IMG 20220331 WA0049

ಪಾವಗಡ:ವಿವಿಧ ಇಲಾಖೆ ಅಧಿಕಾರಿಗಳ ಜೊತೆ ತಹಶೀಲ್ದಾರ್ ಸಭೆ…!

DISTRICT NEWS ತುಮಕೂರು

ವಿವಿಧ ಇಲಾಖೆ ಅಧಿಕಾರಿಗಳ ಜೊತೆ ತಹಶೀಲ್ದಾರ್ ವರದರಾಜು ಸಭೆ

ಪಾವಗಡ:- ಇಂದು ಪಟ್ಟಣದ ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ವರದರಾಜುರವರ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು, ಖಾಸಗಿ ಬಸ್ ದುರಂತದಲ್ಲಿ ಏಳು ಜನ ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಮಂದಿ ಆಸ್ಪತ್ರೆ ಪಾಲಾಗಿದ್ದರು, ಈ ವಿಷಯದ ಪರವಾಗಿ ಚರ್ಚಿಸುವ ಉದ್ದೇಶದಿಂದಾಗಿ ತಾಲೂಕು ರೈತ ಮುಖಂಡರನ್ನು, ಮಧುಗಿರಿ ಆರ್.ಟಿ.ಓ ಅಧಿಕಾರಿಗಳನ್ನು, ತಾಲೂಕು ಪೊಲೀಸ್ ಅಧಿಕಾರಿಗಳನ್ನು, ಡಿಪೋ ಮ್ಯಾನೇಜರ್, ಹಾಗೂ ಖಾಸಗಿ ಬಸ್ ಗಳ ಮಾಲೀಕರನ್ನು ಸಭೆಗೆ ಕರೆಯಲಾಯಿತು,

ಖಾಸಗಿ ದುರಂತದ ಬಗ್ಗೆ ಪರಿಹಾರ ನೀಡುವ, ಮತ್ತು ಇಂತಹ ಘಟನೆಗಳು ಮರುಕಳಿಸಿದಂತೆ ಎಚ್ಚರವಹಿಸಲು ಅಗತ್ಯವಾದ ಕ್ರಮಗಳನ್ನು  ಕೈಗೊಳ್ಳಲು ಕೆಲವು ವಿಷಯಗಳನ್ನುಗಳನ್ನು ಚರ್ಚಿಸಲಾಯಿತು ,

