ಮಧುಮೇಹ ರೋಗಿಗಳಲ್ಲಿ ಪಾದಗಳನ್ನು ಕತ್ತರಿಸುವುದನ್ನು ತಡೆಯಲು ಹೋಮಿಯೋಪತಿ ನೆರವು: ಡಾ. ಕಲ್ಯಾಣ್ ಬ್ಯಾನರ್ಜಿ ಅವರ ಕ್ಲಿನಿಕ್
• ಬೆಂಗಳೂರಿನಲ್ಲಿ ಕೇಂದ್ರವನ್ನು ಹೊಂದಿರುವ ಈ ಕ್ಲಿನಿಕ್, ಪ್ರತಿ ತಿಂಗಳು 5,500 ಕ್ಕೂ ಹೆಚ್ಚು ಮಧುಮೇಹ-ಸಂಬಂಧಿತ ಪ್ರಕರಣಗಳನ್ನು ನಿರ್ವಹಿಸುತ್ತದೆ, ಈ ಪೈಕಿ 30% ರೋಗವು ಉಲ್ಬಣಿಸಿದ ಹಂತಗಳಲ್ಲಿರುತ್ತವೆ
• ನಾಲ್ಕು ದಶಕಗಳ ರೋಗಿಗಳ ಡೇಟಾವು ತಡೆಗಟ್ಟುವ ಮತ್ತು ಗುಣಪಡಿಸುವ ಆರೈಕೆಯಲ್ಲಿ ಹೋಮಿಯೋಪತಿ ಎಷ್ಟೊಂದು ಪರಿಣಾಮಕಾರಿ ಎಂಬ ಪುರಾವೆಗಳನ್ನು ಪ್ರದರ್ಶಿಸುತ್ತದೆ
ಬೆಂಗಳೂರು / ನವೆಂಬರ್ 11, 2025 ವಿಶ್ವ ಮಧುಮೇಹ ದಿನ ಸಮೀಪಿಸುತ್ತಿದ್ದು, ಈಗ ನಡೆದಿರುವ ಮಹತ್ವದ ಸಂಶೋಧನೆಯಲ್ಲಿ, ಬೆಂಗಳೂರಿನಲ್ಲಿರುವ ಭಾರತದ ಪ್ರಮುಖ ಹೋಮಿಯೋಪತಿ ಆರೋಗ್ಯ ಕೇಂದ್ರಗಳಲ್ಲಿ ಒಂದಾಗಿರುವ ಡಾ. ಕಲ್ಯಾಣ್ ಬ್ಯಾನರ್ಜಿ ಅವರ ಕ್ಲಿನಿಕ್ (Dr. Kalyan Banerjee’s Clinic), 35% ಮಧುಮೇಹ ರೋಗಿಗಳಲ್ಲಿ ಪಾದವನ್ನು ಕತ್ತರಿಸುವುದನ್ನು ತಪ್ಪಿಸಲು ಹೋಮಿಯೋಪತಿ ಚಿಕಿತ್ಸೆಯು ಸಹಾಯ ಮಾಡಿರುವುದನ್ನು ವರದಿ ಮಾಡಿದೆ.
ಬೆಂಗಳೂರು : 1977ರಲ್ಲಿ ಪದ್ಮಶ್ರೀ ಪುರಸ್ಕೃತ ಡಾ. ಕಲ್ಯಾಣ್ ಬ್ಯಾನರ್ಜಿ ಅವರು ಸ್ಥಾಪಿಸಿರುವ ಈ ಕ್ಲಿನಿಕ್, ಪ್ರತಿ ತಿಂಗಳು 5,500 ಕ್ಕೂ ಹೆಚ್ಚು ಮಧುಮೇಹ ಮತ್ತು ಮಧುಮೇಹ-ಸಂಬಂಧಿತ ಕಾಯಿಲೆಗಳಿರುವ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದೆ, ಈ ಪೈಕಿ ಸುಮಾರು 30% ಪ್ರಕರಣಗಳಲ್ಲಿ ರೋಗವು ಉಲ್ಬಣಿಸಿದ ಹಂತದಲ್ಲಿರುತ್ತದೆ — ಇನ್ಸುಲಿನ್ ಪ್ರತಿರೋಧ ಅಥವಾ ಮಧುಮೇಹದಿಂದಾದ ನೆಫ್ರೋಪತಿ, ರೆಟಿನೋಪತಿ, ನರರೋಗ ಮತ್ತು ಗ್ಯಾಂಗ್ರೀನ್ ಮುಂತಾದ ದೀರ್ಘಕಾಲೀನ ತೊಡಕುಗಳಿಂದ ಬಳಲುತ್ತಿರುವ ರೋಗಿಗಳೂ ಸೇರಿದ್ದಾರೆ.
