20211120 154057

ಕಾಂಗ್ರೆಸ್ : ಸಿನಿಮಾ ಕಾರ್ಯಕ್ರಮದಲ್ಲಿ ಸಿಎಂ ಬ್ಯುಸಿಯಾಗಿದ್ದಾರೆ…!

POLATICAL STATE

 

ಬೆಂಗಳೂರು: – ಕೇಂದ್ರ ಸರ್ಕಾರ ರೈತ ವಿರೋಧಿ ಕಾಯ್ದೆ ತಂದರು.ಕಾಯ್ದೆ ಹೇಗೆ ಜಾರಿಗೆ ತರ್ತಾರೆ. ಪಾರ್ಲಿಮೆಂಟ್,ವಿಧಾನಸಭೆಯಲ್ಲಿ ಚರ್ಚೆಯಾಗಿಲ್ಲ. ಆರ್ಡಿನೆನ್ಸ್ ಮೂಲಕ ಕಾಯ್ದೆ ತರ್ತಿದ್ದಾರೆ.ನಾವು ಮಾಡಿದ್ದೇ ಸರಿ ಅಂತ ಹೇಳ್ತಾರೆ.ರಾಜ್ಯಗಳ ಮೇಲೂ ಬಲವಂತ ಹೇರ್ತಾರೆ.ರೈತರು ಕಾಯ್ದೆ ವಿರುದ್ಧ ತಿರುಗಿಬಿದ್ರು.

೭೦೦ ರೈತರು ಪ್ರಾಣ ಕಳೆದುಕೊಂಡ್ರು.ಕರಾಳ ಮಸೂದೆ ವಾಪಸ್ ಗೆ ಆಗ್ರಹಿಸಿ ಹೋರಾಡಿದ್ರು. ಕಾಂಗ್ರೆಸ್ ಕೂಡ ತೀರ್ವವಾಗಿ ವಿರೋಧಿಸಿತು.
ಇದರ ಫಲವಾಗಿ ಈಗ ಕಾಯ್ದೆ ಹಿಂಪಡೆದಿದೆ. ಒಂದು ವರ್ಷದ ಹೋರಾಟದ ನಂತರ ಹಿಂಪಡೆದಿದ್ದಾರೆ.ಕೇಂದ್ರಕ್ಕೆ ಜ್ನಾನೋದಯವಾಗಿ ಹಿಂತೆಗೆದುಕೊಂಡಿಲ್ಲ.ಮುಂದಿನ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಹಿಂಪಡೆದಿದ್ದಾರೆ.ರೈತರ ಮುಂದೆ ಕೊನೆಗೂ ಪ್ರಧಾನಿ ತಲೆಬಗ್ಗಿಸಿದ್ದಾರೆ. ಹಿಟ್ಲರ್ ಆಡಳಿತ ಕೊನೆಗೊಳ್ಳುವ ಸಾಧ್ಯತೆಯಿದೆ.ರಾಜ್ಯದಲ್ಲೂ ಈ ಕಾಯ್ದೆಯನ್ನ ವಾಪಸ್ ಪಡೆಯಬೇಕು ಎಂದರು.

ಎಪಿಎಂಸಿ ಕಾಯ್ದೆಯನ್ನ ತಂದ್ರು.

ಎಪಿಎಂಸಿಗಳು ಇವತ್ತು ಮುಚ್ಚುತ್ತಿವೆ. ನಮ್ಮ ಸರ್ಕಾರ ಇದ್ದಾಗ ಎಪಿಎಂಸಿಗೆ ನಾವು ಮೂಲಸೌಕರ್ಯ ಕಲ್ಪಿಸಿದ್ದೆವು.ಆದರೆ ಇವರು ಸೌಕರ್ಯಗಳನ್ನೇ ನಿಲ್ಲಿಸಿಬಿಟ್ರು.

