ಅನಧಿಕೃತ ಶಾಲೆಯ ಮೇಲೆ ಕ್ಷೇತ್ರ ಶಿಕ್ಷಣಾಧಿಕಾರಿ ದಾಳಿ.
ಶಾಲೆ ಮುಚ್ಚುವಂತೆ ಆದೇಶ.
ಪಾವಗಡ : ಕರ್ನಾಟಕ ಶಿಕ್ಷಣ ಕಾಯಿದೆ 1983 ಸೆಕ್ಷನ್ 30 ಮತ್ತು 31 ಮತ್ತು ಕರ್ನಾಟಕ ಶಿಕ್ಷಣ ಸಂಸ್ಥೆಗಳ 2018 ಅನ್ವಯ ಯಾವುದೇ ಶಾಲೆಯು ಇಲಾಖೆಯಿಂದ ನೋಂದಣಿ, ಅನುಮತಿ ಪಡೆದು ನಂತರ ಶಾಲೆ ಪ್ರಾರಂಭಿಸಬೇಕು ಎಂಬ ನಿಯಮವಿದ್ದರೂ ಸಹ ಪಟ್ಟಣದ ಪರಿ ಏಂಜಲ್ಸ್ ಪೂರ್ವ ಪ್ರಾಥಮಿಕ ಶಾಲೆಯು ಶಿಕ್ಷಣ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ಶಾಲೆಯನ್ನು ಪ್ರಾರಂಭಿಸಿರುವುದು ಬೆಳಕಿಗೆ ಬಂದಿದೆ. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಇಂದಿರಾಣಮ್ಮ ತಿಳಿಸಿದ್ದಾರೆ.
2019-20 ನೇ ಸಾಲಿನಿಂದ ಪರಿ ಏಂಜಲ್ಸ್ ಪೂರ್ವ ಪ್ರಾಥಮಿಕ ಶಾಲೆಯು ಅನಧಿಕೃತವಾಗಿ ಶಾಲೆ ನಡೆಸುತ್ತಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಸುಮಾರು ಐದು ಬಾರಿ ನೋಟಿಸ್ ನೀಡಿ, ಇಲಾಖೆಯಿಂದ ಅನುಮತಿ ಪಡೆದುಕೊಳ್ಳುವಂತೆ ತಿಳಿಸಿದರು ಸಹ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಯಾವುದೇ ನೋಟಿಸಿಗೂ ಸಮಜಾಯಿಸಿ ನೀಡದೆ ರಾಜಾರೋಷವಾಗಿ ಶಾಲೆ ನಡೆಸುತ್ತಿದ್ದು.
ಈ ಸಂಬಂಧ ಮಂಗಳವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳತಂಡ,, ಕ್ಷೇತ್ರ ಸಂಪನ್ಮೂಲ ಸಮನ್ವಾರ್ಧಿಕಾರಿಗಳ ತಂಡ ಹಾಗೂ ಪೊಲೀಸ್ ಇಲಾಖೆಯ ವೃತ್ತ ನಿರೀಕ್ಷಕರ ತಂಡ ಪರಿ ಏಂಜಲ್ಸ್ ಪೂರ್ವ ಪ್ರಾಥಮಿಕ ಶಾಲೆ ಮೇಲೆ ದಾಳಿ ನಡೆಸಿ, ಬುಧವಾರದಿಂದ ಶಾಲೆಯನ್ನು ಮುಚ್ಚುವಂತೆ ಆದೇಶಿಸಲಾಗಿದೆ.
ಈ ಶಾಲೆಯಲ್ಲಿ ಪ್ರಿ ನರ್ಸರಿ, ನರ್ಸರಿ, ಎಲ್ ಕೆ ಜಿ ಮತ್ತು ಯುಕೆಜಿ ತರಗತಿಗಳನ್ನು ಅನಧಿಕೃತವಾಗಿ ನಡೆಸುತ್ತಿದ್ದು, ಶಾಲೆಯಲ್ಲಿರುವ 72 ವಿದ್ಯಾರ್ಥಿಗಳನ್ನು ಬೇರೆ ಶಾಲೆಗೆ ವರ್ಗಾಯಿಸಿ, ಯಾವ ಶಾಲೆಗೆ ಮಕ್ಕಳನ್ನು ದಾಖಲು ಮಾಡಿದ್ದಾರೆ ಎಂಬ ಮಾಹಿತಿಯನ್ನು ಎರಡು ದಿನಗಳ ಒಳಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಇಂದ್ರಾಣಿ ಸಂಸ್ಥೆಯ ಕಾರ್ಯದರ್ಶಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ
ಈ ಸಂದರ್ಭದಲ್ಲಿ ಬಿ ಆರ್ ಸಿ ವೆಂಕಟೇಶ್ ಮಾತನಾಡಿ, ಯಾವುದೇ ಶಾಲೆಯನ್ನು ಪ್ರಾರಂಭಿಸಬೇಕಾದರೆ ಇಲಾಖೆ ಅನುಮತಿ ಪಡೆಯುವುದು ಅತಿ ಮುಖ್ಯ.
ಒಂದು ಮನೆಯಲ್ಲಿ ಮೂರು ಕೋಣೆಗಳಲ್ಲಿ ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ನಡೆಸುತ್ತಿದ್ದು, ಮತ್ತೊಂದು ಕೋಣೆಯಲ್ಲಿ ಗ್ಯಾಸ್ ಸಿಲೆಂಡರ್ ಗಳು ಇವೆ. ಇಂತಹ ಸನ್ನಿವೇಶದಲ್ಲಿ ಮಕ್ಕಳ ರಕ್ಷಣೆಯ ಅತಿಮುಖ್ಯ. ಈ ರೀತಿಯಾಗಿ ಶಿಕ್ಷಣ ಸಂಸ್ಥೆ ಇದ್ದರೆ ಖಂಡಿತವಾಗಿಯೂ ಶಿಕ್ಷಣ ಇಲಾಖೆ ಅನುಮತಿ ನೀಡಲು ಬರುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ವೃತ್ತ ನಿರೀಕ್ಷಕರಾದ ಸುರೇಶ್, ಶ್ರೀಕಾಂತ್ ಮತ್ತು ಸಿಬ್ಬಂದಿ ಇ ಸಿ ಓ ಗಳಾ ದ ಶಿವಮೂರ್ತಿ ನಾಯ್ಕ್, ರಂಗನಾಥ್, ಚಂದ್ರಶೇಖರ್, ವೇಣುಗೋಪಾಲ ರೆಡ್ಡಿ, ಎಡಿಎಂಎಂ ಶಂಕರಪ್ಪ, ಇತರರು ಹಾಜರಿದ್ದರು.