image001X58BFTAA

ಜಗತ್ತು ಇಂದು ಭಾರತದ ಕಡೆಗೆ ಭರವಸೆಯ ಭಾವನೆಯಿಂದ ನೋಡುತ್ತಿದೆ….!

National - ಕನ್ನಡ

ಕೇಂದ್ರ ಸಚಿವ ಶ್ರೀ ಅನುರಾಗ್ ಠಾಕೂರ್ ಅವರಿಂದ  ಭಾರತ ಸರ್ಕಾರದ 2024ರ ಕ್ಯಾಲೆಂಡರ್ ಬಿಡುಗಡೆ  


ಪಾರದರ್ಶಕತೆ ಮತ್ತು ಹೊಣೆಗಾರಿಕೆ ಸರ್ಕಾರದ ಧ್ಯೇಯವಾಕ್ಯವಾಗಿದ್ದು, ಭಾರತವನ್ನು ದುರ್ಬಲ ಐದರಿಂದ ಅಗ್ರ ಐದು ಆರ್ಥಿಕತೆಗೆ ಕೊಂಡೊಯ್ಯಲಾಗಿದೆ: ಶ್ರೀ ಅನುರಾಗ್ ಠಾಕೂರ್

ಜಗತ್ತು ಇಂದು ಭಾರತದ ಕಡೆಗೆ ಭರವಸೆಯ ಭಾವನೆಯಿಂದ ನೋಡುತ್ತಿದೆ: ಶ್ರೀ ಠಾಕೂರ್

ಕೇಂದ್ರ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಇಂದು “ಹಮಾರಾ ಸಂಕಲ್ಪ ವಿಕಸಿತ ಭಾರತ್” ( ನಮ್ಮ ಸಂಕಲ್ಪ ವಿಕಸಿತ ಭಾರತ) ಎನ್ನುವ ವಿಷಯದೊಂದಿಗೆ ಭಾರತ ಸರ್ಕಾರದ 2024ರ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಿದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವದಲ್ಲಿ ಜನಸ್ನೇಹಿ ನೀತಿಗಳ ವಿನ್ಯಾಸ ಮತ್ತು ಯೋಜನೆಗಳು ಮತ್ತು ಉಪಕ್ರಮಗಳ ಅನುಷ್ಠಾನದ ಮೂಲಕ ಭಾರತದ ಜನರ ಜೀವನದಲ್ಲಿ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಪರಿವರ್ತನೆಯನ್ನು 2024ರ ಕ್ಯಾಲೆಂಡರ್ ಚಿತ್ರಿಸುತ್ತದೆ. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಸರ್ಕಾರದ ಹಲವಾರು ಸಾಧನೆಗಳನ್ನು ಸ್ಮರಿಸಿ ಮತ್ತು ಅದಕ್ಕೆ ಸಂಬಂಧಿಸಿದ ಚಿತ್ರಗಳನ್ನು ಅಲಂಕರಿಸಿದ ಕ್ಯಾಲೆಂಡರ್ನ ಪುಟಗಳ ಬಗ್ಗೆ ಮಾತನಾಡಿದರು.

ಭಾರತವು ಆತ್ಮನಿರ್ಭರ ಆಗುವತ್ತ ಮಹತ್ತರವಾದ ದಾಪುಗಾಲುಗಳನ್ನು ಹಾಕಿದೆ ಎಂದು ಸಚಿವರು ಹೇಳಿದರು. ಮೊಬೈಲ್ ಫೋನ್ಗಳ ಎರಡನೇ ಅತಿ ದೊಡ್ಡ ಆಮದುದಾರ ದೇಶವಾಗಿದ್ದ ಭಾರತವು ಇಂದು ಎರಡನೇ ಅತಿದೊಡ್ಡ ಉತ್ಪಾದಕ ದೇಶವಾಗಿದೆ. ಲಸಿಕೆಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ದೇಶ ಈಗ ಲಸಿಕೆ ಮೈತ್ರಿಯ ಅಡಿಯಲ್ಲಿ ಇಡೀ ಜಗತ್ತಿಗೆ ಲಸಿಕೆಗಳನ್ನು ವಿತರಿಸುತ್ತಿದೆ. ಭಾರತ ಇಂದು ಉತ್ಪಾದನಾ ದೈತ್ಯ. ಅಸ್ತಿತ್ವವನ್ನು ಹೊಂದಿರದಿದ್ದ ಸ್ಥಳಗಳಲ್ಲಿಯೂ ಸಹ, ಭಾರತವು  ಈಗ ಪ್ರಭಾವಶಾಲಿಯಾಗಿದೆ ಮತ್ತು ಉದಾಹರಣೆಗೆ ಭಾರತವು ಇಂದು ಮೂರನೇ ಅತಿದೊಡ್ಡ ಸ್ಟಾರ್ಟ್ ಅಪ್ ಪರಿಸರ ವ್ಯವಸ್ಥೆಯಾಗಿದೆ ಎಂದು ಹೇಳಿದರು.

