Covid 19 : ಖಾಸಗಿ ಮಾದ್ಯಮಗಳು ನೈಜ ವರದಿಗಳತ್ತ ಗಮನಹರಿಸಲಿ…!

STATE

Covid 19 : ಮನೆಯಲ್ಲಿ TV  ಆನ್‌ ಮಾಡಿ ಖಾಸಗಿ ಸುದ್ದಿ ವಾಹಿನಿ  ನೋಡಲು ಆರಂಭಿಸಿದರೆ ಸಾಕು  ಭಯ, ಆತಂಕ ಶುರುವಾಗುತ್ತೆ ಕೊರೋನಾ ಸುದ್ದಿಗಳನ್ನು ವೈಭವೀಕರಿಸಿ,ವರ್ಣರಂಜಿತವಾಗಿ ಬಿತ್ತರಿಸುತ್ತಿದ್ದಾರೆ ಎಂಬುದು ಸಾರ್ವಜನಿಕರ  ಅಳಲು.

ಇವರ ವೈಭವೀಕೃತ ಸುದ್ದಿ ಗಳನ್ನು ನೋಡಿದ ಜನ ಮನೆಯಿಂದ ತಮ್ಮ ದೈನಂದಿನ ಕೆಲಸಕ್ಕೆ ಹೋಗಲು ಭಯ ಪಡುವಂತಾಗಿದೆ.

ಪಾಪ ಅವರಿಗೆ ಟಿ ಆರ್‌ ಪಿ ಬೇಕು,  ಯಾರು ಹೆಚ್ಚು  ವೈಭವೀಕರಿಸಿ ಸುದ್ದಿ ನೀಡಿದರೆ  ಆ ವಾಹಿನಿ ಜನ  ಹೆಚ್ಚು ನೋಡುತ್ತಾರೆ ಎಂಬುದು ಅವರ ನಂಬಿಕೆ , ಇದು ಜನರ ಮೇಲೆ ಎಷ್ಟು ದುಷ್ಟಪರಿಣಾಮ ಬೀರಲಿದೆ ಎಂಬ ಅರಿವು ಅವರಿಗಿಲ್ಲವೆ…? ಅವರಿಗೆ ಬೇಕಾಗಿರುವುದು ಟಿ ಆರ್‌ ಪಿ ಮಾತ್ರ

ಸಾಮಾಜಿಕ ಜಾಲ ತಾಣಗಳಲ್ಲಿ  ಖಾಸಗಿ ವಾಹಿನಿ ಗಳ  ಸುದ್ದಿ ಪ್ರಸಾರದ   ಬಗ್ಗೆ ಜನ  ಬೊಬ್ಬೆ ಇಡುತ್ತಿದ್ದಾರೆ,  ಇದಕ್ಕೆ ಪುಷ್ಠಿ ನೀಡುವಂತೆ  ಇಂದು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ ಕೆ ಸುಧಾಕರ್‌ ಮಾಧ್ಯಮಗಳಿಗೆ ಹಿತೋಪ ದೇಶ ಜೊತೆ ಗೆ ಅಂಕಿ ಅಂಶ ನೀಡಿ ವಾಸ್ತವ ವರದಿ ಪ್ರಸಾರ ಮಾಡಲು ಮನವಿ ಮಾಡಿದ್ದಾರೆ.

ಮಾಧ್ಯಮಗಳ ಪಾತ್ರ

ಕೊರೋನ ಕುರಿತಾಗಿ ಜನರಲ್ಲಿ ಇರುವ ಆತಂಕವನ್ನು ದೂರಮಾಡಿ ನೈಜ ಅಂಶಗಳನ್ನು ತೋರಿಸುವಂತೆ ಸಚಿವರು ಮಾಧ್ಯಮಗಳಿಗೆ ಮನವಿ ಮಾಡಿದರು. ಬೆಂಗಳೂರಿನಲ್ಲಿ ಸುಮಾರು 697 ಜನ ಸೋಂಕಿತರಲ್ಲಿ ಈಗ 330 ಸಕ್ರಿಯ ಪ್ರಕರಣಗಳಿವೆ. ಅದರಲ್ಲೂ ಐಸಿಯು ನಲ್ಲಿ ಕೇವಲ 6 ಜನ ಮಾತ್ರ ಇದ್ದಾರೆ. 93% ಜನರಿಗೆ ಯಾವುದೇ ಲಕ್ಷಣಗಳಿಲ್ಲ. ಕೊರೋನ, ಸಾರ್ಸ್ ವೈರಾಣುವಿಗಿಂತ ಅಪಾಯಕಾರಿ ಅಲ್ಲ. ಮರಣ ಪ್ರಮಾಣ ನಮ್ಮ ರಾಜ್ಯದಲ್ಲಿ ಕೇವಲ 1.2% ನಷ್ಟಿದೆ. ರಾಷ್ಟ್ರೀಯ ಸರಾಸರಿ 2.8% ನಷ್ಟಿದೆ. ಸಾರ್ಸ್ ಸೋಂಕಿನ ಮರಣ ಪ್ರಮಾಣ ಶೇ.10% ಇತ್ತು. ಆದ್ದರಿಂದ ಹರಡುವಿಕೆ ಪ್ರಮಾಣ ಹೆಚ್ಚಾಗಿದೆ ಎನ್ನುವುದನ್ನು ಬಿಟ್ಟರೆ ಇದು ಇತರೆ ವೈರಾಣುಗಳಿಗಿಂತ ಕಡಿಮೆ ಅಪಾಯಕಾರಿಯಾಗಿದೆ. ಆದ್ದರಿಂದ, ಮಾಧ್ಯಮದವರು ಜನರಲ್ಲಿ ಆತಂಕ ಸೃಷ್ಟಿಸುವ ಬದಲು ತೀವ್ರತೆ ಕುರಿತಾದ ಅಂಕಿ ಅಂಶಗಳ ಮೂಲಕ ಜಾಗೃತಿ ಮೂಡಿಸುವಂತೆ ಹಾಗೂ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಅರಿವು ಮೂಡಿಸಲು ಸಚಿವ ಸುಧಾಕರ್ ಮನವಿ ಮಾಡಿದರು