ರೈತರ ಮೇಲೂ ದಬ್ಬಾಳಿಕೆಗೆ ಅವಕಾಶ ಕೊಟ್ಟಿದ್ದರು. ಹೀಗಾಗಿ ಕಂಪನಿಗಳಿಗೆ ಎಲ್ಲ ಬೆಂಬಲ ನೀಡಿದ್ದರು.ಈಗೇನೋ ವಾಪಸ್ ಪಡೆಯುತ್ತೇವೆ ಎಂದಿದ್ದಾರೆ. ಆದರೆಮುಂದೆ ಮತ್ತೆ ತರಲ್ಲ ಅನ್ನೋದಕ್ಕೆ ಏನು ಸಾಕ್ಷಿ ಎಂದು
ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ ಸಾಹೇಬ್ರೇ ನಿಮ್ಮ ಕಾಳಜಿ ಇದೇನಾ?

ಮಳೆಯಿಂದ ರಾಜ್ಯದ ಜನ ತತ್ತರಿಸಿ‌ಹೋಗ್ತಿದ್ದಾರೆ.
ಕೋಟ್ಯಂತರ ರೂ.ಬೆಳೆ ಮಳೆಗೆ ಹಾನಿಯಾಗಿದೆ. ಬೆಂಗಳೂರಿನಲ್ಲಿ‌ ರಸ್ತೆಗಳು ಗುಂಡಿ ಬಿದ್ದು ಹೋಗಿವೆ.
ಆದ್ರೆ ಸಿಎಂ ಸಾಹೇಬ್ರಿಗೆ ಇದ್ರ ಬಗ್ಗೆ ಕಾಳಜಿಯಿಲ್ಲ. ನಿನ್ನೆ ಡಿಸಿಗಳ ಜೊತೆ ಸಭೆ ನಡೆಸಿದ್ದು ಬಿಟ್ಟರೆ ಬೇರೇನು ಮಾಡಿಲ್ಲ. ವಾರದಲ್ಲಿ ಎರಡೆರಡು ಸಿನಿಮಾ ಕಾರ್ಯಕ್ರಮದಲ್ಲಿ ಸಿಎಂ ಬ್ಯುಸಿಯಾಗಿದ್ದಾರೆ.

ಮಳೆ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಬೇಕು. ರೈತರು,ಸಂತ್ರಸ್ಥರ ಸಮಸ್ಯೆ ತಿಳಿಯಬೇಕು.ರಾಜ್ಯಾದ್ಯಂತ ಪ್ರವಾಸ ಮಾಡಿ ಎಲ್ಲವನ್ನ ಪರಿಶೀಲಿಸಬೇಕು. ಇದ್ಯಾವುದರ ಕಡೆಗೂ ಸಿಎಂ ಸಾಹೇಬ್ರಿಗೆ ಸಮಯ ಸಿಗ್ತಿಲ್ಲ ಅನಿಸುತ್ತೆ.

ಪ್ರಧಾನಿಗೆ ಗುತ್ತಿಗೆದಾರದ ಪತ್ರ ವಿಚಾರ. ಗುತ್ತಿಗೆಯಲ್ಲಿ ೪೦% ಕೇಳ್ತಾರೆಂಬ ಆರೋಪ ವಿಚಾರ.

ಮೋದಿಯವರ ಮುಖವಾಡ ಕಳಚುತ್ತಿದೆ. ಇಂತಹ ಪ್ರಸಂಗ ನಾವು‌ ನೋಡಿಲ್ಲ. ಕಂಟ್ರಾಕ್ಟರ್ಸ್ ಈ ಹಿಂದೆ ದೂರು ನೀಡಿದ ಉದಾಹರಣೆಯಿಲ್ಲ. ಇದೇ ಮೊದಲು ಪ್ರಧಾನಿಗೆ ಹಾಗೂ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.
ನಾವು ಹಲವು ವರ್ಷ ಸರ್ಕಾರದ ಭಾಗವಾಗಿದ್ದೆವು. ಆದರೆ ಎಂದಿಗೂ ಇಂತಹ ಪ್ರಕರಣ ನೋಡಿರಲಿಲ್ಲ.

