IMG 20220609 WA0000

ಕೈಯಾರ ಕಿಞ್ಞಣ್ಣ ರೈ ರವರ ಜಯಂತಿಯನ್ನು ಆಚರಣೆ

DISTRICT NEWS ಬೆಂಗಳೂರು

ಕೈಯಾರ ಕಿಞ್ಞಣ್ಣ ರೈ ರವರ ಜಯಂತಿಯನ್ನು ಆಚರಣೆ

ಕನ್ನಡ ಸಾಹಿತ್ಯ ಪರಿಷತ್ತು ಆನೇಕಲ್ ವತಿಯಿಂದ ಆನೇಕಲ್ ಸೂರ್ಯ ಫರ್ನಿಚರ್ ಮಳಿಗೆಯಲ್ಲಿ ಕೈಯಾರ ಕಿಞ್ಞಣ್ಣ ರೈ ರವರ ಜಯಂತಿಯನ್ನು ಆಚರಣೆ ಮಾಡಲಾಯಿತು.
ಅವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಜಾಗೃತ ಯುವ ಭಾರತ ಅಧ್ಯಕ್ಷರಾದ ಗಣೇಶ್ ಕುಮಾರ್ ಅರ್ಪಿಸಿದರು ಪರಿಷತ್ತಿನ ಅಧ್ಯಕ್ಷರಾದ ಆದೂರು ಪ್ರಕಾಶ್ ಕೆ ಚಂದ್ರಶೇಖರ್ ಸಿದ್ದನ ಪಾಳ್ಯ ಚೌಡಪ್ಪ ಬಿ ಪಿ ಮರಿಯಪ್ಪ ಅರೇಹಳ್ಳಿ ಮಂಜು ವಿಶ್ವನಾಥ್ ಇದ್ದರು
ಕಾರ್ಯಕ್ರಮವನ್ನು ಕುರಿತು ಮಾತನಾಡಿದ ಜಾಗೃತ ಯುವ ಭಾರತ ಅದ್ಯಕ್ಷರಾದ ಗಣೇಶ್ ಕುಮಾರ ಕೈಯಾರರು ಕನ್ನಡದ ಅಸಮಾನ್ಯ ದ್ವನಿಯಾಗಿದ್ದರು ಅವರನ್ನು ನೆನೆಯುವ ಕರ್ತವ್ಯ ಎಲ್ಲಾ ಯುವಕರದ್ದಾಗಿದೆ ಎಂದು ಹೇಳಿದರು
ಕೈಯಾರರು ಸ್ವಾತಂತ್ರ್ಯ ಹೋರಾಟಗಾರಾಗಿ, ಕವಿಯಾಗಿ ಕನ್ನಡ ನಾಡಿಗೆ ಕೊಟ್ಟ ಕೊಡುಗೆ ಅಪಾರವಾದ್ದದು ನಮ್ಮನ್ನೆಲ್ಲಾ ಅಗಲಿದ್ದರು ಅವರ ಬರಹಗಳು ಜೀವಂತವಾಗಿ ಸಮಾಜದ ನಡುವೆ ಉಳಿದಿವೆ ಎಂದು ಹೇಳಿದರು
ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ತಾಲ್ಲೂಕು ಅಧ್ಯಕ್ಷರಾದ ಅರೇಹಳ್ಳಿ ಮಂಜು ಮಾತನಾಡಿ ಕರ್ನಾಟಕದ ಕಾಸರಗೋಡು ಕೈ ತಪ್ಪಿ ಹೋದಾಗ ಹತ್ತುಹಲವು ಹೋರಾಟವನ್ನು ರೂಪಿಸಿ ಮಾದರಿಯಾದ ಕವಿ ಕಿಞ್ಞಣ್ಣ ರೈ. ಅವರು ಶತಾಯುಷಿಗಳಾಗಿ ಶ್ರೇಷ್ಠ ಬದುಕನ್ನು ಬದುಕಿದ ಕವಿಯಾಗಿದ್ದರು ಎಂದು ಹೇಳಿದರು
