: ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಗೆ ಆಗ್ರಹ…!
ಪಾವಗಡ: ಕೊರಮ, ಕೊರಚ, ಲಂಬಾಣಿ, ಭೋವಿ ಸಮಾಜಗಳಿಗೆ ಪರಿಶಿಷ್ಟ ಜಾತಿಯಲ್ಲಿನ ಒಳಮೀಸಲಾತಿಯಲ್ಲಿ ಸಮಾನ ನ್ಯಾಯ ನೀಡಬೇಕಿದೆ ಎಂದು ಸರ್ಕಾರವನ್ನು ಒತ್ತಾಯಿಸಿ ಪಾವಗಡ ತಾಲ್ಲೂಕಿನ ಕೊಲಂಬೊ ನೌಕರರ ಒಕ್ಕೂಟದವರು ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನ ನಡೆಸಿದರು.
ಇದೇ ಸಂದರ್ಭದಲ್ಲಿ ಕೊಲಂಬೊ ನೌಕರರ ಒಕ್ಕೂಟದ ಅಧ್ಯಕ್ಷ ಎಸ್ಸಾರ್ ಪಾಳ್ಯದನ್ಮಂತ್ರಾಯ ಮಾತನಾಡುತ್ತ ಇಂದು ಸಮಾಜದಲ್ಲಿ ಕೊರಮ ಕೊರಚ ಲಂಬಾಣಿ ಭೋವಿ ಸಮಾಜದವರು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ನೆಲೆನಿಲ್ಲುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಹೊಲೆಯ ಮಾದಿಗ ಇನ್ನೀತರೆ ಸಮಾದವರು ನಮ್ಮ ಮಿತ್ರ ಸಮಾಜದವರು ಅವರನ್ನು ಟೀಕಿಸುವ ಉದ್ದೇಶವಿಲ್ಲ ಆದರೆ ಇತ್ತೀಚಿನ ರಾಜಕೀಯ ಬೆಳವಣಿಗೆಗಳಲ್ಲಿ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ವ್ಯವಸ್ಥೆಯಿಂದ ಕೊರಮ, ಕೊರಚ, ಲಂಬಾಣಿ, ಭೋವಿ ಸಮಾಜದವರನ್ನು ಕೈ ಬಿಡುವಂತೆ ಕಾಣದ ಕೈಗಳು ಹುನ್ನಾರ ನಡೆಸುತ್ತಿವೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದರು.
ಹಿಂದಿದ್ದ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಆಡಳಿತಾವಧಿಯಿಂದ ಇಲ್ಲಿಯವರೆಗೂ ಈ ನಾಲ್ಕು ಸಮಾಜದವರ ನಿರ್ಲಕ್ಷ್ಯದ ಹಿನ್ನೆಲೆ ಸದಾಶಿವ ಆಯೋಗದ ವರದಿಯ ವಿಚಾರಗಳನ್ನ ಮರೆಮಾಚುವ ಕಾರ್ಯ ನಡೆದಿದೆ. ಆಗಾಗಿ ಸರ್ಕಾರ ಮೊದಲು ವರದಿಯನ್ನು ಅಧ್ಯ ಯನ ನಡೆಸಿ ಎಲ್ಲಾ ಸಮಾಜದ ಮುಖ್ಯಸ್ಥರ ನಡುವೆ ಮುಕ್ತವಾಗಿ ಚರ್ಚೆಗೆ ಅನುಕೂಲ ಮಾಡಬೇಕು ಎಂದು ಒತ್ತಾಯಪಡಿಸಿದರು.
ಇನ್ನು ಗೌರವಾಧ್ಯಕ್ಷ ಶಂಕರಪ್ಪ ಮಾತನಾಡಿ ಈ ನಾಲ್ಕು ಜಾತಿಯವರ ವಸ್ತುಸ್ಥಿತಿಯ ವರದಿ ಬಹಿರಂಗ ಮಾಡದ ಹೊರತು ಒಳಮೀಸಲಾತಿ ಅಂಗೀಕರಿಸಬಾರದು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಇದೇ ವೇಳೆ ಕೊಲಂಬೊ ನೌಕರರ ಒಕ್ಕೂಟದ ಉಪಾಧ್ಯಕ್ಷ ಕಂದಾಯ ಇಲಾಖೆ ರವಿ, ಕಾರ್ಯದರ್ಶಿ ತಿಮ್ಮಾನಾಯ್ಕ, ಸಂಚಾಲಕ ಹನುಮೇಶ್,ಹನುಮಂತರಾಯಪ್ಪ, ಪದಾಧಿಕಾರಿ ವೆಂಕಟೇಶ್ ಈ ಸಂದರ್ಭದಲ್ಲಿದ್ದರು.
ವರದಿ: ನವೀನ್ ಕಿಲಾರ್ಲಹಳ್ಳಿ