IMG 20250705 WA0010

ಪಾವಗಡ : ಓರಿಗಾಮಿಯಲ್ಲಿ ಗಣಿತ ಕಾರ್ಯಗಾರ….!

DISTRICT NEWS ತುಮಕೂರು

ಓರಿಗಾಮಿಯಲ್ಲಿ ಗಣಿತ ಕಾರ್ಯಗಾರ”

ಪಾವಗಡ :   ವೈ ಎನ್ ಹೊಸಕೋಟೆಯ | ರಾಷ್ಟ್ರೀಯ ವಿದ್ಯಾಪೀಠ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಓರಿಗಾಮಿ ಮತ್ತು ಪಾಪಪ್ ಕಲೆಗಳ ಬಗ್ಗೆ ಪರಿಚಯ ಹಾಗೂ ಗಣಿತದ ಮಾದರಿಗಳನ್ನು ತಯಾರಿಸುವ ಬಗ್ಗೆ ಕಾರ್ಯಗಾರವನ್ನು ಇಂದು ಹಮ್ಮಿ ಕೊಳ್ಳಲಾಗಿತ್ತು.

ಶ್ರೀಯುತ ಮಧು ಶ್ರೀನಿವಾಸನ್, ರಾಜ್ಯ ಸಂಪನ್ಮೂಲ ವ್ಯಕ್ತಿ ರವರ ನಿರ್ದೇಶನದಲ್ಲಿ ಅತ್ಯಂತ ಯಶಸ್ವಿಯಾಗಿ ಆಯೋಜನೆ  ಮಾಡಿದರು..IMG 20250705 WA0009

ರಾ. ವಿ. ಪೀ. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಎನ್. ಆರ್. ಅಶ್ವಥ್ , ಅಧ್ಯಕ್ಷರಾದ ಇ. ವಿ. ಶ್ರೀಧರ್ ಹಾಗೂ ಮು. ಶಿ. ರಾದ ಶ್ರೀಯುತ ಬಿ. ತಿಪ್ಪೇಸ್ವಾಮಿ ರವರಿಂದ ವಿವಿಧ ಓರಿಗಾಮಿ ಚಟುವಟಿಕೆ ಮಾಡಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ಶಾಲೆಯ ಸುಮಾರು 120 ವಿದ್ಯಾರ್ಥಿಗಳು ಇದರ ಲಾಭವನ್ನು ಪಡೆದುಕೊಂಡಿರುತ್ತಾರೆ ಶ್ರೀಯುತ ಮಧು ಶ್ರೀನಿವಾಸನ್ ರವರು
ಪಾಪ್ ಅಪ್ ಕಲೆಯ ಮೂಲಕ ವಿವಿಧ ಸಮತಲಾಕೃತಿಗಳು, ಘನಾಕೃತಿಗಳು, ಬೀಜಗಣಿತದ ಸೂತ್ರಗಳು ಪ್ರಮೇಯಗಳು… ಮುಂತಾದವುಗಳನ್ನು ಪ್ರದರ್ಶಿಸಿದ್ದು ಅತ್ಯಂತ ಆಕರ್ಷಣೀಯ ಹಾಗೂ ಅರ್ಥಪೂರ್ಣವಾಗಿತ್ತು .

ಶಾಲೆಯ ಶಿಕ್ಷಕರುಗಳಾದ ಉಮರ್ ಫಾರೂಕ್, ವಿನೋದ್ ಕುಮಾರ್, ಅನಿಲ್ ಕುಮಾರ್ ಹಾಗೂ ಶಿಕ್ಷಕಿಯಾದ ಸೌಜನ್ಯ ರವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶ್ರೀಯುತ ಅನಿಲ್ ಕುಮಾರ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.