IMG 20200817 WA0024

ಸರ್ಕಾರದ  ಜನ ವಿರೋಧಿ ಕಾಯಿದೆಗಳ ವಿರುದ್ಧ   ಜೆಡಿ ಎಸ್  ಹೋರಾಟ…!

STATE Genaral

  ರಾಜ್ಯ ಸರ್ಕಾರದ  ಜನ ವಿರೋಧಿ ಕಾಯಿದೆಗಳ ವಿರುದ್ಧ   ಜೆಡಿ ಎಸ್  ಹೋರಾಟ

ಇಂದು ಜೆಪಿ ಭವನದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಜೆಡಿಎಸ್ ಪಕ್ಷದ ಶಾಸಕರು ಮಾಜಿ ಶಾಸಕರು ಜಿಲ್ಲಾ ಅಧ್ಯಕ್ಷರುಗಳು ಮತ್ತು ಜಿಲ್ಲಾ ಮುಖಂಡರ ಜೊತೆ ಸಭೆ ನಡೆಸಿದರು.

ರಾಜ್ಯದಲ್ಲಿ ಹರಡಿತ್ತಿರುವ ಕೊರೊನ ವಿಷಯದ ಬಗ್ಗೆ ಮತ್ತು ರಾಜ್ಯ ಸರ್ಕಾರ ತಂದಿರುವ ಜನ ವಿರೋಧಿ ನೀತಿ ಕಾಯ್ದೆಗಳ ತಿದ್ದುಪಡಿ ವಿರುದ್ಧ ಜನ ಜಾಗೃತಿ ಮೂಡಿಸುವ ಬಗ್ಗೆ ಹಾಗೂ ಪಕ್ಷದ ಸಂಘಟನೆಯ ಬಗ್ಗೆ ವಿಡಿಯೋ ಸಂವಾದ ನಡೆಸುವ ಮೊದಲು ಮಾದ್ಯಮಕ್ಕೆ ಹೇಳಿಕೆ ನೀಡಿದರುIMG 20200817 WA0022

ರಾಜ್ಯ ಸರ್ಕಾರ ಮಾಡಲು ಹೊರಟಿರುವ ಕೆಲವು ಕಾಯ್ದೆಗಳ ತಿದ್ದುಪಡಿ ವಿಚಾರದಲ್ಲಿ ನಾವು ಪ್ರತಿಭಟನೆ ಮಾಡ್ತಿದ್ದೇವೆ.
ಈ ವಿಚಾರದಲ್ಲಿ ನಾವು ನಮ್ಮ ಪಕ್ಷದ ನಾಯಕರ ಜೊತೆ ವಿಡಿಯೋ ಕಾನ್ಫರೆನ್ಸ್ ಮಾಡುತ್ತಿದ್ದೇವೆ.

ಎಲ್ಲಾ ಜಿಲ್ಲೆಗಳಲ್ಲಿ ಪ್ರತಿಭಟನೆ ಮಾಡಿ, ಜಿಲ್ಲಾಧಿಕಾರಿ ಗಳಿಗೆ ಮನವಿ ನೀಡುತ್ತೇವೆ ನಂತರ ಮುಖ್ಯಮಂತ್ರಿ ಗಳಿಗೂ ಮನವಿ ನೀಡುತ್ತೇವೆ.

ಭೂ ಸುಧಾರಣಾ ಕಾಯಿದೆ, ಎಪಿಎಂಸಿ ಕಾಯಿದೆ ಮತ್ತು ಕೈಗಾರಿಕಾ ಕಾಯಿದೆಗಳ ಸುಗ್ರೀವಾಜ್ಞೆ ಗಳು ರಾಜ್ಯದ ಜನತೆಗೆ ಮಾರಕವಾಗಲಿದೆ , ರಾಜ್ಯ ಸರ್ಕಾರದ ಈ ನಡೆಗೆ ನಮ್ಮ ವಿರೋಧವಿದೆ , ಹೋರಾಟದ ರೂಪುರೇಷೆ ಗಳ ಬಗ್ಗೆ ಗಂಭೀರವಾಗಿ ಚರ್ಚೆ ಮಾಡುತ್ತೀವಿ

ಇಂದು ಜೆಡಿಎಸ್ ಕಚೇರಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ಮಾಡುತ್ತಿದ್ದೀವಿIMG 20200817 WA0018

