IMG 20240830 WA0001

Karnataka : ಬಸ್ ಅಂಡ್ ಕಾರ್ ಆಪರೇರ‍್ಸ್ ಕಾನ್ಫೆಡರೇಶನ್ ಆಫ್ ಇಂಡಿಯಾದ ಪ್ರವಾಸ್ ೪.೦ ಆರಂಭ …..!

BUSINESS

ಭಾರತ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರಿಂದ ವರ್ಚುವಲ್ ಭಾಷಣ

• ಬಸ್ ಅಂಡ್ ಕಾರ್ ಆಪರೇರ‍್ಸ್ ಕಾನ್ಫೆಡರೇಶನ್ ಆಫ್ ಇಂಡಿಯಾದ ಫ್ಲಾö್ಯಗ್‌ಶಿಪ್ ಕಾರ್ಯಕ್ರಮ ಪ್ರವಾಸ್ ೪.೦, ಸುರಕ್ಷತೆ, ಸ್ಮಾರ್ಟ್ ಮತ್ತು ಸುಸ್ಥಿರ ಪ್ರಯಾಣಿಕ ಸಾರಿಗೆ ಗುರಿ

• ೪ ನೇ ಆವೃತ್ತಿಯ ಈ ಕಾರ್ಯಕ್ರಮದಲ್ಲಿ ೨೮ ರಾಜ್ಯಗಳು ಮತ್ತು ೮ ಕೇಂದ್ರಾಡಳಿತ ಪ್ರದೇಶಗಳ ಸಮೂಹ ಸಾರಿಗೆ ಮಾಲೀಕರು ಮತ್ತು ಆಪರೇಟರ್‌ಗಳು ಭಾಗಿ

ಬೆಂಗಳೂರು, ೨೯ ಆಗಸ್ಟ್ ೨೦೨೪: ಬಹುನಿರೀಕ್ಷಿತ ನಮ್ಮ ಬೆಂಗಳೂರಿನ ಆತಿಥ್ಯದ ಪ್ರವಾಸ್ ೪.೦ ಗೆ ಕರ್ನಾಟಕ ಸರ್ಕಾರದ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ಇಂದು ಚಾಲನೆ ನೀಡಿದರು. ಇದು ಭಾರತದ ಫ್ಲಾö್ಯಗ್‌ಶಿಪ್‌ನ ಬಹುಮಾದರಿಯ ಕಾರ್ಯಕ್ರಮವಾಗಿದ್ದು, ಬಸ್ ಅಂಡ್ ಕಾರ್ ಆಪರೇರ‍್ಸ್ ಕಾನ್ಫೆಡರೇಶನ್ ಆಫ್ ಇಂಡಿಯಾ(ಃಔಅI) ಇದನ್ನು ಆಯೋಜಿಸಿದೆ. ಆಗಸ್ಟ್ ೨೯ ರಿಂದ ೩೧ ರವರೆಗೆ ಬೆಂಗಳೂರಿನ ಅಂತಾರಾಷ್ಟಿçÃಯ ಪ್ರದರ್ಶನ ಕೇಂದ್ರದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಭಾರತ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು, ಭಾರೀ ಕೈಗಾರಿಕೆಗಳು, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಗಳು ಬೆಂಒದಗಿಸುತ್ತಿದೆದ.

ಈ ಕಾರ್ಯಕ್ರಮದಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಖಾತೆ ಸಚಿವರಾದ ನಿತಿನ್ ಗಡ್ಕರಿ ಅವರು ವರ್ಚುವಲ್‌ನಲ್ಲಿ ಪಾಲ್ಗೊಂಡು ವೀಡಿಯೋ ಕಾನ್ಫರೆನ್ಸ್ ಮೂಲಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿ, ಇಡೀ ಸಾರಿಗೆ ಕಾರ್ಯಾಚರಣೆ ಕ್ಷೇತ್ರಕ್ಕೆ ಸರ್ಕಾರ ಉತ್ತೇಜನ ಮತ್ತು ಬೆಂಬಲವನ್ನು ನೀಡಲಿದೆ ಎಂದು ಭರವಸೆ ನೀಡಿದರು.

