ಬುದ್ಧ ಈ ನಾಡಿನ ಬಹುದೊಡ್ಡ ಪ್ರಜಾಪ್ರಭುತ್ವವಾದಿ ಅವನ ಕಾಲದಲ್ಲೇ ಪ್ರಜಾಪ್ರಭುತ್ವ ಎಂದು ಖ್ಯಾತ ಕವಿ ಹಾಗೂ ಚಿಂತಕರಾದ ಹೆಚ್ ಎಸ್ ವೆಂಕಟೇಶಮೂರ್ತಿ ಅವರು ಹೇಳಿದರು
ಕನ್ನಡ ಸಾಹಿತ್ಯ ಪರಿಷತ್ತು ಆನೇಕಲ್ ವಿಧಾನಸಭಾ ಕ್ಷೇತ್ರದ ವತಿಯಿಂದ ಹಮ್ಮಿಕೊಂಡಿದ್ದ ಹಿರಿಯ ಸಾಹಿತಿಗಳು ಸರಣಿ ಬೇಟಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಲೋಕದ ಶೋಕವನ್ನು ಪರಿಹಾರ ಮಾಡಲು ಬುದ್ಧ ಸಂಕಲ್ಪವನ್ನು ಕೈಗೊಂಡಿದ್ದನ್ನು ಆದರೆ ಇಂದು ಸಮಾಜದಲ್ಲಿ ಗೃಹ ಶೋಕ ಹೆಚ್ಚಾಗಿದೆ ಎಂದು ಬೇಸರವನ್ನು ವ್ಯಕ್ತಪಡಿಸಿದರು ಬರಹಗಾರರು ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳಬೇಕು ಆಗಲೇ ಉತ್ತಮ ಸಾಹಿತ್ಯ ಹೊರ ಬರಲು ಸಾಧ್ಯವಾಗುತ್ತದೆ ಲೇಖಕರು ರಾಗ ದ್ವೇಷಕ್ಕೆ ಒಳಗಾಗುವುದಿಲ್ಲ ಸದಾ ಮನಸ್ಸಿನ ಸ್ಥಿಮಿತತೆಯಿಂದ ಕಾಪಾಡಿಕೊಳ್ಳುತ್ತಾರೆ ಎಂದೂ ನುಡಿದರು. ಪಂಪ ರನ್ನ ಜನ್ನ ಇವರನ್ನು ಯಾವ ಕವಿ ವರ್ಗವು ಸಾಧ್ಯವಿಲ್ಲ ಅವರೇ ಕನ್ನಡದ ತಳಪಾಯವಾಗಿದ್ದಾರೆ ದಲಿತ ಸಾಹಿತ್ಯವನ್ನು ನಾವೆಲ್ಲರೂ ಅಪ್ಪಿಕೊಂಡು ಅವರನ್ನು ಮುಂಚೂಣಿಗೆ ತರಲು ಪ್ರಾಮಾಣಿಕವಾದ ಪ್ರಯತ್ನವನ್ನು ಮಾಡಬೇಕು ಹಾಗೂ ಸಹಕಾರವನ್ನು ನೀಡಬೇಕು ಆಗಲೇ ಸಮ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ವಿಶ್ಲೇಷಿಸಿದರು.
ಕ.ಸಾ.ಪ ಅಧ್ಯಕ್ಷರಾದ ಆದೂರು ಪ್ರಕಾಶ್ ಮಾತನಾಡಿ ಸಾಹಿತಿಗಳನ್ನು ಭೇಟಿ ಮಾಡಿ ಅವರ ಬರಹ ಭಾಷಣವನ್ನು ಕೇಳಿದಾಗ ಬಹುದೊಡ್ಡ ಗ್ರಂಥಗಳನ್ನು ಅಧ್ಯಯನ ಮಾಡಿದ ಅನುಭವವಾಗುತ್ತದೆ ಸಾಹಿತಿಗಳು ಎಲ್ಲಾ ಭಾಷೆಗಳ ಅಧ್ಯಯನ ಮಾಡಿ ಪದಗಳ ಪಾಕವನ್ನು ಸಿದ್ಧಪಡಿಸಿ ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಣೆ ಮಾಡುವ ಮಹನೀಯರಿವರು. ಕನ್ನಡ ಸಾಹಿತ್ಯ ಪರಿಷತ್ತು ಕನ್ನಡದ ಲೇಖಕರನ್ನು ಅಧ್ಯಯನ ಮಾಡುವುದು ಕನ್ನಡತನವನ್ನು ಉಳಿಸುವುದು ಕನ್ನಡ ಗೀತೆ ನಾಟಕ ಕವಿತೆ ಕಥೆಗಳನ್ನು ಹೆಚ್ಚು ಯುವಜನರಿಗೆ ತಲುಪಿಸಿ ಕನ್ನಡದ ಬಗ್ಗೆ ಪ್ರೀತಿ ಹುಟ್ಟುವ ವಾತಾವರಣವನ್ನು ನಿರ್ಮಾಣ ಮಾಡುವ ಕೆಲಸವನ್ನು ಸದಾ ಮಾಡುತ್ತದೆ ಎಂದು ತಿಳಿಸಿದರು.
ಗೌರವ ಕಾರ್ಯದರ್ಶಿ ಮಹೇಶ್ ಊಗಿನಹಳ್ಳಿ ಮಾತನಾಡಿ ಶಿಕ್ಷಕರಿಗೆ ವಿದ್ಯಾರ್ಥಿಗಳೇ ಬಹುದೊಡ್ಡ ಸಂಪತ್ತು ಅವರು ನೀಡುವ ಗೌರವ ವಿಧೇಯತೆ ಗಳನ್ನು ಮೆಲುಕು ಹಾಕುತ್ತಲೇ ಸಮಾಜದಲ್ಲಿ ಉಲ್ಲಾಸದಿಂದ ಬದುಕುತ್ತಾರೆ ಹಿಂದೆ ಶಿಕ್ಷಕರು ಸಾಹಿತ್ಯ ಕಥೆ ಕವನಗಳನ್ನು ರಚಿಸಿ ವಿದ್ಯಾರ್ಥಿಗಳಿಗೆ ಉಣಬಡಿಸುತ್ತಿದ್ದಾರೆ ಆದರೆ ಇಂತಹ ಶಿಕ್ಷಕವರ್ಗ ಸಾಹಿತ್ಯದಿಂದ ಹಿಮ್ಮುಖವಾಗಿರುವುದು ದುರಂತದ ವಿಚಾರ ಎಂದು ನೋವನ್ನು ವ್ಯಕ್ತಪಡಿಸಿದರು
ಕಾರ್ಯಕ್ರಮದಲ್ಲಿ ಕಸಾಪ ಪದಾಧಿಕಾರಿಗಳಾದ ಮಂಜುಳಾ ಸರ್ಜಾಪುರ ಟಿ ಎಸ್ ಮುನಿರಾಜು ಬಳಗಾರನಹಳ್ಳಿ ಕುಮಾರ್ ಮಲ್ಲಿಕಾರ್ಜುನ ಆರಾಧ್ಯ ಎಸ್ಪಿ ನಾಗರತ್ನ ಚುಟುಕು ಶಂಕರ್ ಗಾಯಕ ರಾಮಚಂದ್ರ, ಡಾ.ನಾಗರಾಜ್ ಮಾಯಸಂದ್ರ ಉಪಸ್ಥಿತರಿದ್ದರು.