ಜನಾರ್ದನ ರೆಡ್ಡಿ ಅಂತಹ ನೂರು ಜನ ಬಂದರೂ ನನ್ನನ್ನು ಮನೆಯಲ್ಲಿ ಕೂಡಿಸಲು ಸಾಧ್ಯವಿಲ್ಲ. ಶಾಸಕ ವೆಂಕಟರಮಣ್ಣಪ್ಪ ಹೇಳಿಕೆ.
ಪಾವಗಡ :, ಜನಾರ್ಧನ ರೆಡ್ಡಿ ಯಂತಹ ನೂರು ಮಂದಿ ಬಂದರೂ ನನ್ನನ್ನು ಮನೆಯಲ್ಲಿ ಕೂರುವಂತೆ ಮಾಡಲಾಗುವುದಿಲ್ಲ,.ಬ್ರಷ್ಟಾಚಾರದಿಂದಾಗಿ ಹಲವು ವರ್ಷಗಳ ಕಾಲ ಜೈಲಿನಲ್ಲಿ ಕಾಲ ಕಳೆದಿರುವ ಅವರು ಮತ್ತೆ ಜೈಲಿಗೆ ಹೋಗದಂತೆ ಎಚ್ಚರದಿಂದಿರಲಿ ಎಂಬ ಕಿವಿಮಾತನ್ನು ಹೇಳಿದರು. ಅರಣ್ಯ ಇಲಾಖೆಯ ನೂತನ ಕಟ್ಡಡ ಉದ್ಗಾಟನೆಯ ನಂತರ ಪ್ರತಿಕ್ರಿಯಿಸಿದರು.
ಅರಣ್ಯ ಅಧಿಕಾರಿಗಳು ತಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡಬೇಕು, ಕಾನೂನಿನ ನೆಪ ಒಡ್ಡಿ ಅಭಿವೃದ್ಧಿ ಕಾರ್ಯಗಳಿಗೆ ಆಡಿಪಡಿಸಬಾರದೆಂದು,
ತುಮಕೂರು ರಸ್ತೆಯಲ್ಲಿ ನೂತನ ವಲಯ ಅರಣ್ಯಾಧಿಕಾರಿ ಕಚೇರಿ ಉದ್ಘಾಟಿಸಿ ಶಾಸಕ ವೆಂಕಟರವಣಪ್ಪ, ಮಾತನಾಡಿದರು.
ಅರಣ್ಯ ಪ್ರದೇಶಗಳಲ್ಲಿ ಚೆಕ್ ಡ್ಯಾಂ ನಿರ್ಮಿಸುವುದರಿಂದ ಪ್ರಾಣಿಗಳು ನೀರು ಕುಡಿಯಲು ಅನುಕೂಲವಾಗುತ್ತದೆ.
ಕೆ.ರಾಂಪುರ ಬೆಟ್ಟದಲ್ಲಿ ನವಿಲುಗಳಿಗೆ ಕುಡಿಯಲು ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಧನಲಕ್ಷ್ಮಿ, ಸದಸ್ಯ ಸುದೇಶ್ ಬಾಬು, ಅರಣ್ಯ ಸಂರಕ್ಷಣಾಧಿಕಾರಿ ಡಾ. ಎಸ್ .ರಮೇಶ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಎಚ್. ಅನುಪಮ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಲ್ಲಿಕಾರ್ಜುನ್, ಸುಬ್ಬೂರಾವ್, ವಲಯ ಅರಣ್ಯಾಧಿಕಾರಿ ಕೆ.ಎಸ್.ಸತೀಶ್ ಚಂದ್ರ, ಎಚ್.ಎಂ. ಸುರೇಶ್, ಸಿ.ರವಿ, ನವನೀತ್, ಶಿವಪ್ಪ ಹೊಸಮನಿ, ಉಪ ವಲಯ ಅರಣ್ಯಾಧಿಕಾರಿ ಬಸವರಾಜು, ಗಂಗರಾಜು, ಮಂಜುನಾಥ್, ಕೇಶವ್, ಅಸನ್ ಬಾಷ, ಗಂಗಾಧರ್, ರಘು ಉಪಸ್ಥಿತರಿದ್ದರು.
ವರದಿ: ಶ್ರೀನಿವಾಸಲು ಎ