ಪಾವಗಡ ವಕೀಲರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಆರ್. ರಂಗನಾಥಪ್ಪ ಆಯ್ಕೆ.
ಪಾವಗಡ: ತಾಲೂಕಿನ ವಕೀಲರ ಸಂಘಕ್ಕೆ ಬುಧುವಾರ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಆರ್ ರಂಗನಾಥಪ್ಪ,
ಪ್ರಧಾನ ಕಾರ್ಯದರ್ಶಿಯಾಗಿ ಎಚ್ ಚಂದ್ರಪ್ಪ , ಉಪಾಧ್ಯಕ್ಷರಾಗಿ ಸಿ.ಎಚ್ ಹನುಮಂತರಾಯಪ್ಪ ಆಯ್ಕೆಯಾದರು.
ಅಧ್ಯಕ್ಷ ಸ್ಥಾನಕ್ಕೆ ಆರ್ ರಂಗನಾಥಪ್ಪ, ಹೆಚ್ ರಾಮಾಂಜನೇಯಲು, ಪಿಎಂ ರಾಜಶೇಖರ್, ವಿ ಡಿ ವೆಂಕಟಸ್ವಾಮಿ ನಾಮಪತ್ರ ಸಲ್ಲಿಸಿದರು.
ಉಪಾಧ್ಯಕ್ಷ ಸ್ಥಾನಕ್ಕೆ, ಎ ಎಸ್ ರಘುನಂದನ್ , ಎಚ್ ಸಿ ಹನುಮಂತರಾಯಪ್ಪ ನಾಮಪತ್ರ ಸಲ್ಲಿಸಿದರು.
ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ, ಎಚ್ ಚಂದ್ರಪ್ಪ, ಎಲ್. ಇ ನಾಗರಾಜು, ಎನ್ ರವೀಂದ್ರಪ್ಪ, ನಾಮಪತ್ರ ಸಲ್ಲಿಸಿದರು.
ಅಧ್ಯಕ್ಷ ಸ್ಥಾನಕ್ಕೆ ಆರ್ ರಂಗನಾಥಪ್ಪ 62 ಮತಗಳನ್ನು ಪಡೆದು ಆಯ್ಕೆಯಾಗಿದ್ದು. ಉಪಾಧ್ಯಕ್ಷ ಸ್ಥಾನಕ್ಕೆ ಸಿ.ಹೆಚ್ ಹನುಮಂತ ರಾಯಪ್ಪ 74 ಮತಗಳನ್ನು ಪಡೆದು ಆಯ್ಕೆಯಾಗಿದ್ದು.
ಅತ್ಯಂತ ಹೆಚ್ಚಿನ ಅಂತರದಲ್ಲಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ 81 ಮತಗಳನ್ನು ಪಡೆದು ಹೆಚ್. ಚಂದ್ರಪ್ಪ ಆಯ್ಕೆಯಾದರು.
ಎಸ್. ಎನ್. ಮುರಳಿಧರ್ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು.ಚುನಾವಣೆಯ ಸಮಯದಲ್ಲಿ ಪಾವಗಡ ಪೊಲೀಸ್ ಠಾಣೆಯ ಎಸ್ ಐ ಸುರೇಶ್ ಬಿಗಿ ಭದ್ರತೆಯನ್ನು ಏರ್ಪಡಿಸಿದ್ದರು.
ನೂತನವಾಗಿ ಆಯ್ಕೆಗೊಂಡ ಅಧ್ಯಕ್ಷ, ಉಪಾಧ್ಯಕ್ಷ, ಮತ್ತು ಪ್ರಧಾನ ಕಾರ್ಯದರ್ಶಿಯನ್ನು ವಕೀಲರು ಮತ್ತು ನ್ಯಾಯಾಲಯದ ಸಿಬ್ಬಂದಿಗಳು ಅಭಿನಂದಿಸಿ ಕಕ್ಷಿಧಾರರಿಗೆ ಸಿಹಿ ಹಂಚಿ ಸಂಭ್ರಮಿಸಿದರು.
ವರದಿ : ಶ್ರೀನಿವಾಸಲು ಎ
