IMG 20251224 WA0018

ಪಾವಗಡ : ಮಾನವ ಹಕ್ಕುಗಳ ಬಗ್ಗೆ ತಿಳುವಳಿಕೆ ಅಗತ್ಯ…

DISTRICT NEWS ತುಮಕೂರು

ಮಾನವ ಹಕ್ಕುಗಳ ಬಗ್ಗೆ ತಿಳುವಳಿಕೆ ಅಗತ್ಯ.ಹಿರಿಯ ಸಿವಿಲ್ ನ್ಯಾಯಾಧೀಶ ವಿ ಮಾದೇಶ್.

ಪಾವಗಡ: ಸಂವಿಧಾನವು ನಾಗರಿಕರಿಗೆ ಹಕ್ಕುಗಳನ್ನು ನೀಡುವುದರ ಜೊತೆಗೆ ಕರ್ತವ್ಯಗಳನ್ನೂ ಕೊಟ್ಟಿದೆ. ಹೀಗಾಗಿ ಪ್ರತಿಯೊಬ್ಬ ನಾಗರಿಕರು ತಮ್ಮ ಜವಾಬ್ದಾರಿ ಅರಿತು ನಡೆಯಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ವಿ ಮಾದೇಶ್ ತಿಳಿಸಿದರು.

ಪಟ್ಟಣದ ಕುರುಬರಹಳ್ಳಿ ಗೇಟ್ ಬಳಿ ಇರುವ ಸರ್ಕಾರಿ ಮಹಿಳಾ ವಿದ್ಯಾರ್ಥಿಗಳ ವಸತಿ ನಿಲಯದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ,
ವಕೀಲರ ಸಂಘ , ಹಾಗೂ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಂಯುಕ್ತಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಹಾಗೂ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಮತ್ತು ನ್ಯಾಯ ಜಾಗೃತಿ ಅಭಿಯಾನ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮೂಲಭೂತ ಹಕ್ಕುಗಳ ಬಗ್ಗೆ ಅರಿವು ಮತ್ತು ಚಾಲನೆ ಅಗತ್ಯವೆಂದು.
ಹಕ್ಕುಗಳನ್ನು ಚಾಲನೆ ಮಾಡುವಾಗ ಇನ್ನೊಬ್ಬರ ಹಕ್ಕುಗಳಿಗೆ ಚ್ಯುತಿ ಬಾರದಂತೆ ನೋಡಿಕೊಳ್ಳುವುದು ಅತಿ ಮುಖ್ಯವೆಂದರು.
ಹಕ್ಕುಗಳಿಗೆ ಚ್ಯುತಿ ಬಂದರೆ ಮಾನವ ಹಕ್ಕುಗಳ ಉಲ್ಲಂಘನೆ ಯಾದಂತೆ ಎಂದರು.

ಗ್ರಾಹಕರಿಗೆ ಮೋಸ ಆಗದಂತೆ ನೋಡಿಕೊಳ್ಳಲು ಗ್ರಾಹಕರ ಹಕ್ಕು ರೂಪಿಸಲಾಗಿದೆ. ಮಳಿಗೆಗಳಲ್ಲಿ ವ್ಯವಹರಿಸುವಾಗ ಸಾರ್ವಜನಿಕರು ಎಚ್ಚರವಹಿಸಬೇಕು, ಕಡ್ಡಾಯವಾಗಿ ಬಿಲ್‌ ಪಡೆಯಬೇಕು, ತಾವು ಖರೀದಿಸಿರುವ ವಸ್ತುಗಳಲ್ಲಿ ಮೋಸವಾದಾಗ ಅದನ್ನು ಪ್ರಶ್ನಿಸಬೇಕು, ಭಯಪಡದೆ ಗ್ರಾಹಕರ ನ್ಯಾಯಾಲಯಕ್ಕೆ ಹೋಗಿ ದೂರು ಕೊಡಬೇಕು. ಆಗ ಮಾತ್ರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯ ಎಂದರು.IMG 20251224 WA0019

ಕಾರ್ಯಕ್ರಮ ಉದ್ದೇಶಿಸಿ ಅಧಿಕ ಸಿವಿಲ್ ನ್ಯಾಯಾಧೀಶೆ ಸಿ.ಎನ್ ಮುನಿರತ್ನಮ್ಮ ಮಾತನಾಡಿ.

ಎಲ್ಲರಿಗೂ ಕಾನೂನು ಅರಿವು ಅತಿ ಮುಖ್ಯವೆಂದು.
ಕಾನೂನಿನ ಬಗ್ಗೆ ಸೂಕ್ತ ಅರಿವಿದ್ದರೆ ನಾವು ಸಮಸ್ಯೆಗಳಿಂದ ಪಾರಾಗಬಹುದು ಎಂದರು.ಯಾವುದೇ ಒಂದು ತಪ್ಪು ಮಾಡುವ ಮುಂಚೆ ಕಾನೂನಿನ ಬಗ್ಗೆ ಅರಿವಿದ್ದರೆ ಅಂತಹ ತಪ್ಪುಗಳು ಮರುಕಳಿಸುವುದಂತೆ ನೋಡಿಕೊಳ್ಳಬಹುದು ಎಂದರು.

ಹೆಣ್ಣು ಮಕ್ಕಳ ಜಾಗೃತಿ ಗಾಗಿ ವಿಶೇಷ ಕಾನೂನುಗಳನ್ನು ರೂಪಿಸಲಾಯಿತು ಹೆಣ್ಣು ಮಕ್ಕಳು ಅಪರಿಚಿತ ವ್ಯಕ್ತಿಗಳೊಂದಿಗೆ ದೂರ ಕಾಯ್ದುಕೊಳ್ಳುವುದು ಉತ್ತಮವೆಂದರು.

ಕಾರ್ಯಕ್ರಮದಲ್ಲಿ ತಾಲೂಕು ವಕೀಲ ಸಂಘದ ಅಧ್ಯಕ್ಷ ರಂಗನಾಥಪ್ಪ, ಕಾರ್ಯದರ್ಶಿ ಚಂದ್ರಪ್ಪ, ಸಹಾಯಕ ಸರ್ಕಾರಿ ಅಭಿಯೋಜಕರಾದ ಸಣ್ಣೀರಪ್ಪ, ರಮೇಶ್ ಬಾಬು,ಸರ್ಕಾರಿ ಮಹಿಳಾ ಪದವಿ ಕಾಲೇಜಿನ ನಿಕಟಪೂರ್ವ ಪ್ರಾಂಶುಪಾಲ ಮಾರಪ್ಪ, ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಕುಮಾರ್, ವಕೀಲರಾದ ಜಯಸಿಂಹ ಕೆ. ಆರ್, ಪೆದ್ದಯ್ಯ, ಮಂಜುನಾಥ್ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

ವರದಿ : ಶ್ರೀನಿವಾಸಲು ಎ