IMG 20221021 WA0021

ಪಾವಗಡ:O.P.S ಸಂಕಲ್ಪ ಯಾತ್ರೆಗೆ ಚಾಲನೆ……   

DISTRICT NEWS ತುಮಕೂರು

O.P.S ಸಂಕಲ್ಪ ಯಾತ್ರೆಗೆ ಚಾಲನೆ……         ಒಕ

ಪಾವಗಡ.. ಕರ್ನಾಟಕ ರಾಜ್ಯ ಸರ್ಕಾರಿ N.P.S ನೌಕರರ ಸಂಘ  ತಾಲೂಕಿನ ಸರ್ಕಾರಿ N.P.S ನೌಕರರ ಸಂಘದ ಸಹಯೋಗದೊಂದಿಗೆ  ಪಟ್ಟಣದ ಗುರುಭವನದಿಂದ O.P.S ಸಂಕಲ್ಪ ಯಾತ್ರೆಗೆ ಚಾಲನೆ ಚಾಲನೆ ನೀಡಲಾಯಿತು.               ಎನ್‌.ಪಿ.ಎಸ್ ನೌಕರ ಸಂಘದ ರಾಜ್ಯಾಧ್ಯಕ್ಷರಾದ ಕಾಂತರಾಜು ಮಾತನಾಡಿ, ಕರ್ನಾಟಕ ರಾಜ್ಯ ಸರ್ಕಾರಿ N.P.S ನೌಕರರ ಸಂಘ ಸುಮಾರು ಆರು ವರ್ಷಗಳಿಂದ ಎನ್‌ಪಿಎಸ್ ರದ್ದುಗೊಳಿಸುವಂತೆ, ಹೋರಾಟ ಮಾಡುತ್ತಿದ್ದರೂ, ಸರ್ಕಾರ ಗಮನ ಹರಿಸುತ್ತಿಲ್ಲವೆಂದು, ಸುಮಾರು 30 ರಿಂದ 35 ವರ್ಷಗಳ ಕಾಲ ಸರ್ಕಾರದ ವಿವಿಧ ಇಲಾಖೆ, ವಿಭಾಗಗಳಲ್ಲಿ ಸೇವೆ ಸಲ್ಲಿಸಿ, ನಿವೃತ್ತಿಯ ನಂತರ ನಿಶ್ಚಿತ ಪಿಂಚಣಿ ಇಲ್ಲದೆ ಪರದಾಡುವ ಪರಿಸ್ಥಿತಿ ಉಂಟಾಗಿದೆ, ಸರ್ಕಾರಿ ನೌಕರರಿಗೆ ಗೌರವ ಕಡಿತವಾಗಿದೆ. ಕೂಡಲೇ ಸರ್ಕಾರ ಎನ್‌ಪಿಎಸ್ ಯೋಜನೆಯನ್ನು ಕೈಬಿಡುವಂತೆ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.                                               

IMG 20221021 WA0023

ಶಿಕ್ಷಕ ಚಂದ್ರ ಶೇಖರ್ ರೆಡ್ಡಿ ಮಾತನಾಡಿ,                      1-4-2006 ರಲ್ಲಿ ನೇಮಕವಾಗಿರುವ ಸರ್ಕಾರಿ ನೌಕರರಿಗೆ ಸರ್ಕಾರವು N.P.S (ಹೊಸ ಪಿಂಚಣಿ ಯೋಜನೆ) ಜಾರಿಗೆ ಗೊಳಿಸಿದ್ದು, ಅದರಿಂದ ನೌಕರರಿಗೆ ನಿವೃತ್ತಿಯ ನಂತರ ಸೂಕ್ತ ಭದ್ರತೆ ಇಲ್ಲದಂತಾಗುವುದೆಂದು ತಿಳಿಸಿದರು.             ಸರ್ಕಾರ ತಮಗೂ O.P.S ( ಹಳೆ ಪಿಂಚಣಿ ಯೋಜನೆ) ಜಾರಿಗೆಗೊಳಿಸಬೇಕು, ಎಂದು ಓ.ಪಿ.ಎಸ್ ಸಂಕಲ್ಪ ಯಾತ್ರೆಯ ಮೂಲಕ ರಾಜ್ಯಾದ್ಯಂತ ಇರುವ ಸರ್ಕಾರಿ ನೌಕರರಲ್ಲಿ ಜಾಗೃತಿ ಮೂಡಿಸಲು ಬಸ್ ಯಾತ್ರೆ ಕೈಗೊಂಡಿರುವಾಗಿ ತಿಳಿಸಿದರು.                                                         

