IMG 20240723 WA0001

ಪಾವಗಡ: ತಾಲ್ಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ….!

DISTRICT NEWS ತುಮಕೂರು

ತಾಲ್ಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಮಾಜಿ ಶಾಸಕ ತಿಮ್ಮರಾಯಪ್ಪ.

ಪಾವಗಡ : ಕಾನೂನನ್ನು ಪಾಲಿಸಬೇಕಾದ ಪೊಲೀಸರೇ ಕಾನೂನನ್ನು ಉಲ್ಲಂಘಿಸುವುದು ಎಷ್ಟರಮಟ್ಟಿಗೆ ಸರಿ ಎಂದು ಮಾಜಿ ಶಾಸಕ ತಿಮ್ಮರಾಯಪ್ಪ ಪ್ರಶ್ನಿಸಿ
ತಾಲ್ಲೂಕಿನ ಪೊಲೀಸ್ ವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಎಸ್ ಎಸ್ ಕೆ ರಂಗಮಂದಿರದಲ್ಲಿ ತಾಲ್ಲೂಕು ಜೆಡಿಎಸ್ ಘಟಕದ ವತಿಯಿಂದ ಪೊಲೀಸರ ದೌರ್ಜನ್ಯದ ವಿರುದ್ಧವಾಗಿ ಹಮ್ಮಿಕೊಂಡಿದ್ದ ಪ್ರತಿಭಟನೆ ಉದ್ದೇಶಿಸಿ ಅವರು ಮಾತನಾಡಿದರು.

ಪಾವಗಡ ತಾಲೂಕಿನಲ್ಲಿ 4 ಪೊಲೀಸ್ ಠಾಣೆಗಳಿದ್ದು, ಪೊಲೀಸ್ ಇಲಾಖೆ ರಾಜಕೀಯ ಹಸ್ತಕ್ಷೇಪದಿಂದ ಜೆಡಿಎಸ್ ಕಾರ್ಯಕರ್ತರು ಮತ್ತು ಬೆಂಬಲಿಗರ ಮೇಲೆ ಇಲ್ಲಸಲ್ಲದ ಸುಳ್ಳು ಕೇಸ್ ದಾಖಲಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದರು.
ಜೆಡಿಎಸ್ ಪಕ್ಷದ ಕಾರ್ಯಕರ್ತರ, ಬೆಂಬಲಿಗರ ಮೇಲೆ ದೌರ್ಜನಗಳು ನಡೆದರೆ ಪೊಲೀಸರು ಯಾವುದೇ ದೂರನ್ನು ಸಹ ಪಡೆದುಕೊಳ್ಳುವುದಿಲ್ಲ,
ಆದರೆ ಜೆಡಿಎಸ್ ಪಕ್ಷದ ಕಾರ್ಯಕರ್ತ, ಬೆಂಬಲಿಗರ ವಿರುದ್ಧ ಸಣ್ಣ ದೂರು ನೀಡಿದರೂ ಅದನ್ನು ಗಂಭೀರವಾಗಿ ಪರಿಗಣಿಸಿ ಕೇಸ್ ದಾಖಲಿಸುತ್ತಾರೆ ಎಂದರು.

ಪೊಲೀಸ್ ವ್ಯವಸ್ಥೆ ತಾಲ್ಲೂಕಿನ ಆಡಳಿತ ಪಕ್ಷದ ಶಾಸಕರ ಶಿಫಾರಸಿನಂತೆ ನಡೆಯುತ್ತಿದೆ ಎಂದು ದೂರಿದರು.

ಸಣ್ಣ ವಿಷಯಕ್ಕೂ ಸಹ ಪೊಲೀಸರು 307 ಕೇಸ್ ಹಾಕುತ್ತಾರೆ, , ಪೊಲೀಸರು ಏಕಪಕ್ಷವಾಗಿ ನಡೆದುಕೊಳ್ಳುತ್ತಿದ್ದಾರೆ ಇದಕ್ಕೆ ಬೇಕಾದಷ್ಟು ಉದಾಹರಣೆಗಳು ಇವೆ ಎಂದರು.

ತಾಲ್ಲೂಕು ಜೆಡಿಎಸ್ ಘಟಕದ ವತಿಯಿಂದ ತುಮಕೂರು ಪೊಲೀಸ್ ವರಿಷ್ಠಾಧಿಕಾರಿಯಾದ ಅಶೋಕ್ ರವರಿಗೆ ಮನವಿ ಪತ್ರ ಸಲ್ಲಿಸಿದರು.