“45 ವರ್ಷಗಳಲ್ಲಿ ಸಂಗ್ರಹಿಸಿದ ನಮ್ಮ ವೈದ್ಯಕೀಯ ಡೇಟಾವು ಮಧುಮೇಹ ಮತ್ತು ಅದರ ತೊಡಕುಗಳನ್ನು ತಡೆಗಟ್ಟುವಲ್ಲಿ ಮತ್ತು ನಿರ್ವಹಿಸುವಲ್ಲಿ ಹೋಮಿಯೋಪತಿಯ ಪರಿಣಾಮಕಾರಿತ್ವಕ್ಕೆ ಸ್ಪಷ್ಟವಾದ ಪುರಾವೆಗಳನ್ನು ಪ್ರದರ್ಶಿಸುತ್ತದೆ” ಎಂದು ಎರಡನೇ ತಲೆಮಾರಿನ ಹೋಮಿಯೋಪತಿ ವೈದ್ಯರು ಮತ್ತು ಡಾ. ಕಲ್ಯಾಣ್ ಬ್ಯಾನರ್ಜಿ ಕ್ಲಿನಿಕ್‌ನ ಹಿರಿಯ ಸಲಹೆಗಾರ ಡಾ. ಕುಶಲ್ ಬ್ಯಾನರ್ಜಿ ಹೇಳಿದರು. “ನಮ್ಮ ಆರೈಕೆಯಲ್ಲಿರುವ ಸುಮಾರು 65% ಮಧುಮೇಹ ಪೂರ್ವ ರೋಗಿಗಳು ಹೋಮಿಯೋಪತಿ ಚಿಕತ್ಸೆ, ಆಹಾರ ಮತ್ತು ಜೀವನಶೈಲಿಯ ಬದಲಾವಣೆಗಳ ಮೂಲಕ ಮಧುಮೇಹವು ಉಲ್ಬಣಿಸುವುದನ್ನು ತಡೆಯಲು ಸಮರ್ಥರಾಗಿದ್ದಾರೆ. ಮೂತ್ರಪಿಂಡವು ದೀರ್ಘಕಾಲದಿಂದ ಸಾಮಾನ್ಯವಾಗಿ ಕೆಲಸ ಮಾಡದ ವ್ಯಕ್ತಿಗಳಲ್ಲಿ, 55% ರಷ್ಟು ಜನರ ವೈದ್ಯಕೀಯ ವರದಿಗಳಲ್ಲಿ ಸುಧಾರಣೆ ಕಂಡುಬಂದಿದೆ, ಹಾಗೆಯೇ 60% ರಷ್ಟು ಜನರು ಮಧುಮೇಹ ನರರೋಗ (ಡಯಾಬಿಟಿಕ್ ನ್ಯೂರೋಪತಿ) ರೋಗಲಕ್ಷಣಗಳಲ್ಲಿ ಪರಿಹಾರವನ್ನು ಅನುಭವಿಸಿದ್ದಾರೆ. ಡಯಾಬಿಟಿಕ್ ರೆಟಿನೋಪತಿಯು ಉಲ್ಬಣಿಸಿರುವ ಪ್ರಕರಣಗಳಲ್ಲಿ, ದೃಷ್ಟಿ ಕ್ಷೀಣವಾಗುವುದು ಸ್ಥಗಿತಗೊಳ್ಳುತ್ತದೆ ಮತ್ತು ಸಾಂಪ್ರದಾಯಿಕ ಔಷಧಿಗಳ ಮೇಲಿನ ಅವಲಂಬನೆಯೂ ಕಡಿಮೆಯಾಗಿರುವುದನ್ನು ನಾವು ಗಮನಿಸಿದ್ದೇವೆ” ಎಂದು ಅವರು ಹೇಳಿದರು.
