ಭಾರತದ ಅತ್ಯಂತ ವಿಶ್ವಾಸಾರ್ಹ ಸ್ಮಾರ್ಟ್‌ಫೋನ್ ರೆಡ್‌ಮಿ ನೋಟ್ 17 ಅನಾವರಣ
REDMIಯ ಇದುವರೆಗಿನ ಅತಿದೊಡ್ಡ 8000mAh ಬ್ಯಾಟರಿ ಮತ್ತು ಪ್ರೀಮಿಯಂ ಟ್ರೂಕಲರ್ AMOLED ಡಿಸ್‌ಪ್ಲೇಯೊಂದಿಗೆ ರೆಡ್‌ಮಿ ನೋಟ್ 17 ಅನಾವರಣ
ಸ್ನ್ಯಾಪ್‌ಡ್ರ್ಯಾಗನ್ 4 Gen 4 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುವ ರೆಡ್‌ಮಿ ನೋಟ್ 17, ಕೇವಲ 8.4mm ಸ್ಲಿಮ್ ವಿನ್ಯಾಸದಲ್ಲಿ 3 ದಿನಗಳವರೆಗೆ ಬ್ಯಾಟರಿ ಬಾಳಿಕೆ,
120Hz ಟ್ರೂಕಲರ್ AMOLED ಡಿಸ್‌ಪ್ಲೇ, ದೀರ್ಘಾವಧಿಯ ಸಾಫ್ಟ್‌ವೇರ್ ಬೆಂಬಲ ಹಾಗೂ ದೈನಂದಿನ ಬಳಕೆಗೆ ಉತ್ತಮ ಬಾಳಿಕೆ ನೀಡುತ್ತದೆ.
Bangalore, August 11th 2026: ಶಿಯೋಮಿ ಇಂಡಿಯಾ ಇಂದು ಭಾರತದ ಅತ್ಯಂತ ವಿಶ್ವಾಸಾರ್ಹ ಸ್ಮಾರ್ಟ್‌ಫೋನ್ ಸರಣಿಗಳಲ್ಲೊಂದಾದ REDMI Note ಸರಣಿಯ ಹೊಸ ಸೇರ್ಪಡೆಯಾದ ರೆಡ್‌ಮಿ ನೋಟ್ 17 5G ಅನ್ನು ಬಿಡುಗಡೆ ಮಾಡಿದೆ. ಬ್ಯಾಟರಿ ಬಗ್ಗೆ ಉಂಟಾಗುವ ಆತಂಕವನ್ನು ದೂರ ಮಾಡುವ ಉದ್ದೇಶದಿಂದ ವಿನ್ಯಾಸಗೊಳಿಸಲಾದ ರೆಡ್‌ಮಿ ನೋಟ್ 17, REDMIಯ ಇದುವರೆಗಿನ ಅತಿದೊಡ್ಡ 8000mAh ಸಿಲಿಕಾನ್-ಕಾರ್ಬನ್ ಬ್ಯಾಟರಿ, ಪ್ರೀಮಿಯಂ ಟ್ರೂಕಲರ್ AMOLED ಡಿಸ್‌ಪ್ಲೇ, ವಿಶ್ವಾಸಾರ್ಹ Snapdragon ಕಾರ್ಯಕ್ಷಮತೆ ಹಾಗೂ ದೀರ್ಘಾವಧಿಯ ಸಾಫ್ಟ್‌ವೇರ್ ಬೆಂಬಲವನ್ನು ಒಟ್ಟುಗೂಡಿಸಿ ಸಂಪೂರ್ಣ ಸ್ಮಾರ್ಟ್‌ಫೋನ್ ಅನುಭವವನ್ನು ಒದಗಿಸುತ್ತದೆ.