ಶ್ರೀ ಠಾಕೂರ್ ಅವರು ಸರ್ಕಾರವು ಮಹಿಳಾ ಸಬಲೀಕರಣವನ್ನು  ಬಹು ಪ್ರಮುಖವಾಗಿ  ಪರಿಗಣಿಸಿದೆ ಮತ್ತು ಇದಕ್ಕೆ ಉದಾಹರಣೆಯಾಗಿ ಒಂದು ಕಡೆ ಉಜ್ವಲ ಯೋಜನೆ ಮತ್ತು ಇನ್ನೊಂದು ಕಡೆ ಡ್ರೋನ್ ದೀದಿ ಇದೆ. ಕೃಷಿಕರ ಕಲ್ಯಾಣ ವಿಷಯದ ಕುರಿತು ಶ್ರೀ ಠಾಕೂರ್ ಅವರು ಸ್ವಾಮಿನಾಥನ್ ಸಮಿತಿ ವರದಿಯನ್ನು ಜಾರಿಗೆ ತಂದದ್ದು ಪ್ರಸ್ತುತ ಸರ್ಕಾರವಾಗಿದೆ ಎಂದು ಹೇಳಿದರು. ಅಲ್ಲದೆ, ಸರ್ಕಾರವು ರೈತರ ಏಳಿಗೆಗಾಗಿ ಇದುವರೆಗೆ 2.8 ಲಕ್ಷ ಕೋಟಿ ಖರ್ಚು ಮಾಡಿದೆ ಎಂದು ಅವರು ಹೇಳಿದರು.

ಪಾರದರ್ಶಕತೆ ಮತ್ತು ಹೊಣೆಗಾರಿಕೆಯು ಸರ್ಕಾರದ ಧ್ಯೇಯವಾಗಿದೆ ಮತ್ತು ಈ ನೀತಿಯೇ ಭಾರತವನ್ನು ಒಂದು ಕಾಲದಲ್ಲಿ ದುರ್ಬಲವಾದ ಐದು ಆರ್ಥಿಕತೆಗಳಿಂದ ಇಂದು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಗೆ ಕೊಂಡೊಯ್ದಿದೆ. ಈ ಮೌಲ್ಯಗಳ ಚೈತನ್ಯವು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಅತ್ಯಂತ ಮೇಲ್ಮಟ್ಟದಿಂದ ಹರಿಯುತ್ತದೆ ಎಂದು ಅವರು ಹೇಳಿದರು.

ಆಶಾವಾದದ ಮಾತಿನಲ್ಲಿ ತಮ್ಮ ಭಾಷಣವನ್ನು ಮುಗಿಸಿದ ಶ್ರೀ ಠಾಕೂರ್, 2023 ಕೊನೆಗೊಳ್ಳುತ್ತಿದ್ದಂತೆ, 2024 ಹೊಸ ಅವಕಾಶಗಳನ್ನು ತರುತ್ತಿದೆ ಎಂದು ಹೇಳಿದರು. ಜಗತ್ತು ಭರವಸೆಯ ಭಾವನೆಯಿಂದ ಭಾರತದತ್ತ ನೋಡುತ್ತಿದೆ, ನಾಯಕತ್ವಕ್ಕಾಗಿ ಜಗತ್ತು ಭಾರತದತ್ತ ಎದುರು ನೋಡುತ್ತಿದೆ

