ಐಮ್ಯಾಕ್ಸ್ನಿಂದ ಉಗ್ರ ನೋಟದ ರಾಕಿಯ ಕೆ.ಜಿ.ಎಫ್. ಚಾಪ್ಟರ್ ೨ರ ಪೋಸ್ಟರ್ ಬಿಡುಗಡೆ
ಏಪ್ರಿಲ್ ೧೧, ೨೦೨೨; ಬೆಂಗಳೂರು: ಐಮ್ಯಾಕ್ಸ್ ಕನ್ನಡ ಭಾಷೆಯ ಅತ್ಯಂತ ನಿರೀಕ್ಷೆಯ ಚಲನಚಿತ್ರ ಕೆ.ಜಿ.ಎಫ್. ಚಾಪ್ಟರ್ ೨ ವಿಶೇಷ ಪೋಸ್ಟರ್ ಬಿಡುಗಡೆ ಮಾಡಿದೆ. ಪ್ರಶಾಂತ್ ನೀಲ್ ಕಥೆ ಹಾಗೂ ನಿರ್ದೇಶನದ ಹೊಂಬಾಳೆ ಫಿಲ್ಮ್÷್ಸ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿರುವ ಕೆ.ಜಿ.ಎಫ್. ಚಾಪ್ಟರ್ ೨ರಲ್ಲಿ ರಾಕಿಂಗ್ ಸ್ಟಾರ್ ಯಶ್, ಸಂಜಯ್ ದತ್, ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್ ಮತ್ತು ಪ್ರಕಾಶ್ ರಾಜ್ ನಟಿಸಿದ್ದಾರೆ. ಕೋಲಾರದ ಚಿನ್ನದ ಗಣಿಗಳ ಹಿನ್ನೆಲೆಯ ಕಥೆಯನ್ನು ಹೊಂದಿರುವ ಇದು ಕೆ.ಜಿ.ಎಫ್. ಚಾಪ್ಟರ್ ೧ರ ಮುಂದುವರಿದ ಭಾಗವಾಗಿದ್ದು ಕನ್ನಡ, ತೆಲುಗು, ಹಿಂದಿ ಭಾಷೆಗಳಲ್ಲಿ ಏಪ್ರಿಲ್ ೧೪, ೨೦೨೨ರಂದು ಐಮ್ಯಾಕ್ಸ್ ಸ್ಕಿçÃನ್‌ಗಳಲ್ಲಿ ಬಿಡುಗಡೆಯಾಗಲಿದೆ.
ಐಮ್ಯಾಕ್ಸ್ನ ಎಕ್ಸ್ಕ್ಲೂಸಿವ್ ಪೋಸ್ಟರ್‌ನಲ್ಲಿ ರಾಕಿ ಎರಡೂ ಕೈಗಳಲ್ಲಿ ಆಯುಧಗಳನ್ನು ಹಿಡಿದು ಭಯಂಕರ ನೋಟ ಹೊಂದಿದ್ದು ಹಿನ್ನೆಲೆಯಲ್ಲಿ ಗೂಂಡಾಗಳಿರುವ ತನ್ನ ವಿನಾಶಕ್ಕೆ ಯತ್ನಿಸುವವರ ವಿರುದ್ಧ ಪ್ರತೀಕಾರ ತೆಗೆದುಕೊಳ್ಳುವಂತೆ ನಿಂತಿದ್ದಾರೆ.
ಕೆ.ಜಿ.ಎಫ್. ಚಾಪ್ಟರ್ ೨ ಐಮ್ಯಾಕ್ಸ್ನಲ್ಲಿ ಬಿಡುಗಡೆ ಮಾಡುವ ಕುರಿತು ಇಂಟರ್‌ನ್ಯಾಷನಲ್ ಡೆವಲಪ್‌ಮೆಂಟ್ ಅಂಡ್ ಡಿಸ್ಟಿçಬ್ಯೂಷನ್‌ನ ಉಪಾಧ್ಯಕ್ಷ ಕ್ರಿಸ್ಟೋಫರ್ ಟಿಲ್‌ಮ್ಯಾನ್, “ಐಮ್ಯಾಕ್ಸ್ ತನ್ನ ಪ್ರೇಕ್ಷಕರಿಗೆ ಅದ್ಭುತ ಅನುಭವ ನೀಡುವಲ್ಲಿ ಖ್ಯಾತಿ ಪಡೆದಿದೆ ಮತ್ತು ಕೆ.ಜಿ.ಎಫ್. ಚಾಪ್ಟರ್ ೨ರಂತಹ ಆ್ಯಕ್ಷನ್ ಸನ್ನದ್ಧ ಚಲನಚಿತ್ರ ಬಿಡುಗಡೆ ಮಾಡುವುದು ನಮಗೆ ಅತ್ಯಂತ ಸೂಕ್ತವಾಗಿದೆ. ಐಮ್ಯಾಕ್ಸ್ ಅನುಭವವು ಪ್ರೇಕ್ಷಕರಿಗೆ ಈ ಅದ್ಭುತ ಚಲನಚಿತ್ರ ವೀಕ್ಷಿಸುವ ಮತ್ತು ಭಾಗವಾಗುವ ಅವಕಾಶ ನೀಡುತ್ತಿದೆ. ಭಾರತವು ಸದೃಢ ಹಾಗೂ ವಿಸ್ತಾರ ಕಥೆ ಹೇಳುವಿಕೆ ಹಾಗೂ ಪ್ರತಿಭೆಗೆ ತವರಾಗಿದೆ ಹಾಗೂ ಕೆ.ಜಿ.ಎಫ್. ಚಾಪ್ಟರ್ ೨ ಬಿಡುಗಡೆಯು ಐಮ್ಯಾಕ್ಸ್ನಲ್ಲಿ ದೃಶ್ಯ ವೈಭವದ ಹಾಗೂ ಭಾವನಾತ್ಮಕವಾಗಿ ಸೆಳೆಯುವ ಕಥೆಗಳನ್ನು ಪ್ರಸ್ತುತಪಡಿಸುವಲ್ಲಿ ನಮ್ಮ ಬದ್ಧತೆಗೆ ಪೂರಕವಾಗಿದೆ” ಎಂದರು.