ರೆಡ್‌ಮಿ ನೋಟ್ 17 ನಲ್ಲಿ REDMIಯ ಇದುವರೆಗಿನ ಅತಿದೊಡ್ಡ 8000mAh ಸಿಲಿಕಾನ್-ಕಾರ್ಬನ್ ಬ್ಯಾಟರಿ ಅಳವಡಿಸಲಾಗಿದೆ. ಕೇವಲ 8.4mm ಸ್ಲಿಮ್ ವಿನ್ಯಾಸವನ್ನು ಉಳಿಸಿಕೊಂಡು, ಇದು ಸಾಮಾನ್ಯ ಬಳಕೆಯಲ್ಲಿ 3 ದಿನಗಳವರೆಗೆ ಬ್ಯಾಟರಿ ಬಾಳಿಕೆಯನ್ನು ನೀಡುತ್ತದೆ. ಇದರಲ್ಲಿ ಬಾಕ್ಸ್‌ನಲ್ಲೇ ನೀಡಲಾಗುವ ಚಾರ್ಜರ್‌ನೊಂದಿಗೆ 45W ಟರ್ಬೋ ಚಾರ್ಜಿಂಗ್, 22.5W ರಿವರ್ಸ್ ವೈರ್ಡ್ ಚಾರ್ಜಿಂಗ್ ಬೆಂಬಲವಿದ್ದು, TÜV ಪ್ರಮಾಣೀಕೃತ ಬ್ಯಾಟರಿ ದೀರ್ಘಾಯುಷ್ಯದ ಮೂಲಕ 1,600 ಚಾರ್ಜಿಂಗ್ ಸೈಕಲ್‌ಗಳ ನಂತರವೂ 80% ವರೆಗೆ ಬ್ಯಾಟರಿ ಆರೋಗ್ಯವನ್ನು ಕಾಪಾಡಿಕೊಳ್ಳುತ್ತದೆ.
ದೈನಂದಿನ ಮನರಂಜನೆಯ ಅನುಭವವನ್ನು ಇನ್ನಷ್ಟು ಉತ್ತಮಗೊಳಿಸಲು, ಈ ಸ್ಮಾರ್ಟ್‌ಫೋನ್‌ನಲ್ಲಿ 12.75 ಸೆಂ.ಮೀ (6.9 ಇಂಚು) ಟ್ರೂಕಲರ್ AMOLED ಡಿಸ್‌ಪ್ಲೇ, 120Hz AdaptiveSync ರಿಫ್ರೆಶ್ ದರ, 100% DCI-P3 ಕಲರ್ ಗ್ಯಾಮಟ್, ಹಾಗೂ 1800 ನಿಟ್ಸ್‌ವರೆಗೆ ಪೀಕ್ ಬ್ರೈಟ್‌ನೆಸ್ ನೀಡಲಾಗಿದೆ. ಇದಕ್ಕೆ ಪೂರಕವಾಗಿ 200% ವಾಲ್ಯೂಮ್ ಸ್ಪೀಕರ್‌ಗಳು, ಒದ್ದೆಯಾದ ಪರಿಸ್ಥಿತಿಯಲ್ಲಿಯೂ ಉತ್ತಮ ಟಚ್ ಪ್ರತಿಕ್ರಿಯೆ ನೀಡುವ HydroTouch 2.0, ಹಾಗೂ ಕಣ್ಣಿನ ಆರಾಮದಾಯಕ ವೀಕ್ಷಣೆಗೆ TÜV Rheinland Eye Care ಪ್ರಮಾಣೀಕರಣಗಳು ಕೂಡ ಲಭ್ಯವಿವೆ.
ಸುಧಾರಿತ 4nm ತಂತ್ರಜ್ಞಾನದಲ್ಲಿ ನಿರ್ಮಿಸಲಾದ ಸ್ನ್ಯಾಪ್‌ಡ್ರ್ಯಾಗನ್ 4 Gen 4 ಮೊಬೈಲ್ ಪ್ಲಾಟ್‌ಫಾರ್ಮ್‌ನಿಂದ ಕಾರ್ಯನಿರ್ವಹಿಸುವ ರೆಡ್‌ಮಿ ನೋಟ್ 17, ವಿದ್ಯುತ್ ದಕ್ಷತೆಯನ್ನು ಗರಿಷ್ಠಗೊಳಿಸುವುದರೊಂದಿಗೆ ದೈನಂದಿನ ಬಳಕೆಗೆ ಸುಗಮ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ. 16GB ವರೆಗೆ RAM (ಮೆಮೊರಿ ಎಕ್ಸ್‌ಟೆನ್ಷನ್ ಸೇರಿದಂತೆ), 2TB ವರೆಗೆ ವಿಸ್ತರಿಸಬಹುದಾದ ಸ್ಟೋರೇಜ್, 10,416mm² ಗ್ರಾಫೈಟ್ ಕೂಲಿಂಗ್ ಸಿಸ್ಟಮ್, ಹಾಗೂ Xiaomi Long-Term Fluency Engine ಒಳಗೊಂಡಿರುವ ಈ ಸಾಧನವನ್ನು 48 ತಿಂಗಳುಗಳವರೆಗೆ ಸುಗಮ ಕಾರ್ಯಕ್ಷಮತೆಯನ್ನು ನೀಡುವಂತೆ ವಿನ್ಯಾಸಗೊಳಿಸಲಾಗಿದೆ.
