ಪಾವಗಡ ಟೌನಿನಲ್ಲಿ ರೈತರ ಬೆಳೆ ನಷ್ಠ ಪರಿಹಾರ ಹಾಗೂ ಶಾಶ್ವತ ನೀರಾವರಿ ಯೋಜನೆ ಜಾರಿಗೆ ಸಿ.ಪಿ.ಐ.ಎಂ ಆಗ್ರಹ
ಪಾವಗಡ: ಸಿ.ಪಿ.ಐ.ಎಂ ಪಕ್ಷದ ಮೊದಲನೇ ಶಾಖ ಸಮ್ಮೇಳನವನ್ನು ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಆಯೋಜಸಲಾಗಿತ್ತು, ಸಿ.ಪಿ.ಐ.ಎಂ ಜಿಲ್ಲಾ ಕಾರ್ಯದರ್ಶಿ ಎನ್. ಕೆ ಸುಬ್ರಮಣ್ಯ ಸಮ್ಮೇಳನವನ್ನು ಉದ್ಗಾಟಿಸಿ ಮಾತನಾಡಿ ತಾಲ್ಲೂಕಿನಲ್ಲಿ ಮಳೆಯ ಪ್ರಮಾಣವು ಬಹಳ ಕಡಿಮೆ ಇದ್ದು ನಿರಿಕ್ಷಿತ ಮಟ್ಟದಲ್ಲಿ ಬೆಳೆ ಬೆಳೆಯಲು ಸಾಧ್ಯವಾಗಲಿಲ್ಲ ರೈತರಿಗೆ ಬೆಳೆ ನಷ್ಠ ಪರಿಹಾರ ನೀಡಬೇಕಾಗಿದೆ, ತಾಲ್ಲೂಕಿನಲ್ಲಿ ಶಾಶ್ವತವಾದ ನೀರಾವರಿ ಯೋಜನೆಯೂ ಜಾರಿ ಆದರೆ ಮಾತ್ರ ರೈತರಿಗೆ ಅನುಕೂಲವಾಗಲಿದೆ ಕೇವಲ ಕುಡಿಯುವ ನೀರಿನ ಯೋಜನೆಯಿಂದ ಶಾಶ್ವತ ಪರಿಹಾರ ಸಾಧ್ಯವಿಲ್ಲ, ತಾಲ್ಲೂಕು ರಾಜ್ಯದಲ್ಲಿ ಅಂತ್ಯಂತ ಹಿಂದುಳಿದ ಪ್ರದೇಶ ಎಂದು ಹಣೆಪಟ್ಟಿ ಇದ್ದು ಡಾ|| ನಂಜುಂಡಪ್ಪ ವರದಿಯನ್ನು ಶೀಘ್ರ ಜಾರಿಮಾಡಿ ಅಭಿವೃದ್ಧಿ ಪಡಿಸಬೇಕಾಗಿದೆ.
ಬಗರ್ ಉಕುಮ್ ಸಾಗುವಳಿದಾರರು ಅರ್ಜಿ ಸಲ್ಲಿಸಿದ್ದು ಎಲ್ಲಾ ರೈತರಿಗೂ ಸಾಗುವಳಿ ಚೀಟಿಯನ್ನು ಸರ್ಕಾರ ನೀಡಲು ಮುಂದಾಗಬೇಕಾಗಿದೆ, ಉದ್ಯೋಗ ಖಾತ್ರಿ ಯೋಜನೆಯನ್ನು ತಾಲ್ಲೂಕಿನ ಎಲ್ಲಾ ಪಂಚಾಯ್ತಿಗಳಲ್ಲಿಯೂ ಜಾರಿ ಮಾಡಲು ಮುಂದಾಗಬೇಕು ಎಂದು ಆಗ್ರಹಸಿದರು
