IMG 20250711 WA0004

ಪಾವಗಡ : ಸಬ್ ರಿಜಿಸ್ಟಾರ್ ರಾಧಮ್ಮ ಎತ್ತಂಗಡಿ….!

DISTRICT NEWS ತುಮಕೂರು

ಉಪನೋಂದಣಾಧಿಕಾರಿಗಳ ವಿರುದ್ಧ ತಾಲ್ಲೂಕು ರೈತ ಸಂಘದ ವತಿಯಿಂದ ಪ್ರತಿಭಟನೆ.

ಪಾವಗಡ:ತಾಲ್ಲೂಕು ಉಪನೋಂದಣಾಧಿಕಾರಿಯ ಕಾರ್ಯವೈಖರಿಯನ್ನು ಖಂಡಿಸಿ ತಾಲೂಕು ರೈತ ಸಂಘದ ನೇತೃತ್ವದಲ್ಲಿ ಗುರುವಾರ
ಉಪನೋಂದಣಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ಉದ್ದೇಶಿಸಿ ತಾಲೂಕು ರೈತ ಸಂಘದ ಅಧ್ಯಕ್ಷ ಜಿ ನರಸಿಂಹ ರೆಡ್ಡಿ ಮಾತನಾಡಿ.

ತಾಲ್ಲೂಕು ಉಪನೋಂದಣಾಧಿಕಾರಿಗಳು ಬರೀ ಹಣವಂತರ ಪರವಾಗಿ ಕೆಲಸವನ್ನು ಮಾಡುತ್ತಾರೆ, ವಿನ:ಹ ಸಾರ್ವಜನಿಕರ ಪರವಾಗಿ ಕೆಲಸ ಮಾಡುವುದಿಲ್ಲ ಎಂದು ಆರೋಪಿಸಿದರು.

ಸಾರ್ವಜನಿಕರು ಕೆಲಸದ ನಿಮಿತ್ತ ಇಲಾಖೆಗೆ ಭೇಟಿ ನೀಡಿದಾಗ ಇಲ್ಲಸಲ್ಲದ ಕಾನೂನುಗಳನ್ನು ಹೇಳಿ ಕೆಲಸ ಮಾಡಿಕೊಡದೆ ಸತಾಯಿಸುತ್ತಾರೆ ಎಂದು ಆರೋಪಿಸಿದರು.
ಕಾನೂನು ರೀತ್ಯಾ ನೊಂದಣಿ ಹಣವನ್ನು ಕಟ್ಟಿದರೂ ಸಹ ಕೆಲಸ ಮಾಡಿಕೊಡಲು ವಿಳಂಬ ಮಾಡುತ್ತಾರೆ, ಕಚೇರಿಯಲ್ಲಿ ದಲ್ಲಾಳಿಗಳದ್ದೇ ಕಾರುಬಾರು, ಲಂಚ ನೀಡದೆ ಯಾವ ಕೆಲಸವನ್ನು ಸಹ ಮಾಡುವುದಿಲ್ಲ ಎಂದು ಆರೋಪಿಸಿದರು

ಉಪ ನೊಂದನಾಧಿಕಾರಿ ಸಮಯಕ್ಕೆ ಸರಿಯಾಗಿ ಕಚೇರಿಗೆ ಬರದೇ ಸಾರ್ವಜನಿಕರು ಕಾದು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ ಎಂದರು.

ನೊಂದಣಿ ಕಚೇರಿಯನ್ನು ಅನಾಮಧೇಯ ವ್ಯಕ್ತಿಗಳು ಬಾಗಿಲು ತೆಗೆಯುತ್ತಾರೆಂದು, ದಾಖಲೆ ಕೊಠಡಿಯು ಖಾಸಗಿ ವ್ಯಕ್ತಿಗಳ ಆಧೀನದಲ್ಲಿರುತ್ತದೆ ಎಂದರು. ಯಾವುದೇ ಅಡ್ಡಿಯಿಲ್ಲದೇ ಹಗಲು-ರಾತ್ರಿ 24 ಗಂಟೆ ಬಾಗಿಲು ತೆಗೆದು ಸೋಲಾರ್ ಕಂಪನಿಗಳಿಗೆ ದಾಖಲೆಗಳನ್ನು ನೀಡಿ ಹಣಗಳಿಸುತ್ತಿದ್ದಾರೆ ಎಂದು ಆರೋಪಿಸಿದರು.