ಉದ್ಘಾಟನಾ ಸಮಾರಂಭದಲ್ಲಿ ಉತ್ತರ ಪ್ರದೇಶ ಸರ್ಕಾರದ ಸಾರಿಗೆ ಸಚಿವ ದಯಾಶಂಕರ್ ಸಿಂಗ್, ಅರುಣಾಚಲ ಪ್ರದೇಶ ಸರ್ಕಾರದ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಆಜ್, ಸಹಕಾರ ಮತ್ತು ಸಾರಿಗೆ ಸಚಿವ ಓಜಿಂಗ್ ಟೇಸಿಂಗ್, ರಾಜಸ್ಥಾನದ ಮಾಜಿ ಸಾರಿಗೆ ಸಚಿವ ಯೂನಸ್ ಖಾನ್, ಟಾಟಾ ಮೋಟರ್ಸ್ ಲಿಮಿಟೆಡ್‌ನ ಕಾರ್ಯಕಾರಿ ನಿರ್ದೇಶಕ ಗಿರೀಶ್ ವಾಘ್, ವಿಇ ಕಮರ್ಷಿಯಲ್ ವೆಹಿಕಲ್ಸ್ ಲಿಮಿಟೆಡ್‌ನ ಮುಖ್ಯ ವಾಣಿಜ್ಯ ಅಧಿಕಾರಿ ಎಸ್.ಎಸ್.ಗಿಲ್ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು. ಮುಂದಿನ ದಿನಗಳಲ್ಲಿ ವಿವಿಧ ರಾಜ್ಯಗಳ ಸಚಿವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳು, ಸಾರಿಗೆ ಇಲಾಖೆಗಳು ಮತ್ತು ರಾಜ್ಯ ಸಾರಿಗೆ ಸಂಸ್ಥೆಗಳ ಪ್ರತಿನಿಧಿಗಳೂ ಪಾಲ್ಗೊಳ್ಳಲಿದ್ದಾರೆ.

ಬಿಒಸಿಐ ಆಯೋಜನೆ ಮಾಡಿರುವ ಪ್ರವಾಸ್ ೪.೦ ಗೆ ಆತಿಥೇಯ ಕರ್ನಾಟಕದ ೬ ಸಂಘಟನೆಗಳಾದ ಕರ್ನಾಟಕ ಸ್ಟೇಟ್ ಟೂರಿಸ್ಟ್ ಪ್ರೆöÊವೇಟ್ ಟ್ರಾನ್ಸ್ಪೋರ್ಟ್ ಓನರ್ಸ್ ಅಸೋಸಿಯೇಶನ್, ಕರ್ನಾಟಕ ಸ್ಟೇಟ್ ಟ್ರಾವೆಲ್ ಆಪರೇಟರ್ಸ್ ಅಸೋಸಿಯೇಶನ್, ಕರ್ನಾಟಕ ಟೂರಿಸ್ಟ್ ಮೋಟರ್ ಕ್ಯಾಬ್ ಮ್ಯಾಕ್ಸಿ ಕ್ಯಾಬ್ ಓನರ್ಸ್ ವೆಲ್‌ಫೇರ್ ಅಸೋಸಿಯೇಶನ್(ಕೆಟಿಒಎ), ಬೆಂಗಳೂರು ಟೂರಿಸ್ಟ್ ಟ್ಯಾಕ್ಸಿ ಓನರ್ಸ್ ಅಸೋಸಿಯೇಶನ್(ಬಿಟಿಟಿಒಎ), ಕರ್ನಾಟಕ ಸಟೇಟ್ ಟೂರಿಸ್ಟ್ ಬಸ್ ಆಪರೇಟರ್ಸ್ ಅಸೋಸಿಯೇಶನ್, ಕರ್ನಾಟಕ ಸ್ಟೇಟ್ ಬಸ್ ಓನರ್ಸ್ ಫೆಡರೇಶನ್ ಸೇರಿದಂತೆ ಇನ್ನೂ ಹಲವು ಸ್ಥಳೀಯ ಸಂಘಟನೆಗಳು ಬೆಂಬಲ ನೀಡಿವೆ. ಈ ಸಮ್ಮೇಳನವನ್ನು ಎಂಎA ಆಕ್ಟೀವ್ ಸೈ-ಟೆಕ್ ಕಮ್ಯುನಿಕೇಶನ್ಸ್ ನಿರೂಪಿಸಿದೆ.IMG 20240830 WA0002

