IMG 20200923 WA0008

ಪಾವಗಡ: ಕೊರೋನಾ ವಾರಿಯರ್ಸ್ ಗೆ ಸನ್ಮಾನ….!

DISTRICT NEWS ತುಮಕೂರು

ಕೊರೋನಾ ವಾರಿಯರ್ಸ್ ಗೆ ಸನ್ಮಾನ:

ವೈ.ಎನ್.ಹೊಸಕೋಟೆ : ವಿಶ್ವಕ್ಕೆ ಒಕ್ಕರಿಸಿರುವ ಕೊರೋನಾ ಮಹಾಮಾರಿಯ ನಿರ್ಮೂಲನೆಗೆ ಆಶಾ ಕಾರ್ಯಕರ್ತರು, ಪೌರ ಕಾರ್ಮಿಕರು ಸೇರಿದಂತೆ ಕೊರೋನಾ ವಾರಿಯರ್ಸ್ ರ ಸೇವೆ ಅನನ್ಯವಾದುದು ಎಂದು ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ತಿಳಿಸಿದರು.

ಗ್ರಾಮದ ಚೌಡೇಶ್ವರಿ ಕಲ್ಯಾಣಮಂಟಪದಲ್ಲಿ ಪದ್ಮಶ್ರೀ ಡಾ.ಸೂಲಗಿತ್ತಿ ನರಸಮ್ಮರವರ ಶತಮಾನೋತ್ಸವ ಪ್ರಯುಕ್ತ ಜೆ.ಕೆ.ಪೌಂಢೇಷನ್ ಹಾಗೂ ಜಾಲೋಡು ಹೊನ್ನೂರಪ್ಪ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ. ಕಾರ್ಯಕ್ರಮದಲ್ಲಿ ಕೊರೋನಾ ವಾರಿಯರ್ಸ್ಗೆ ಗೌರವ ಸಮರ್ಪಣೆ   ಮಾಡಲಾಯಿತು.

IMG 20200923 WA0007

ಸಮಾಜದಲ್ಲಿ ಕೊರೋನಾ ರೋಗ ಹರಡದಂತೆ ವಾರಿಯರ್ಸ್ ಶ್ರಮಿಸುತ್ತಿದ್ದಾರೆ. ಅವರ ಕರ್ತವ್ಯ ನಿರ್ವಹಣೆಯ ವೇಳೆ ಅನೇಕ ಅವಮಾನಗಳು ಮತ್ತು ತೊಂದರೆಗಳು ಸಂಭವಿಸಿದ್ದರೂ ಅದನ್ನು ಲೆಕ್ಕಿಸದೆ ಕೆಲಸ ನಿರ್ವಹಿಸಿದ್ದಾರೆ. ಇಂತಹವರನ್ನು ಸನ್ಮಾನಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು ಹೈಕೋರ್ಟ್ ವಕೀಲರಾದ ಪಾವಗಡ ಶ್ರೀರಾಮ್.

ತಾಲ್ಲೂಕಿನ ಕುಗ್ರಾಮವೊಂದರ ಮುಗ್ದ ಮಹಿಳೆ ಸುಮಾರು ೧೫ ಸಾವಿರ ಹೆರಿಗೆಗಳನ್ನು ಮಾಡಿದ್ದಾರೆ. ಅವರ ಸೇವೆಯನ್ನು ಗುರ್ತಿಸಿರುವ ಸರ್ಕಾರ ಭಾರತದ ಅತ್ಯುನ್ನತ ನಾಗರೀಕ ಪ್ರಶಸ್ತಿಯನ್ನು ನೀಡಿ ಗೌರವಿಸಿರುವುದು ಪಾವಗಡ ತಾಲ್ಲೂಕಿಗೆ ಪ್ರಶಸ್ತಿ ನೀಡಿದಂತೆ. ಇದರ ಜೊತೆಗೆ ಗೌರವ ಡಾಕ್ಟರೇಟ್ ಇನ್ನಿತ್ಯಾದಿ ಪ್ರಶಸ್ತಿಗಳು ಈಕೆಗೆ ಲಭಿಸಿದ್ದು, ಈ ಮಹಾ ತಾಯಿಯ ಜನ್ಮಶತಮಾನೋತ್ಸವವನ್ನು ನೆನೆಸುತ್ತಾ ಕೊರೋನಾ ವಾರಿಯರ್ಸ್ ಗೆ ಸನ್ಮಾನ ಮಾಡುತ್ತಿರುವುದು ಹೆಮ್ಮೆ ಎನಿಸುತ್ತಿದೆ.