ಸಾಂಪ್ರದಾಯಿಕ ಔಷಧಿಗಳು ಅಥವಾ ಇನ್ಸುಲಿನ್‌ಗೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸಿದ ರೋಗಿಗಳು ಹೋಮಿಯೋಪತಿ ಚಿಕಿತ್ಸೆಯೇ ತಮಗೆ ಸೂಕ್ತವೆಂದು ಪರಿಗಣಿಸುತ್ತಿದ್ದಾರೆ. “ಅಂತಹ ಪ್ರಕರಣಗಳಲ್ಲಿ, ಹೋಮಿಯೋಪತಿ ಔಷಧಿಗಳನ್ನು ಸೇರಿಸಿದಾಗ ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ಸಾಮಾನ್ಯವಾಗಿ ಕಡಿಮೆಯಾಗುವುದನ್ನು ನಾವು ಗಮನಿಸಿದ್ದೇವೆ” ಎಂದು ಡಾ. ಬ್ಯಾನರ್ಜಿ ವಿವರಿಸಿದರು. “ಅಷ್ಟೇ ಮುಖ್ಯವಾಗಿ, ಅಧಿಕ ಅಪಾಯವಿರುವ ಅಥವಾ ಮಧುಮೇಹ ಪೂರ್ವ ರೋಗಿಗಳನ್ನು ಮೊದಲೇ ಗುರುತಿಸಿ ಚಿಕಿತ್ಸೆ ನೀಡುವ ಮೂಲಕ ತಡೆಗಟ್ಟುವ ಪಾತ್ರವನ್ನು ಹೋಮಿಯೋಪತಿಯು ವಹಿಸುತ್ತದೆ. ಇದರೊಂದಿಗೆ, ಆಹಾರ, ವ್ಯಾಯಾಮ ಮತ್ತು ಜೀವನಶೈಲಿ ನಿರ್ವಹಣೆಯ ಕುರಿತು ಸಮಗ್ರ ಮಾರ್ಗದರ್ಶನವನ್ನೂ ನೀಡುತ್ತದೆ” ಎಂದರು.
ಕುಶಲ್ ಬ್ಯಾನರ್ಜಿ ಅವರ ಪ್ರಕಾರ, ಔಷಧಿಗಳ ಪ್ರತಿಕೂಲ ಪರಿಣಾಮಗಳ ಅಪಾಯವಿಲ್ಲದೆ ಹೋಮಿಯೋಪತಿಯು ಸಾಂಪ್ರದಾಯಿಕ ಚಿಕಿತ್ಸೆಗೆ ಸುರಕ್ಷಿತವಾಗಿ ಪೂರಕವಾಗಬಹುದು. “ರೋಗಿಗಳು ಹೋಮಿಯೋಪತಿ ಜೊತೆಗೆ ತಮ್ಮ ನಿಗದಿತ ಅಲೋಪತಿ ಔಷಧಿಗಳನ್ನು ಮುಂದುವರಿಸಬಹುದು. ಸಕ್ಕರೆಯ ರೀಡಿಂಗ್‌ಗಳು ಸುಧಾರಿಸಿದಂತೆ, ಮಧುಮೇಹಶಾಸ್ತ್ರಜ್ಞರ ಮೇಲ್ವಿಚಾರಣೆಯಲ್ಲಿ ಸಾಂಪ್ರದಾಯಿಕ ಔಷಧಿಗಳ ಸೇವನೆಯನ್ನು ಕ್ರಮೇಣ ಕಡಿಮೆ ಮಾಡಬಹುದು” ಎಂದು ಅವರು ಹೇಳಿದರು. “ಆರಂಭಿಕ ಹಂತಗಳಲ್ಲಿ, ಕಟ್ಟುನಿಟ್ಟಾದ ಜೀವನಶೈಲಿ ನಿರ್ವಹಣೆಯೊಂದಿಗೆ, ಅನೇಕ ರೋಗಿಗಳು ಜೀವಿತಾವಧಿಯ ಉದ್ದಕ್ಕೂ ಎಲ್ಲ ಔಷಧಿಗಳನ್ನು ನಿಲ್ಲಿಸಬಹುದು” ಎಂದರು.