ಹೋರಾಟಗಾರ ಸಿದ್ದನ ಪಾಳ್ಯ ಚೌಡಪ್ಪ ಮಾತನಾಡಿ ಕನ್ನಡ ಸಾರಸ್ವತ ಲೋಕಕ್ಕೆ ಗಟ್ಟಿಯಾದ ಕಾವ್ಯವನ್ನು ನೀಡಿದ ಧೀಮಂತ ಕವಿ ಕೈಯಾರರು ಇಂತಹ ಕವಿಗಳ ಪಾಠಪ್ರವಚನಗಳನ್ನು ಪಠ್ಯಗಳಿಂದ ತೆಗೆಯುತ್ತಿರುವುದು ಅಥವಾ ಪರಿಷ್ಕರಣೆ ಮಾಡುತ್ತಿರುವುದು ಬಹುದೊಡ್ಡ ದುರಂತ ಎಂದು ನುಡಿದರು
ಪರಿಷತ್ತಿನ ಅಧ್ಯಕ್ಷರಾದ ಆದೂರು ಪ್ರಕಾಶ್ ಮಾತನಾಡಿ ಕೈಯಾರ
ಕಿಞ್ಞಣ್ಣ ರೈ ಹಲವಾರು ರಂಗಗಳಲ್ಲಿ ಕೆಲಸ ಮಾಡಿ ಕವಿಯಾಗಿ ಗುರುತಿಸಿಕೊಂಡಿದ್ದರು ಶೋಷಿತ ಸಮುದಾಯಗಳ ಬವಣೆಯನ್ನು ನೋಡಿ ಅವರನ್ನು ಮುಂಚೂಣಿಗೆ ತರಲು ಸಾಕಷ್ಟು ಕೆಲಸಗಳನ್ನು ಮಾಡಿ ಸ್ವತಹ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ ರಾಜಕೀಯ ಪ್ರವೇಶ ಮಾಡಿ ಜನ ಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಿದ ಕರುಣಾಮಯಿ ಕಿಞ್ಞಣ್ಣ ರೈ ಅಂತಹವರ ಜಯಂತಿಯನ್ನು ಮಾಡುವುದು ಕನ್ನಡಸಾಹಿತ್ಯಪರಿಷತ್ತಿನ ಕರ್ತವ್ಯವಾಗಿದೆ ಎಂದು ಹೇಳಿದರು
ಕಾರ್ಯಕ್ರಮದಲ್ಲಿ ಅರೇಹಳ್ಳಿ ಚೌಡಪ್ಪ ಬಿ ಪಿ ಮರಿಯಪ್ಪ ಶಿಕ್ಷಕರ ಸಂಘದ ಅಧ್ಯಕ್ಷರಾದ ಕೆ ಚಂದ್ರಶೇಖರ್ ಶಿಕ್ಷಕರಾದ ಚಂದ್ರಪ್ಪ ಸಿದ್ದನಪಾಳ್ಯ ಚೌಡಪ್ಪ ವಸಂತ್ ಕರ್ನಾಟಕ ರಕ್ಷಣಾ ವೇದಿಕೆಯ ವಿಶ್ವನಾಥ್ ಜಾಗೃತ ಯುವ ಭಾರತದ ಪದಾಧಿಕಾರಿಗಳಾದ ಗಿರೀಶ್ ವೆಂಕಟೇಶ್ ಸತೀಶ್ ಮಹದೇವಯ್ಯ ಕನಮನಹಳ್ಳಿ ಕುಮಾರ್ ಅಶ್ವಥ್ ಹೇಮಮೂರ್ತಿ ಪರಿಷತ್ತಿನ ಪದಾಧಿಕಾರಿಗಳಾದ ಅಪ್ಸರ ಆಲಿ ಖಾನ್ ಡಾ ನಾಗರಾಜ್ ಹಾಗೂ ಸೂರ್ಯ ಫರ್ನಿಚರ್ ಸಿಬ್ಬಂದಿ ವರ್ಗದವರು ಹಾಜರಿದ್ದರು

ವರದಿ: ಹರೀಶ್