64a9ada0 285f 446f b1a8 57cc2bfe5dbc

ಪಾವಗಡ ಕೊರೋನಾ ಸೋಂಕಿತರ ಗೋಳು…!

DISTRICT NEWS ತುಮಕೂರು

ಪಾವಗಡ ಕೊರೋನಾ ಸೋಂಕಿತರ ಗೋಳು

*ಕೋವಿಡ್ ಆಸ್ಪತ್ರೆಯಲ್ಲಿರೋರ ಗೋಳು ಕೇಳೊರ್ಯಾರು?*

*ಪಾವಗಡ:* ನಮಗೆ ಬಿಸಿ ನೀರಿಲ್ಲ, ತಣ್ಣಗಿರೋ ಆಹಾರ ನೀಡ್ತಾರೆ ಇನ್ನು ಸಮರ್ಪಕ ಮಾತ್ರೆಗಳನ್ನು ಕೊಡದೆ ಹಿಂಸೆ ಕೊಡ್ತಿದ್ದಾರೆ,ಯಾವುದೇ ಕೊರೊನಾ ಲಕ್ಷಣಗಳಿಲ್ಲದ್ದರೂ ಇಲ್ಲಿರಿಸಿ ನಮ್ಮ ಆರೋಗ್ಯದ ಬಗ್ಗೆ ವಿಚಾರಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ತುಮಕೂರು ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿತರೆಂದು ದಾಖಲಾದ ಮುಗ್ದ ಜನರು ಸಾಮಾಜಿಕ ಜಾಲತಾಣದಲ್ಲಿ ಗೋಳಿಟ್ಟ ಕಥೆ ಅವರ ಜೀವನದ ವ್ಯಥೆಯಿದು.
ಹೌದು ನಾನು ಹೇಳ್ತಿರೋ ಸುದ್ದಿ ಅಕ್ಷರಶಃ ನಿಮಗೆ ಕಣ್ಣಂಚಲ್ಲಿ ಕಣ್ಣೀರು ತರಿಸುತ್ತೆ.

