IMG 20260305 WA0008

ಪಾವಗಡ : ಕೆಟು ನಿಂತ ಶುದ್ಧ ಕುಡಿಯುವ ನೀರಿನ ಘಟಕಗಳು….!

DISTRICT NEWS ತುಮಕೂರು

 

ಕೆಟು ನಿಂತ ಶುದ್ಧ ಕುಡಿಯುವ ನೀರಿನ ಘಟಕಗಳು.

ಪಾವಗಡ: ತಾಲ್ಲೂಕಿನ ಬ್ಯಾಡನೂರು ಗ್ರಾಮ ಪಂಚಾಯಿತಿಯ ಪಿ ವಡ್ಡರಹಟ್ಟಿ ಯಲ್ಲಿ
ಗ್ರಾಮಸ್ಥರ ಅನುಕೂಲಕ್ಕಾಗಿ ಗ್ರಾಮದಲ್ಲಿ ಅಳವಡಿಸಲಾದ 02 ಶುದ್ಧ ಕುಡಿಯುವ ನೀರಿನ ಘಟಕಗಳು 10 ತಿಂಗಳಿನಿಂದ ಕೆಟ್ಟು ನಿಂತಿದೆ.

ಆದರೆ, ಈ ಘಟಕವನ್ನು ಇನ್ನೂ ಸರಿಪಡಿಸದ ಹಿನ್ನೆಲೆಯಲ್ಲಿ ಗ್ರಾಮದ ಜನರು ಖಾಸಗಿ ವ್ಯಕ್ತಿಗಳಿಂದ ನೀರು ಖರೀದಿಸಿ ಕುಡಿಯುವ ಅನಿವಾರ್ಯತೆ ಎದುರಾಗಿದೆ.

ಪಿ ವಡ್ಡರಹಟ್ಟಿ ಗ್ರಾಮಸ್ಥರು ಶುದ್ಧ ಕುಡಿಯುವ ನೀರಿಗಾಗಿ ಪ್ರತಿನಿತ್ಯ ದೂರದ ಬ್ಯಾಡನೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಬಂದು ಕುಡಿಯುವ ನೀರು ತೆಗೆದುಕೊಂಡು ಹೋಗುವ ಅಗತ್ಯ ಎರುದಾಗಿದೆ ಎಂದು ಗ್ರಾಮದ ಮಹಿಳೆಯರು ತಿಳಿಸಿದ್ದಾರೆ.

ಪ್ರತಿನಿತ್ಯ ಶಾಲೆಗೆ ಹೋಗುವ ಮಕ್ಕಳು ಹಾಗೂ ಕೂಲಿ ಕೆಲಸಕ್ಕೆ ಹೋಗುವ ಜನರೇ ಈ ಭಾಗದಲ್ಲಿ ವಾಸವಾಗಿದ್ದು ಕುಡಿಯುವ ನೀರಿಗಾಗಿ ಪರದಾಡಬೇಕಾಗಿದೆ ಎಂದು

ದ್ವಿಚಕ್ರ ವಾಹನ ಉಳ್ಳವರು ದ್ವಿಚಕ್ರವಾಹನದಲ್ಲಿ ಕುಡಿಯುವ ನೀರು ತಂದುಕೊಳ್ಳುತ್ತಾರೆ, ವಾಹನವಿಲ್ಲದವರು ಬೋರ್‌ವೆಲ್‌ಗಳ ನೀರನ್ನೇ ಬಳಸುವ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮದ ಮಹಿಳೆಯರು ತಿಳಿಸಿದ್ದಾರೆ.

ನೀರಿನ ಘಟಕ ಶೀಘ್ರದಲ್ಲೇ ದುರಸ್ತಿಗೊಳಿಸಬೇಕು. ಇಲ್ಲಿನ ಘಟಕ ದುರಸ್ತಿಯಾದರೆ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಆಗಲಿದೆ ಎಂದರು.

ಬ್ಯಾಡನೂರು ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ರಂಗಸ್ವಾಮಿ ಸಮಸ್ಯೆ ಬಗ್ಗೆ ಪ್ರತಿಕ್ರಿಯೆ ನೀಡಿ.
ತಾನು ಈ ಪಂಚಾಯಿತಿಯಿಗೆ ಬಂದು 15 ದಿನಗಳಾಗಿದೆ ಎಂದು ಘಟಕಗಳ ನಿರ್ವಹಣೆಯನ್ನು ಖಾಸಗಿ ಏಜೆನ್ಸಿಗಳಿಗೆ ನೀಡಿದ್ದು,
ಕುಡಿಯುವ ನೀರಿನ ಎರಡು ಘಟಕಗಳು ಕೆಟ್ಟು ಹೋಗಿರುವ ಬಗ್ಗೆ ಇ. ಓ ಮಧುಸೂದನ್ ರವರ ಗಮನಕ್ಕೆ ತರಲಾಗಿದೆ ಎಂದು, ಶೀಘ್ರವೇ ಸಮಸ್ಯೆಯನ್ನು ಬಗೆಹರಿಸಿಕೊಡುವ ಭರವಸೆಯನ್ನು ಬಗೆಹರಿಸುವುದಾಗಿ ತಿಳಿಸಿದರು.

ನಮ್ಮ ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ಶೀಘ್ರವೇ ದುರಸ್ತಿಗೊಳಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು ಈ ಸಂದರ್ಭದಲ್ಲಿಊರಿನ ಹಿರಿಯ ವ್ಯಕ್ತಿ, ದಾಸಪ್ಪ , ತಿಮ್ಮರಾಜು, ಹೇಮಂತ್, ಗುರುಶಾಂತಮ್ಮ, ಗಾಯಿತ್ರಮ್ಮ,
ಅನಸೂಯಮ್ಮ, ನಾಗಮ್ಮ, ಮುಂತಾದ ಮಹಿಳೆಯರು ಮತ್ತು ಮಕ್ಕಳು ಹಾಜರಿದ್ದರು.

ವರದಿ : ಶೀನಿವಾಸಲು ಎ