IMG 20260815 WA0017 scaled

ಪಾವಗಡ : ಶನೇಶ್ವರ ದೇವಾಲಯಕ್ಕೆ ಹರಿದು ಬಂದ ಭಕ್ತ ಸಾಗರ….!.

DISTRICT NEWS ತುಮಕೂರು

 

ಮೊದಲಶ್ರಾವಣ ಶನಿವಾರ. ಶನೇಶ್ವರ ದೇವಾಲಯಕ್ಕೆ ಹರಿದು ಬಂದ ಭಕ್ತ ಸಾಗರ.

ಪಾವಗಡ: ತಾಲೂಕಿನ ಸುಪ್ರಸಿದ್ಧ ಶ್ರೀ ಶನಿಮಹಾತ್ಮ ದೇವಾಲಯಕ್ಕೆ ಮೊದಲನೇ ಶ್ರಾವಣ ಶನಿವಾರದ ಅಂಗವಾಗಿ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತಾದಿಗಳು ಬೆಳಗಿನಿಂದಲೇ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು.

ಮೊದಲನೇ ಶ್ರಾವಣ ಶನಿವಾರದ ಅಂಗವಾಗಿ ಬೆಳಿಗ್ಗೆ ನಾಲ್ಕು ಗಂಟೆಯಿಂದಲೇ ಮೂಲ ವಿಗ್ರಹಕ್ಕೆ ಅಭಿಷೇಕ, ಪಂಚಾಮೃತ ತೈಲಾಭಿಷೇಕ, ಶನೇಶ್ವರ ಸ್ವಾಮಿಗೆ ಕುಂಕುಮಾರ್ಚನೆ ರುದ್ರಾಭಿಷೇಕ ಮಹಾಮಂಗಳಾರತಿ ಮುಂತಾದ ಕೈಂಕರ್ಯ ಮಾಡಲಾಯಿತು ಎಂದು ಆಗಮಿಸಿದ ಭಕ್ತರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದು,

ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯಲು ಭಕ್ತಾದಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ, ಮೊದಲನೇ ಶ್ರಾವಣ ಶನಿವಾರದಂದು ದೇವಾಲಯಕ್ಕೆ ಸುಮಾರು 20 ಸಾವಿರ ಭಕ್ತಾದಿಗಳು ದೇವರ ದರ್ಶನ ಪಡೆದಿದ್ದು 25 ಜನ ಖಾಸಗಿ ಭದ್ರತಾ ಸಿಬ್ಬಂದಿ, 200 ಜನ ಸ್ವಯಂಸೇವಕರನ್ನು ಭದ್ರತಾ ಕಾರ್ಯಕ್ಕೆ ನೇಮಿಸಿ ಭಕ್ತಾದಿಗಳಿಗೆ ಭದ್ರತೆಯನ್ನು ಕಲ್ಪಿಸಲಾಗಿದೆ ಎಂದು ಶ್ರೀ ಶನಿಮಹಾತ್ಮ ಕಾರ್ಯನಿರ್ವಾಹ ಸಂಘದ ಖಜಾಂಚಿ ಹಾಗೂ ಪಟ್ಟಣ ಪಂಚಾಯಿತಿಯ ಮಾಜಿ ಅಧ್ಯಕ್ಷ ಸುದೇಶ್ ಕುಮಾರ್ ತಿಳಿಸಿದರು.

ಶ್ರೀ ಶನಿಮಹಾತ್ಮ ಕಾರ್ಯನಿರ್ವಾಹಕ ಸಂಘದ ನಿರ್ದೇಶಕರಾದ ಎನ್ ಆರ್ ಅಶ್ವತ್ ಮಾತನಾಡಿ.

IMG 20260815 WA0014

ಶ್ರಾವಣ ಮಾಸದ ಮೊದಲ ದಿನ ಹೆಚ್ಚಿನ ಜನ ಭಕ್ತಾದಿಗಳು ದೇವರ ದರ್ಶನಕ್ಕೆ ಆಗಮಿಸುತ್ತಾರೆ ಎಂಬ ಮುಂದಾಲೋಚನೆಯಿಂದಲೇ
ಶಾಸಕರಾದ ಹೆಚ್ ವಿ ವೆಂಕಟೇಶ್ ರವರ ನೇತೃತ್ವದಲ್ಲಿ ಎಸ್ ಎಸ್ ಕೆ ಸಂಘ ಮತ್ತು ಅಧಿಕಾರಿಗಳು ಸಭೆಯನ್ನು ಕರೆದು ಮಾತುಕತೆ ನಡೆಸಲಾಯಿತು ಎಂದರು.

