ಆತ್ಮಹತ್ಯ ಮಾಡಿಕೊಳ್ಳಲು ಹೋದ ವ್ಯಕ್ತಿಯನ್ನು ರಕ್ಷಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ.
ಪಾವಗಡ: ತಾಲೂಕಿನ ಬಿಕೆ ಹಳ್ಳಿ ಗ್ರಾಮದ ಸಮೀಪ ಇರುವ ದಳವೆಹಳ್ಳಿ ರಸ್ತೆಯ ಬಳಿ ಇರುವ 120 ಅಡಿ ಎತ್ತರದ 400kV ಹೈ ಟೆನ್ಷನ್ ಕರೆಂಟ್ ಟವರ್ ಹತ್ತಿದ ವ್ಯಕ್ತಿಯನ್ನು
ಪಾವಗಡ ಅಗ್ನಿಶಾಮ ಠಾಣಾ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ವ್ಯಕ್ತಿಯನ್ನು ಕಾಪಾಡಿದ್ದಾರೆ.
ಬಿ ಕೆ ಹಳ್ಳಿ ಗ್ರಾಮದ ಗೋಪಾಲ (53) ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ವ್ಯಕ್ತಿ. ಗೋಪಾಲಯ್ಯ ಸಾಲವನ್ನು ಮಾಡಿಕೊಂಡಿದ್ದು ಮನನೊಂದು ದಳವೆಹಳ್ಳಿ ರಸ್ತೆಯಲ್ಲಿರುವ 120ಅಡಿ ಎತ್ತರದ 400 ಕೆ ವಿ ಹೈ ಟೆನ್ಷನ್ ಕರೆಂಟ್ ಟವರ್ ಏರಿ ಕುಳಿತಿದ್ದು.
ಸದರಿ ವಿಷಯವನ್ನು ತಿರುಮಣಿ ಪೊಲೀಸ್ ಠಾಣೆಯ ಸಿಬ್ಬಂದಿಯವರು ಅಗ್ನಿಶಾಮಕ ಠಾಣೆಗೆ ಕರೆಮಾಡಿ ಕರೆ ಮಾಡಿ ತಿಳಿಸಿದ ಕೂಡಲೇ ಅಧಿಕಾರಿ ಮತ್ತು ಸಿಬ್ಬಂದಿಯವರು ತಕ್ಷಣವೇ ಘಟನಾ ಸ್ಥಳಕ್ಕೆ ತೆರಳಿ ಹಗ್ಗ ಹಾರ್ನೆಸ್ ಬೆಲ್ಟ್ ಲ್ಯಾಡರ್ ಮುಂತಾದ ರಕ್ಷಣಾ ಉಪಕರಣಗಳ ಸಹಾಯದಿಂದ 120 ಅಡಿ ಎತ್ತರದ ಹೈ ಟೆನ್ಶನ್ ಎಲೆಕ್ಟ್ರಿಕಲ್ ಟವರ್ ಮೇಲೆ ಹತ್ತಿ ಗೋಪಾಲ ಎಂಬ ವ್ಯಕ್ತಿಗೆ ನೀರು ಕುಡಿಸಿ ಮನವೊಲಿಸಿ ರಕ್ಷಣಾ ಉಪಕರಣಗಳ ಸಹಾಯದಿಂದ 120 ಅಡಿ ಎತ್ತರದ ಐಟೆಂಶನ್ ಟವರ್ ನಿಂದ ಜೀವಂತವಾಗಿ ಕೆಳಗಡೆ ಇಳಿಸಿ ರಕ್ಷಿಸಲಾಗಿದ್ದು
ಗ್ರಾಮಸ್ಥರು ಅಗ್ನಿಶಾಮಕ ಸಿಬ್ಬಂದಿಗೆ ಅಭಿನಂದನೆಗಳನ್ನು ತಿಳಿಸಿದರು
ಈ ಸಂದರ್ಭದಲ್ಲಿ ಅಗ್ನಿಶಾಮಕ ಠಾಣೆ ಯ ಸಹಾಯಕ ಠಾಣಾ ಅಧಿಕಾರಿ ಪ್ರವೀಣ್ ಕುಮಾರ್, ಹವಾಲ್ದಾರರಾದ ವೆಂಕಟೇಶ್ ನಾಡಗೌಡ, ನಾಗೇಶ್ ಎಂ ಎನ್, ಚಾಲಕ ಮತ್ತು ತಂತ್ರಜ್ಞ ಮನ್ಸೂರ್, ನಂದನ್ ಎಚ್.ಎಸ್ ಮತ್ತು ಹರೀಶ್ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ಶ್ರೀನಿವಾಸಲು. ಎ ಪಾವಗಡ