ಫೋಟೋಗ್ರಫಿಗಾಗಿ, ರೆಡ್‌ಮಿ ನೋಟ್ 17 ನಲ್ಲಿ 50MP AI ಡ್ಯುಯಲ್ ಹಿಂಬದಿಯ ಕ್ಯಾಮೆರಾ ಹಾಗೂ 8MP AI ಮುಂಭಾಗದ ಕ್ಯಾಮೆರಾ ನೀಡಲಾಗಿದೆ. Night Mode, AI HDR, Dynamic Shots, AI Editor, ಹಾಗೂ 2x In-Sensor Zoom ಸೇರಿದಂತೆ AI ಆಧಾರಿತ ವೈಶಿಷ್ಟ್ಯಗಳು ಅತ್ಯುತ್ತಮ ಫೋಟೋಗ್ರಫಿ ಅನುಭವವನ್ನು ಒದಗಿಸುತ್ತವೆ.
Android 16 ಆಧಾರಿತ HyperOS 3 ನಲ್ಲಿ ಕಾರ್ಯನಿರ್ವಹಿಸುವ ರೆಡ್‌ಮಿ ನೋಟ್ 17, 4 ವರ್ಷಗಳ Android ಅಪ್‌ಡೇಟ್‌ಗಳು ಹಾಗೂ 6 ವರ್ಷಗಳ ಭದ್ರತಾ ಅಪ್‌ಡೇಟ್‌ಗಳೊಂದಿಗೆ ಬರುತ್ತದೆ. ಈ ಸ್ಮಾರ್ಟ್‌ಫೋನ್‌ನಲ್ಲಿ Corning Gorilla Glass 7i ರಕ್ಷಣೆ, ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP65 ರೇಟಿಂಗ್ ಸಹ ಲಭ್ಯವಿದೆ. ಇದು Dark Night, Arctic Blue, ಹಾಗೂ Starlight Purple ಬಣ್ಣಗಳಲ್ಲಿ ದೊರೆಯುತ್ತದೆ.
ಬೆಲೆ ಮತ್ತು ಲಭ್ಯತೆ
ರೆಡ್‌ಮಿ ನೋಟ್ 17 Dark Night, Arctic Blue, ಹಾಗೂ Starlight Purple ಬಣ್ಣಗಳಲ್ಲಿ, ಕೆಳಗಿನ ಎರಡು ಸ್ಟೋರೇಜ್ ವೇರಿಯಂಟ್‌ಗಳಲ್ಲಿ ಲಭ್ಯವಿರುತ್ತದೆ:
ಸಾಧನ
ವೇರಿಯಂಟ್
MRP
ಪರಿಚಯಾತ್ಮಕ ಬೆಲೆ*ರೆಡ್‌ಮಿ ನೋಟ್ 17
5G
6GB + 128GB
₹27,999
₹24,9998GB + 128GB
₹30,999
₹27,999
*ಪರಿಚಯಾತ್ಮಕ ಬೆಲೆಯಲ್ಲಿ SBI Card, Axis Bank, ಹಾಗೂ Kotak Bank ಕ್ರೆಡಿಟ್ ಕಾರ್ಡ್ ಮತ್ತು EMI ವ್ಯವಹಾರಗಳ ಮೇಲೆ ₹3,000 ತಕ್ಷಣದ ಬ್ಯಾಂಕ್ ರಿಯಾಯಿತಿ ಒಳಗೊಂಡಿದೆ.
ಇದರ ಜೊತೆಗೆ, ಗ್ರಾಹಕರು Jio True 5G ಜೊತೆಗೆ 5TB JioAI Cloud Storage, 3 ತಿಂಗಳ YouTube Premium Lite, ಹಾಗೂ 6 ತಿಂಗಳ Google One (200GB Cloud Storage) ಸದಸ್ಯತ್ವವನ್ನೂ ಪಡೆಯುತ್ತಾರೆ.
ರೆಡ್‌ಮಿ ನೋಟ್ 17 2026ರ ಆಗಸ್ಟ್ 13ರಂದು ಮಧ್ಯಾಹ್ನ 12:00 ಗಂಟೆಯಿಂದ (IST) mi.com, Amazon Specials, ಹಾಗೂ Xiaomi Retail ಮೂಲಕ ಖರೀದಿಗೆ ಲಭ್ಯವಾಗಲಿದೆ.