ಈ ಮೂರು ದಿನಗಳ ಕಾರ್ಯಕ್ರಮದಲ್ಲಿ ಭಾರತದಾದ್ಯಂತದ ೯ ಪ್ರಮುಖ ಬಸ್ & ಕಾರ್ ಆಪರೇಟರ್‌ಗಳಾದ ಇಂಟರ್‌ಸಿಟಿ, ಇಂಟ್ರಾಸಿಟಿ, ಸ್ಕೂಲ್ ಬಸ್, ನೌಕರರ ಸಾರಿಗೆ, ಪ್ರವಾಸಿ ಆಪರೇಟರ್‌ಗಳು, ಪ್ರವಾಸಿ ಕ್ಯಾಬ್‌ಗಳು, ಮ್ಯಾಕ್ಸಿ ಕ್ಯಾಬ್‌ಗಳು, ಪಿಪಿಪಿ-ಎಸ್‌ಪಿವಿ ಮತ್ತು ಕ್ರಿಟಿಕಲ್ ಕೇರ್ ಕ್ಷೇತ್ರಗಳ ಪ್ರತಿನಿಧಿಗಳು ಪಾಲ್ಗೊಳ್ಳುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ೫೦೦೦ ಕ್ಕೂ ಹೆಚ್ಚು ನೋಂದಾಯಿತ ಆಪರೇಟರ್‌ಗಳು ಪ್ರತಿನಿಧಿಗಳನ್ನು ಕಳುಹಿಸಿಕೊಟ್ಟಿದ್ದು ಕಾರ್ಯಕ್ರಮಕ್ಕೆ ಬಹುದೊಡ್ಡ ಶಕ್ತಿ ಬಂದAತಾಗಿದೆ. ಅಲ್ಲದೇ, ಕರ್ನಾಟಕ, ತಮಿಳುನಾಡು, ಕೇರಳ, ಮಹಾರಾಷ್ಟç, ಗುಜರಾತ್, ಒಡಿಶಾ ಸೇರಿದಂತೆ ಇನ್ನೂ ಅನೇಕ ರಾಜ್ಯಗಳಿಂದ ಹೆಚ್ಚು ಪ್ರತಿನಿಧಿಗಳು ಹಾಗೂ ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಚತ್ತೀಸ್‌ಗಢ, ರಾಜಸ್ಥಾನ, ಪಶ್ಚಿಮ ಬಂಗಾಳದ ಪ್ರತಿನಿಧಿಗಳೂ ಭಾಗವಹಿಸುತ್ತಿರುವುದು ವಿಶೇಷವಾಗಿದೆ. ಇದೇ ವೇಳೆ, ಈಶಾನ್ಯ ಭಾಗದ ೮೦+ ಸದಸ್ಯರು ಪಾಲ್ಗೊಳ್ಳುತ್ತಿದ್ದಾರೆ.

ಈ ಪ್ರವಾಸ್ ೪.೦ ದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯುತ್ತಿವೆ. ಅವುಗಳಲ್ಲಿ ಪ್ರಮುಖವಾಗಿ ಬಿಒಸಿಐ ದಿನ, ಅತ್ಯುತ್ತಮವಾದ ವಸ್ತು ಪ್ರದರ್ಶನ, ಸಮ್ಮೇಳನ, ಪ್ರಶಸ್ತಿ ವಿತರಣಾ ಸಮಾರಂಭ, ನಾಯಕತ್ವದ ಕುರಿತು ಉಪನ್ಯಾಸ, ಸಂವಾದಗಳು ಇರಲಿವೆ. ಇಲ್ಲಿ ದೇಶಾದ್ಯಂತದಿAದ ಆಗಮಿಸಿರುವ ಉದ್ಯಮದ ನಾಯಕರು ಸಂವಾದಗಳನ್ನು ನಡೆಸಿಕೊಟ್ಟು, ಉದ್ಯಮದ ಪ್ರಗತಿಯ ಬಗೆಯ ಬಗ್ಗೆ ವಿವರಣೆ ನೀಡಲಿದ್ದಾರೆ. ಇದಲ್ಲದೇ, ಬಿಒಸಿಐ ಯುವ ಎಂಬ ಹೊಸ ಉಪಕ್ರಮವನ್ನು ಪರಿಚಯಿಸಲಾಗಿದ್ದು, ಈ ಸಾರಿಗೆ ಕ್ಷೇತ್ರದಲ್ಲಿ ಯುವ ಪೀಳಿಗೆಯನ್ನು ತೊಡಗಿಸಿಕೊಳ್ಳುವ ಮೂಲಕ ಅವರನ್ನು ಸಶಕ್ತರನ್ನಾಗಿ ಮಾಡುವ ಉದ್ದೇಶವನ್ನು ಹೊಂದಲಾಗಿದೆ.

