ತಾಲೂಕಿನ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರ. ಮಾಜಿ ಸಚಿವ ವೆಂಕಟರಮಣಪ್ಪ.
ಪಾವಗಡ: ತಾಲೂಕಿನ ಪ್ರಮುಖ ಯೋಜನೆಗಳಾದ ಭದ್ರಾ ಮೇಲ್ದಂಡೆ , ತುಂಗಭದ್ರಾ, ಎತ್ತಿನಹೊಳೆಯಂತಹ ಶಾಶ್ವತ ಯೋಜನೆಗಳನ್ನು ಜಾರಿಗೆಗೊಳಿಸುವಲ್ಲಿ ಕಾಂಗ್ರೆಸ್ ಪಕ್ಷದ ಶ್ರಮ ಸಾಕಷ್ಟಿದೆ ಎಂದು ಮಾಜಿ ಸಚಿವರಾದ ವೆಂಕಟರಮಣಪ್ಪ ತಿಳಿಸಿದರು.
ಪಟ್ಟಣದ ಶ್ರೀ .ವೆಂಕಟೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಂಗಳವಾರ ಎಚ್. ವಿ ಕುಮಾರಸ್ವಾಮಿ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ರಕ್ತ ದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಏಷ್ಯಾದಲ್ಲಿಯೇ ಅತಿ ದೊಡ್ಡ ಸೋಲಾರ್ ಪಾರ್ಕ್ ತಾಲೂಕಿಗೆ ತಂದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ ಎಂದರು. ಕಾಂಗ್ರೆಸ್ ಅವಧಿ ಅನೇಕ ಸರ್ಕಾರಿ ಕಚೇರಿಗಳಿಗೆ ಕಟ್ಟಡವನ್ನು ನಿರ್ಮಿಸಲಾಗಿದೆ ಎಂದರು.
ಕಾರ್ಯಕ್ರಮ ಉದ್ದೇಶಿಸಿ ಶಾಸಕ ಎಚ್. ವಿ ವೆಂಕಟೇಶ್ ಮಾತನಾಡಿ, ಕಳೆದ 77 ವರ್ಷಗಳಲ್ಲಿ ದೇಶದಲ್ಲಿ ಕಾಂಗ್ರೆಸ್ ಆಡಳಿತದಿಂದ ಅಭಿವೃದ್ಧಿಯಾಗಿದೆ , ಆದರೆ ಬಿಜೆಪಿ ದುರಾಡಳಿತದಿಂದ ಕಳೆದ ಅವಧಿಯಲ್ಲಿ ರಾಜ್ಯದ ಜನತೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯಿತು ಎಂದರು.
ತಮ್ಮ ಸಹೋದರ ಎಚ್. ವಿ ಕುಮಾರಸ್ವಾಮಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದು, ಪಕ್ಷದ ಪ್ರಮುಖರೊಂದಿಗೆ ಚರ್ಚೆ ನಡೆಸಿ ಚುನಾವಣೆಗೆ ಸಿದ್ದತೆ ನಡೆಸಲಾಗುವುದು ಎಂದರು.
ಕಾರ್ಯಕ್ರಮ ಉದ್ದೇಶಿಸಿ, ವೆಂಕಟೇಶ್ವರ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಚ್ ವಿ ಕುಮಾರಸ್ವಾಮಿ ಮಾತನಾಡಿ,
ಶಿಕ್ಷಣವು ಮಾನವನನ್ನು ನಾಗರಿಕನನ್ನಾಗಿ ಮಾಡುತ್ತದೆ, ಶಿಕ್ಷಣದಿಂದ ಮಾತ್ರ ವಿದ್ಯಾರ್ಥಿಗಳು ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂದರು.,
ತಮ್ಮ ಶ್ರೀ ವೆಂಕಟೇಶ್ವರ ಶಿಕ್ಷಣ ಸಂಸ್ಥೆ ಮೂಲಕ ಗುಣಮಟ್ಟ ಶಿಕ್ಷಣ ನೀಡಲಾಗುತ್ತಿದೆ. ಇದರ ಜೊತೆಗೆ ತಾಲ್ಲೂಕಿನ ಅಭಿವೃದ್ಧಿಗಾಗಿ ಪ್ರತಿ ಗ್ರಾಮಕ್ಕೆ ಮೂಲ ಸೌಕರ್ಯ ಕಲ್ಪಿಸುವುದಕ್ಕೆ ಅಗತ್ಯ ಯೋಜನೆ ರೂಪಿಸಲಾಗುವುದು ಎಂದರು.
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಜನ ತನಗೆ ಆಶೀರ್ವದಿಸಿದರೆ ಚಿತ್ರದುರ್ಗ ಜಿಲ್ಲೆಗೆ ಐ ಟಿ ಬಿ ಟಿ ಎಂತಹ ಕಂಪನಿಗಳನ್ನು ತಂದು, ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸುವಲ್ಲಿ ಪ್ರಯತ್ನ ಮಾಡಲಾಗುವುದು ಎಂದರು. ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತನ್ನು ನೀಡಿ ಕೋಟಿ ಗಿಡಗಳನ್ನು ನಡೆಸುವುದು ತನ್ನ ಕನಸು ಎಂದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಸುದೇಶ್ ಬಾಬು, ಪುರಸಭೆ ಮಾಜಿ ಅಧ್ಯಕ್ಷ ಶಂಕರರೆಡ್ಡಿ, ಸದಸ್ಯರಾದ ವೇಲು, ಪಿ ಎಚ್ ರಾಜೇಶ್, ತೆಂಗಿನಕಾಯಿ ರವಿ, ಮೊಹಮದ್ ಇಮ್ರಾನ್, ಕೆ ಟಿ ಹಳ್ಳಿ ರಾಜೇಶ್, ಪರಂದಾಮರೆಡ್ಡಿ, ನಾನಿ, ಸುಮಾ ಅನಿಲ್, ಪಾಪಣ್ಣ, ಹರೀಶ್, ನರಸಿಂಹರೆಡ್ಡಿ, ಕೋಟೆ ಪ್ರಭಾಕರ್, ಚೆನ್ನಮ್ಮ ರೆಡ್ಡಿ ಹಳ್ಳಿಯ ಲಕ್ಷ್ಮೀನಾರಾಯಣ, ಗುಮ್ಮಘಟ್ಟ ಈಶ್ವರ್, ಕಡಮಲ ಕುಂಟೆಯ ನಾಗಭೂಷಣ, ಶೇಷಗಿರಿ, ರಿಜ್ವಾನ್, ಶಾಸಕರ ಪಿ.ಎ ನಾಗರಾಜ್, ಶಾ ಬಾಬು, ಹನುಮೇಶ್, ಹರೀಶ್ ಇತರರು ಉಪಸ್ಥಿತರಿದ್ದರು.