images 11

ಕೊರೊನಾ ಅನ್ನುವ ವೈರಸ್ ಇಡಿ ಮನುಕುಲವನ್ನೇ ಬೆಚ್ಚಿ ಬೀಳಿಸಿದೆ, ಒಬ್ಬರನ್ನೊಬ್ಬರು ಮುಟ್ಟದಷ್ಟು ಹೊಲಸು ಪದ್ದತಿ ಸೃಷ್ಟಿಸಿದೆ ಅದೆಲ್ಲ ಸಹಿಸಿಕೊಳ್ಳೋಣ ಆದರೆ ಮನುಷ್ಯರೇ ಮೃಗ ಗಳಂತೆ ವರ್ತಿಸಿದರೆ ಹೇಗೆ ಹೇಳಿ..! ತುಮಕೂರಿನ ಕೋವಿಡ್ ಆಸ್ಪತ್ರೆಗೆ ಪಾವಗಡದಿಂದ ಕರೆತಂದು ಎರಡು ದಿನಗಳು ಕಳೆದಿವೆ. ಇಲ್ಲಿ ನಮಗೆ ಅವಶ್ಯವಿರುವ ಮಾತ್ರೆಗಳನ್ನಾಗಲಿ , ಚುಚ್ಚು ಮದ್ದುಗಳನ್ನಾಗಲಿ ನೀಡುತ್ತಿಲ್ಲ ಇನ್ನು ಸ್ನಾನ ಮಾಡಲು ವ್ಯವಸ್ಥೆಯಿಲ್ಲ ,ಅದರಲ್ಲೂ ಶೌಚಾಲಯದ ಸ್ಥಿತಿ ನೋಡಿದ್ರೆ ಸ್ವಚ್ಚತೆಯಿಲ್ಲದೆ ಸಾಂಕ್ರಾಮಿಕ ರೋಗಕ್ಕೆ ಆಹ್ವಾನವಿಟ್ಟಂತಿದೆ. ನಮ್ಮ ಗೋಳನ್ನ ಕೇಳೋರೇ ಇಲ್ಲದಂತಾಗಿದೆ. ಇದರ ಬದಲಿಗೆ ಸಾಯುವುದೇ ಲೇಸು ಎಂದು ಪಾವಗಡದ ಯುವಕ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ವಿಡಿಯೋವೊಂದರಲ್ಲಿ ಅಲವತ್ತುಕೊಂಡಿದ್ದಾನೆ.
ಅಷ್ಟೇ ಅಲ್ಲದೆ ಆಸ್ಪತ್ರೆಗೆ ಕರೆ ತಂದಾಗಿನಿಂದಲೂ ನಮ್ಮ ಆರೋಗ್ಯದ ಕಾಳಜಿ ವಹಿಸದೇ ಇಲ್ಲಿನ ಆರೋಗ್ಯಾಧಿಕಾರಿಗಳು ಬೇಜವಾಬ್ದಾರಿ ತನದಿಂದ ವರ್ತಿಸುತ್ತಿದ್ದಾರೆಂದು ಮಧುಗಿರಿಯಿಂದ ಬಂದ ಯುವಕನೋರ್ವನ ಕಣ್ಣೀರ ಕಥೆಯಿದು. ಇನ್ನು ನನ್ನನ್ನು ಎಸ್ಎಸ್ಎಲ್ ಸಿ ಪರೀಕ್ಷೆ ಬರೆಸದೆ ಕರೆ ತಂದರು ಆದರೆ ಇಲ್ಲಿ ಯಾವುದೇ ಜೌಷಧಿ ನೀಡದೆ ಗುಲಾಮರಂತೆ ನೋಡುತ್ತಿದ್ದಾರೆ ಎಂದು ತನ್ನ ಅಳಲನ್ನು ತೋಡಿಕೊಳ್ಳುತ್ತಿದ್ದಾನೆ ಮತ್ತೋರ್ವ ಯುವಕ.

ಹೀಗೆ ವೈರಸ್ ಹರಡಿದೆ ಎಂಬ ಆತಂಕದಲ್ಲಿ ಅಂತರ ಕಾಯಿಸಿ ಆರೋಗ್ಯ ಸುಧಾರಿಸುವ ಸಲುವಾಗಿ ಅವರನ್ನು ಜಿಲ್ಲಾಸ್ಪತ್ರೆಗೆ ಕರೆ ತಂದು ಬಿಸಿ ನೀರು ಕುಡಿಯಿರಿ, ಬಿಸಿ ಊಟ ತಿನ್ನಿ ಹೀಗೆ ನಾನಾ ರೀತಿಯ ಸುರಕ್ಷತಾ ಕ್ರಮ ಅನುಸರಿಸಿ ಎಂದು ಪಟ್ಟಿ ಮೇಲೆ ಪಟ್ಟಿ ಬಿಡುಗಡೆ ಮಾಡಿದೆ ಸರ್ಕಾರ, ಆದರೆ ಇವೆಲ್ಲ ಮುಂಜಾಗ್ರತ ಸುರಕ್ಷತಾ ಕ್ರಮಗಳನ್ನು ಗಾಳಿಗೆ ತೂರಿ ಈ ರೀತಿ ಕೋವಿಡ್ ಆಸ್ಪತ್ರೆಗಳಲ್ಲಿ ನಿರ್ಲಕ್ಷ್ಯ ವಹಿಸರೋದು ಎಷ್ಟರ ಮಟ್ಟಿಗೆ ಸರಿ ಆರೋಗ್ಯ ಮಂತ್ರಿಗಳೇ …? ಇನ್ನಾದರೂ ಇತ್ತ ಕಡೆ ಗಮನಹರಿಸಿ ಅವರ ನೋವಿಗೆ ಆಸರೆಯಾಗಬೇಕಿದೆ.

ವರದಿ: ನವೀನ್ ಕಿಲಾರ್ಲಹಳ್ಳಿ*