ಬಿಜೆಪಿ ಹಟಾವೋ ದೇಶ್ ಬಚಾವೋ ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ
ಪಾವಗಡ: “ಅಚ್ಚೇ ದಿನ್ ಆಯೇಗಾ.. ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂದ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಸಂಕಷ್ಟದ ದಿನವನ್ನು ತಂದೊಡ್ಡಿದ್ದಾರೆ ಎಂದು ಮಾಜಿ ಸಚಿವ ಹಾಗೂ ಶಾಸಕರಾದ ವೆಂಕಟರಮಣಪ್ಪ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಬಳ್ಳಾರಿ ರಸ್ತೆಯ ರಘು ಏಜೆನ್ಸಿಸ್ ಪೆಟ್ರೋಲ್ ಬಂಕ್ ಬಳಿ ಬ್ಲಾಕ್ ಕಾಂಗ್ರೆಸ್ ಹಾಗೂ ಯೂತ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ 100- ನಾಟ್ ಔಟ್ ಹೆಸರಿನ ಪ್ರತಿಭಟನಾ ರ್ಯಾಲಿಯನ್ನುದ್ದೇಶಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ದಿನೇ ದಿನೇ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಬಿಜೆಪಿ ಸರ್ಕಾರ ಶೀಘ್ರ ತೈಲ ಹಾಗೂ ದಿನ ಬಳಕೆ ವಸ್ತುಗಳ ಬೆಲೆ ಕಡಿಮೆ ಮಾಡಬೇಕು.
ಬಿಜೆಪಿ ಸರ್ಕಾರ ಜನಪರವಾದ ಆಡಳಿತ ನೀಡುತ್ತಿಲ್ಲ. ಕೇವಲ ಶ್ರೀಮಂತ ಕೈಗಾರಿಕೋದ್ಯಮಿಗಳ ಪರವಾಗಿ ಕೆಲಸ ಮಾಡುತ್ತಿದೆ. ಬೆಲೆ ಏರಿಕೆಯಿಂದ ಬಡವರು, ಮಧ್ಯಮ ವರ್ಗದವರು, ಕೂಲಿ ಕಾರ್ಮಿಕರು, ರೈತರು ಬೀದಿಗೆ ಬಂದಿದ್ದಾರೆ. ಬಿಜೆಪಿ ಸರ್ಕಾರದ ದುರಾಡಳಿತಕ್ಕೆ ಇಡೀ ಶಾಪ ಹಾಕುತ್ತಿದ್ದಾರೆ. ಜನರ ಸಂಕಷ್ಟ ಕೇಳುವವರಿಲ್ಲ. ಬಿಜೆಪಿ ಸರ್ಕಾರಕ್ಕೆ ಕಡಿವಾಣ ಹಾಕಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯವಿದೆ. ಬೆಲೆ ಏರಿಕೆಯಿಂದ ನೊಂದಿರುವ ಬಡವರು, ಕೂಲಿ ಕಾರ್ಮಿಕರು, ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ಸಂಘಟಿತರಾಗಿದ್ದಾರೆ. ಕಾಂಗ್ರೆಸ್‌ನ ಸಂಘಟನಾಶಕ್ತಿಯೇ, ಬಿಜೆಪಿ ಸರ್ಕಾರದ ಪಥನಕ್ಕೆ ಅಂಕುಶ ಹಾಕಲಿದೆ ಎಂದು ತಿಳಿಸಿದರು.
ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಜಿ.ಪಂ.ಸದಸ್ಯರಾದ ಹೆಚ್.ವಿ.ವೆಂಕಟೇಶ್ ಮಾತನಾಡಿ, ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಏರಿಸಿ ಜನರನ್ನ ಮತ್ತಷ್ಟು ಸಮಸ್ಯೆಗೆ ದೂಡಿದೆ. ತೈಲ ಬೆಲೆ ಏರಿಕೆಯಿಂದ ಇತರೆ ವಸ್ತುಗಳ ಬೆಲೆಯೂ ಸಾಕಷ್ಟು ಏರಿಕೆಯಾಗಿದೆ. ಇದರಿಂದ ಜನರು ಜೀವನ ಮಾಡದಂತಹ ಪರಿಸ್ಥಿತಿ ತಂದೊಡ್ಡಿದ್ದಾರೆ.
13 ತಿಂಗಳ ಅವಧಿಯಲ್ಲಿ ಪೆಟ್ರೋಲ್ ಬೆಲೆಯಲ್ಲಿ ಲೀಟರ್‌ಗೆ 25.72 ರೂ. ಹಾಗೂ ಡೀಸೆಲ್ ಬೆಲೆಯಲ್ಲಿ 23.93 ರೂ. ಹೆಚ್ಚಳ ಮಾಡಲಾಗಿದೆ. ಐದು ತಿಂಗಳಲ್ಲಿ 43 ಬಾರಿ ಬೆಲೆ ಏರಿಕೆ ಮಾಡಲಾಗಿದೆ. ಕೆಲವೆಡೆ ಲೀಟರ್ ಬೆಲೆ ನೂರರ ಗಡಿ ದಾಟಿದ್ದರೆ, ಇನ್ನು ಕೆಲವೆಡೆ ನೂರರ ಸನಿಹದಲ್ಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ದಿಕ್ಕಾರದ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೇಶ್ ಬಾಬು, ಪುರಸಭೆ ಮಾಜಿ ಅಧ್ಯಕ್ಷ ಎ. ಶಂಕರರೆಡ್ಡಿ, ಪುರಸಭೆ ಅಧ್ಯಕ್ಷ ರಾಮಾಂಜಿನಪ್ಪ. ಪುರಸಭಾ ಸದಸ್ಯರಾದ ರವಿ, ರಾಜೇಶ್, ಸುಬ್ರಹ್ಮಣ್ಯಂ. ವಿಜಯಕುಮಾರ್. ವೆಂಕಟರಮಣಪ್ಪ. ಮಹಮ್ಮದ್ ಇಮ್ರಾನ್. ವೇಲು ರಾಜ್. ತಾ.ಪಂ.ಸದಸ್ಯ ಹನುಮಂತರಾಯಪ್ಪ, ತುಮಕೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಸಂಘಟಿತ ಕಾರ್ಮಿಕ ವಿಭಾಗ ಗೋವಿಂದನಾಯ್ಕ .ಮುಖಂಡರಾದ ಪ್ರಮೋದ್ ಕುಮಾರ್, ಚಿನ್ನಮ್ಮನ ಹಳ್ಳಿಿ ಭೋಜರಾಜ್. ಕನಿಕಲ ಬಂಡೆ ಅನಿಲ್. ಯೂತ್ ಕಾಂಗ್ರೆಸ್ ನಗರ ಅಧ್ಯಕ್ಷ ಜಿ.ಮಹೇಶ್, ಗ್ರಾಮಾಂತರ ಅಧ್ಯಕ್ಷ ಬಿ.ಸುಜಿತ್, ಪಳವಳ್ಳಿ ಶಿವ ವಿ. ಹೆಚ್ ಪಾಳ್ಯ ಪಾಪಣ್ಣ . ಹರೀಶ್. ರಾಜವಂತಿಿ ಮಂಜುನಾಥ. ಹನುಮೇಶ್ ರಘು. ದೇವರಾಜ್ . ಪಿ.ಎಲ್, ಮಣಿ ಷಾಬಾಬು, ರಿಜ್ವಾನ್, ಮತ್ತಿತರರು ಇದ್ದರು.
ವರದಿ- ಬುಲೆಟ್ ವೀರಸೇನಯಾದವ್