IMG 20231229 WA0006

ಪಾವಗಡ: ನುಡಿದಂತೆ ನಡೆದ ಸರ್ಕಾರ ನಮ್ಮದು….!

DISTRICT NEWS ತುಮಕೂರು

ನುಡಿದಂತೆ ನಡೆದ ಸರ್ಕಾರ ನಮ್ಮದು. ಶಾಸಕ ಹೆಚ್ ವಿ ವೆಂಕಟೇಶ್.

ಪಾವಗಡ : ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹೇಳಿದ ಎಲ್ಲಾ ಭರವಸೆಗಳನ್ನು ಈಡೇರಿಸಲಾಗಿದೆ ಎಂದು ನುಡಿದಂತೆ ನಡೆಯುವ ಸರ್ಕಾರ ನಮ್ಮದು ಎಂದು ಶಾಸಕ ಶಾಸಕ ಹೆಚ್ ವಿ ವೆಂಕಟೇಶ್ ತಿಳಿಸಿದರು.
ತಾಲ್ಲೂಕಿನ ಲಿಂಗದಳ್ಳಿ ಮತ್ತು ಸಾಸೂಲು ಕುಂಟೆ ಗ್ರಾಮದಲ್ಲಿ ಏರ್ಪಡಿಸಿದ್ದ ಜನ ಸಂಪರ್ಕ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ವದನಕಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಿಂಗದಹಳ್ಳಿ ಗ್ರಾಮದಲ್ಲಿ ಸುಮಾರು 60 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅವರು ಉದ್ಘಾಟಿಸಿದರು.

IMG 20231229 WA0003

ವೈ ಎನ್ ಹೊಸಕೋಟೆ ಪಂಚಾಯಿತಿ ವ್ಯಾಪ್ತಿಯ ಸಾಸಲು ಕುಂಟೆ ಗ್ರಾಮದಲ್ಲಿ ಜನ ಸಂಪರ್ಕ ಕಾರ್ಯಕ್ರಮವನ್ನು ಉದ್ದೇಶಿಸಿ ಶಾಸಕರು ಮಾತನಾಡಿ,
ಜನಸಂಪರ್ಕ ಕಾರ್ಯಕ್ರಮಕ್ಕೆ ಈ ದಿನ ತಾಲೂಕಿನ ಆಡಳಿತವೇ ತಮ್ಮ ಮುಂದೆ ಬಂದಿದೆ ಎಂದು, ಸರ್ಕಾರದಿಂದ ಬರಬೇಕಾದ ಯಾವುದೇ ಸೌಲಭ್ಯಗಳು ಬರದಿದ್ದರೆ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಸರ್ಕಾರಿ ಸೌಲಭ್ಯಗಳನ್ನು ಪಡೆಯುವ ವಿನೂತನ ಕಾರ್ಯಕ್ರಮ ಇದಾಗಿದೆ ಎಂದರು.
ಈ ಭಾಗದಲ್ಲಿ ಸುಮಾರು ವರ್ಷಗಳಿಂದ ಸರಿಯಾದ ರಸ್ತೆ ಇಲ್ಲದೆ ಜನರು ಸಮಸ್ಯೆ ಎದುರಿಸುತ್ತಿದ್ದು, ಈಗ ಲಿಂಗದಹಳ್ಳಿ ಮತ್ತು ಸಾಸಲು ಕುಂಟೆ ನಡುವೆ ರಸ್ತೆ ಮಾಡಿದ್ದು ಯಾವುದೋ ಒಬ್ಬ ರೈತ ಟ್ರ್ಯಾಕ್ಟರ್ ನ ನೇಗಿಲಿನಿಂದ ರಸ್ತೆ ಹಾಳು ಮಾಡಿ ಇತರರಿಗೂ ತೊಂದರೆ ನೀಡಿದ್ದಾನೆ ಅವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಎಫ್ಐಆರ್ ಮಾಡಿವಂತೆ ಪಿಡಬ್ಲ್ಯೂಡಿ ಎಇ ಅವರಿಗೆ ತಾಕೀತು ಮಾಡಿದರು.
ಶೀಘ್ರವೇ ತಾಲೂಕಿನಲ್ಲಿ ಇನ್ನು ಉಳಿದ ರಸ್ತೆಗಳ ಕಾಮಗಾರಿಯನ್ನು ಸಂಪೂರ್ಣವಾಗಿ ಪೂರ್ಣಗೊಳಿಸಲಾಗುವುದೆಂದು ಈ ಬಗ್ಗೆ ಆಕ್ಷನ್ ಪ್ಲಾನ್ ಸಿದ್ಧಪಡಿಸಲಾಗಿದೆ ಎಂದರು.

