ಪ್ರಾಂಶುಪಾಲರ ದಿಡೀರ್ ವರ್ಗಾವಣೆ. ಪೋಷಕರ ಪ್ರತಿಭಟನೆ.
ಪಾವಗಡ : ತಾಲ್ಲೂಕಿನ ಕೋಡಿಗೆಹಳ್ಳಿ ಗ್ರಾಮದ
ಮೊರಾರ್ಜಿ ದೇಸಾಯಿ ವಸತಿ ಶಾಲೆಯ(ಬಿ.ಸಿ-89) ಪ್ರಾಂಶುಪಾಲರನ್ನು ಬೇರೆ ಶಾಲೆಗೆ ವರ್ಗಾಯಿಸಿರುವುದನ್ನು ವಿರೋಧಿಸಿ ಶುಕ್ರವಾರ ವಿದ್ಯಾರ್ಥಿಗಳು ಮತ್ತು ನೂರಾರು ಪೋಷಕರು ಶಾಲೆಯ ಆವರಣದ ಮುಂಭಾಗ ಪ್ರತಿಭಟನೆ ನಡೆಸಿದರು.
ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ತಿಪ್ಪೇಸ್ವಾಮಿಯವರನ್ನು ಬೇರೆ ತಾಲೂಕಿಗೆ ವರ್ಗಾವಣೆ ಮಾಡಿರುವುದನ್ನು ಪೋಷಕರು ಖಂಡಿಸಿದರು.
ತಾಲ್ಲೂಕಿನ ಕೋಡಿಗೆಹಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಶಿಕ್ಷಣ ಕ್ಷೇತ್ರದಲ್ಲಿ ಒಂದು ಪ್ರತ್ಯೇಕ ಸ್ಥಾನವಿದೆಯೆಂದು ಸತತವಾಗಿ ಎರಡು ಮೂರು ವರ್ಷಗಳಿಂದ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಶೇಕಡ ನೂರರಷ್ಟು ಫಲಿತಾಂಶ ಮತ್ತು ಹೆಚ್ಚಿನ ವಿದ್ಯಾರ್ಥಿಗಳು ಅತ್ಯುನ್ನತ ಅಂಕಗಳನ್ನು ಗಳಿಸಲು ಸಿಬ್ಬಂದಿಗಳೊಂದಿಗೆ ಶ್ರಮಿಸುತ್ತಿರುವ ಪ್ರಾಂಶುಪಾಲರನ್ನು ಏಕಾಏಕಿ ವರ್ಗಾವಣೆ ಮಾಡಿರುವುದು ಎಷ್ಟು ಸರಿ ಎಂದು ಪೋಷಕರು ಪ್ರಶ್ನಿಸಿದರು.
ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಾಂಶುಪಾಲರಾದ ತಿಪ್ಪೇಸ್ವಾಮಿ ಅವರಿಗೆ ನೀಡಿರುವ ವರ್ಗಾವಣೆಯ ಆದೇಶವನ್ನು ಹಿಂಪಡೆಯವರೆಗೂ ನಿರಂತರ ಹೋರಾಟ ಮಾಡಲಾಗುವುದು ಹಾಗೂ ಶಾಸಕರಾದ ಎಚ್ ವಿ ವೆಂಕಟೇಶ್ ರವರಿಗೂ ಮತ್ತು ಸಂಸದರಾದ ಗೋವಿಂದ ಕಾರಜೋಳವರೆಗೂ ಮನವಿ ಪತ್ರವನ್ನು ನೀಡಲಾಗುವುದು ಎಂದು ಪ್ರತಿಭಟನಾ ನಿರತ ಪೋಷಕರು ತಿಳಿಸಿದರು.