O.P.S ಸಂಕಲ್ಪ ಯಾತ್ರೆಗೆ ಪಾವಗಡದಿಂದ ಚಾಲನೆ ನೀಡಿದ್ದು, ಪಾವಗಡದಿಂದ ಮಧುಗಿರಿ, ಕೊರಟಗೆರೆ, ತುಮಕೂರು, ಗುಬ್ಬಿ, ತಿಪಟೂರು, ಕುಣಿಗಲ್ ಮೂಲಕ ಜಿಲ್ಲೆಯಾದ್ಯಂತ ಬಸ್ ಯಾತ್ರೆಯ ಮೂಲಕ ನೌಕರರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಇದಾಗಿದೆ ಎಂದರು. 19ರ ವರೆಗೂ  ರಾಜ್ಯದಾದ್ಯಂತ ಪ್ರವಾಸ ಕೈಗೊಂಡು,                       ಡಿಸೆಂಬರ್ 19 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅನಿರ್ದಿಷ್ಟ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.                                                                                      ಕಾರ್ಯಕ್ರಮದಲ್ಲಿ                                             ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘದ ರಾಜ್ಯಾಧ್ಯಕ್ಷರಾದ  ಶಾಂತರಾಮ್    ಉಪಾಧ್ಯಕ್ಷರಾದ ಸಂಗಣ್ಣ ಸರ್ ತುಮಕೂರು ಜಿಲ್ಲಾ NPS ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಮಂಜುನಾಥ್ ಪಾವಗಡ ತಾಲೂಕು NPS ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ರಾದ ಮಂಜುನಾಥ್ ಹಾಗೂ ಸರ್ಕಾರಿ ನೌಕರರಾದ. ನಾರಾಯಣಪ್ಪ ಸರ್. ಯತೀಕ್ ಕುಮಾರ್ ಸರ್ ಹಾಗೂ ಕಟ್ಟಾ ನರಸಿಂಹಮೂರ್ತಿ.ಪವನ್ ಕುಮಾರ್ ರೆಡ್ಡಿ. ಧನಂಜಯ್ ಸರ್. . ಸರ್ ಬೊಮ್ಮಣ್ಣ ಸರ್. ಭೂಪುರ್ ರಾಮಾಂಜಿನೇಯ ಸರ್ ಹಾಗೂ ಚಂದ್ರಶೇಖರ ರೆಡ್ಡಿ ಹಾಗೂ ನಾಗವೀಣಾ ಸಾವಿತ್ರಮ್ಮ ಲಕ್ಷ್ಮೀದೇವಮ್ಮ ಹಾಗೂ ಪಾವಗಡ ತಾಲೂಕ್ಕಿನ ಎಲ್ಲಾ ಇಲಾಖೆಗಳ NPS ನೌಕರರು ಉಪಸ್ಥಿತರಿದ್ದರು ಇವರಿಗೆ ಪಾವಗಡ ತಾಲೂಕಿನ ಎಲ್ಲಾ OPS ನೌಕರರ ಸಂಘದ ಸದಸ್ಯರು ಹಾಜರಿದ್ದು ಬೆಂಬಲ ನೀಡಿದರು.

ವರದಿ: ಶ್ರೀನಿವಾಸಲು ಎ