ಪ್ರತಿಯೊಂದು ಕ್ಷೇತ್ರದಲ್ಲಿ ಸಾಮಾಜಿಕ ನ್ಯಾಯ ಅಗತ್ಯ.ಹಿರಿಯ ಸಿವಿಲ್ ನ್ಯಾಯಾಧೀಶ ವಿ. ಮಾದೇಶ್.
ಪಾವಗಡ: ಭಾರತದ ಪ್ರತಿಯೊಬ್ಬ ಪ್ರಜೆಗೂ ಯಾವುದೇ ತಾರತಮ್ಯವಿಲ್ಲದೆ ಸಮಾನವಾಗಿ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಸಂವಿಧಾನದ ಮೂಲಕ ನೀಡಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ವಿ. ಮಾದೇಶ್ ತಿಳಿಸಿದರು.
ಪಟ್ಟಣದ ಎಸ್.ಎಸ್.ಕೆ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ವಕೀಲ ಸಂಘ ಮತ್ತು ಎಸ್ ಎಸ್ ಕೆ ಪ್ರಥಮ ದರ್ಜೆ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ಮತ್ತು ನ್ಯಾಯ ಜಾಗೃತಿ ಅಭಿಯಾನ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾಜಿಕ ನ್ಯಾಯದ ಮೂಲ ಉದ್ದೇಶ ಯಾವುದೇ ಪ್ರಜೆಯಾಗಿರಬಹುದು ಆತನ ಸಾಮಾಜಿಕ ಹಿನ್ನೆಲೆ, ಜಾತಿ, ಲಿಂಗ, ಧರ್ಮದ ಆಧಾರದಲ್ಲಿ ಯಾವುದೇ ತಾರತಮ್ಯ ಮಾಡದೆ ಎಲ್ಲಾ ಕ್ಷೇತ್ರಗಳಲ್ಲಿ ಎಲ್ಲರಿಗೂ ಸಮಾನವಾದ ಅವಕಾಶ ನೀಡುವುದಾಗಿದೆ ಎಂದರು.
ಸ್ವತಂತ್ರ ಪೂರ್ವದಲ್ಲಿ ವೃತ್ತಿ ಆಧಾರದ ಮೇಲೆ ವ್ಯಕ್ತಿಯನ್ನು ಗುರುತಿಸಲಾಗುತ್ತಿದ್ದು.
ಶಿಕ್ಷಣವೆಂಬುದು ಸಮಾಜದಲ್ಲಿ ಕೇವಲ ಕೆಲ ವರ್ಗಗಳಿಗೆ ಮಾತ್ರ ಸೀಮಿತವಾಗಿದ್ದು.
ಹೆಣ್ಣು ಮಕ್ಕಳ ಸ್ಥಿತಿಯಂತೂ ಹೀನಾಯವಾಗಿತ್ತು ಎಂದರು.
ಹೆಣ್ಣು ಮಕ್ಕಳಿಗೆ ಶೈಕ್ಷಣಿಕ, ಆರ್ಥಿಕವಾಗಿ ಯಾವುದೇ ಪ್ರಾಧ್ಯಾನತೆ ಇರಲಿಲ್ಲವೆಂದು. ಮಹಿಳೆಯು ಕೇವಲ ನಾಲ್ಕು ಗೋಡೆಗಳಿಗೆ ಸೀಮಿತವಾಗಿತ್ತು ಎಂದರು.
ಅಧಿಕ ಸಿವಿಲ್ ನ್ಯಾಯಾಧೀಶೆ ಸಿ.ಎನ್ ಮುನಿರತ್ನಮ್ಮ ಮಾತನಾಡಿ.
ಪ್ರತಿಯೊಬ್ಬ ಮನುಷ್ಯನಿಗೂ ಸಾಮಾಜಿಕ ನ್ಯಾಯ ಅಗತ್ಯವೆಂದು, ಸಾಮಾಜಿಕ ನ್ಯಾಯವಿಲ್ಲದಿದ್ದರೆ ಸಮಾಜದಲ್ಲಿ ಏರುಪೇರುಗಳು ಉಂಟಾಗುತ್ತವೆ ಎಂದರು.
ಭಾರತದಲ್ಲಿ ವಿದೇಶರ ಆಳ್ವಿಕೆಯ ಸಂದರ್ಭದಲ್ಲಿ ವಿದೇಶಿಯರ ಮತ್ತು ಭಾರತೀಯ ನಡುವೆ ಸಂಭವಿಸಿದ ತಾರತಮ್ಯ ವನ್ನು ಇತಿಹಾಸ ಓದಿದಾಗ ಅರಿವಾಗುತ್ತದೆ ಎಂದರು.
ಸಾಮಾಜಿಕ ಅಸಮಾನತೆಯಿಂದ ಉಳ್ಳವರು ಮತ್ತು ಉಳ್ಳದವರ ನಡುವೆ ಯಾವಾಗಲೂ ಸಂಘರ್ಷ ನಡೆಯುತ್ತದೆ ಎಂದರು.
ಹಿಂದುಳಿದವರು ಸಮಾಜದಲ್ಲಿ ಮುಂದೆ ಬಂದು ಸಾಧನೆ ಮಾಡಬೇಕಾದರೆ ಸಾಮಾಜಿಕ ಸಮಾನತೆ ಅವಶ್ಯಕವೆಂದರು.
ಕಾರ್ಯಕ್ರಮದಲ್ಲಿ ತಾಲೂಕು ವಕೀಲ ಸಂಘದ ಅಧ್ಯಕ್ಷ ಆರ್. ರಂಗನಾಥಪ್ಪ, ವಕೀಲ ಸಂಘದ ಕಾರ್ಯದರ್ಶಿ ಎಚ್. ಚಂದ್ರಪ್ಪ, ಸಹಾಯಕ ಸರ್ಕಾರಿ ಅಭಿಯೋಜಕರಾದ ಸಣ್ಣೀರಪ್ಪ, ರಮೇಶ್ ಬಾಬು, ಪ್ಯಾನಲ್ ವಕೀಲ ಜಯಸಿಂಹ ಕೆ.ಆರ್,
ಪ್ರಾಂಶುಪಾಲ ವಿನಯ್ ಬಾಬು ಮುಂತಾದವರು ಹಾಜರಿದ್ದರು.
ವರದಿ: ಶ್ರೀನಿವಾಸಲು ಎ