ಈ ವೇಳೆ ಪೋಷಕರಾದ ಜಯಶೀಲ ರೆಡ್ಡಿ ಅವರು ಮಾತನಾಡುತ್ತಾ, ಪ್ರಾಂಶುಪಾಲರಾದ ತಿಪ್ಪೇಸ್ವಾಮಿ ರವರನ್ನು ಬೇರೆ ವಸತಿ ಶಾಲೆಗೆ ವರ್ಗಾವಣೆ ಮಾಡಿರುವುದರಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ಗಡಿ ಪ್ರದೇಶವಾದ ಈ ವಸತಿ ಶಾಲೆಯಲ್ಲಿ ಕಳಂಕ ರಹಿತ ಸೇವೆ ಸಲ್ಲಿಸುತ್ತಿದ್ದು, ವಿದ್ಯಾರ್ಥಿಗಳ ಏಳಿಗೆಗೆ ಪ್ರಾಮಾಣಿಕ ಪ್ರಯತ್ನ ಮಾಡಿರುವ ವ್ಯಕ್ತಿಯನ್ನು ಯಾವ ಕಾರಣಕ್ಕಾಗಿ ವರ್ಗಾವಣೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಕರ್ನಾಟಕ ವಸತಿ ಶಿಕ್ಷಣ ಸಂಘದ ವ್ಯಾಪ್ತಿಯ 793 ಶಾಲೆಗಳಲ್ಲಿ ಸತತವಾಗಿ ಎರಡು ವರ್ಷ 2ನೇ ರಾಂಕ್ ಪಡೆದಿರುವ ಶಾಲೆಯಾಗಿದ್ದು ಇಲ್ಲಿನ ಎಲ್ಲಾ ವಿದ್ಯಾರ್ಥಿಗಳನ್ನು ಸಹ ತುಂಬಾ ಜವಾಬ್ದಾರಿತವಾಗಿ ನೋಡಿಕೊಳ್ಳುವುದಲ್ಲದೆ ಅವರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುತ್ತಾರೆ.
ಆದ್ದರಿಂದ ನಮ್ಮ ಮಕ್ಕಳ ಹಿತದೃಷ್ಟಿಯಿಂದ ಇವರ ವರ್ಗಾವಣೆ ಆದೇಶವನ್ನು ರದ್ದುಪಡಿಸಿ ನಮ್ಮ ಶಾಲೆಯಲ್ಲಿಯೇ ಮುಂದುವರೆಸಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅನುವು ಮಾಡಿಕೊಡಬೇಕೆಂದು ಆಗ್ರಿಸಿದರು.
ಈ ಸಂದರ್ಭದಲ್ಲಿ ಪೋಷಕರಾದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ದುರ್ಗಣ್ಣ, ಡೈರಿ ಗಂಗಣ್ಣ, ಜಂಪಲಪ್ಪ, ಬಸವರಾಜು, ನಿಡಗಲ್ ಮಲ್ಲಣ್ಣ, ಕೆ ಟಿ ಹಳ್ಳಿ ಮಂಜುನಾಥ್, ವೀರನಾರಾಯಣ ,ಕೆಂಚರಾಯ, ಪಾಲನಾಯಕ, ಗಿರಿಯಪ್ಪ ,ನಟರಾಜ್, ನಿರಂಜನ್ ,ರಘು, ಓಬಳೇಶ್, ಗಿರೀಶ್, ಕಾಂತರಾಜು, ಕವಿತಾ, ಸೋಮಶೇಖರ್, ರಾಜಮ್ಮ, ಹನುಮಂತರಾಯಪ್ಪ ,ನಾಗಭೂಷಣ, ಪಾಲಪ್ಪ ,ಗುಣೆಗೌಡ ,ಸುಕನ್ಯಮ್ಮ, ಮಂಜುಳಾ, ನರೇಶ್ ಬಾಬು,ಮಂಜುನಾಥ್, ರಮೇಶ್, ಬಾಗ್ಯಲಕ್ಷ್ಮಿ ,ಚಿತ್ತಯ್ಯ,ಈರಮುದ್ದಣ್ಣ ,ಜಯರಾಮ, ಭಕ್ತೇಶ ,ಗುಜ್ಜಾರಪ್ಪ, ಎಚ್ ರೆಡ್ಡಿ ,ಈರಣ್ಣ ಉಪಸ್ಥಿತರಿದ್ದರು