ಪ್ರವಾಸ್ ೪.೦ ದ ಈ ಬಾರಿಯ ಪರಿಕಲ್ಪನೆ “ಸುರಕ್ಷತೆ, ಸ್ಮಾರ್ಟ್ ಮತ್ತು ಸುಸ್ಥಿರ ಪ್ರಯಾಣಿಕ ಸಾರಿಗೆ’’ ಎಂಬುದಾಗಿದೆ. ಇದೊಂದು ಹೊಸ ಮೈಲಿಗಲ್ಲಿನ ಸಮ್ಮೇಳನವಾಗಲಿದ್ದು, ದೇಶದ ಅನೇಕ ಬಹುಮಾದರಿಯ ಸಾರಿಗೆ ಕ್ಷೇತ್ರದ ಪಾಲುದಾರರನ್ನು ಒಂದೇ ಸೂರಿನಡಿ ಸೇರುವ ಅವಕಾಶವನ್ನು ಕಲ್ಪಿಸುತ್ತಿದೆ. ಈ ಪ್ರದರ್ಶನದಲ್ಲಿ ದೇಶದ ಎಲ್ಲಾ ೨೮ ರಾಜ್ಯಗಳು ಮತ್ತು ೮ ಕೇಂದ್ರಾಡಳಿತ ಪ್ರದೇಶಗಳ ಬಸ್ ಮತ್ತು ಕಾರು ಉತ್ಪಾದಕರು, ಸಾರಿಗೆ ಆಪರೇಟರ್‌ಗಳು ಮತ್ತು ಪಾಲುದಾರರು ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ.

ಈ ವರ್ಷದ ಸಮ್ಮೇಳನದಲ್ಲಿ ೧೦೦ ಕ್ಕೂ ಹೆಚ್ಚು ಪರಿಣಿತರು ಬಹುಮಾದರಿ ಸಾರಿಗೆ ವ್ಯವಸ್ಥೆ, ಪಿಪಿಪಿ ಮಾದರಿ, ಶಾಲಾ ಬಸ್‌ಗಳು, ಪ್ರವಾಸೋದ್ಯಮ, ಎಲೆಕ್ಟಿçಕ್ ವಾಹನಗಳು(ಇವಿಗಳು), ವಿಮೆ ಮತ್ತು ಕಾರು ಉದ್ಯಮದ ಬಗ್ಗೆ ತಮ್ಮ ಉಪನ್ಯಾಸ, ಭಾಷಣ, ಸಂವಾದಗಳಲ್ಲಿ ಬೆಳಕು ಚೆಲ್ಲಲಿದ್ದಾರೆ. ಅದೇ ರೀತಿ ೧೫೦೦ ಕ್ಕೂ ಹೆಚ್ಚು ಉದ್ಯಮ ಪ್ರತಿನಿಧಿಗಳು ಪಾಲ್ಗೊಳ್ಳುತ್ತಿದ್ದಾರೆ. ಈ ಪ್ರವಾಸ್ ೪.೦ ಪ್ರದರ್ಶನದಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ೨೦೦ ಕ್ಕೂ ಹೆಚ್ಚು ಪ್ರದರ್ಶಕರು ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿನ ತಮ್ಮ ಆವಿಷ್ಕಾರಗಳನ್ನು ಪ್ರದರ್ಶನ ಮಾಡುತ್ತಿದ್ದಾರೆ. ಇವುಗಳಲ್ಲಿ ಪ್ರಮುಖವಾದ ಕಂಪನಿಗಳೆAದರೆ, ಟಾಟಾ ಮೋಟರ್ಸ್, ವೋಲ್ವೋ ಐಶರ್, ರೆಡ್‌ಬಸ್, ಅಭಿಬಸ್, ವೀರಾ, ಪ್ರಕಾಶ್, ಎಬರ್‌ಸ್ಪೇಚರ್, ಬಾಶ್, ಟ್ರಾನ್ಸ್ ಎಸಿಎನ್‌ಆರ್, ಸ್ಫೇರೋಸ್‌ಮದರ್‌ಸನ್, ಶ್ರೀ ದಾಮೋದರ್ ಕೋಚ್ ಕ್ರಾಫ್ಟ್÷್ಸ,