ಭರವಸೆ ಮೂಡಿಸುವ ಮತ್ತು ಗುಣಪಡಿಸುವ ಒಂದು ಪ್ರಕರಣ
ಮಧುಮೇಹದಿಂದಾದ ಗ್ಯಾಂಗ್ರೀನ್ ಕಾರಣದಿಂದ ಅಂಗಚ್ಛೇದನದ ಅಪಾಯವನ್ನು ಎದುರಿಸುತ್ತಿದ್ದ 45 ವರ್ಷ ವಯಸ್ಸಿನ ತರಕಾರಿ ವ್ಯಾಪಾರಿಯೊಬ್ಬರು ಕೊನೆಯ ಉಪಾಯವಾಗಿ ಕ್ಲಿನಿಕ್ ಅನ್ನು ಸಂಪರ್ಕಿಸಿದರು. “ಅವರ ಪಾದದ ಬಹುತೇಕ ಭಾಗವನ್ನು ಕತ್ತರಿಸಲು ಅವರಿಗೆ ಸಲಹೆ ನೀಡಲಾಗಿತ್ತು, ಹೀಗೆ ಮಾಡಿದಲ್ಲಿ ಅವರ ಜೀವನೋಪಾಯದ ದುಡಿಮೆಯೇ ಕೊನೆಗೊಳ್ಳುವ ಅಪಾಯವಿತ್ತು” ಎಂದು ಬ್ಯಾನರ್ಜಿ ಹೇಳಿದರು. “ಹೋಮಿಯೋಪತಿ ಚಿಕಿತ್ಸೆ, ಕಟ್ಟುನಿಟ್ಟಾದ ಆಹಾರ ನಿಯಂತ್ರಣ ಮತ್ತು ನೈರ್ಮಲ್ಯದೊಂದಿಗೆ, ಗ್ಯಾಂಗ್ರೀನ್ ಕ್ರಮೇಣ ಗುಣಮುಖವಾಯಿತು. ಅವರ ಪಾದದಲ್ಲಿ ಚರ್ಮವು ಕಪ್ಪಾಗಿರುವ ಗುರುತೊಂದನ್ನು ಹೊರತುಪಡಿಸಿ ಕಾಯಿಲೆಯು ಸಂಪೂರ್ಣವಾಗಿ ವಾಸಿಯಾಯಿತು. ಇಂತಹ ಪ್ರಕರಣಗಳು ಆರೋಗ್ಯ ಮತ್ತು ಘನತೆ ಎರಡನ್ನೂ ಪುನಃಸ್ಥಾಪಿಸುವ ಹೋಮಿಯೋಪತಿಯ ಸಾಮರ್ಥ್ಯವನ್ನು ನಮಗೆ ನೆನಪಿಸುತ್ತವೆ” ಎಂದು ಡಾ. ಬ್ಯಾನರ್ಜಿ ಸಂತೃಪ್ತಿ ವ್ಯಕ್ತಪಡಿಸಿದರು.
ಇದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಇತರ ಪರಿಣತ ವೈದ್ಯರ ದೊಡ್ಡ ತಂಡವೊಂದು ಈ ಸಂಶೋಧನೆಯನ್ನು ಪರಿಶೀಲಿಸಿದ್ದು, ಮಧುಮೇಹಿಗಳಲ್ಲಿ ಹೋಮಿಯೋಪತಿಯು ಜಾಗತಿಕವಾಗಿ ಹೆಚ್ಚು ಸ್ವೀಕಾರಾರ್ಹವಾಗುತ್ತಿರುವುದನ್ನು ಬೆಂಬಲಿಸಿದೆ, ಈ ಬಹುವ್ಯವಸ್ಥೆಯ ಕಾಯಿಲೆಯನ್ನು ನಿರ್ವಹಿಸುವಲ್ಲಿ ಅದರ ಸಮಗ್ರ, ಪುರಾವೆ ಆಧಾರಿತ ಸಾಮರ್ಥ್ಯವನ್ನು ಸೂಚಿಸುತ್ತದೆ.
