IMG 20260107 WA0074 scaled

ಪಾವಗಡ : ಪ್ರಾರ್ಥಮಿಕ ಶಾಲಾ ಶಿಕ್ಷಣಕ್ಕೆ ಹೆಚ್ಚು ಒತ್ತನ್ನು ನೀಡಬೇಕು…!

DISTRICT NEWS ತುಮಕೂರು

ಪ್ರಾರ್ಥಮಿಕ ಶಾಲಾ ಶಿಕ್ಷಣಕ್ಕೆ ಹೆಚ್ಚು ಒತ್ತನ್ನು ನೀಡಬೇಕು.ಉಪ ನಿರ್ದೇಶಕ ವಿ. ಮಾಧವರಡ್ಡಿ.

ಪಾವಗಡ: ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯನ್ನು ಹೆಚ್ಚಿಸಲು ಅನುಷ್ಠಾನಾಧಿಕಾರಿಗಳು ಕಾಲ ಕಾಲಕ್ಕೆ ಶಾಲೆಗಳಿಗೆ ಭೇಟಿ ನೀಡಬೇಕೆಂದು. ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕ ವಿ. ಮಾಧವರಡ್ಡಿ ತಿಳಿಸಿದರು.

ತಾಲ್ಲೂಕಿನ ದೊಡ್ಡಹಳ್ಳಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಜಿಲ್ಲಾ ಮಟ್ಟದ ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಭೇಟಿ ನೀಡುವ ಅಧಿಕಾರಿಗಳು ಮಕ್ಕಳ ಶೈಕ್ಷಣಿಕ ಪ್ರಗತಿ ಬಗ್ಗೆ ತಿಳಿದು ಅಗತ್ಯ ಸಲಹೆಗಳನ್ನು ನೀಡಿ ಮಕ್ಕಳು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಕ್ರಮ ಕೈಗೊಳ್ಳಬೇಕು ಎಂದರು.

ಪ್ರಾಥಮಿಕ ಶಿಕ್ಷಣದ ಪ್ರಗತಿಗೆ ಎಲ್ಲರು ಹೆಚ್ಚು ಒತ್ತು ಕೊಡುವಂತೆ ಸೂಚಿಸಿ, ಶಿಕ್ಷಕ ಮತ್ತು ಪೋಷಕರ ಸಭೆಗಳನ್ನು ಹೆಚ್ಚಿನ ರೀತಿಯಲ್ಲಿ ಹಮ್ಮಿಕೊಂಡು ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಚರ್ಚಿಸಬೇಕೆಂದರು.

ಪಾವಗಡ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ರೇಣುಕಮ್ಮ ಮಾತನಾಡಿ.

ತಾಲೂಕಿನ ಶೈಕ್ಷಣಿಕ ಪ್ರಗತಿಯನ್ನು ಹೆಚ್ಚಿಸುವಲ್ಲಿ ನಾವೆಲ್ಲರೂ ಸಹ ಮಾನ್ಯ ಉಪ ನಿರ್ದೇಶಕರ ಹಾಗೂ ಇಲಾಖೆಯ ಮೇಲಧಿಕಾರಿಗಳ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದೇವೆ, ಉತ್ತಮ ಫಲಿತಾಂಶವನ್ನು ನೀಡುತ್ತೇವೆ ಎಂದು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ವಿವರಿಸಿದರು.

ಈ ಸಂದರ್ಭದಲ್ಲಿ ಮಧುಗಿರಿ ಡಯಟ್ ಪ್ರಾಂಶುಪಾಲ ಗಂಗಾಧರ್, ಈ ಓ ವೇದಮೂರ್ತಿ, ಡಿ ವೈ ಪಿ ಸಿ ನರಸಿಂಹಮೂರ್ತಿ, ಶಿರಾ ಬಿ ಇ ಒ ಕೃಷ್ಣಪ್ಪ, ಮಧುಗಿರಿ ಬಿ ಈ ಓ ಹನುಮಂತರಾಯಪ್ಪ, ಮದುಗಿರಿ ಬಿ ಆರ್ ಸಿ ಪವನ್ ಕುಮಾರ್ ರೆಡ್ಡಿ, ಎಡಿಎಂ ಶಂಕರಪ್ಪ, ಚಿತ್ತಯ್ಯ ಮಹೇಶ್ವರಿ, ಡಯಟ್ ಉಪನ್ಯಾಸಕರಾದ ಮಾರುತೇಶ್, ನವೀನ್ ಕುಮಾರ್ ಇ ಸಿ ಓಗಳಾದ ಖಾಜಾ ಹುಸೇನ್, ವೇಣುಗೋಪಾಲ್ ರೆಡ್ಡಿ, ಚಂದ್ರಶೇಖರ್ ಪ್ರಾಂಶುಪಾಲ ಸಂತೋಷ್ ಮುಂತಾದವರು ಹಾಜರಿದ್ದರು.

ವರದಿ : ಶ್ರೀನಿವಾಸಲು ಎ

Leave a Reply

Your email address will not be published. Required fields are marked *