ಸರ್ಕಾರ ಆಶಾ ಕಾರ್ಯಕರ್ತ ಕ್ಲಿಷ್ಟ ಕರ್ತವ್ಯವನ್ನು ಗುರ್ತಿಸಿ ಅವರ ಗೌರವ ಧನವನ್ನು ಹೆಚ್ಚಿಸಬೇಕು. ನೌಕರಿಯನ್ನು ಖಾಯಗೊಳಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

IMG 20200923 WA0009

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಾಲೋಡು ಹೊನ್ನೂರಪ್ಪ ಮಾತನಾಡಿ, ಹಿಂದುಳಿದ ಪಾವಗಡ ತಾಲ್ಲೂಕಿನ ಒಬ್ಬ ಅನಕ್ಷರಸ್ತ ಮಹಿಳೆ ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿ ಪಡೆದಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಯಾವುದೇ ಪಲಾಪೇಕ್ಷೆ ಇಲ್ಲದೆ ಸುಮಾರು ೧೫ ಸಾವಿರ ಹೆರಿಗೆಗಳನ್ನು ಮಾಡಿ ಸಾವಿರಾರು ಮಕ್ಕಳ ಆರೋಗ್ಯ ಕಾಪಾಡಿದ್ದಾರೆ. ಫಲವಾಗಿ ಇಂದು ಆಕೆ ಜೀವನವನ್ನು ಶಾಲಾ ಮಕ್ಕಳು ಪಠ್ಯಪುಸ್ತಕದಲ್ಲಿ ಓದುತ್ತಿದ್ದಾರೆ. ಅವರ ಸೇವೆಯ ಪ್ರೇರಣೆ ಇಂದಿನ ಜನತೆಗೆ ಆದರ್ಶವಾಗಿದ್ದು, ಅದೇ ದಿಶೆಯಲ್ಲಿ ಕೊರೋನಾ ವಾರಿಯರ್ಸ್ ಗೆ ನಾವು ಗೌರವ ಸಮರ್ಪಣೆ ಮಾಡುತ್ತಿದ್ದೇವೆ ಎಂದರು.

IMG 20200923 WA0010

ಕಾರ್ಯಕ್ರಮದಲ್ಲಿ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಆಶಾಕಾರ್ಯಕರ್ತರು, ಪೌರ ಕಾರ್ಮಿಕರು, ಗ್ರಾಮಪಂಚಾಯತಿ ಸಿಬ್ಬಂದಿ, ಪತ್ರಕರ್ತರು ಮತ್ತು ಹೊನ್ನೂರಪ್ಪ ಗೆಳೆಯರ ಬಳಗದ ಸದಸ್ಯರÀನ್ನು ಗೌರವಿಸಿ ಸನ್ಮಾನಿಸಿಲಾಯಿತು.

ಡಾ.ಪ್ರೇಮಯೋಗಿ, ಎನ್.ಆರ್.ಅಶ್ವಥಕುಮಾರ್, ಐ.ಎನ್.ನಾರಾಯಣಪ್ಪ, ಎ.ಓ.ನಾಗರಾಜು, ಹೊ.ಮ.ನಾಗರಾಜು, ಹೆಚ್.ನಾರಾಯಣಪ್ಪ, ಗ್ರಾ.ಪಂ ಕಾರ್ಯದರ್ಶಿ ಹನುಮಂತರಾಯಪ್ಪ, ಮಾರಪ್ಪ , ಮಾರುತೀಶ್ ಉಪಸ್ಥಿತರಿದ್ದರು.

ವರದಿ: ಸತೀಶ್, Y.N ಹೊಸಕೋಟೆ.