ಹೊಂಬಾಳೆ ಫಿಲ್ಮ್÷್ಸ ಪಾಲುದಾರ ಹಾಗೂ ಸಹ-ಸಂಸ್ಥಾಪಕ ಚಲುವೇಗೌಡ, “ಕೆ.ಜಿ.ಎಫ್.ಚಾಪ್ಟರ್ ೨ ಐಮ್ಯಾಕ್ಸ್ನಲ್ಲಿ ಪ್ರದರ್ಶನಗೊಳ್ಳುತ್ತಿರುವ ಮೊದಲ ಕನ್ನಡ ಚಲನಚಿತ್ರ ಎನ್ನುವುದಕ್ಕೆ ನಾವು ಬಹಳ ಹೆಮ್ಮೆ ಪಡುತ್ತೇವೆ. ಐಮ್ಯಾಕ್ಸ್ ಜೊತೆಯಲ್ಲಿ ನಮ್ಮ ಸಹಯೋಗವು ನಮ್ಮ ಅಭಿಮಾನಿಗಳಿಗೆ ಮನರಂಜನೆಯನ್ನು ಲಭ್ಯವಿರುವ ಅತ್ಯುತ್ತಮ ತಂತ್ರಜ್ಞಾನದೊAದಿಗೆ ನೀಡಬೇಕೆನ್ನುವ ನಮ್ಮ ಧ್ಯೇಯಕ್ಕೆ ಅನುಗುಣವಾಗಿದೆ. ಅಭಿಮಾನಿಗಳ ಪ್ರತಿಕ್ರಿಯೆ ಅಭೂತಪೂರ್ವವಾಗಿದೆ ಮತ್ತು ಉತ್ಸಾಹವು ಜ್ವರದಂತೆ ಏರಿದೆ. ನಮ್ಮ ವಿತರಣೆಯ ಜಾಲವನ್ನೂ ವಿಸ್ತರಿಸಲು ಪ್ರಯತ್ನಿಸುತ್ತಿದ್ದು ಈ ಚಲನಚಿತ್ರವು ಇತಿಹಾಸ ಸೃಷ್ಟಿಸುತ್ತದೆ ಎಂಬ ವಿಶ್ವಾಸ ನಮ್ಮದು. ಐಮ್ಯಾಕ್ಸ್ ಜೊತೆಯಲ್ಲಿ ನಮ್ಮ ಸಹಯೋಗ ನಮ್ಮ ಚಿಂತನೆಗಳಿಗೆ ಪೂರಕವಾಗಿದೆ ಮತ್ತು ಈ ಸಹಯೋಗದಿಂದ ವಿಶ್ವದಾದ್ಯಂತ ನಮ್ಮ ಅಭಿಮಾನಿಗಳಿಗೆ ಜಾಗತಿಕ ಮಟ್ಟದ ಕೊಡುಗೆ ನೀಡಲು ಶಕ್ತರಾಗಿದ್ದೇವೆ” ಎಂದರು.
ಕೆ.ಜಿ.ಎಫ್. ಚಾಪ್ಟರ್ ೨ ಭಾರತದಲ್ಲಿ ಎಲ್ಲ ಐಮ್ಯಾಕ್ಸ್ ಸ್ಕಿçÃನ್‌ಗಳು ಮತ್ತು ವಿಶ್ವದ ಆಯ್ದ ಐಮ್ಯಾಕ್ಸ್ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ.