ಪಾವಗಡ ತಾಲ್ಲೂಕಿನ ಕನಿಕಲಬಂಡೆ ಬಳಿ ನಾಡಬಾಂಬ್ ಸ್ಫೋಟ.ಗ್ರಾಮಸ್ಥರಲ್ಲಿ ಆತಂಕ.
ಪಾವಗಡ:: ತಾಲ್ಲೂಕಿನ ಕನಿಕಲಬಂಡೆ ಗ್ರಾಮದ ಬಳಿ ಗಿರಿಯಣ್ಣ ಎಂಬುವವರ ತೋಟದಲ್ಲಿ ಒಂದು ನಾಡಬಾಂಬ್ ಶುಕ್ರವಾರ ಸ್ಫೋಟಗೊಂಡಿದ್ದು, ಮತ್ತೊಂದು ಜೀವಂತ ಬಾಂಬ್ ಪತ್ತೆಯಾಗಿದ್ದು ಗ್ರಾಮಸ್ಥರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.
ಪಾವಗಡ ತಾಲ್ಲೂಕು ಐತಿಹಾಸಿಕವಾಗಿ ನಕ್ಸಲ್ ಪೀಡಿತ ಪ್ರದೇಶವೆಂದು ಗುರುತಿಸಲ್ಪಟ್ಟಿರುವುದರಿಂದ, ಈ ಬಾಂಬ್ ಪತ್ತೆಯಾಗಿರುವುದು ಹಳೆಯ ನಕ್ಸಲ್ ಚಟುವಟಿಕೆಗಳ ನೆನಪನ್ನು ಮರುಕಳಿಸಿದೆ.

ತಾಲೂಕಿನಲ್ಲಿ ಮತ್ತೆ ನಾಡ ಬಾಂಬ್ ಪತ್ತೆಯಾಗಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಗಿರಿಯಣ್ಣ ಎಂಬುವವರ ಬೋರ್‌ವೆಲ್ ನ ಸ್ಟಾರ್ಟರ್ ನ ಪೈಪ್ ನಲ್ಲಿ ಒಂದು ನಾಡಬಾಂಬ್ ಸ್ಫೋಟಗೊಂಡಿದ್ದು, ಆ ಸಮಯದಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಗ್ರಾಮಸ್ಥರ ಮಾಹಿತಿ ಮೇರೆಗೆ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಆಗಮಿಸಿ ಪರಿಶೀಲಿಸಿದಾಗ ಮತ್ತೊಂದು ಜೀವಂತ ನಾಡಬಾಂಬ್ ಪತ್ತೆಯಾಗಿದೆ.
ಅಧಿಕಾರಿಗಳು ಬಾಂಬ್ ಅನ್ನು ನಿಷ್ಕ್ರಿಯಗೊಳಿಸಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.
ಘಟನೆ ಬಗ್ಗೆ ರೈತ ಗಿರಿಯಣ್ಣ ಪ್ರತಿಕ್ರಿಯೆ :
ನನ್ನ ಮಗನನ್ನು ಸಾಯಿಸುವ ಉದ್ದೇಶದಿಂದಾಗಿ ನಕ್ಸಲ್ ವೆಂಕಟೇಶ ಬೋರ್ ಆನ್ ಮಾಡಿದ ತಕ್ಷಣ ಬ್ಲಾಸ್ಟ್ ಆಗುವಂತೆ ನಾಡ ಬಾಂಬನ್ನು ಸ್ಟಾರ್ಟರನ ವೈರಿಗೆ ಅಳವಡಿಸಲಾಗಿದೆ ಎಂದು ವೆಂಕಟೇಶನಿಂದ ತನ್ನ ಕುಟುಂಬಕ್ಕೆ ಹಾನಿ ಇದೆ ಎಂದು ಕೂಡಲೇ ತಕ್ಷಣ ಪೊಲೀಸರು ವೆಂಕಟೇಶನನ್ನು ಬಂಧಿಸಬೇಕೆಂದು ಆಗ್ರಹಿಸಿದರು.

ಇಂದಿನ ಕನಿಕಲಬಂಡೆ ನಾಡಬಾಂಬ್ ಸ್ಫೋಟದ ತನಿಖೆಯನ್ನು ಪೊಲೀಸರು ಯಾವ ಉದ್ದೇಶದಿಂದ ಕೃತ್ಯ ನಡೆದಿದೆ ಎಂಬುದನ್ನು ಪೊಲೀಸರ ತನಿಕೆಯಿಂದ ತಿಳಿಯಬೇಕಾಗಿದೆ
ಘಟನಾ ಸ್ಥಳಕ್ಕೆ ಡಿ ವೈ ಎಸ್. ಪಿ ಮಂಜುನಾಥ್, ಇನ್ಸ್ಪೆಕ್ಟರ್ ಸುರೇಶ್, ಬಾಂಬ್ ನಿಕ್ರಿಯ ದಳ ಸಿಬ್ಬಂದಿ ಮುಂತಾದವರು ಭೇಟಿ ನೀಡಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