ಕ್ಯಾಲೆಂಡರ್ ಬಗ್ಗೆ

ಕ್ಯಾಲೆಂಡರಿನ ಪ್ರತಿ ತಿಂಗಳ ಪುಟವು  ಭಾರತ ಸರ್ಕಾರವು ಕಳೆದ ಒಂಬತ್ತು ವರ್ಷಗಳಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವ ಮೂಲಕ ಮಹಿಳೆಯರು, ಯುವಕರು, ಮಧ್ಯಮ ವರ್ಗ, ರೈತರು ಮತ್ತು ಸಮಾಜದ ಪ್ರತಿಯೊಂದು ವರ್ಗದ ಮುಖಗಳಲ್ಲಿ ತಂದ ನಗುವನ್ನು ಪ್ರದರ್ಶಿಸುತ್ತದೆ. ‘ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್, ಸಬ್ಕಾ ಪ್ರಯಾಸ್’(ಎಲ್ಲರ ಜೊತೆ, ಎಲ್ಲರ ವಿಕಾಸ, ಎಲ್ಲರ ವಿಶ್ವಾಸ, ಎಲ್ಲರ ಪ್ರಯತ್ನ) ಭರವಸೆಯ ಸಾಕಾರಕ್ಕಾಗಿ ಬಹುಸಂಖ್ಯೆಯ ಸರ್ಕಾರಿ ಏಜೆನ್ಸಿಗಳು ಮತ್ತು ಅಧಿಕಾರಿಗಳು ಮಾಡಿದ ಅವಿರತ ಪ್ರಯತ್ನಗಳಿಗೆ ಇದು ಸಲ್ಲಿಸಿದ ಗೌರವವಾಗಿದೆ.

ಜನವರಿ

ನಾವು ಹೊಸ ವರ್ಷಕ್ಕೆ ಕಾಲಿಡುತ್ತಿದ್ದಂತೆ, ವರ್ಷದ ಮೊದಲ ತಿಂಗಳಿಗೆ ‘ಸಾಮರ್ಥ್ಯವನ್ನು ಅನಾವರಣಗೊಳಿಸುವುದು, ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವುದು’ ಎಂಬ ವಿಷಯದೊಂದಿಗೆ ನಾವೀನ್ಯತೆ ಮತ್ತು ಚೇತರಿಕೆಯ ಮನೋಭಾವವನ್ನು ನಾವು ಸ್ವೀಕರಿಸುತ್ತೇವೆ. “ಮೇಕ್ ಇನ್ ಇಂಡಿಯಾ” ಮತ್ತು “ಮೇಕ್ ಫಾರ್ ದಿ ವರ್ಲ್ಡ್” ನಂತಹ ಉಪಕ್ರಮಗಳಿಗೆ ಭಾರತವು ಸಾಟಿಯಿಲ್ಲದ ಯಶಸ್ಸನ್ನು ಸಾಧಿಸಿದೆ ಮತ್ತು ಜನವರಿಯ ವಿಷಯವು ಸ್ವಾವಲಂಬಿ ಮತ್ತು ಸಶಕ್ತ ಭವಿಷ್ಯದತ್ತ ನಮ್ಮ ಸಾಮೂಹಿಕ ಪ್ರಯತ್ನಗಳ ಸರಿಯಾದ ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತಿದೆ.

ಫೆಬ್ರವರಿ

ಮುಂದೆ ಸಾಗುತ್ತಾ, ನಾವು ಫೆಬ್ರವರಿಯನ್ನು “ರಾಷ್ಟ್ರೀಯ ಅಭಿವೃದ್ಧಿಗಾಗಿ ಯುವ ಶಕ್ತಿ” ಎಂಬ ವಿಷಯದೊಂದಿಗೆ ಆಚರಿಸುತ್ತೇವೆ. ಉದ್ಯಮಶೀಲತೆಯನ್ನು ಬೆಳೆಸುವುದರಿಂದ ಹಿಡಿದು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವವರೆಗೆ, ಫೆಬ್ರವರಿಯು ರಾಷ್ಟ್ರವನ್ನು ಉಜ್ವಲ ಮತ್ತು ಹೆಚ್ಚು ಅಂತರ್ಗತ ಭವಿಷ್ಯದತ್ತ ಮುನ್ನಡೆಸಲು ಯುವಜನರ ಕೊಡುಗೆಗಳನ್ನು ಹೆಚ್ಚಿಸುವ ಕರೆಯಾಗಿದೆ, 

