವು. ಈಗ ನಾವು ಸಾಂಕ್ರಾಮಿಕದ ಸಮಯದಲ್ಲಿ ಎನ್.05 ಮಾಸ್ಕ್ ಗಳು, ಪಿಪಿಇ ಕಿಟ್ ಗಳು ಮತ್ತು ವೆಂಟಿಲೇಟರ್ ಗಳನ್ನು ತಯಾರಿಸುವುದಷ್ಟೇ ಅಲ್ಲ ಅದನ್ನು ವಿಶ್ವಾದ್ಯಂತ ರಫ್ತು ಸಹ ಮಾಡುತ್ತಿದ್ದೇವೆ. ‘ಮೇಕ್ ಇನ್ ಇಂಡಿಯಾ’ ಜೊತೆಗೆ, ನಾವು ‘ಮೇಕ್ ಫಾರ್ ವರ್ಲ್ಡ್’ ಎಂಬ ಮಂತ್ರವನ್ನೂ ಅಳವಡಿಸಿಕೊಳ್ಳಬೇಕು. 110 ಲಕ್ಷ ಕೋಟಿ ರೂ.ಗಳ ರಾಷ್ಟ್ರೀಯ ಮೂಲಸೌಕರ್ಯ ಪೈಪ್‌ ಲೈನ್ ಯೋಜನೆ ನಮ್ಮ ಒಟ್ಟಾರೆ ಮೂಲಸೌಕರ್ಯ ಯೋಜನೆಗಳಿಗೆ ಉತ್ತೇಜನ ನೀಡುತ್ತದೆ. ನಾವು ಈಗ ಬಹು-ಮಾದರಿ ಸಂಪರ್ಕ ಮೂಲಸೌಕರ್ಯಗಳತ್ತ ಗಮನ ಹರಿಸುತ್ತಿದ್ದೇವೆ. ನಾವು ಇನ್ನು ಮುಂದೆ ಹಗೇವಿನಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ; ನಾವು ಸಮಗ್ರ ಮತ್ತು ಅಂತರ್ಗತ ಮೂಲಸೌಕರ್ಯಗಳತ್ತ ಗಮನ ಹರಿಸಬೇಕಾಗಿದೆ. ವಿವಿಧ ವಲಯಗಳ ಸುಮಾರು 7,000 ಯೋಜನೆಗಳನ್ನು ಸಹ ಗುರುತಿಸಲಾಗಿದೆ. ಇದು ಮೂಲಸೌಕರ್ಯ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನೇ ಮಾಡಲಾದೆ. […]

Continue Reading
IMG 20200811 215333

ಕೊರೋನಾ: ರಾಜ್ಯಗಳ ಜೊತೆ ಮೋದಿ ಮಾತು…!

*ಕೋವಿಡ್19 ನಿರ್ವಹಣೆ ಕುರಿತಂತೆ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ವೀಡಿಯೋ ಕಾನ್ಫರೆನ್ಸ್; ರಾಜ್ಯದ ಪರಿಸ್ಥಿತಿ ವಿವರಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್* *ವೈದ್ಯ ವಿದ್ಯಾರ್ಥಿಗಳ ಕಡ್ಡಾಯ ಸೇವೆ ಸಲ್ಲಿಕೆಗೆ ಕ್ರಮ ಕೈಗೊಳ್ಳಲು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮನವಿ* *ಬೆಂಗಳೂರು, ಆಗಸ್ಟ್ 11, ಮಂಗಳವಾರ* ಕೋವಿಡ್ 19 ನಿರ್ವಹಣೆ ಕುರಿತು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ವೀಡಿಯೋ ಕಾನ್ಫರೆನ್ಸ್ ನಡೆಸಿದರು. ಮಂಗಳವಾರ ನಡೆದ ವೀಡಿಯೋ […]

