IMG 20260302 WA0015

ಪಾವಗಡ : ಎಸ್. ಸಿ . ಹಾಗೂ ಎಸ್. ಟಿ ಸಂಘಟನೆಗಳ ವತಿಯಿಂದ ಮಾರ್ಚ್ 6ರಂದು ತಾಲ್ಲೂಕಿನಲ್ಲಿ ಬೃಹತ್ ಪ್ರತಿಭಟನೆ…..!

DISTRICT NEWS ತುಮಕೂರು

ಎಸ್. ಸಿ . ಹಾಗೂ ಎಸ್. ಟಿ ಸಂಘಟನೆಗಳ ವತಿಯಿಂದ ಮಾರ್ಚ್ 6ರಂದು ತಾಲ್ಲೂಕಿನಲ್ಲಿ ಬೃಹತ್ ಪ್ರತಿಭಟನೆ.

ಪಾವಗಡ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೀಸಲಾತಿಯನ್ನು 9ನೇ ಅನುಸೂಚಿಗೆ ಸೇರಿಸಲು ಒತ್ತಾಯಿಸಿ ಎಸ್. ಸಿ . ಹಾಗೂ ಎಸ್. ಟಿ ಸಂಘಟನೆಗಳ ವತಿಯಿಂದ ಮಾರ್ಚ್ 6ರಂದು ಬೃಹತ್ ಪ್ರತಿಭಟನೆ ನಡೆಸಲಾಗುವುದೆಂದು ಮುಖಂಡ ಲೋಕೇಶ್ ಪಾಳೆಗಾರ್ ತಿಳಿಸಿದರು.

ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಎಸ್. ಸಿ . ಹಾಗೂ ಎಸ್. ಟಿ ಸಂಘಟನೆಗಳ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕರ್ನಾಟಕ ರಾಜ್ಯ ಸರ್ಕಾರ 2002ರಲ್ಲಿ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು 15 ರಿಂದ 17ಕ್ಕೆ ಏರಿಸಿದ್ದು, ಪರಿಶಿಷ್ಟ ಪಂಗಡದ ಮೀಸಲಾತಿಯನ್ನು 3 ರಿಂದ 7 ಕ್ಕೆ ಏರಿಸಿದ್ದು, ಈ ಮೀಸಲಾತಿಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು 9ನೇ ಅನುಸೂಚಿಗೆ ಸೇರಿಸದೆ ಈ ಸಮುದಾಯಗಳಿಗೆ ಅನ್ಯಾಯ ಮಾಡುತ್ತಿರುವುದನ್ನು ಖಂಡಿಸಿ ಮಾರ್ಚ್ 6ರಂದು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಮಾದರ ಮಹಾಸಭಾಧ್ಯಕ್ಷ ನರಸಿಂಹಪ್ಪ ಮಾತನಾಡಿ ರಾಜ್ಯ ಸರ್ಕಾರ ಶೋಷಿತರ ಬೇಡಿಕೆಗೆ ಕಿವಿಗೊಡದೆ 56,000 ಹುದ್ದೆಗಳನ್ನು ಭರ್ತಿ ಮಾಡಲು ಹೊರಟಿದ್ದು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಮರಣ ಶಾಸನ ಬರೆದಂತಾಗಿದೆ ಎಂದರು
ಮದಕರಿ ಸೇನೆ ಅಧ್ಯಕ್ಷ ಡಾ. ಓಂಕಾರ್ ನಾಯಕ ಮಾತನಾಡಿ ತಾಲೂಕಿನ ಎಲ್ಲಾ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳು ಒಂದಾಗಿ ಸೇರಿ ಶುಕ್ರವಾರ ಪಾವಗಡ ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟು ಶ್ರೀ ಶನಿ ಮಹಾತ್ಮ ವೃತ್ತದ ಮುಖಾಂತರ ತಹಸಿಲ್ದಾರ್ ಕಚೇರಿ ಹತ್ತಿರ ಬೃಹತ್ ಪ್ರತಿಭಟನೆ ಮಾಡಿ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ಪ್ರತಿಭಟನೆಗೆ ಹಮ್ಮಿಕೊಂಡಿದ್ದು ಈ ಪ್ರತಿಭಟನೆಗೆ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ .ಪರಿಶಿಷ್ಟ ಪಂಗಡದ ಸಮುದಾಯದ ಬಂಧುಗಳ ಭಾಗವಹಿಸುವಂತೆ ಕರೆ ನೀಡಿದರು
ಈ ಸಂದರ್ಭದಲ್ಲಿ ಕೋರ್ಟ್ ನರಸಪ್ಪ. ಕನ್ನಮೇಡಿ.ಕೃಷ್ಣಮೂರ್ತಿ. ಎಸ್ ಹನುಮಂತಪ್ಪ. ರಾಮಾಂಜಿನಪ್ಪ. ಜ್ಞಾನೇಶ್ ಬಾಬು. ಆನಂದ್. ಟಿ.ಪಿ. ನರಸಿಂಹ. ಮಲ್ಲಿ. ಮಂಜುನಾಥ್ ಪಾಳೇಗಾರ. ಅಂಜಿ ನಾಯಕ. ಬೇಕರಿ ನಾಗರಾಜ್. ವಕೀಲ ರಾಜಣ್ಣ. ಮಲ್ಲಿಕಾರ್ಜುನ್. ಮಂಜುನಾಥ್. ಬಸವಲಿಂಗಪ್ಪ. ಹನುಮಂತರಾಯಪ್ಪ. ಕರವೇ ಲಕ್ಷ್ಮೀನಾರಾಯಣ. ಗ್ಯಾದಿಗುಂಟೆ ಮಲ್ಲಿಕಾರ್ಜುನ್ ಮುಂತಾದವರು ಭಾಗವಹಿಸಿದ್ದರು.

ವರದಿ : ಶ್ರೀನಿವಾಸಲು ಎ