ಐಎಎಸ್ ಅಧಿಕಾರಿಗಳು ಕೈಕಟ್ಟಿ ನಿಲ್ತಿದ್ದಾರೆ.ವರ್ಗಾವಣೆಗಾಗಿ ಕೈಕಟ್ಟಿ ನಿಲ್ತಿದ್ದಾರೆ. ಈ ಬಿಜೆಪಿ ಸರ್ಕಾರ ಭ್ರಷ್ಟಾಚಾರವನ್ನ ಲೀಗಲೈಸ್ ಮಾಡಿದ್ದಾರೆ. ಇದರ ಬಗ್ಗೆ ನಾವು ಹೋರಾಟ ಹಮ್ಮಿಕೊಂಡಿದ್ದೇವೆ.
ನಾಳೆ ಜನಾಂದೋಲನ ಜಾಗೃತಿಯನ್ನು ತುಮಕೂರಿನಲ್ಲಿ ಹಮ್ಮಿಕೊಂಡಿದ್ದೇವೆ.

ನಮ್ಮಲ್ಲಿ‌ ಮೂರು ನೀರಾವರಿ ನಿಗಮಗಳಿವೆ.ಒಂದೊಂದು ನಿಗಮದಲ್ಲಿ ನಾಲ್ಕೈದು ಸಾವಿರ ಕೋಟಿ ಬಾಕಿಯಿದೆ.ಗುತ್ತಿಗೆದಾರರಿಗೆ ಕೊಡಬೇಕಾದ ಬಾಕಿಯಿದೆ. ಗುತ್ತಿಗೆದಾರರು ಊರು ಬಿಟ್ಟು‌ಹೋಗ್ತಿದ್ದಾರೆ.ನಮ್ಮಲ್ಲೂ ಎತ್ತಿನಹೊಳೆ,ಭದ್ರಾಮೇಲ್ದಂಡೆ ನಡೆದಿದೆ.ಕಂಟ್ರಾಕ್ಟರ್ ಬಂದು ಊರಿಗೆ ಹೋಗ್ತೇವೆ ಅಂತಿದ್ದಾರೆ.
ಜನ ಇವತ್ತು ಬೀದಿಗಿಳಿಯುವ ಪರಿಸ್ಥಿತಿ ಬಂದಿದೆ ಎಂದರು.

20211120 154050

ನರೇಂದ್ರ ಮೋದಿಯವರು ತಮ್ಮ ಕಾರ್ಪೋರೇಟ್ ಸ್ನೇಹಿತರನ್ನು ಉದ್ದಾರ ಮಾಡಲು ಹಾಗೂ ತಮ್ಮ ಧಣಿಗಳ ಆದೇಶ ಪಾಲಿಸುತ್ತಾ ತಂದಿದ್ದ ರೈತ ವಿರೋಧಿ ಕಾನೂನಿನ ವಿರುದ್ಧ ಮಾಡಿದ ಹೋರಾಟಕ್ಕೆ ಜಯ ಸಿಕ್ಕಿದೆ.ಕೇಂದ್ರ ಸರ್ಕಾರ ಈಗ ಕೃಷಿ ಕಾಯ್ದೆ ವಾಪಸ್ ಪಡೆದಿದೆ. ಇದು ಪ್ರಜಾಪ್ರಭುತ್ವ ಗೆಲುವಾಗಿದೆ.

