* ವಾಸನ್ ಐ ಕೇರ್ – ಓಲಾ, ಊಬರ್ ಹಾಗೂ ರಾಪಿಡೋ ಚಾಲಕರಿ ಗೆ ಉಚಿತ ನೇತ್ರ ತಪಾಸಣೆ ಶಿಬಿರ…
* ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸದ ಅಂಗವಾಗಿ ಉಚಿತ ನೇತ್ರ ತಪಾಸಣಾ ಕಾರ್ಯಕ್ರಮ…
* 75ಕ್ಕೂ ಹೆಚ್ಚು ವಾಣಿಜ್ಯ ವಾಹನ ಚಾಲಕರು ಭಾಗಿ
ಬೆಂಗಳೂರು : ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸದ ಅಂಗವಾಗಿ, ವಾಸನ್ ಐ ಕೇರ್ ಆಸ್ಪತ್ರೆ, ಬೊಮ್ಮನಹಳ್ಳಿ ಶಾಖೆ ವತಿಯಿಂದ 23 ಜನವರಿ 2026 ರಂದು ವಿಶೇಷ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಈ ಉಪಕ್ರಮವನ್ನು ದಕ್ಷಿಣ ಭಾರತದ ಎಲ್ಲಾ ವಸನ್ ಐ ಕೇರ್ ಆಸ್ಪತ್ರೆಗಳಲ್ಲೂ ಅನುಷ್ಠಾನಗೊಳಿಸಲಾಗಿದ್ದು, ಕರ್ನಾಟಕದಲ್ಲಿ ಎಲ್ಲಾ 18 ಶಾಖೆಗಳು ಈ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿವೆ.
ಈ ಕಾರ್ಯಕ್ರಮದಲ್ಲಿ ಓಲಾ, ಊಬರ್ ಹಾಗೂ ರಾಪಿಡೋ ಚಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ರಸ್ತೆ ಸುರಕ್ಷತೆ ಕುರಿತ ಜಾಗೃತಿ ಸತ್ರದಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಇದರಿಂದ ಸುರಕ್ಷಿತ ಚಾಲನಾ ಅಭ್ಯಾಸಗಳ ಮೇಲಿನ ಅವರ ಬದ್ಧತೆ ಸ್ಪಷ್ಟವಾಗಿದೆ.
ವಸನ್ ಐ ಕೇರ್ ಆಸ್ಪತ್ರೆಯ ಡಾ. ವೀಣಾ ಪ್ರಭು, ಡಾ. ನಿಶಾಂತ್, ಡಾ. ವರ್ಷಾ ಹಾಗೂ ಡಾ. ಮಹಕ್ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದು, ಕಣ್ಣು ಆರೋಗ್ಯ ಜಾಗೃತಿ ಕುರಿತು ಮಹತ್ವದ ಮಾಹಿತಿ ನೀಡಿದರು. ವಿಶೇಷವಾಗಿ ವಾಣಿಜ್ಯ ವಾಹನ ಚಾಲಕರಿಗೆ ನಿಯಮಿತ ಕಣ್ಣು ತಪಾಸಣೆಯ ಅಗತ್ಯತೆ ಮತ್ತು ಉತ್ತಮ ದೃಷ್ಟಿ ರಸ್ತೆ ಸುರಕ್ಷತೆಯಲ್ಲಿ ವಹಿಸುವ ಪ್ರಮುಖ ಪಾತ್ರದ ಕುರಿತು ವಿವರಿಸಿದರು.
Watch video :
ಪತ್ರಿಕಾಗೋಷ್ಠಿಯ ನಂತರ, ಈ ಉಪಕ್ರಮದ ಭಾಗವಾಗಿ ಉಚಿತ ಕಣ್ಣು ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದ್ದು, ಇದರಿಂದ 75ಕ್ಕೂ ಹೆಚ್ಚು ವಾಣಿಜ್ಯ ವಾಹನ ಚಾಲಕರು ಈ ಕಾರ್ಯಕ್ರಮದ ಲಾಭ ಪಡೆದರು.