ಎಲ್ಲೆಡೆ ಕೊರೊನ ಹರಡುತ್ತಿರುವ ಹಿನ್ನೆಲೆಯಲ್ಲಿ ಇಂದು ನಾವೆಲ್ಲ ವಿಡಿಯೋ ಸಂವಾದ ಮಾಡುತ್ತಿದ್ದಿವೆ ಈ ಸಂವಾದದಲ್ಲಿ ಜೆಪಿ ನಗರದಿಂದ ಮಾಜಿ ಸಿಎಂ ಕುಮಾರಸ್ವಾಮಿ, ಹಾಸನದಿಂದ ಸಂಸದ ಪ್ರಜ್ವಲ್ ರೇವಣ್ಣ ಕೂಡ ಭಾಗಿಆಗಿದ್ದಾರೆ ,ಮೂವತ್ತು ಜಿಲ್ಲೆಗಳಿಂದ ಜೆಡಿಎಸ್ ಮುಖಂಡರು ಭಾಗಿ ಆಗಿದ್ದಾರೆ

ಸಾಮಾಜಿಕ ಅಂತರ ಕಾಪಾಡಿಕೊಂಡು ಹೋರಾಟ ಮಾಡುತ್ತೀವಿ ,ಪ್ರತಿ ಜಿಲ್ಲೆಗಳಲ್ಲಿ ಮುಖಂಡರ ಜೊತೆ ಕಾರ್ಯಕರ್ತರು ಹಾಗೂ ರೈತರು ಪಾಲ್ಗೊಳ್ಳಲಿ.
ಎಲ್ಲಾ ಕಡೆಗಳಲ್ಲೂ ಪ್ರತಿಭಟನೆ ಬಳಿಕ ಡಿಸಿ ಗೆ ಮನವಿ ಕೊಡುತ್ತೀವಿ ನಂತರ ಸಿಎಂ ಗೂ ಮನವಿ ಕೊಡುತ್ತೀವಿ ಎಂದರು

ಡಿ.ಜೆ ಹಳ್ಳಿ ಮತ್ತು ಕೆ ಜಿ ಹಳ್ಳಿ ಗಲಭೆ ಕುರಿತು ಸಿಟ್ಟಿಂಗ್ ಹೈ ಕೋರ್ಟ್ ಜಡ್ಜ್ ನೇತೃತ್ವದಲ್ಲಿ ತನಿಖೆ ನಡೆಯಬೇಕು.
ಈ ಘಟನೆಗೆ ಕಾರಣ ಏನು, ಕಾಂಗ್ರೆಸ್ ಆಂತರಿಕ ವಿಚಾರದಿಂದ ಘಟನೆ ನಡೆದಿದ್ಯಾ…? ನನಗೆ ಗೊತ್ತಿಲ್ಲ
ಆ ಬಗ್ಗೆ ನಾನು ಹೆಚ್ಚಿಗೆ ಮಾತಾಡಲ್ಲ.

ಈ ಪ್ರಕರಣದಲ್ಲಿ 300 ಕ್ಕಿಂತ ಹೆಚ್ಚು ಜನರನ್ನು ಬಂಧಿಸಿದ್ದಾರೆ. ಆದರೆ ಈಗಲೂ ಹೇಳುತ್ತೀನಿ ನಿರಪರಾಧಿಗಳಿಗೆ ತೊಂದರೆ ಆಗಬಾರದು.
ಸರ್ಕಾರ ಈ ಬಗ್ಗೆ ಯೋಚನೆ ಮಾಡಬೇಕು.

ಮ್ಯಾಜಿಸ್ಟ್ರೇಟ್ ತನಿಖೆಗೆ ವಹಿಸಿದ್ದಾರೆ.
ಇದರಿಂದ ಸತ್ಯಾಂಶ ಹೊರಬರಲು ಸಾಧ್ಯವಾಗೊಲ್ಲ.
ಈ ಹಿಂದೆ ನಡೆದ ಹಲವು ಘಟನೆಗಳ ತನಿಖೆ ಏನಾಗಿದೆ ಎಂದು ನನಗೆ ಗೊತ್ತಿದೆ.

ಕೊರೊನ ಒಂದು ವೈರಸ್ ಅಷ್ಟೇ ಇದರಿಂದ ಜನತೆ ಭಯ ಪಡುವ ಅವಶ್ಯಕತೆ ಇಲ್ಲ , ಮುನ್ನೆಚ್ಚರಿಕೆ ವಹಿಸಿದರೆ ಸಾಕು, ಸೋಂಕಿತರನ್ನು ಪ್ರೀತಿಯಿಂದ ನೋಡಬೇಕು ,ಅವರನ್ನು ಅವಮಾನಿಸಬಾರದು , ನಮ್ಮ ಮುಖಂಡರಿಗೂ ಮನವಿ ಮಾಡುತ್ತೀನಿ ಪಕ್ಷದ ವತಿಯಿಂದ ಸಾಧ್ಯವಾದಷ್ಟು ಮಾಸ್ಕ್ , ಸ್ಯಾನಿಟೈಸರ್ ಮತ್ತು ವಿಟಮಿನ್ ಮಾತ್ರೆಗಳನ್ನು ಜನತೆಗೆ ತಲುಪಿಸುವ ಕಾರ್ಯ ಮಾಡಿ , ಎಂದು ಮನವಿ ಮಾಡಿದರು