Continue Reading
Ee1LB 2XkAAA4qj

Air Indid Air craft crash: ಕೇರಳದಲ್ಲಿ ಏರ್‌ ಇಂಡಿಯಾ ವಿಮಾನ ಅಪಘಾತ

 Air Indid Air craft crash : ಕೇರಳದಲ್ಲಿ ಏರ್‌ ಇಂಡಿಯಾ ವಿಮಾನ ವಿಮಾನ ಅಪಘಾತ,ಪೈಲೆಟ್‌ ಸೇರಿದಂತೆ 1 0 ಜನ ಮೃತ ಪಟ್ಟಿದ್ದಾರೆ ಎಂಬ ಮಾಹಿತಿ ಸದ್ಯ ಲಭ್ಯವಾಗುತ್ತಿದೆ.. ಸರ್ಕಾರ ಇನ್ನು ಖಚಿತ ಪಡಿಸಬೇಕಿದೆ. ಕೇರಳ ಮುಖ್ಯಮಂತ್ರಿ ಜೊತೆ ಪ್ರಧಾನಿ ಮೋದಿ ಮಾತುಕತೆ.   ಕೇರಳಾದ ಕೋಜಿಕೋಡ್‌  (Dubai-Kozhikode Air India flight (IX-1344)) ವಿಮಾನ ನಿಲ್ದಾಣದ ರನ್‌ ವೇ ನಲ್ಲಿ ಲ್ಯಾಂಡಿಂಗ್‌ ವೇಳೆ ನೆಲಕ್ಕೆ ಅಪ್ಪಳಿಸಿ ಅಪಘಾತ ಕ್ಕೆ ಸಂಭವಿಸಿದೆ  ಎನ್ನಲಾಗುತ್ತಿದೆ. ವಿಮಾನದಲ್ಲಿ ೫ ಜನ  […]

Continue Reading
EepGO9iUMAAKX Q

ಅಯೋಧ್ಯೆಯಲ್ಲಿ ‘ಶ್ರೀ ರಾಮ ಜನ್ಮಭೂಮಿ ಮಂದಿರ’ದ ಭೂಮಿ ಪೂಜೆ ನೆರವೆರಿಸಿದ ಮೋದಿ

‘ಶ್ರೀ ರಾಮ ಜನ್ಮಭೂಮಿ ಮಂದಿರ‘ ಭೂಮಿ ಪೂಜೆ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ ಪರಸ್ಪರ ಪ್ರೀತಿ ಮತ್ತು ಭ್ರಾತೃತ್ವದ ಅಡಿಪಾಯದ ಮೇಲೆ ಮಂದಿರ ನಿರ್ಮಿಸಬೇಕು ನಾವು ‘ಸಬ್ಕಾ ಸಾಥ್’ ಮೂಲಕ ‘ಸಬ್ಕಾ ವಿಶ್ವಾಸ್’ಗಳಿಸಿ ‘ಸಬ್ಕಾ ವಿಕಾಸ್’ ಸಾಧಿಸಬೇಕಾಗಿದೆ ರಾಮ ಮಂದಿರ, ನಮ್ಮ ಸಂಸ್ಕೃತಿ, ಚಿರಂತನ ನಂಬಿಕೆ, ರಾಷ್ಟ್ರೀಯ ಮನೋಭಾವ ಮತ್ತು ಸಾಮೂಹಿಕ ಇಚ್ಛಾಶಕ್ತಿಯ ಆಧುನಿಕ ಸಂಕೇತವಾಗಲಿದ್ದು, ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ ಮಂದಿರ ನಿರ್ಮಾಣ ಈ ಪ್ರದೇಶದ ಆರ್ಥಿಕತೆಯಲ್ಲಿ ಬದಲಾವಣೆ ತರಲಿದೆ ರಾಮ ಮಂದಿರದ ಕನಸು ನನಸಾಗಲು […]

Continue Reading
EemCeyDVAAQDq V

ಅಯೋಧ್ಯೆ ಶ್ರೀ ರಾಮ ಮಂದಿರ ಭೂಮಿ ಪೂಜೆ ನೇರ ಪ್ರಸಾರ 12 :30 – ಸಪ್ತಸ್ವರ ದಲ್ಲಿ ವೀಕ್ಷಿಸಿ

ಇಂದು ಅಯೋದ್ಯೆಯಲ್ಲಿ  ಶ್ರೀ ರಾಮಮಂದಿರ ಭೂಮಿ ಪೂಜೆ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ 12: 30 ಕ್ಕೆ ಯವರು ನೆರವೇರಿಸಲಿದ್ದು   ಕಾರ್ಯಕ್ರಮವನ್ನು ಎಲ್ಲರೂ ಮನೆಯಲ್ಲಿಯೇ ಕುಳಿತು ನೇರ ಪ್ರಸಾರವನ್ನು ವೀಕ್ಷಿಸಿ….

Continue Reading