ತಕ್ಷಣ ಇಂತಹ ಅಧಿಕಾರಿಯನ್ನು ತಾಲೂಕಿನಿಂದ ವರ್ಗಾವಣೆ ಮಾಡಬೇಕೆಂದು ಜಿಲ್ಲಾ ಉಪನೋಂದಣಾಧಿಕಾರಿಯಾದ ಬಿ. ಶ್ರೀಕಾಂತ್ ರವರಿಗೆ ಪಾವಗಡ ತಾಲೂಕು ರೈತ ಸಂಘದ ಅಧ್ಯಕ್ಷ ನರಸಿಂಹ ರೆಡ್ಡಿ. ಜಿ ಮನವಿ ಪತ್ರ ಸಲ್ಲಿಸಿದರು.

IMG 20250711 WA0003

ನಂತರ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ ಜಿಲ್ಲಾ ಉಪನೋಂದಣಾಧಿಕಾರಿಯಾದ ಬಿ. ಶ್ರೀಕಾಂತ್ ಮಾತನಾಡಿ,

ತಾಲ್ಲೂಕು ಉಪನೋಂದಣಾಧಿಕಾರಿಯಾದ ರಾಧಮ್ಮ ನವರನ್ನು ಬೇರೆ ಕಡೆಗೆ ವರ್ಗಾಯಿಸಬೇಕೆಂದು ತಾಲ್ಲೂಕು ರೈತ ಸಂಘದ ವತಿಯಿಂದ ಪ್ರತಿಭಟನೆ ಮಾಡುತ್ತಿರುವ ವಿಷಯವನ್ನು ತಿಳಿದು ಬಂದಿರುವುದಾಗಿ ತಿಳಿಸಿ, ರಾಧಮ್ಮನವರ ಸ್ಥಾನಕ್ಕೆ ತುಮಕೂರು ಜಿಲ್ಲಾ ಉಪನೋಂದಣಾಧಿಕಾರಿ ಕಚೇರಿಯ ದ್ವಿ.ದ.ಸ ಮಹಿಮೆರಂಗಸ್ವಾಮಿಯನ್ನು ಪಾವಗಡ ತಾಲ್ಲೂಕು ಪ್ರಭಾರಿ ಉಪನೋಂದಣಾಧಿಕಾರಿಯನ್ನಾಗಿ ನೇಮಿಸಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ವರದರಾಜು, ಸಿ ಐ ಗಿರೀಶ್,
ಪಾವಗಡ ತಾಲೂಕು ರೈತ ಸಂಘದ ಉಪಾಧ್ಯಕ್ಷ ಬಡನ್ನ, ಕಾರ್ಯದರ್ಶಿ ಕೊಂಡನ, ಸಹ ಕಾರ್ಯದರ್ಶಿ ವೇಣುಗೋಪಾಲ್, ಸದಸ್ಯರಾದ ವೀರಕ್ಯಾತಪ್ಪ, ಅಂಜಿನಪ್ಪ, ಶ್ರೀನಿವಾಸ್ ರೆಡ್ಡಿ,ನಾಗರಾಜು ಹನುಮಂತರೆಡ್ಡಿ ವೀರ ಹನುಮಪ್ಪ, ತಿಮ್ಮಯ್ಯ, ಗೋವಿಂದಪ್ಪ, ಮಧು,ಮೂಡಲಗಿರಿಯಪ್ಪ, ಸುಬ್ಬಣ್ಣ, ನರಸಿಂಹ, ಮಾಜಿ ಪುರಸಭಾ ಸದಸ್ಯ ಮನು ಮಹೇಶ್
ಮುಂತಾದವರು ಹಾಜರಿದ್ದರು.

ವರದಿ :ಶ್ರೀನಿವಾಸಲು ಎ