ಕನ್ನಡ ಸಾಹಿತ್ಯ ಪರಿಷತ್ತು ಆನೇಕಲ್ ವಿಧಾನಸಭಾ ಕ್ಷೇತ್ರದ ವತಿಯಿಂದ ಪರಿಸರ ಸ್ನೇಹಿ ಗಣಪ ಹಾಗೂ ಹಬ್ಬಗಳಲ್ಲಿ ಪರಿಸರ ರಕ್ಷಣಿ ಜಾಗೃತಿ ಕಾರ್ಯಕ್ರಮವನ್ನು ಸಿಮೆನ್ಸೆ ಕಂಪನಿ ಸಿ ಡಿ ಒ ಚಂದ್ರಶೇಖರ್ ಉದ್ಘಾಟನೆ ಮಾಡಿದರು ಗೋಪಾಲ್ ರೆಡ್ಡಿ ಪುರಸಭೆ ಸದಸ್ಯರಾದ ಅನ್ನಪೂರ್ಣ ಮಧುರ ಚಂದ್ರಶೇಖರ್ ಕಸಾಪ ಅಧ್ಯಕ್ಷ ಆದೂರು ಪ್ರಕಾಶ್ ಇದ್ದರು
ಚಂದಾಪುರದ ಛತ್ರಕಾನೆ ಸರ್ಕಾರಿ ಮಾದರಿ ಪ್ರಾಥಮಿಕ ಪಾಠಶಾಲೆ ಹಾಗೂ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಕುರಿತು ಮಾತನಾಡಿದ ಕಾಂಗ್ರೆಸ್ ಹಿರಿಯ ಮುಖಂಡರಾದ ಗೋಪಾಲ್ ರೆಡ್ಡಿ ಹಬ್ಬಗಳ ಹೆಸರಿನಲ್ಲಿ ಮಾನವ ಪ್ರಕೃತಿಯ ಮೇಲೆ ದಾಳಿ ಮಾಡುತ್ತಿದ್ದಾನೆ ಇದು ನಿಲ್ಲದಿದ್ದರೆ ಮನುಕುಲ ನಾಶವಾಗುತ್ತದೆ ಎಂದು ಆತಂಕವನ್ನು ತೋಡಿಕೊಂಡರು
ಹಬ್ಬಗಳು ನಮ್ಮ ಪೂರ್ವಜರ ವೈಜ್ಞಾನಿಕ ಚಿಂತನೆಗಳಾಗಿದೆ ಕೂಡಿ ಬಾಳುವ ಹಂಚಿ ತಿನ್ನುವ ಪರಿಕಲ್ಪನೆಯನ್ನು ಹುಟ್ಟು ಹಾಕಿದ ಮಹನೀಯರು ಯಾವ ಜೀವಿಗೂ ಕೇಡು ಬಯಸದೆ ಸಾರ್ಥಕ ಬದುಕನ್ನ ಬದುಕಿದರು ಎಂದು ತಿಳಿಸಿದರು
ಕವಯಿತ್ರಿ ಶ್ರೀವಲ್ಲಿ ಶೇಷಾದ್ರಿ ಮಾತನಾಡಿ ಕೆರೆಗಳು ಜೀವವೈವಿಧ್ಯತೆಯ ತಾಣವಾಗಿದೆ ನಾಗರಿಕ ಪ್ರಪಂಚ ಕೆರೆಗಳನ್ನ ನಾಶ ಮಾಡುವ ಹಾನಿಕಾರಕ ರಾಸಾಯನಿಕಗಳನ್ನ ಕೆರೆಗೆ ಹರಿಸಿ ಅಂತರ್ಜಲವನ್ನು ಕೊಲ್ಲುತ್ತಿದ್ದಾರೆ ಎಂದು ಖೇದವನ್ನು ವ್ಯಕ್ತಪಡಿಸಿದರು
ಕನ್ನಡ ಸಾಹಿತ್ಯ ಪರಿಷತ್ ಅದ್ಯಕ್ಷ ಆದೂರು ಪ್ರಕಾಶ್ ಮಾತನಾಡಿ ಪ್ರಾಣಿ ಪಕ್ಷಿಯಿಂದ ಪ್ರಕೃತಿಗೆ ಯಾವುದೇ ತೊಂದರೆಯಿಲ್ಲ ಆದರೆ ಬುದ್ದಿವಂತ ಎನಿಸಿಕೊಂಡ ಮಾನವ ಅಭಿವೃದ್ಧಿಯ ಹೆಸರಿನಲ್ಲಿ ಭೂಮಂಡಲವನ್ನು ಸೊರಗಿಸುತ್ತಿರುವುದು ಭಯ ಹುಟ್ಟಿಸುತ್ತಿದೆ
ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರಾದ ಅನ್ನಪೂರ್ಣ ಕಥೆಗಾರ್ತಿ ಮಧುರಾ ಚಂದ್ರಶೇಖರ್ ಯುವ ಮುಖಂಡರಾದ ಕಿರಣ್ ಭಾನುಮತಿ ಶಾಲೆಯ ಮುಖ್ಯೋಪಾಧ್ಯಾಯರಾದ ರಾಜೇಶ್ವರಿ ಶಾಂತಮ್ಮಕಸಾಪ ಮಹೇಶ ಊಗಿನಹಳ್ಳಿ ಶಿಕ್ಷಕರಾದ ರುದ್ರೇಶ್ ರಂಗನಾಥ್ ಸತ್ಯವತಿ ಶಶಿಕಲಾ ಕಲ್ಪವಲ್ಲಿ ಸುನಿತಾ ಸುರೇಶ್ ಹಾಜರಿದ್ದರು