ವಕೀಲರ ಮೇಲೆ ಇನ್‌ಸ್ಪೆಕ್ಟರ್ ಹಲ್ಲೆ ಖಂಡಿಸಿ. ಪ್ರತಿಭಟನೆ.
ಪಾವಗಡ : ತುಮಕೂರು ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ದಿನೇಶ್‌ಕುಮಾರ್ ವಕೀಲ ರವಿಕುಮಾರ್ ಮೇಲೆ ಹಲ್ಲೆ ಮಾಡಿದ್ದನ್ನು ಖಂಡಿಸಿ ತಾಲ್ಲೂಕು ವಕೀಲರ ಸಂಘ ಬುಧವಾರ ಕೋರ್ಟ್ ಕಲಾಪಗಳನ್ನು ಬಹಿಷ್ಕರಿಸಿ
ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಶೀಲ್ದಾರ್ ವರದರಾಜು ರವರಿಗೆ ಮನವಿ ಪತ್ರ ಸಲ್ಲಿಸಿದರು.
ವಕೀಲರ ಮೇಲೆ ಪೊಲೀಸರ ದಾಳಿಯನ್ನು ಖಂಡಿಸಿ, ತಕ್ಷಣವೇ ಇನ್‌ಸ್ಪೆಕ್ಟರ್ ದಿನೇಶ್‌ಕುಮಾರ್ ಅಮಾನತು ಮಾಡುವಂತೆ ವಕೀಲರು ಆಗ್ರಹಿಸಿದರು.
ಪ್ರತಿಭಟನೆ ಉದ್ದೇಶಿಸಿ ವಕೀಲ ಕೆ.ಆರ್ ಜಯಸಿಂಹ ಮಾತನಾಡಿ.
ವಕೀಲರು ಸದಾಕಾಲ ನ್ಯಾಯಕ್ಕಾಗಿ ಹೋರಾಡುವವರು, ನ್ಯಾಯಕ್ಕಾಗಿ ಶ್ರಮಿಸುವವರು ಅಂತಹ ವಕೀಲರ ಮೇಲೆ ಪೊಲೀಸ್ ಇನ್‌ಸ್ಪೆಕ್ಟರ್ ಹಲ್ಲೆ ಮಾಡಿರೋದು ಖಂಡನೀಯ ವಿಷಯವೆಂದರು.
ಜಮೀನಿನ ವಿಷಯವೊಂದು ಹೈಕೋರ್ಟ್ ನಲ್ಲಿ ಇತ್ಯರ್ಥವಾಗದೆ ಇದ್ದರೂ ಸಹ ಇನ್‌ಸ್ಪೆಕ್ಟರ್ ಕಾನೂನು ಬಾಹಿರವಾಗಿ ಗುತ್ತಿಗೆದಾರನ ಪರವಾಗಿ ಕಾಮಗಾರಿ ನಡೆಸಲು ಮುಂದಾದಾಗ ಅದನ್ನು ಪ್ರಶ್ನಿಸಿದ ವಕೀಲನ ಮೇಲೆ ಏಕಾಏಕಿ ದಾಳಿ ಮಾಡಿ ಹಲ್ಲೆ ಮಾಡಿ ಕಾನೂನನ್ನು ಕೈಗೆ ತೆಗೆದುಕೊಂಡಿದ್ದಾರೆ, ಹೀಗಿರುವಾಗ ಸಾಮಾನ್ಯ ಬಡಜನರ ಪಾಡೇನು ಎಂದು ಪ್ರಶ್ನಿಸಿರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಕಾರ್ಯದರ್ಶಿ ಹೆಚ್.ಎ.ಪ್ರಭಾಕರ್ ರೆಡ್ಡಿ. ಉಪಾಧ್ಯಕ್ಷರಾದ ಹನುಮಂತರಾಯ, ವಕೀಲರಾದ ಮಂಜುನಾಥ್ ಪಿ.ಆರ್. ಶೀ ಚರಣ್ ಪೆದ್ದಯ್ಯ, ಶಾನುಬೋಗ್ ಜಯಸಿಂಹ ಕೆ.ಆರ್.ರವಿಂದ್ರಪ್ಪ ರಘುನಂದನ್ ಕೃಷ್ಣ ನಾಯ್ಕ ಶಾಮಣ್ಣ, ನಾಗರಾಜ್ ಮತ್ತಿತ್ತರು ಉಪಸ್ಥಿತರಿದ್ದರು.
ವರದಿ : ಶ್ರೀನಿವಾಸಲು. A