ಅವುಗಳೆಂದರೆ 1) ಪಾವಗಡ ತಾಲೂಕಿನಾಂದ್ಯಂತ ಸಾರಿಗೆ ಇಲಾಖೆಯಿಂದ ನಾಲ್ಕು ಹೋಬಳಿಗಳಿಗೆ 20 ಗ್ರಾಮಾಂತರ ಸಾರಿಗೆಗಳನ್ನ ಪಾವಗಡ ಡಿಪೋ ಇಂದ ಸಾರಿಗೆ ಕಲ್ಪಿಸಬೇಕೆಂದು ತೀರ್ಮಾನಿಸಲಾಗಿದೆ.2) ಖಾಸಗೀ ಬಸ್ಸ್ ಮಾಲಿಕರು ಒವರ್ ಲೋಡ್‌ ಹಾಕಬಾರದೆಂದು ಮತ್ತು ಟಾಪ್ ಮೇಲೆ ಜನರು ಹತ್ತದಂತೆ ಸಿಬ್ಬಂದಿಗೆ ಎಚ್ಚರಿಕೆ ನೀಡಿ, ಟಾಪ್ ಸ್ಟಾಂಡ್ ಅನ್ನು ಕಿತ್ತಾಕಬೇಕೆಂದು ಸಮವಸ್ತ್ರ ಮತ್ತು ಪರವಾನಿಗೆ, ಮತ್ತು ಪಾನ ಮುಕ್ತರಾಗಿ ಬಸ್ ಓಡಿಸುವುದನ್ನು, ಬಸ್ ಚಾಲನೆ ಮಾಡುವಾಗ ಮೊಬೈಲ್ ಫೋನ್ ಅನ್ನು ಬಳಸದೆ ಅತಿ ವೇಗದಲ್ಲಿ ಚಲಿಸದಂತೆ ತಮ್ಮ ಸಿಬ್ಬಂದಿಗೆ ಖಾಸಗಿ ಬಸ್ ಮಾಲಿಕರು ಎಚ್ಚರಿಸ ಬೇಕಾಗಿ ತೀರ್ಮಾನಿಸಲಾಹಿತು. ಮುಂದೆ ಖಾಸಗಿ ಬಸ್ ನಿಂದ ಇಂತಹ ದುರ್ಗಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ.3) ಮಧುಗಿರಿ ವಿಭಾಗದ RTO ರವರೆಗೆ ತಮ್ಮ ವ್ಯಾಪ್ತಿಯ ಎಲ್ಲಾ ವಾಹನಗಳನ್ನು ತಪಾಸಣೆ ಮಾಡಬೇಕು ,ಒವರ್ ಲೋಡ್ ಅನ್ನು ತಡೆಯಬೇಕು , fitness ಇಲ್ಲದ ವಾಹನಗಳಿಗೆ FC ನೀಡಬಾರದು, ಆಟೊ ಚಾಲಕರು ಒವರ್ ಲೋಡ್ ಹಾಕದೆ ಮತ್ತು DL ಮತ್ತು insurance ಇಲ್ಲದೆ ಇರುವ ವಾಹನಗಳನ್ನು ಸ್ಥಗಿತ ಗೊಳಿಸ ಬೇಕೆಂದು ಸೂಚಿಸಲಾಯಿತು. ವಾರಕ್ಕೆ ಮೂರು ಬಾರಿ ಪಾವಗಡ ಪಟ್ಟಣದಲ್ಲಿ ಕಾರ್ಯ ನಿರ್ವಹಿಸ ಬೇಕಾಗಿ ಸೂಚಿಸಲಾಹಿತು.3) ಅಪಘಾತದಲ್ಲಿ ಮೃತರಾದ ಮತ್ತು ಗಾಯಾಳುಗಳಿಗೆ ಸೂಕ್ತ ಪರಿಹಾರವನ್ನು 20 ದಿನದ ಒಳಗೆ ತಲುಪಿಸಬೇಕಾಗಿ ಮಾನ್ಯ ತಹಶಿಲ್ದಾರರನ್ನು ಕೋರಲಾಯಿತು.4) ಪಾವಗಡ  ದಿಂದ ಪೆನುಗೊಂಡ ಮಾರ್ಗದಲ್ಲಿ ಬರೀ ಆಂದ್ರ ಬಸ್ ಸಂಚರಿಸುತ್ತಿದ್ದು ಈಗ ನಮ್ಮ KSRTC ಬಸ್ ಗಳು ಸಹ ಸಂಚರಿಸಿ ಗಡಿ ಗ್ರಾಮಗಳಿಗೆ ಸಾರಿಗೆ ಸವಲತ್ತನ್ನು ಕಲ್ಪಿಸಲು ಕೋರಲಾಯಿತು. ಪಾವಗಡದ ಎಲ್ಲಾ ಗಡಿ ಗ್ರಾಮಗಳಿಗೆ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ತೀರ್ಮಾನಿಸಲಾಯಿತು.ಮಾನ್ಯ ತಹಶಿಲ್ದಾರ್ ವರದರಾಜು ರವರು ಎಲ್ಲಾ ಅಧಿಕಾರಿಗಳಿಗೆ ತಾಲ್ಲೂಕು ರೈತ ಸಂಘದ ಮನವಿಯ ಮೇರೆಗೆ ಮೇಲೆ ಚರ್ಚಿಸಿದ ಎಲ್ಲಾ ವಿಷಯಗಳನ್ನು ಕಾನೂನು ರೀತಿಯ ಪಾಲಿಸಿ ಅಪಘಾತಗಳು ಮರುಕಳಿಸದೆ ಯುಗಾದಿ ಹಬ್ಬಕ್ಕೆ ಜನ ಸಂದಣಿ ಜಾಸ್ತಿಯಾಗುವುದರಿಂದ ಅಪಘಾತ ಸಂಭವಿಸದಂತೆ ಅಧಿಕಾರಿಗಳಿಗೆ ಆದೇಶಿಸಿದರು.ಈ ಸಭೆಗೆ ಹಾಜರಾದ ಎಲ್ಲಾ ಅಧಿಕಾರಿಗಳಿಗೆ ಮತ್ತು ಪತ್ರಿಕಾ ಮಿತ್ರರಿಗೆ ಮತ್ತು ಪಾವಗಡ ತಾಲ್ಲೂಕು ರೈತ ಸಂಘದ ಎಲ್ಲಾ ಸದಸ್ಯರಿಗೆ ಧನ್ಯವಾದಗಳನ್ನು ತಿಳಿಸಿದರು.
ಈ_ಬೇಡಿಕೆಗಳನ್ನು 30 ದಿವಸಗಳಲ್ಲಿ ನೆರವೇರಿಸದಿದ್ದಲ್ಲಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ರೈತ ಸಂಘದ ಅಧ್ಯಕ್ಷರು ಜಿ ನರಸಿಂಹ ರೆಡ್ಡಿ ಸಭೆಯಲ್ಲಿ ಎಚ್ಚರಿಸಿದರು