ಮನವಿ ಪತ್ರ ಸ್ವೀಕರಿಸಿದ ನಂತರ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯದ ಅಶೋಕ್ ಮಾತನಾಡಿ,

ಕಾನೂನು ಎಲ್ಲರಿಗೂ ಒಂದೇ, ಯಾವುದೇ ಪಕ್ಷ ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡಿದರೆ ಕೇಸ್ ದಾಖಲಿಸುತ್ತೇವೆ.
ಪಾವಗಡ ತಾಲ್ಲೂಕು ಆಂಧ್ರಪ್ರದೇಶದ ಗಡಿಯನ್ನು ಹಂಚಿಕೊಂಡಿದ್ದು ಯಾವುದೇ ಅಪರಾಧ ಚಟುವಟಿಕೆ, ಅಕ್ರಮ ಮಧ್ಯ ಮಾರಾಟ, ಜೂಜನ್ನು ಮಟ್ಟ ಹಾಕುವುದಕ್ಕೆ ಪೊಲೀಸ್ ಇಲಾಖೆ ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ ಎಂದರು.
ಸ್ಥಳೀಯ ಪೊಲೀಸ್ ಅಧಿಕಾರಿಗಳು ದೂರು ದಾಖಲಿಸಿಕೊಳ್ಳಲು ವಿಳಂಬ ಮಾಡಿದರೆ ತನ್ನ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ತಿಳಿಸಿ ಎಂದರು.
ಸಾರ್ವಜನಿಕರಾಗಲಿ ಅಥವಾ ಯಾವುದೇ ಪಕ್ಷದವರಾಗಿರಲಿ ತಮ್ಮ ಸಮಸ್ಯೆಗಳಿದ್ದಾಗ ನಿರ್ಭೀತಿಯಿಂದ ಠಾಣೆಗೆ ಬಂದು ದೂರು ಸಲ್ಲಿಸಬಹುದೆಂದರು.

ತಾಲೂಕಿನಲ್ಲಿ ಕಳ್ಳತನ ಜಾಸ್ತಿ ಆಗಿದೆ ಎಂದು, ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿ ಪೊಲೀಸ್ ಬೀಟ್ ಹೆಚ್ಚಿಸುವುದಾಗಿ ತಿಳಿಸಿದರು.
ತಾಲೂಕಿನಲ್ಲಿ ಜೂಜು, ಮಟ್ಕಾ ದೂರಪಡಿಸಲು ಸಾರ್ವಜನಿಕರು ಪೊಲೀಸರ ಜೊತೆ ಕೈಜೋಡಿಸಬೇಕು ಎಂದರು.

ಈ ಸಂದರ್ಭದಲ್ಲಿ ಜೆಡಿಎಸ್ ನ ಜಿಲ್ಲಾಧ್ಯಕ್ಷ ಆರ್ ಸಿ ಅಂಜಿನಪ್ಪ, ತಾಲ್ಲೂಕು ಅಧ್ಯಕ್ಷ ಎನ್ ಎ ಈರಣ್ಣ, ನಿಕಟ ಪೂರ್ವ ಅಧ್ಯಕ್ಷ ಬಲರಾಮ್ ರೆಡ್ಡಿ, ಮಹಾ ಪ್ರಧಾನ ಕಾರ್ಯದರ್ಶಿ ಸೊಗಡು ವೆಂಕಟೇಶ್, ಕಾರ್ಯಧ್ಯಕ್ಷ ಗೋವಿಂದ ಬಾಬು, ಯುವ ಘಟಕದ ಅಧ್ಯಕ್ಷ ಮಂಜುನಾಥ ಚೌದರಿ, ನಾಗಲಮಡಿಕೆ ಹೋಬಳಿ ಅಧ್ಯಕ್ಷ ರಾಜಗೋಪಾಲ್, ವೈನ್ ಹೊಸಕೋಟೆ ಹೋಬಳಿ ಅಧ್ಯಕ್ಷ ಸತ್ಯನಾರಾಯಣ, ನಿಡಗಲ್ ಹೋಬಳಿ ಅಧ್ಯಕ್ಷ ಹನುಮಂತರಾಯ, ಕಸಬಾ ಯುವ ಮುಖಂಡ ಭರತ್, ಪುರಸಭೆಯ ಮಾಜಿ ಸದಸ್ಯರಾದ ಮನು ಮಹೇಶ್, ಜಿಯೋ ವೆಂಕಟೇಶ್, ರಾಮಾಂಜಿ, ನಾಗೇಂದ್ರ,, ಮಣಿ, ನಾರಾಯಣಪ್ಪ ಇನ್ನು ಹಲವಾರು ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.

ವರದಿ. ಶ್ರೀನಿವಾಸಲು. A