ಐಡಿಯಲ್ ಇನ್ಶೂರೆನ್ಸ್, ಮಾರುತಿ ಸುಜುಕಿ ಮತ್ತು ಬಿಟ್ಲಾ ಸಾಫ್ಟ್ವೇರ್‌ನಂತಹ ಕಂಪನಿಗಳು ಪಾಲ್ಗೊಂಡಿರುವುದು ವಿಶೇಷವಾಗಿದೆ. ಅದೇ ರೀತಿ, ನಿಪ್ಪಾನ್ ಪೇಂಟ್, ಜೆಬಿಎಂ ಗ್ರೂಪ್, ಏಕಾ ಮೊಬಿಲಿಟಿ, ರೆಪೊಸ್ ಎನರ್ಜಿ, ಅಶೋಕ್ ಲೇಲ್ಯಾಂಡ್, ಫ್ಯೂಚರ್ ಆಟೋಟೆಕ್-ಗ್ಲೋಬಲ್ ವೆಂಚರ್ಸ್, ರಮೇಶ್ ಟರ‍್ಸ್ ಅಂಡ್ ಟ್ರಾವೆಲ್ಸ್, ಔಡಿ, ಬಿಎಂಡಬ್ಲೂö್ಯ ಡೆಯಟ್‌ಶೆ ಮೊಟರೆನ್, ಮರ್ಸಿಡಿಸ್-ಬೆನ್ಜ್, ಕಿಯಾ, ರಿನೋ ಮತ್ತು ಇನ್ನೂ ಇತ್ಯಾದಿ ಕಂಪನಿಗಳು ಪ್ರದರ್ಶನದಲ್ಲಿ ಪಾಲ್ಗೊಂಡಿವೆ.IMG 20240830 WA0003

