7ನೇ ವೇತನ ಆಯೋಗದಲ್ಲಿ ನಿವೃತ್ತ ನೌಕರರಿಗೆ ಅನ್ಯಾಯ: ಆರೋಪ ಮನವಿ ಪತ್ರ ಸಲ್ಲಿಕೆ.
ಪಾವಗಡ : ರಾಜ್ಯ ಸರ್ಕಾರ ಜಾರಿಗೊಳಿಸಿದ 7ನೇ ವೇತನ ಆಯೋಗದಲ್ಲಿ ನಿವೃತ್ತ ಸರ್ಕಾರಿ ನೌಕರರಿ ಗೆ ಅಧಿಕಾರಿಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಒತ್ತಾಯಿಸಿ ತಾಲ್ಲೂಕು ನಿವೃತ್ತ ನೌಕರರ ಸಂಘ ದ ಪದಾಧಿಕಾರಿಗಳು
ತಹಶೀಲ್ದಾರ್ ವರದರಾಜು ಮುಖಾಂತರ ಮುಖ್ಯಮಂತ್ರಿಯ ರವರಿಗೆ ಮನವಿ ಪತ್ರ ಸಲ್ಲಿಕೆ.
ಪ್ರತಿಭಟನೆ ಉದ್ದೇಶಿಸಿ ನಿವೃತ್ತ ಉಪನ್ಯಾಸಕ ಸುರೇಶ್ ಮಾತನಾಡಿ,
7ನೇ ವೇತನ ಆಯೋಗದ ವರದಿಯಂತೆ ಪರಿಷ್ಕೃತ ವೇತನದ ಮೇಲೆ ನಿವೃತ್ತ ಆರ್ಥಿಕ ಸೌಲಭ್ಯಗಳಾದ ಡಿಸಿ ಆರ್ ಜಿ, ಕಮ್ಯುಟೇಶನ್, ಹಾಗೂ ಗಳಿಕೆ ರಜೆ ನಗದಿಕರಣ ಸೌಲಭ್ಯಗಳ ಲೆಕ್ಕಾಚಾರದ ವ್ಯತ್ಯಾಸದ ಮೊತ್ತ ಕೊಡಬೇಕೆಂದು ಒತ್ತಾಯಿಸಿದರು.
ಇನ್ನು 10 ದಿನದ ಒಳಗಾಗಿ ಮಾನ್ಯ ಮುಖ್ಯಮಂತ್ರಿ ಅವರು ನಿವೃತ್ತ ನೌಕರರನ್ನು ಕರೆದು ಚರ್ಚಿಸದಿದ್ದರೆ, ಫೆಬ್ರವರಿ 18 ರಂದು ಮಾಜಿ ಲೋಕಾಯುಕ್ತರಾದ ಸಂತೋಷ ಹೆಗ್ಗಡೆ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳೊದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಪಿಎಸ್ಐ ರಂಗಪ್ಪ,
ನಿವೃತ್ತ ಶಿಕ್ಷಕರಾದ ಸುಬ್ಬರಾಯಪ್ಪ,
ಹನು ಮಂತರಾಯಪ್ಪ, ಪೋಮ್ಯ ನಾಯ್ಕ್ ವೆಂಕಟರಾಮರೆಡ್ಡಿ ಶಿವಲಿಂಗಪ್ಪ ರಾಮಚಂದ್ರಪ್ಪ ಸಿದ್ದಪ್ಪ ಇನ್ನು ಮುಂತಾದರು ಉಪಸ್ಥಿತರಿದ್ದರು.