ಸಿಎಂ ತವರಿಗೂ ಕೊರೋನಾ,ಒಂದೇ ದಿನ 53 ಪಾಜಿಟೀವ್, ಆತಂಕದಲ್ಲಿ ಕರ್ನಾಟಕ…!
ಬೆಂಗಳೂರು ಮೇ 10:- ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಆತಂಕ ಸೃಷ್ಟಿಸುತ್ತಿದೆ, ಕಳೆದ ಮೂರುದಿನದಿಂದ 140 ಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿದೆ,
ಲಾಕ್ ಡೌನ್ ಜಾರಿಗೆ ಮುಂಚೆ ಶ್ಯಾಂಪಲ್ ತೆಗೆದುಕೊಂಡ ಪ್ರಕರಣಗಳು ಈ ರೀತಿ ಇದ್ದರೆ, ಲಾಕ್ ಡೌನ್ ಸಡಿಲಿಸಿದ ನಂತರ ಏನಾಗಲಿದೆ ಎಂಬ ಭಯ ರಾಜ್ಯದ ಜನರಲ್ಲಿ ಕಾಡ ತೊಡಗಿದೆ, ಶುಕ್ರವಾರ-48, ಶನಿವಾರ-41, ಭಾನುವಾರ ಬೆಳಗಿನ ವರದಿ ಪ್ರಕಾರ 53 ಪ್ರಕರಣ ಬೆಳಕಿಗೆ ಬಂದಿದೆ.
ರಾಜ್ಯದಲ್ಲಿ ರುದ್ರತಾಂಡವ ಪ್ರದರ್ಶಿಸುತ್ತಿದ್ದು ಒಂದೇ ದಿನ ೫೩ ಪ್ರಕರಣ ಪತ್ತೆಯಾಗಿ ಕರ್ನಾಟಕವನ್ನು ಬೆಚ್ಚಿ ಬೀಳಿಸಿದೆ.. ರಾಜ್ಯದಲ್ಲಿ ಪತ್ತೆಯಾದ ಅತಿ ಹೆಚ್ಚು ಪ್ರಕರಣ ಇದಾಗಿದೆ.ಒಟ್ಟು ಇಲ್ಲಿಯವರೆಗ ಕೊರೋನಾ ಸೋಂಕಿತ ಪ್ರಕರಣಗಳ ಸಂಖ್ಯೆ 847. ಆತಂಕಕಾರಿ ವಿಷಯವೆಂದರೆ ಈವರೆಗೂ ಹಿಸಿರು ವಲಯದಲ್ಲಿದ್ದ ಶಿವಮೊಗ್ಗದಲ್ಲಿ ಕೊರೋನಾ ಕಾಲೂರಿದೆ., ಇಂದು ಒಂದೇ ದಿನ ಎಂಟು ಪ್ರಕರಣಗಳು ಶಿವಮೊಗ್ಗದಲ್ಲಿ ಪತ್ತೆಯಾಗಿದೆ. ರಾಜ್ಯದಲ್ಲಿ ಹಸಿರು ವಲಯದ ಜಿಲ್ಲೆಗಳಲ್ಲಿ ಸೊಂಕು ವಿಸ್ತರಿಸುತ್ತಿರುವುದು ರಾಜ್ಯದ ಜನರಲ್ಲಿ ಆತಂಕ ಮೂಡಿಸಿದೆ.
ಸಂಜೆ ಸಿಎಂ ಸಭೆ
ಇಂದು ಸಂಜೆ ೪ಗಂಟೆಗೆ ಹಿರಿಯ ಅಧಿಕಾರಿಗಳ ಸಭೆ ಕರೆದ ಮುಖ್ಯಂತ್ರಿ ಬಿ ಎಸ್ ಯಡಿಯೂರಪ್ಪ, ಕರ್ನಾಟಕ ದಲ್ಲಿ ಕೊರೋನಾ ಅಟ್ಟಹಾಸ ಮುಂದುವರೆದಿರುವ ಹಿನ್ನೆಲೆಯಲ್ಲಿ ಇಂದಿನ ಸಭೆ ಹೆಚ್ಚು ಮಹತ್ವ ಪಡೆದಿದೆ.