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಬಿಒಸಿಐ ಅಧ್ಯಕ್ಷ ಪ್ರಸನ್ನ ಪಟವರ್ಧನ್ ಅವರು, “ಪ್ರವಾಸ್‌ನ ೪ ನೇ ಆವೃತ್ತಿಯನ್ನು ಉದ್ಘಾಟಿಸುವುದರೊಂದಿಗೆ ನಾವು ಭಾರತದ ಸಾರಿಗೆ ಲ್ಯಾಂಡ್‌ಸ್ಕೇಪ್ ಅನ್ನು ಪರಿವರ್ತಿಸುವ ನಿಟ್ಟಿನಲ್ಲಿ ಅನ್ವೇಷಣೆಯಲ್ಲಿ ಒಂದು ಪ್ರಮುಖ ಮೈಲಿಗಲ್ಲನ್ನು ಸ್ಥಾಪಿಸಿದಂತಾಗಿದೆ. ಬಸ್ ಮತ್ತು ಕಾರ್ ಆಪರೇಟರ್ಸ್ ಕಾನ್ಫೆಡರೇಶನ್ ಆಫ್ ಇಂಡಿಯಾ (ಬಿಒಸಿಐ)ನಲ್ಲಿ ನಾವು ಕೇವಲ ಭವಿಷ್ಯವನ್ನು ರೂಪಿಸುತ್ತಿಲ್ಲ, ನಾವೀನ್ಯತೆಯನ್ನು ಚಾಲನೆ ಮಾಡುವ ನಿಟ್ಟಿನಲ್ಲಿ ಸಹಯೋಗಗಳನ್ನು ಬೆಳೆಸುವ ಮೂಲಕ ಮತ್ತು ಎಲ್ಲಾ ಸಾರಿಗೆ ವಿಧಾನಗಳಲ್ಲಿ ಸುಸ್ಥಿರ ಅಭ್ಯಾಸಗಳನ್ನು ಚಾಂಪಿಯನ್ ಮಾಡುವುದರೊಂದಿಗೆ ನಾವು ಅದನ್ನು ಸಕ್ರಿಯವಾಗಿ ರೂಪಿಸುತ್ತಿದ್ದೇವೆ. ಪ್ರವಾಸ್ ೪.೦ ಉದ್ಯಮವು ಎದುರಿಸುತ್ತಿರುವ ಪರಿಸರದ ಮೇಲೆ ಉಂಟಾಗುತ್ತಿರುವ ಒತ್ತಡ ತಪ್ಪಿಸುವುದು ಮತ್ತು ಸಾಮಾಜಿಕ-ಆರ್ಥಿಕ ಸವಾಲುಗಳನ್ನು ಪರಿಹರಿಸುವ ನಮ್ಮ ಬದ್ಧತೆಯನ್ನು ಸಾಕಾರಗೊಳಿಸುತ್ತದೆ. ಈ ಕಾರ್ಯಕ್ರಮಕ್ಕೆ ಮುನ್ನ ಬೆಂಗಳೂರು, ಗುವಾಹತಿ, ಪುಣೆ, ಕೋಝಿಕ್ಕೋಡ್, ಮಧುರೈ, ಲಕ್ನೋ ಮತ್ತು ರಾಯ್ಪುರದಲ್ಲಿ ನಡೆದ ಯಶಸ್ವಿ ಕರ್ಟನ್‌ರೈಸರ್ ಕಾರ್ಯಕ್ರಮಗಳ ನಿರ್ವಾಹಕರು ಮತ್ತು ಉದ್ಯಮದ ಪ್ರತಿನಿಧಿಗಳು ಮಹತ್ವದ ಬದ್ಧತೆಯನ್ನು ತೋರಿಸಿದ್ದಾರೆ. ನಮ್ಮ ಪಾಲುದಾರರು ಮತ್ತು ಸಹವರ್ತಿಗಳು ಅಗಾಧವಾದ ಆಸಕ್ತಿ ಮತ್ತು ಬೆಂಬಲವನ್ನು ವ್ಯಕ್ತಪಡಿಸಿದ್ದು, ಸಾರಿಗೆಯು ಕೇವಲ ಸಮರ್ಥ ಮತ್ತು ಅಂತರ್ಗತವಾಗಿರದೇ ಬದಲಾವಣೆಗೆ ಪ್ರಬಲವಾದ ಶಕ್ತಿಯಾಗಿರುವ ಭವಿಷ್ಯವನ್ನು ರೂಪಿಸುತ್ತಿದ್ದೇವೆ. ಅದರಲ್ಲಿ ಪ್ರಮುಖವಾಗಿ ಹಸಿರು, ಸುರಕ್ಷಿತ ಮತ್ತು ಇನ್ನಷ್ಟು ಸ್ಥಿತಿಸ್ಥಾಪಕತ್ವದ ಸಾರಿಗೆ ಪರಿಸರ ವ್ಯವಸ್ಥೆಗೆ ದಾರಿ ಮಾಡಿಕೊಡುವುದಾಗಿದೆ’’ ಎಂದು ತಿಳಿಸಿದರು.

ಪ್ರವಾಸ್ ೪.೦ ಪ್ರಯಾಣಿಕರ ಚಲನಶೀಲತೆಯಲ್ಲಿ ತೊಡಗಿಸಿಕೊಳ್ಳಲು, ನೆಟ್‌ವರ್ಕ್ ಮಾಡಲು ಮತ್ತು ಹೊಸತನವನ್ನು ಹೆಚ್ಚಿಸಿಕೊಳ್ಳಲು ಒಂದು ಅಪೂರ್ವವಾದ ಅವಕಾಶವನ್ನು ಒದಗಿಸುತ್ತಿ