ನವದೆಹಲಿ ಮೇ ೬ :- ಲಾಕ್ ಡೌನ್ ಸ್ಥಗಿತಗೊಂಡಿರುವ ಸಾರ್ವಜನಿಕ ಸಾರಿಗೆ ಸೇವೆಗಳನ್ನು ಕೆಲ ಮಾರ್ಗಸೂಚಿಗಳೊಂದಿಗೆ ಪುನರಾರಂಭಿಸಲಾಗುವುದುಎಂದು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಬಸ್ ಮತ್ತು ಕಾರು ಮಾಲೀಕರಿಗೆ ಭರವಸೆ ನೀಡಿದ್ದಾರೆ.
ವಿಡಿಯೋ ಕಾನ್ಫರೆನ್ಸ ಮೂಲಕ ಬಸ್ ಮತ್ತು ಕಾರು ಮಾಲೀಕರ ಒಕ್ಕೂಟ ಸದಸ್ಯರೊಂದಿಗೆ ಮಾತನಾಡಿದ ಅವರು,ಜನರಲ್ಲಿ ವಿಶ್ವಾಸ ತುಂಬಲು ಸಾರಿಗೆ ಮತ್ತು ಹೆದ್ದಾರಿಗಳನ್ನು ತೆರೆಯುವುದಕ್ಕೆ ಸಮಯ ಹಿಡಿಯುತ್ತದೆ,ಸಾರ್ವಜನಿಕರ ಸಾರಿಗೆ ಕೆಲ ಮಾರ್ಗಸೂಚಿಗಳೊಂದಿಗೆ ಆರಂಭವಾಗುತ್ತದೆ ಎಂದು ಹೇಳಿದ್ದಾರೆ.
ಬಸ್ ಮತ್ತು ಕಾರುಗಳ ಕಾರ್ಯಾಚರಣೆ ನಡೆಸಲು ಸಾಮಾಜಿಕ ಅಂತರ ಮತ್ತು ಸ್ಯಾನಿ ಟೈಜರ್ ಬಳಸುವುದು ಸೇರಿದಂತೆ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂದರು. ಸರ್ಕಾರಕ್ಕೆ ಬಸ್ ಮತ್ತು ಕಾರು ಮಾಲೀಕರ ಸಂಕಷ್ಟ ತಳಿದಿದ್ದು,ಅವರ ಸಮಸ್ಯೆ ನಿವಾರಿಸಲು ಸಂಪೂರ್ಣ ಬೆಂಬಲ ನೀಡಲಿದೆ ಎಂದು ಅವರು ಹೇಳಿದರು.
ಸರ್ಕಾರದ ಹೂಡಿಕೆ ಕಡಿಮೆ ಮಾಡಿ ಖಾಸಗಿ ಹೂಡಿಕೆ ಉತ್ತೇಜಿಸುವ ಲಂಡನ್ ಸಾರ್ವಜನಕ ಸಾರಿಗೆ ಮಾದರಿಯನ್ನು ಅಳವಡಿಕೊಳ್ಳುವತ್ತ ಸಚಿವಾಲಯ ಅವಲೋಕಿಸುತ್ತಿದೆ. ಭಾರತದಲ್ಲಿ ಬಸ್ ಮತ್ತು ಟ್ರಕ್ ಗಳ ನಿರ್ವಹಣೆ ಕಳಪೆ ಗುಣಮಟ್ಟದಿಂದ ಕೂಡಿದ್ದು ೫ ರಿಂದ ೭ ವರ್ಷದಲ್ಲಿ ವಾಹನಗಳ ಆಯಸ್ಸು ಮುಗಿಯುತ್ತದೆ. ಆದರೆ ಲಂಡನ್ ಮಾದರಿಗಳು ಸುಮಾರು ೧೫ ವರ್ಷ ಬಾಳಿಕೆ ಬರತ್ತಿವೆ. ಉತ್ತಮ ವಿಧಾನಗಳನ್ನು ಅಳವಡಿಸಿಕೊಂಡರೆ ದೀರ್ಘಾವಧಿಯಲ್ಲಿ ದೇಶೀಯ ಉದ್ಯಮ ಆರ್ಥಿಕವಾಗಿ ಕಾರ್ಯಸಾಧುವಾಗುತ್ತದೆ ಎಂದು. ಅವರು ತಿಳಿಸಿದ್ದಾರೆ.
ಕೋವೀಡ್ ೧೯ ನಿಂದ ಭಾರತೀಯ ಮಾರುಕಟ್ಟೆ ಎದುರುಸುತ್ತಿರುವ ಆರ್ಥಿಕ ಪರಿಸ್ಥಿತಿಯ ಬಗ್ಗೆ ಸರ್ಕಾರಕ್ಕೆ ಅರಿವಿದ್ದು ಇದನ್ನು ಎದುರಿಸಲು ಎಲ್ಲರು ಒಟ್ಟಾಗಿ ಕೆಲಸಮಾಡಬೇಕಿದೆ.ಭಾರತದಲ್ಲಿ ಹೂಡಿಕೆ ಮಾಡಲು ವಿದೇಶಿ ಕಂಪನಿಗಳನ್ನು ಆಹ್ವಾನಿಸುವ ಅವಕಾಶಗಳನ್ನು ಭಾರತೀಯ ಉದ್ಯಮ ಬಳಸಿ ಕೊಳ್ಳಬೇಕಿದೆ ಸಚಿವ ಗಡ್ಕರಿ ತಿಳಿಸಿದ್ದಾರೆ