ನಿರ್ಗತಿಕ ಮಹಿಳೆಗೆ ಮನೆ ಹಸ್ತಾಂತರ
ವೈ.ಎನ್.ಹೊಸಕೋಟೆ: ಧಾನಗಳಲ್ಲಿ ಮಹಾದಾನ ಭೂಧಾನ ಎಂದು ವಾಲ್ಮೀಕಿ ನಿಡಗಲ್ ಆಶ್ರಮದ ಪೂಜ್ಯ ಶ್ರೀ ಸಂಜಯ್ ಕುಮಾರ ಸ್ವಾಮೀಜಿ ತಿಳಿಸಿದರು.
ಗ್ರಾಮದ ಕಾಳಿದಾಸನಗರದಲ್ಲಿ ಮನೆ ಕಳೆದುಕೊಂಡಿದ್ದ ಹನುಮಕ್ಕ ಎಂಬ ವೃದ್ದೆಗೆ ನಟ ಪವನ್ ಕಲ್ಯಾಣ್ 50ನೇ ಹುಟ್ಟು ಹಬ್ಬದ ಅಂಗವಾಗಿ ಅಭಿಮಾನಿಗಳು, ದಾನಿಗಳು ಹಾಗೂ ಗ್ರಾಮ ಪಂಚಾಯಿತಿ ಸಹಕಾರದೊಂದಿಗೆ ಮಹಿಳೆಗೆ ಪುನರ್ ನಿರ್ಮಿಸಿದ ಮನೆ ಮನೆಯನ್ನು ಗುರುವಾರದಂದು ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಆಪತ್ತಿನಲ್ಲಿರುವವರಿಗೆ ಸ್ಪಂದಿಸುವುದೇ ಮಾನವಧರ್ಮ ಎಂದು ತಿಳಿಸಿದರು.
ಕಷ್ಟ ಅಂತ ತಿಳಿದಕ್ಷಣ ಪ್ರತ್ಯಕ್ಷರಾಗಿ ಸಮಸ್ಯೆ ಬಗೆಹರಿಸುವ ಸೇವಾ ಮನೋಭಾವವನ್ನು ಹೊಂದಿರುವ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ಇಂದು ನಿರ್ಗತಿಕ ಮಹಿಳೆಗೆ ಗ್ರಾಮಪಂಚಾಯಿತಿ ಮತ್ತು ದಾನಿಗಳ ಸಹಕಾರದೊಂದಿಗೆ ಮನೆ ನಿರ್ಮಿಸಿಕೊಟ್ಟು ಜೊತೆಗೆ ಪಾತ್ರೆ ಸಾಮಾನುಗಳನ್ನು ನೀಡಿರುವುದು ಅವರ ದೊಡ್ಡ ಗುಣ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ದಾನಿಗಳು ಮತ್ತು ಮುಖಂಡರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪದ್ಮಕ್ಕಓಬಳೇಶ್, ಸಮಾಜ ಸೇವಕ ನಾಗೇಂದ್ರ ಕುಮಾರ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸೊಗಡು ವೆಂಕಟೇಶ್, ಕೆ.ಎನ್.ಆರ್. ಅಭಿಮಾನಿ ಬಳಗ ಅಧ್ಯಕ್ಷ ಶ್ರೀನಿವಾಸ್, ವಾಲ್ಮೀಕಿ ಜಾಗೃತಿ ವೇದಿಕೆ ಅಧ್ಯಕ್ಷ ಲೋಕೇಶ್ ಪಾಳೇಗಾರ, ಎ.ಓ.ನಾಗರಾಜು, ನಂದೀಶ್, ಜಿ.ಬಿ.ಸತ್ಯನಾರಾಯಣ, ಯುವ ಮುಖಂಡ ಅನಿಲ್, ಮಲ್ಲಿಕಾರ್ಜುನ, ಬಿ.ಎಸ್. ಆರ್.ಬ್ಲಡ್ ಶಶಿಕಲಾ, ಬೇಕರಿ ನಾಗರಾಜ, ಬೀಮ, ವಿಶಾಲ್ ಪವನಿಸಂ, ವೀರ, ಸಾಗರ್ ಹಾಗೂ ಪವನ್ ಕಲ್ಯಾಣ್ ಅಭಿಮಾನಿಗಳು ಹಾಜರಿದ್ದರು.
ವರದಿ: ಸತೀಶ್