ನರೇಂದ್ರ ಮೋದಿ ಅವರು ಸರ್ವಾಧಿಕಾರಿ ಧೋರಣೆಯಿಂದ ಜಾರಿಗೆ ತಂದ್ದ ಕಾಯ್ದೆ ವಿರುದ್ಧ ಹೋರಾಟ ಮಾಡಿ ಸುಮಾರು 700 ಕ್ಕಿಂತ ಹೆಚ್ಚಲು ಮಂದಿ ರೈತರು ಹುತಾತ್ಮರಾದರು. ಅಹಂ ಬ್ರಹ್ಮಾಸ್ಮಿ ಎಂದು ಪ್ರಧಾನಿ ಎಂದು ತಿಳಿದು ಅನೇಕ ಕಾನೂನೂ ಜಾರಿಗೆ ತಂದ್ದರು.ತಾವು ಮಾಡಿದ್ದೇ ಸರಿಯೆಂಬ ದಾಟಿಯಲ್ಲಿದ್ದರು. ರೈತರ ಹೋರಾಟಕ್ಕೆ ಈಗ ಜಯ ಸಿಕ್ಕಿದೆ. ಇವರು ಚುನಾವಣೆ ದೃಷ್ಟಿಯಿಂದ ಕಾಯ್ದೆ ಹಿಂಪಡೆದಿದ್ದಾರೆ. ಚುನಾವಣೆಯಲ್ಲಿ‌ ಸೋತಿದ್ದಕ್ಕೆ ತೈಲ‌ಬೆಲೆ ಕಡಿಮೆ ಮಾಡಿದ್ದರು. ತೈಲ ಬೆಲೆಯನನು ಇನ್ನೂ ಕಡಿಮೆ ಮಾಡಬೇಕು ಎಂದು
ಕೇಂದ್ರ ಸರ್ಕಾರಕ್ಕೆ ಸಲೀಂ ಅಹ್ಮದ್ ಒತ್ತಾಯ ಮಾಡಿದರು.

ಈ ಕರಾಳ ಕಾಯ್ದೆಯಿಂದ ಹುತಾತ್ಮರಾದ ರೈತ ಕುಟುಂಬಗಳಿಗೆ 25 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಮಾಡಿದರು.

ರೈತ ವಿರೋಧಿ ಕಾಯ್ದೆ ಹಿಂಪಡೆದ ವಿಚಾರವಾಗಿ ಪಕ್ಷವು ಕಿಸಾನ್ ವಿಜಯ ದಿವಸ್ ಅನ್ನು ರಾಜ್ಯದಾದ್ಯಂತ ಆಚರಣೆ ಮಾಡಲಾಗುವುದು ಎಂದು ತಿಳಿಸಿದರು.

ಕಂಟ್ರಾಕ್ಟರ್ಸ್ ೪೦% ಕಮೀಷನ್ ದೂರು ವಿಚಾರ ಮಾಧ್ಯಮ ಪ್ರಶ್ನೆಗೆ.

ಇಂತ ಪತ್ರ ಬರೆದದ್ದನ್ನ‌ ನಾವು ನೋಡಿಲ್ಲ. ಪ್ರೈಮಿನಿಸ್ಟರ್ ಗೆ ಪತ್ರವನ್ನ ಬರೆಯುತ್ತಾರೆ. ೪೦% ನಮ್ಮಿಂದ ಪರ್ಸೇಂಟೇಜ್ ಪಡೆಯುತ್ತಾರೆಂಬ ಪತ್ರ. ಗುತ್ತಿಗೆದಾರರು ಪತ್ರ ಬರೆಯುತ್ತಾರೆ ಅಂದರೆ ಹೇಗೆ? ಈ ವಿಚಾರವಾಗಿ ಇವತ್ತು ಜನರ ಮುಂದೆ ರಾಜ್ಯ ಬಿಜೆಪಿ ಸರ್ಕಾರ ಬೆತ್ತಲಾಗಿದೆ. ಇದಕ್ಕೆ ಪ್ರಧಾನಿಯವರೇ ಉತ್ತರವನ್ನ ಕೊಡಬೇಕು.

ಹಿಂದೆ ನೀರಾವರಿ ಟೆಂಡರ್ ನಲ್ಲಿ ಆರೋಪ. ಆ ಆರೋಪಕ್ಕೂ ಈ ಆರೋಪಕ್ಕೆ ತಾಳೆ ಯಾಗ್ತಿದೆ.
ಬೆಂಕಿ ಯಿಲ್ಲದೆ ಹೊಗೆ ಕಾಣಲ್ಲ ಇದಕ್ಕೆ ಪ್ರಧಾನಿಯವರೇ ಉತ್ತರ ಕೊಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಒತ್ತಾಯ ಮಾಡಿದರು.