ಸಿ.ಪಿ.ಐ.ಎಂ ಜಿಲ್ಲಾಸಮಿತಿ ಸದಸ್ಯರಾದ ಶಿವಣ್ಣ ಇ (ಪಾವಗಡ) ರವರು ಮಾತನಾಡಿ ತಾಲ್ಲೂಕಿನಲ್ಲಿ ಉದ್ಯೋಗ ಅವಕಾಶಗಳು ಕಡಿಮೆ ಇದ್ದು ಬಹುತೇಕ ಜನರು ಜೀವನ ನೆಡಸಲು ರಾಜಧಾನಿಗೆ ಹೋಗಬೇಕಾಂದತಹ ಪರಸ್ಥಿತಿ ಇದೆ ಆದ್ದರಿಂದ್ದ ಸ್ಥಳಿಯ ಮಟ್ಟದಲ್ಲಿ ಉದ್ಯೋಗ ಅವಕಾಶಗಳನ್ನು ಹೆಚ್ಚಳ ಮಾಡಲು ಸರ್ಕಾರ ಗಮನಹರಿಸಬೇಕಾಗಿದೆ, ರೈಲ್ವೆ ಕಾಮಗಾರಿಯೂ ಬಹಳಷ್ಢು ವಿಳಂಬವಾಗುತ್ತಿದ್ದು ಜನರು ವ್ಯಾಪಾರ ವಹಿವಾಟುಗಳಿಗಾಗಿ ಬಸ್ಸು ಅವಲಂಬಿಸಬೇಕಾದ ಪರಿಸ್ಥಿತಿ ಇದೆ ಆದರಿಂದ ಪಾವಗಡಕ್ಕೆ ರೈಲ್ವೆ ಶೀಘ್ರ ಜಾರಿಯಾಗಬೇಕು ಹೈದಾರಬಾದ್ ಕರ್ನಾಟಕಕ್ಕೆ ನೀಡಿದ ಮೀಸಲಾತಿಯನ್ನೆ ಪಾವಗಡಕ್ಕೂ ಜಾರಿ ಮಾಡಬೇಕು ಆ ಮೂಲಕ ಸರ್ಕಾರಿ ಉದ್ಯೋಗ ಅವಕಾಶಗಳು ಹೆಚ್ಚಳವಾಗಬೇಕಾಗಿದೆ, ಸರ್ಕಾರಿ ಶಾಲಾ/ಕಾಲೇಜುಗಳಲ್ಲಿ ಶಿಕ್ಷಕ ಉಪನ್ಯಸಾಕರ ಕೊರತೆ ಹೆಚ್ಚಳವಾಗಿದ್ದು ವಿದ್ಯಾರ್ಥಿಗಳಿಗೆ ಪಾಠ ಪ್ರವಚನಗಳಿಗೆ ತೊಂದರೆ ಉಂಟಾಗಿದ್ದು ರಾಜ್ಯ ಸರ್ಕಾರ ಗಮನ ಹರಿಸಬೇಕಾಗಿದೆ,
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ದೊಡ್ಡ ಪ್ರಮಾಣದಲ್ಲಿ ಇದ್ದು ಬಡ ಜನರಿಗೆ ಉಚಿತ ಚಿಕ್ಸಿತೆ ನೀಡಲು ಸರ್ಕಾರ ಗಮನಹರಿಸಬೇಕು ಎಂದರು, ಸಮ್ಮೇಳನದಲ್ಲಿ ತಾಲ್ಲೂಕು ಕಾರ್ಯದರ್ಶಿ ನಾಗರಾಜು ಮಾತನಾಡಿ ಮುಂದಿನ ಮೂರು ವರ್ಷಗಳಲ್ಲಿ ಪಕ್ಷವನ್ನು ಪ್ರಬಲಗೊಳಿಸಲು ತೀರ್ಮಾನ ಕೈಗೊಳ್ಳಲಾಯಿತು ಕಾರ್ಯಕ್ರಮದಲ್ಲಿ ಸದಸ್ಯರಾದ ರಾಮಾಂಜಿನಿ, ಮದಲೇಟಿ, ಶಿವಗಂಗಮ್ಮ, ಸಿದ್ದಮ್ಮ, ಸುಬ್ಬರಾಯಪ್ಪ, ಹನುಮಂತರಾಯಪ್ಪ ಮುಂತಾದವರು ಭಾಗವಹಿಸಿದ್ದರು
ವರದಿ: ಶ್ರೀನಿವಾಸುಲು