ಶನೈಶ್ಚರ ದೇಗುಲದ ಪ್ರಾಂಗಣ, ಗರ್ಭಗುಡಿಗೆ ಚಿನ್ನದ ಲೇಪನ ಮಾಡಲಾಗಿದ್ದು, ಬಂದಂತಹ ಭಕ್ತಾದಿಗಳಿಗೆ ಯಾವುದೇ ತೊಂದರೆ ಇಲ್ಲದೆ ಊಟದ ವ್ಯವಸ್ಥೆ ಪ್ರಸಾದ ವಿನಿಯೋಗ ಮಾಡಲಾಯಿತು ಎಂದರು. ಬದ್ರದಿಗಾಗಿ ಯಶಸ್ವಿ ಕಾಲೇಜಿನ ಸುಮಾರು 200 ಜನ ವಿದ್ಯಾರ್ಥಿಗಳನ್ನು ಸ್ವಯಂಸೇವಕರಾಗಿ ನೇಮಕ ಮಾಡಲಾಗಿದೆ ಎಂದರು.

ಎಸ್ ಎಸ್ ಕೆ ಸಂಘದ ನಿರ್ದೇಶಕರಾದ ಆನಂದ್ ರಾವ್ ಮಾತನಾಡಿ. ಮೊದಲ ಶ್ರಾವಣ ಶನಿವಾರ ಶನೇಶ್ವರ ಸ್ವಾಮಿ ದರ್ಶನಕ್ಕೆ ಬರುವ ಭಕ್ತಾದಿಗಳಿಗಾಗಿ ದೇವಸ್ಥಾನದ ಸೇವಾ ಭವನದ ಮೂರು ಕಡೆಗಳಲ್ಲಿ 400 ಭಕ್ತಾದಿಗಳು ಒಟ್ಟಿಗೆ ಕುಳಿತು ಸಾಮೂಹಿಕ ಪೂಜೆಯಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು, ಭಕ್ತಾದಿಗಳಿಗೆ ಮುಡಿಸೇವೆ , ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾದ ಸ್ನಾನ ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ, ಶುಕ್ರವಾರ ರಾತ್ರಿಯಿಂದಲೇ ಬರುವ ಭಕ್ತಾದಿಗಳಿಗಾಗಿ ಡಾರ್ಮೆಟ್ರಿ ವ್ಯವಸ್ಥೆ, ಅನ್ನಪೂರ್ಣೇಶ್ವರಿ ಭವನದಲ್ಲಿ ಭಕ್ತಾದಿಗಳಿಗೆ ಊಟ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಿಳಿಸಿದರು.

ಭಕ್ತರು ಸಾಲಿನಲ್ಲಿ ನಿಂತು ದರ್ಶನ ಪಡೆದು.ಎಣ್ಣೆ ದೀಪ ಹಚ್ಚಿ, ಎಳ್ಳು ನೈವೇದ್ಯ ಹಾಗೂ ವಿಶೇಷ ಪೂಜೆಗಳನ್ನು ಸಲ್ಲಿಸಲಾಯಿತು.ಶನಿ ದೋಷ ನಿವಾರಣೆಗಾಗಿ ಭಕ್ತರು ವಿಶೇಷ ಹರಕೆಗಳನ್ನು ತೀರಿಸಿದರು.
ಶನೈಶ್ಚರ ವೃತದಿಂದ ಬಳ್ಳಾರಿ ರಸ್ತೆ ಮತ್ತು ತುಮಕೂರು ರಸ್ತೆಯ ಇಕ್ಕೆಲಗಳಲ್ಲಿ ಅಲಂಕಾರಿಕ ದೀಪಗಳ ವ್ಯವಸ್ಥೆ ಮಾಡಲಾಯಿತು.
ದೇವಸ್ಥಾನವನ್ನು ವಿವಿಧ ಬಗೆಯ ಹೂಗಳಿಂದ ಅಲಂಕರಿಸಲಾಯಿತು.

ವರದಿ : ಶ್ರೀನಿವಾಸಲು ಎ

Leave a Reply

Your email address will not be published. Required fields are marked *