ಮಾರ್ಚ್

ಬಡವರ ಸೇವೆ ಮತ್ತು ಅಂಚಿನಲ್ಲಿರುವವರನ್ನು ಮೇಲಕ್ಕೆತ್ತುವುದು ಮೋದಿ ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ. ಮಾರ್ಚ್ ತಿಂಗಳು, ‘ವಂಚಿತರಿಗೆ ಆದ್ಯತೆ’  ಎನ್ನುವ ವಿಷಯದೊಂದಿಗೆ ನಮ್ಮ ಕಾರ್ಯಗಳು ಮತ್ತು ನೀತಿಗಳು ಒಳಗೊಳ್ಳುವಿಕೆ ಮತ್ತು ನ್ಯಾಯದ ಸಮರ್ಪಣೆಯನ್ನು ಬಿಂಬಿಸುವ ಮೂಲಕ ಹೆಚ್ಚು ಅಗತ್ಯವಿರುವವರಿಗೆ ಬೆಂಬಲವನ್ನು ಒದಗಿಸುವಲ್ಲಿ ನಿಜವಾದ ಪ್ರಗತಿ ಅಡಗಿದೆ ಎನ್ನುವುದನ್ನು ನೆನಪಿಸುತ್ತದೆ.

ಏಪ್ರಿಲ್

ಮಹಿಳೆಯರು ಸಮಾಜದಲ್ಲಿ ಅವಿಭಾಜ್ಯ ಪಾತ್ರವನ್ನು ವಹಿಸುತ್ತಾರೆ; ಅವರ ಪ್ರಗತಿಯಿಲ್ಲದೆ, ಸಮಾಜದ ಒಟ್ಟಾರೆ ಪ್ರಗತಿಯು ಸ್ಥಗಿತಗೊಳ್ಳುತ್ತದೆ. ಏಪ್ರಿಲ್ ತಿಂಗಳಿನ ವಿಷಯವು ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರನ್ನು ಸಬಲೀಕರಣಗೊಳಿಸುವತ್ತ ಗಮನಹರಿಸುತ್ತದೆ, ಅವರ ನಾಯಕತ್ವ ಮತ್ತು ಕೊಡುಗೆಗಳು ನಿರ್ಧಾರ ತೆಗೆದುಕೊಳ್ಳುವಿಕೆ  ಮತ್ತು ಸುಸ್ಥಿರ ಅಭಿವೃದ್ಧಿಗೆ ಮುಖ್ಯವಾಗಿರುವ ಭವಿಷ್ಯವನ್ನು ಉತ್ತೇಜಿಸುತ್ತದೆ.

ಮೇ

ನಮ್ಮ ಸಮರ್ಪಿತ ರೈತರ ಅಪೂರ್ವ ಕಾರ್ಯವನ್ನು ಬೆಂಬಲಿಸುವುದು  ಮೇ ತಿಂಗಳ ಮುಖ್ಯಾಂಶವಾಗಿದೆ. ಕೃಷಿಯ ಪ್ರಗತಿ, ಸುಸ್ಥಿರ ಅಭ್ಯಾಸಗಳನ್ನು ಬೆಂಬಲಿಸುವುದು ಮತ್ತು ರಾಷ್ಟ್ರದ ಅನ್ನದಾತರ ಯೋಗಕ್ಷೇಮವನ್ನು ಖಾತ್ರಿಪಡಿಸುವ ನೀತಿಗಳ ಮೇಲೆ ಸರ್ಕಾರವು ನೀಡಿದ ಪ್ರಾಮುಖ್ಯತೆಯನ್ನು ಇದು ಒತ್ತಿಹೇಳುತ್ತದೆ.

