ChatGPT Image Sep 11 2026 11 44 59 AM e1789107716102

ಪಾವಗಡದಲ್ಲಿ ‘ ನಕ್ಸಲ್ ʼ ಹೆಸರಿನ ಪತ್ರ : ₹5 ಲಕ್ಷ ಕ್ಕೆ ಬೆದರಿಕೆ 

DISTRICT NEWS ತುಮಕೂರು

ಪಾವಗಡದಲ್ಲಿ ‘ ನಕ್ಸಲ್ ʼ ಹೆಸರಿನ ಪತ್ರ : ₹5 ಲಕ್ಷ ಕ್ಕೆ ಬೆದರಿಕೆ

ತುಮಕೂರು: ಪಾವಗಡದಲ್ಲಿ ‘ಕಾಮ್ರೇಡ್ ದೇವಣ್ಣ’ ಹೆಸರಿನಲ್ಲಿ ₹5 ಲಕ್ಷಕ್ಕೆ ಬೇಡಿಕೆ ಇಟ್ಟು ಬೆದರಿಕೆ ಪತ್ರ ಬರೆದಿರುವ ಘಟನೆ ನಡೆದಿದೆ.

ನಾಗಭೂಷಣ್ ಎಂಬುವವರ ಜಮೀನಿನ ಶೆಡ್‌ನಲ್ಲಿ ತೆಲುಗಿನಲ್ಲಿ ಬರೆದ ಬೆದರಿಕೆ ಪತ್ರ ಪತ್ತೆಯಾಗಿದೆ. ಪ್ರಕರಣದ ಆರೋಪಿ ವೆಂಕಟೇಶ್ ವಿರುದ್ಧದ ಕೇಸ್ ನಡೆಸಲು ಹಣ ನೀಡುವಂತೆ ಪತ್ರದಲ್ಲಿ ಒತ್ತಾಯಿಸಲಾಗಿದ್ದು, ಹಣ ನೀಡದಿದ್ದರೆ ಅನಾಹುತ ಸಂಭವಿಸುವುದಾಗಿ ಬೆದರಿಸಲಾಗಿದೆ.

ಈ ಕೃತ್ಯವನ್ನು ನಕಲಿ ನಕ್ಸಲ್ ವೆಂಕಟೇಶ್ ಮಾಡಿರಬಹುದೆಂಬ ಅನುಮಾನದ ಹಿನ್ನೆಲೆಯಲ್ಲಿ ಪಾವಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *