IMG 20230622 WA0034

Tumkur :ಸ್ಮಾರ್ಟ್ ಸಿಟಿ’ ಯೋಜನೆಗಳ ಪ್ರಗತಿ ಪರಿಶೀಲನೆ….!

‘ಸ್ಮಾರ್ಟ್ ಸಿಟಿ’ ಯೋಜನೆಗಳ ಪ್ರಗತಿ ಪರಿಶೀಲನೆತುಮಕೂರು(ಕ.ವಾ.) ಜೂ.22: ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ: ಜಿ. ಪರಮೇಶ್ವರ್ ಅವರಿಂದು ಸ್ಮಾರ್ಟ್ ಸಿಟಿ, ಟೂಡಾ ಮತ್ತು ಪಿಡಬ್ಲ್ಯೂಡಿ ಇಲಾಖೆಗಳಿಂದ ಕೈಗೊಳ್ಳಲಾದ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ನಡೆಸಿದರು.ನಗರದ ಪ್ರವಾಸಿ ಮಂದಿರದಲ್ಲಿಂದು ನಡೆಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರದ ಯಾವುದೇ ಯೋಜನೆಗಳ ಅನುಷ್ಠಾನವನ್ನು ಮುಂದಿನ 50 ವರ್ಷಗಳ ಜನಸಂಖ್ಯೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರೂಪಿಸಬೇಕು ಮತ್ತು ಯೋಜನೆಗಳು ಜನರಿಗೆ ಸಂಪೂರ್ಣವಾಗಿ ಉಪಯೋಗವಾಗಬೇಕು ಎಂದರು.ಸ್ಮಾರ್ಟ್ ಸಿಟಿ ಯೋಜನೆಯಡಿ […]

Continue Reading
IMG 20230621 WA0025

ಪಾವಗಡ: ತಾಲೂಕಿನಾದ್ಯಂತ ನಡೆದ ವಿಶ್ವ ಯೋಗ ದಿನಾಚರಣೆ

ತಾಲೂಕಿನಾದ್ಯಂತ ಅತ್ಯುತ್ತಮವಾಗಿ ನಡೆದ ವಿಶ್ವ ಯೋಗ ದಿನಾಚರಣೆ. ಪಾವಗಡ : ಇಂದಿನ ಯಾಂತ್ರಿಕ ಯುಗದಲ್ಲಿ ಹೆಚ್ಚಿನ ಜನರು ಮಾನಸಿಕ ಒತ್ತಡದಿಂದ ಬಳಲುತ್ತಿದ್ದು.ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗವೊಂದೇ ಪ್ರಮುಖ ದಾರಿ ಎಂದು ಸಿದ್ದ ಸಮಾಧಿ ಯೋಗದ ಆಚಾರ್ಯರಾದ ವಿ ಎನ್ ರಾಮಲಿಂಗ ರೆಡ್ಡಿ ತಿಳಿಸಿದರು. ಪಟ್ಟಣದ ಜೈ ಗುರುದೇವ ಶಾಲೆಯಲ್ಲಿ ಏರ್ಪಡಿಸಿದ್ದ 9ನೇ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಅವರು ಮಾತನಾಡಿದರು. 2023ಕ್ಕೆ ಅಂತಾರಾಷ್ಟ್ರೀಯ ಯೋಗ ದಿನ ಸ್ಥಾಪನೆಯಾಗಿ 9ನೇ ವರ್ಷವನ್ನು ಪೂರೈಸುತ್ತದೆ. “ಒಂದು ಭೂಮಿ, […]

Continue Reading
DSC 4491 scaled

ತುಮಕೂರು :ನೂತನ ಜಿಲ್ಲಾಧಿಕಾರಿಯಾಗಿ ಶ್ರೀನಿವಾಸ್ ಕೆ.ಅಧಿಕಾರ ಸ್ವೀಕಾರ….!

ತುಮಕೂರು ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಶ್ರೀನಿವಾಸ್ ಕೆ. ಅವರು ಇಂದು, ಜೂನ್ 19, 2023ರಂದು ಪೂರ್ವಾಹ್ನ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭ ಪ್ರಭಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಸಿಇಓ ಡಾ: ಕೆ. ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ ಉಪಸ್ಥಿತರಿದ್ದರು.

Continue Reading
24 4 23 Vadrevu Fodder distribution 2

ಪಾವಗಡ:ಕ್ಯಾನ್ಸರ್ ತಪಾಸಣಾ ಶಿಬಿರ

ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ :ಕ್ಯಾನ್ಸರ್ ತಪಾಸಣಾ ಶಿಬಿರ ಪಾವಗಡ: ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದಲ್ಲಿ ಬೆಂಗಳೂರಿನ ಹೆಸರಾಂತ ಸಂಸ್ಥೆಯಾದ ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಹಾಗೂ ಕರ್ನಾಟಕ ಕ್ಯಾನ್ಸರ್ ಸೊಸೈಟಿ ಇವರ ಸಹಯೋಗದಲ್ಲಿ ದಿನಾಂಕ:19-6-2023ನೇ ಸೋಮವಾರ ಬೆಳಿಗ್ಗೆ 10 ರಿಂದ ಮಧ್ಯಾನ್ಹ 3 ರವರೆಗೆ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ ಮತ್ತು ಪ್ರತೀ ತಿಂಗಳ ಮೊದಲನೆಯ ಸೋಮವಾರ ನಿರಂತರವಾಗಿ ಆಯೋಜಿಸಲಾಗುತ್ತದೆ ಎಂದು ಸಂಸ್ಥೆಯ ಮುಖ್ಯಸ್ಥರಾದ […]

Continue Reading
IMG 20230614 WA0023

ಪಾವಗಡ: ರೈತರು ಜಮೀನು ನೀಡಿದರೆ ಸೋಲಾರ್ ಪಾರ್ಕ್ ವಿಸ್ತರಣೆ….!

Áವಗಡ ಸೋಲಾರ್ ಪಾರ್ಕ್‍ಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಇಂದನ ಸಚಿವ ಜಾರ್ಜ್ ಭೇಟಿ ತುಮಕೂರು(ಕ.ವಾ.) ಜೂ.14: ಜಿಲ್ಲೆಯ ಪಾವಗಡ ತಾಲ್ಲೂಕು ತಿರುಮಣಿಯಲ್ಲಿರುವ ಏಷ್ಯಾದ ಅತಿದೊಡ್ಡ ಸೋಲಾರ್ ಪಾರ್ಕ್‍ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.ತಿರುಮಣಿಯಲ್ಲಿರುವ ಕರ್ನಾಟಕ ಸೌರಶಕ್ತಿ ಅಭಿವೃದ್ಧಿ ನಿಗಮದ ಕಚೇರಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಸಚಿವರುಗಳು, ಇಲಾಖೆ ವತಿಯಿಂದ ನೀಡಿದ ಪ್ರಾತ್ಯಕ್ಷಿಕೆ ವೀಕ್ಷಿಸಿದರು. ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೋಲಾರ್ ಪಾರ್ಕ್‍ನಲ್ಲಿ […]

Continue Reading
DSC 9047 scaled

ತುಮಕೂರು: ಅನರ್ಹರು ಬಿಪಿಎಲ್ ಕಾರ್ಡ್ ಪಡೆದಿದ್ದರೆ ಕ್ರಿಮಿನಲ್ ಕೇಸ್…!

ಜನರ ನಿರೀಕ್ಷೆಗೆ ಅನುಗುಣವಾಗಿ ಜನಪರ ಕೆಲಸ ಮಾಡೋಣ-ಡಾ: ಜಿ. ಪರಮೇಶ್ವರ್ತುಮಕೂರು(ಕ.ವಾ) ಜೂ.12: ನಮ್ಮ ಸರ್ಕಾರ ಉತ್ತಮ ಆಡಳಿತ ನೀಡುವ ಭರವಸೆಯನ್ನು ನಾಡಿನ ಜನತೆಗೆ ನೀಡಿದೆ. ಜನರು ನಮ್ಮ ಸರ್ಕಾರದ ಮೇಲೆ ದೊಡ್ಡ ನಿರೀಕ್ಷೆಯನ್ನು ಹೊಂದಿದ್ದಾರೆ. ಆದುದರಿಂದ ಜನರ ನಿರೀಕ್ಷೆಗೆ ತಕ್ಕಂತೆ ನಾವೆಲ್ಲರೂ ಪ್ರಾಮಾಣಿಕವಾಗಿ ಜನರ ಕಲ್ಯಾಣ ಕೆಲಸಗಳನ್ನು ಮಾಡೋಣ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವರಾದ ಡಾ: ಜಿ. ಪರಮೇಶ್ವರ್ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ […]

Continue Reading
IMG 20230612 WA0009

ಪಾವಗಡ:ಖಾಸಗಿ ಶಾಲೆಗಳ ವಿರುದ್ಧ ಕ್ರಮ ಕ್ಕೆ ಆಗ್ರಹ…!

ಸರ್ಕಾರಿ ನಿಯಮಗಳನ್ನು ಉಲ್ಲಂಘಿಸುವ ಖಾಸಗಿ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ. ಪಾವಗಡ : ತಾಲೂಕಿನಲ್ಲಿರುವ ಕೆಲವು ಖಾಸಗಿ ಶಾಲೆಗಳು ಶಿಕ್ಷಣ ಇಲಾಖೆಯ ನಿಯಮಗಳನ್ನು ಗಳಿಗೆ ತೂರಿ ಮನ ಬಂದಂತೆ ಶಾಲೆಗಳನ್ನು ನಡೆಸುತ್ತಿವೆ ಎಂದು ತಾಲೂಕು ಮೀಸಲಾತಿ ಸಂರಕ್ಷಣಾ ಒಕ್ಕೂಟದ ಪದಾಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಬೇಟಿ ನೀಡಿ ಮನವಿ ಸಲ್ಲಿಸಿದರು. ಶಿಕ್ಷಣ ಇಲಾಖೆ ಪ್ರತಿ ಶನಿವಾರ ಎಲ್ಲಾ ಶಾಲೆಗಳಲ್ಲಿ ಮೊದಲ ಎರಡು ಅವಧಿಗಳು ದೈಹಿಕ ಶಿಕ್ಷಣಕ್ಕೆ ಮೀಸಲಿಟ್ಟಿದ್ದು, ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪ್ರಾಮುಖ್ಯತೆ ನೀಡಿದೆ. […]

Continue Reading
IMG 20230611 WA0041

ಪಾವಗಡ:ಶಕ್ತಿ ಯೋಜನೆಗೆ ಚಾಲನೆ…!

ಶಕ್ತಿ ಯೋಜನೆಗೆ ಚಾಲನೆ. ಪಾವಗಡ : ತಾಲೂಕಿನ ವಿಧಾನಸಭಾ ಸದಸ್ಯರಾದ ಹೆಚ್ ವಿ ವೆಂಕಟೇಶ್ ಮತ್ತು ಮಾಜಿ ಸಚಿವರಾದ ಶ್ರೀ ವೆಂಕಟರಮಣಪ್ಪ ನವರು ಭಾನುವಾರಪಾವಗಡ ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿ ಕಾಂಗ್ರೆಸ್ ಪಕ್ಷದ ಮಹತ್ವಕಾಂಕ್ಷಿಯೋಜನೆಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆಗೆ ಶಾಸಕ ಎಚ್.ವಿ ವೆಂಕಟೇಶ್ ಸ್ವತಹ ಪ್ರಯಾಣಿಕರಿಗೆ ಟಿಕೆಟ್ ನೀಡಿ, ಬಸ್ ಚಾಲನೆ ಮಾಡಿದರು. (ಈ ಯೋಜನೆಯು ಕರ್ನಾಟಕ ಸಾರಿಗೆ ನಿಗಮದ ಸರ್ಕಾರಿ ಬಸ್ ಗಳಲ್ಲಿ ರಾಜ್ಯದ ಮಹಿಳೆಯರಿಗೆ ಸಂಪೂರ್ಣ ಉಚಿತ ಪ್ರಯಾಣ ಹೊಂದಿರುತ್ತದೆ)ಈ ವೇಳೆ ನಗರ ಬ್ಲಾಕ್ […]

Continue Reading
IMG 20230608 WA0032

ಪಾವಗಡ:ವೈದ್ಯರುಗಳು ಇರುವುದು ರಾಜಕೀಯ ಮಾಡುವುದಕ್ಕಲ್ಲ….!

ವೈದ್ಯರುಗಳು ಇರುವುದು ಜನರ ಸೇವೆ ಮಾಡಲು ಹೊರೆತು ರಾಜಕೀಯ ಮಾಡುವುದಕ್ಕಲ್ಲ–ಶಾಸಕ ಹೆಚ್. ವಿ ವೆಂಕಟೇಶ್. ಪಾವಗಡ : ಇತ್ತೀಚಿಗೆ ಸಾರ್ವಜನಿಕ ಆಸ್ಪತ್ರೆಯ ವೈದ್ಯರ ನಡುವಿನ ಮಾತಿನ ಚಕಮಕಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು. ಪಾವಗಡ ಸರ್ಕಾರಿ ಆಸ್ಪತ್ರೆಯ ವೈದ್ಯರುಗಳ ನಡುವಿನ ಸಮಸ್ಯೆಯನ್ನು ಕೇಳಿ ತಿಳಿದು ಸಮಸ್ಯೆ ಬಗೆಹರಿಸಲು ಗುರುವಾರ ಶಾಸಕ ಹೆಚ್ ವಿ ವೆಂಕಟೇಶ್ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಬೇಟಿ ನೀಡಿ ವೈದ್ಯರುಗಳ ಸಭೆ ನಡೆಸಿದರು. ಸಮಾಜದಲ್ಲಿ ವೈದ್ಯ ವೃತ್ತಿಗೆ ಹೆಚ್ಚಿನ ಬೆಲೆ ಇದೆ. ವೈದ್ಯರು […]

Continue Reading
IMG 20230607 WA0033

ಪಾವಗಡ:ಬೆಸ್ಕಾಂ ಇಲಾಖೆಯವರು ರೈತರಿಂದ  ಸುಲಿಗೆ ಮಾಡುವುದನ್ನು ಮೊದಲು ನಿಲ್ಲಿಸಬೇಕು…!

ಬೆಸ್ಕಾಂ ಇಲಾಖೆಯವರು ರೈತರಿಂದ  ಸುಲಿಗೆ ಮಾಡುವುದನ್ನು ಮೊದಲು ನಿಲ್ಲಿಸಬೇಕು–ಶಾಸಕ ಹೆಚ್ ವಿ ವೆಂಕಟೇಶ್ ಪಾವಗಡ ‌: ಇತ್ತೀಚೆಗೆ  ಬೆಸ್ಕಾಂ ಇಂಜಿನಿಯರ್ ಗಳು ರೈತರಿಗೆ ವಿದ್ಯುತ್ ಸಂಪರ್ಕ ಕೊಡಲು  ಸುಲಿಗೆ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು. ಲಕ್ಷಾಂತರೂ ಸಾಲ ಮಾಡಿ ರೈತರು ಬೆಳೆಗಳನ್ನು ಇಟ್ಟಿರುತ್ತಾರೆ. ಅಂತಹ ರೈತರ ಕೆಲಸಗಳನ್ನು ಮಾಡಿಕೊಳ್ಳಲು ಬೆಸ್ಕಾಂ ಇಂಜಿನಿಯರ್ ಗಳು ಹಣ ಪಡೆಯುತ್ತಿರುವುದು ಸರಿಯಲ್ಲವೆಂದರು.ಪಟ್ಟಣದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ  ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಎಚ್ .ವಿ ವೆಂಕಟೇಶ್ ಮಾತನಾಡಿದರು. ಬೆಸ್ಕಾಂ ಇಂಜಿನಿಯರ್ […]

Continue Reading