ಜೂನ್

ಕಳೆದ ಹತ್ತು ವರ್ಷಗಳಲ್ಲಿ, ಪಿಎಂ ಸ್ವನಿಧಿ, ಪಿಎಂ ವಿಶ್ವಕರ್ಮ ಮತ್ತು ಮುದ್ರಾ ಯೋಜನೆಗಳಂತಹ ಹಲವಾರು ಸರ್ಕಾರಿ ಉಪಕ್ರಮಗಳು ಭಾರತದಲ್ಲಿ ಉದ್ಯೋಗಗಳು, ಸ್ವಯಂ ಉದ್ಯೋಗದ ಅವಕಾಶಗಳು ಮತ್ತು ವ್ಯಾಪಾರವನ್ನು ಗಣನೀಯವಾಗಿ ಹೆಚ್ಚಿಸಿವೆ. ಜೂನ್ ತಿಂಗಳು, ‘ಉದ್ಯೋಗದಲ್ಲಿ ಬೆಳವಣಿಗೆ ಮತ್ತು ಸ್ವ-ಉದ್ಯೋಗ ಅವಕಾಶಗಳು’ ಎನ್ನುವ ವಿಷಯದೊಂದಿಗೆ  ಗಮನ ಸೆಳೆಯುತ್ತವೆ, ಇದು ಆರ್ಥಿಕ ಸಬಲೀಕರಣವನ್ನು ಹೆಚ್ಚಿಸುತ್ತದೆ.

ಜುಲೈ

ಜುಲೈ ಎಂದರೆ ನಮ್ಮ ಸಮಾಜದ ಬೆನ್ನೆಲುಬಾಗಿರುವ ಮಧ್ಯಮ ವರ್ಗದವರನ್ನು ಪ್ರಶಂಶಿಸುವ ತಿಂಗಳಾಗಿದೆ. ಅವರ ಕಠಿಣ ಪರಿಶ್ರಮವು ನವ ಭಾರತದ ಚೈತನ್ಯವಾಗಿದೆ ಮತ್ತು ಅವರು ಬೆಳವಣಿಗೆ ಮತ್ತು ನಾವೀನ್ಯತೆಗೆ ಚಾಲನೆ ನೀಡುವಲ್ಲಿ ಮುಂಚೂಣಿಯಲ್ಲಿದ್ದಾರೆ. ನಮ್ಮ ಸರ್ಕಾರವು ಮಧ್ಯಮ ವರ್ಗದವರ ಅನುಕೂಲಕ್ಕಾಗಿ ಹೆಚ್ಚಿನ ‘ಜೀವನದ ಸುಲಭತೆ’ಗಾಗಿ ಸತತವಾಗಿ ಕೆಲಸ ಮಾಡಿದೆ.

ಆಗಸ್ಟ್

ಆಗಸ್ಟ್ ತಿಂಗಳು ವಿಶ್ವ ಆರ್ಥಿಕ ವೇದಿಕೆಯಲ್ಲಿ ಭಾರತದ ಹೆಚ್ಚುತ್ತಿರುವ ಸ್ಥಾನಮಾನವನ್ನು ಪ್ರತಿನಿಧಿಸುತ್ತದೆ. ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಮತ್ತು ವೋಕಲ್ ಫಾರ್ ಲೋಕಲ್ನಂತಹ ಪ್ರಮುಖ ಉಪಕ್ರಮಗಳೊಂದಿಗೆ, ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಹಾದಿಯನ್ನು ಸುಗಮಗೊಳಿಸಿದೆ.

ಸೆಪ್ಟೆಂಬರ್

ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಆಧುನಿಕ ಮೂಲಸೌಕರ್ಯದಲ್ಲಿನ ಗಮನಾರ್ಹ ಹೂಡಿಕೆಗಳಿಂದ ಹಿಡಿದು ವಿಸ್ತಾರವಾದ ಸಾರಿಗೆ ಜಾಲಗಳವರೆಗೆ, ದೇಶದ ಪ್ರಗತಿಗೆ ಚೇತರಿಸಿಕೊಳ್ಳುವ ಅಡಿಪಾಯವನ್ನು ನಿರ್ಮಿಸುವಲ್ಲಿ ಕಳೆದ ಹತ್ತು ವರ್ಷಗಳಲ್ಲಿ ದೇಶವು ಮಾಡಿದ ಪರಿವರ್ತಕ ಪ್ರಗತಿಗೆ ಸೆಪ್ಟೆಂಬರ್ ಸಾಕ್ಷಿಯಾಗಿದೆ.