IMG 20231229 WA0010

ತಾಲೂಕಿನ ಬಹು ದಿನದ ಕನಸ್ಸಾಗಿರುವ ಎತ್ತಿನಹೊಳೆ ಮೇಲ್ದಂಡೆ ಯೋಜನೆ ತುಂಗಭದ್ರ ನೀರನ್ನು ಶೀಘ್ರದಲ್ಲಿ ತಾಲೂಕಿಗೆ ತರಲಾಗುವುದೆಂದು ಭರವಸೆ ನೀಡಿದರು.
ಸಭೆಯಲ್ಲಿ ಹಲವು ಗ್ರಾಮಗಳ ಸಮಸ್ಯೆಗಳು ಮತ್ತು ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಕೆಲವೊಂದು ಸಮಸ್ಯೆಗಳಿಗೆ ಸ್ಥಳದಲ್ಲಿಯೆ ಪರಿಹಾರ ಮಾಡಿದರು ಹಾಗೂ ಮಕ್ಕಳ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ ಮತ್ತು ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆಗಳಿಂದ ಹಲವು ಪಲಾನುಭವಿಗಳಿಗೆ
ವಿವಿಧ ರೀತಿಯ ಪ್ರಮಾಣಪತ್ರಗಳು, ಭಾಗ್ಯಲಕ್ಷ್ಮಿ ಬಾಂಡ್, ಜಾತಿ ಪ್ರಮಾಣ ಪತ್ರ, ಪುಸ್ತಕಗಳು, ಮಾಶಾಸನ ಪ್ರಮಾಣ ಪತ್ರಗಳು, ಮೇವಿನ ಬಿಜಗಳು, ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ವಿತರಣೆ ಮಾಡುವ ಪದಾರ್ಥಗಳನ್ನು ವಿತರಣೆ ಮಾಡಿದರು…

ಈ ವೇಳೆ ತಾಲ್ಲೂಕು ದಂಡಾಧಿಕಾರಿ ವರದರಾಜು ,ಕಾರ್ಯನಿರ್ವಹಣಾಧಿಕಾರಿ ಜಾನಕಿ ರಾಮ್, ಕೆಪಿಸಿಸಿ ಸದಸ್ಯ ಕೆ ಎಸ್ ಪಾಪಣ್ಣ,
ಕ್ಷೇತ್ರ ಶಿಕ್ಷಣಧಿಕಾರಿ ಇಂದ್ರಣಮ್ಮ ,ಕೃಷಿ ಸಹಾಯಕ ನಿರ್ದೇಶಕ ಅಜಯ್ ,ತೋಟಗಾರಿಕೆ ಇಲಾಖಾಧಿಕಾರಿ ವಿಶ್ವನಾಥ್, ಗ್ರಾಮೀಣ ಕಿರು ಸರಬರಾಜು ಇಲಾಖೆಯ ಹನುಮಂತರಾಯಪ್ಪ, ಲೋಕೋಪಯೋಗಿ ಇಲಾಖೆಯ AEE ಅನಿಲ್, ಜಿ ಪಂ AEE ಸುರೇಶ , CDPO ಸುನಿತಾ,ಪಶು ಇಲಾಖೆಯ ಅಧಿಕಾರಿ ವರ್ಕೇರಪ್ಪ.
ಏಡಿ ಎಂಎಂ ಶಂಕರಪ್ಪ, ಬಿ ಆರ್ ಸಿ ವೆಂಕಟೇಶ್ ಜಿ.
ಇನ್ನೂ ಮುಂತಾದವರು ಹಾಜರಿದ್ದರು.

ವರದಿ. ಶ್ರೀನಿವಾಸಲು. A