1623503369705 12 6 21 grocery kits distribution 6

ಪಾವಗಡ: ಬಟ್ಟೆ ಅಂಗಡಿಗಳ ಸಿಬ್ಬಂದಿ ಗೆ ದಿನಸಿ ಕಿಟ್ ವಿತರಣೆ….!

DISTRICT NEWS ತುಮಕೂರು

ಪಾವಗಡ: – ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದ ಆವರಣದಲ್ಲಿ ಪಾವಗಡ ತಾಲ್ಲೂಕಿನ 30ಜನ ಗ್ರಾಮಾಂತರ ವಿಭಾಗದ ಗ್ರಂಥಪಾಲಕರಿಗೆ, 55 ಜನ ಪಾವಗಡ ಪಟ್ಟಣದ ವಿವಿಧ ಬಟ್ಟೆ ಅಂಗಡಿಗಳ ಸಿಬ್ಬಂದಿಯವರಿಗೆ, 5 ಜನ ರೊಪ್ಪ ಗ್ರಾಮ ಪಂಚಾಯಿತಿ ಸಿಬ್ಬಂದಿಯವರಿಗೆ, ತುರ್ತು ವಾಹನದ ಸಿಬ್ಬಂದಿಯವರಿಗೆ, 33 ಜನ ಅರ್ಚಕರು, ಪುರೋಹಿತರು, ಅಡುಗೆ ಕೆಲಸದವರಿಗೆ ಅಕ್ಕಿ, ಬೇಳೆ, ಅಡುಗೆ ಎಣ್ಣೆ, ಸಾಂಬಾರು ಪದಾರ್ಥಗಳನ್ನೊಳಗೊಂಡ ದಿನಸಿ ಕಿಟ್‌ಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಸ್ವಾಮಿ ಜಪಾನಂದಜಿ ರವರು ಮಾತನಾಡಿ ಆದಷ್ಟು ಬೇಗ ಕೊರೊನಾ ಸಂಕಟದಿAದ ಪಾರಾಗಿ ಮತ್ತೆ ಮೊದಲಿನಂತೆ ಜೀವನ ಸಾಗುವಂತಾಗಲಿ ಎಂದು ಹಾರೈಸಿದರು. ಲಾಕ್‌ಡೌನ್ ನಂತರ ಅಂಗಡಿ ಮಳಿಗೆಗಳು ಪುನರಾರಂಭವಾದ ಮೇಲೆ ಅತ್ಯಂತ ಜಾಗರೂಕರಾಗಿರಬೇಕೆಂದು ಕಿವಿಮಾತು ಹೇಳಿದರು. ನಂತರ ಮಾತನಾಡಿದ ಶ್ರೀ ಸುದೇಶ್ ಬಾಬು ರವರು ಲಸಿಕೆಯ ಮಹತ್ವವನ್ನು ವಿವರಿಸಿದರು ಹಾಗೆಯೇ ಕಡ್ಡಾಯವಾಗಿ ಲಸಿಕೆಯನ್ನು ಪಡೆದುಕೊಳ್ಳಬೇಕೆಂದು ವಿನಂತಿಸಿದರು.

ದಿನಸಿ ಕಿಟ್ಟುಗಳ ವಿತರಣೆಯ ಸಂದರ್ಭದಲ್ಲಿ ವಿವೇಕ ಬ್ರಿಗೇಡಿನ ಶ್ರೀ ಲೋಕೇಶ್ ದೇವರಾಜ್, ಶ್ರೀ ನರಸೋಜಿ ರಾವ್, ಶ್ರೀ ವೇಣುಗೋಪಾಲರೆಡ್ಡಿ, ಶ್ರೀ ಯಜ್ಞನಾರಾಯನ ಶರ್ಮ ಮತ್ತಿತರು ಹಾಜರಿದ್ದರು.