ಅಕ್ಟೋಬರ್

ದೇಶದ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸುವ ಆಯುಷ್ಮಾನ್ ಕಾರ್ಡುಗಳು, ಜನೌಷಧಿ ಕೇಂದ್ರಗಳು ಮತ್ತು ಹೊಸ ಏಮ್ಸ್ (AIIMS) ಮತ್ತು ಜಿಲ್ಲಾ ಆಸ್ಪತ್ರೆಗಳೊಂದಿಗೆ ಆರೋಗ್ಯ ಲಭ್ಯತೆ ಮತ್ತು ಕೈಗೆಟುಕುವ ದರದಲ್ಲಿ ಮಾಡಿದ ಪ್ರಗತಿಯನ್ನು ಒತ್ತಿಹೇಳುವ ಮೂಲಕ ಆರೋಗ್ಯಕರ ಭಾರತದ ದೃಷ್ಟಿಯನ್ನು ಆಚರಿಸಲು ಅಕ್ಟೋಬರ್ ನಮ್ಮನ್ನು ಆಹ್ವಾನಿಸುತ್ತದೆ.

ನವೆಂಬರ್

ನಮ್ಮ ಅಂತರ್ಗತ ಚೈತನ್ಯಯುತ ಸಂಸ್ಕೃತಿಯಲ್ಲಿ ಹೆಮ್ಮೆ ಪಡುವುದರಿಂದ ಹಿಡಿದು ವಿವಿಧ ಕಲಾ ಪ್ರಕಾರಗಳನ್ನು ಉತ್ತೇಜಿಸುವುದು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಬಲಪಡಿಸಲು ಸಾಂಸ್ಕೃತಿಕ ಪರಂಪರೆಯ ತಾಣಗಳನ್ನು ಸಂರಕ್ಷಿಸುವುದು, ಸಮಗ್ರ ಮತ್ತು ಸುಸ್ಥಿರ ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳಲು ನಮ್ಮ ಮೌಲ್ಯಗಳು ಮತ್ತು ಸಂಸ್ಕೃತಿಯನ್ನು ಪಾಲಿಸುವುದು ನವೆಂಬರ್ ತಿಂಗಳಿನ ವಿಷಯವಾಗಿದೆ.

ಡಿಸೆಂಬರ್

ವಸುಧೈವ ಕುಟುಂಬಕಂ – ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ- ಮತ್ತು ಮಿಷನ್ ಲೈಫ್ ನಂಥ ಉಪಕ್ರಮಗಳ ಧ್ಯೇಯವಾಕ್ಯದೊಂದಿಗೆ, ಭಾರತವು ವಿಶ್ವ-ಮಿತ್ರ, ವಿಶ್ವದ ಸ್ನೇಹಿತನಾಗಿ ತನ್ನ ಸ್ಥಾನವನ್ನು ಪಡೆದುಕೊಂಡಿದೆ.

image003ICE55FJ7

ನಮ್ಮ ರಾಷ್ಟ್ರದ ಅಭಿವೃದ್ಧಿ ಮತ್ತು ಪ್ರಗತಿಗೆ ನಮ್ಮ ಸಮರ್ಪಣೆಯ ದೈನಂದಿನ ಜ್ಞಾಪನೆಯಾಗಿ ಕಾರ್ಯನಿರ್ವಹಿಸಲು ಕ್ಯಾಲೆಂಡರ್ ಅನ್ನು ವಿನ್ಯಾಸಗೊಳಿಸಲಾಗಿದೆ. ಇದು ದೃಢಸಂಕಲ್ಪ, ಏಕತೆ ಮತ್ತು ಹಂಚಿಕೆಯ ದೃಷ್ಟಿಯೊಂದಿಗೆ ಕೆಲಸ ಮಾಡಲು ಎಲ್ಲರನ್ನು ಪ್ರೇರೇಪಿಸುತ್ತದೆ ಮತ್ತು ಎಲ್ಲರಿಗೂ ಅಭಿವೃದ್ಧಿ ಹೊಂದುತ್ತಿರುವ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಕಡೆಗೆ ಪ್ರಯಾಣವನ್ನು ಪ್ರಾರಂಭಿಸಲು ಸಕಲ ಭಾರತೀಯರನ್ನು ಪ್ರೇರೇಪಿಸುತ್ತದೆ.

Share on facebook
Share on twitter
Share on whatsapp