IMG 20260822 WA0001

ಆನೇಕಲ್ : ಡಾ. ಅಗರ್ವಾಲ್ಸ್ ಕಣ್ಣಿನ ಆಸ್ಪತ್ರೆನ ನೂತನ ಅತ್ಯಾಧುನಿಕ ನೇತ್ರ ಆರೈಕೆ ಕೇಂದ್ರ ಆರಂಭ….!

BUSINESS

ಬೆಂಗಳೂರಿನ ಸರ್ಜಾಪುರದಲ್ಲಿ ಡಾ. ಅಗರ್ವಾಲ್ಸ್ ಕಣ್ಣಿನ ಆಸ್ಪತ್ರೆ ನೂತನ ಅತ್ಯಾಧುನಿಕ ನೇತ್ರ ಆರೈಕೆ ಕೇಂದ್ರ ಆರಂಭ

  • 13,000 ಚದರ ಅಡಿ ವಿಸ್ತೀರ್ಣದ ನೂತನ ಕೇಂದ್ರವು ಬೆಂಗಳೂರಿನಲ್ಲಿ ಡಾ. ಅಗರ್ವಾಲ್ಸ್ ಕಣ್ಣಿನ ಆಸ್ಪತ್ರೆ 16ನೇ ಕೇಂದ್ರವಾಗಿದೆ 
  • ವೇಗವಾಗಿ ಬೆಳೆಯುತ್ತಿರುವ ಸರ್ಜಾಪುರ ಕಾರಿಡಾರ್ನಲ್ಲಿ ಅತ್ಯಾಧುನಿಕ ಡಯಾಗ್ನೋಸ್ಟಿಕ್ಸ್, ಶಸ್ತ್ರಚಿಕಿತ್ಸಾ ತಂತ್ರಜ್ಞಾನ ಮತ್ತು ಸೂಪರ್ ಸ್ಪೆಷಾಲಿಟಿ ನೇತ್ರ ಆರೈಕೆ ಒಂದೇ ಸೂರಿನಡಿ ಲಭ್ಯ 

ಬೆಂಗಳೂರು, 22 ಆಗಸ್ಟ್ 2026: ದೇಶದ ಪ್ರಮುಖ ನೇತ್ರ ಆರೈಕೆ ಜಾಲಗಳಲ್ಲಿ ಒಂದಾದ ಡಾ. ಅಗರ್ವಾಲ್ಸ್ ಕಣ್ಣಿನ ಆಸ್ಪತ್ರೆ, ಬೆಂಗಳೂರಿನ ಸರ್ಜಾಪುರದಲ್ಲಿ ತನ್ನ ನೂತನ ಅತ್ಯಾಧುನಿಕ ನೇತ್ರ ಆರೈಕೆ ಕೇಂದ್ರವನ್ನು ಇಂದು ಆರಂಭಿಸಿದೆ. 13,000 ಚದರ ಅಡಿ ವಿಸ್ತೀರ್ಣ ಹೊಂದಿರುವ ಕೇಂದ್ರವು ಬೆಂಗಳೂರಿನಲ್ಲಿ ಸಂಸ್ಥೆಯ 16ನೇ ಕೇಂದ್ರವಾಗಿದ್ದು, ನಗರದ ವೇಗವಾಗಿ ಬೆಳೆಯುತ್ತಿರುವ ವಸತಿ ಮತ್ತು ಕಾರ್ಪೊರೇಟ್ ಪ್ರದೇಶಗಳಲ್ಲಿ ಒಂದಾಗಿರುವ ಸರ್ಜಾಪುರದ ಜನರಿಗೆ ಸಮಗ್ರ ಮತ್ತು ವಿಶ್ವಮಟ್ಟದ ನೇತ್ರ ಆರೈಕೆಯನ್ನು ಇನ್ನಷ್ಟು ಹತ್ತಿರಕ್ಕೆ ತರುತ್ತದೆ.

ಸಂಪೂರ್ಣ ನೇತ್ರ ಆರೈಕೆ ಕೇಂದ್ರವಾಗಿ ವಿನ್ಯಾಸಗೊಳಿಸಲಾಗಿರುವ ಕೇಂದ್ರದಲ್ಲಿ ಅತ್ಯಾಧುನಿಕ ಡಯಾಗ್ನೋಸ್ಟಿಕ್ ಸೌಲಭ್ಯಗಳು, ಸ್ಟೆರೈಲ್ ಮಾಡ್ಯುಲರ್ ಆಪರೇಷನ್ ಥಿಯೇಟರ್ಗಳನ್ನು ಹೊಂದಿರುವ ಪ್ರತ್ಯೇಕ ಶಸ್ತ್ರಚಿಕಿತ್ಸಾ ವಿಭಾಗ ಹಾಗೂ ಕ್ಯಾಟರಾಕ್ಟ್, ರಿಫ್ರ್ಯಾಕ್ಟಿವ್/LASIK, ಗ್ಲಾಕೋಮಾ, ರೆಟಿನಾ ಮತ್ತು ಪೀಡಿಯಾಟ್ರಿಕ್ ನೇತ್ರವಿಜ್ಞಾನ ಸೇರಿದಂತೆ ವಿವಿಧ ಸೂಪರ್ ಸ್ಪೆಷಾಲಿಟಿ ಕ್ಲಿನಿಕ್ಗಳು ಒಂದೇ ಸೂರಿನಡಿ ಲಭ್ಯವಿವೆ.

ಇಲ್ಲಿ ಕ್ಯಾಟರಾಕ್ಟ್ ಮತ್ತು ರಿಫ್ರ್ಯಾಕ್ಟಿವ್ ಶಸ್ತ್ರಚಿಕಿತ್ಸೆಗಳು (LASIK ಮತ್ತು ReLEx SMILE), ರೆಟಿನಾ ಮತ್ತು ಗ್ಲಾಕೋಮಾ ಆರೈಕೆ, ಕಾರ್ನಿಯಾ ಚಿಕಿತ್ಸೆ, Glued IOL, ಡ್ರೈ ಮತ್ತು ಕೆರಾಟೋಕೋನಸ್ ನಿರ್ವಹಣೆ, ಮಕ್ಕಳ ನೇತ್ರ ಆರೈಕೆ, ಒಕ್ಯುಲೋಪ್ಲಾಸ್ಟಿ, ಕಾಂಟ್ಯಾಕ್ಟ್ ಲೆನ್ಸ್ ಸೇವೆಗಳು, ಇನ್ಹೌಸ್ ಫಾರ್ಮಸಿ ಮತ್ತು ಸಂಪೂರ್ಣ ಡಯಾಗ್ನೋಸ್ಟಿಕ್ ಬೆಂಬಲ ಸೇರಿದಂತೆ ಹಲವು ಸೇವೆಗಳು ಲಭ್ಯವಿವೆ.IMG 20260822 WA0002

ರೋಗಿಗಳು ವಾಕ್ಇನ್ ಮತ್ತು ಆನ್ಲೈನ್ ಸಮಾಲೋಚನೆ, ಕ್ಯಾಶ್ಲೆಸ್ ಇನ್ಶೂರೆನ್ಸ್ ಪ್ರೊಸೆಸಿಂಗ್, TPA ಮೂಲಕ ಕ್ಲೇಮ್ಗಳ ನಿರ್ವಹಣೆ, ಬಹುಭಾಷಾ ಬೆಂಬಲ ಹಾಗೂ ಶಸ್ತ್ರಚಿಕಿತ್ಸೆಗೂ ಮುನ್ನ ಮತ್ತು ನಂತರದ ಕೌನ್ಸೆಲಿಂಗ್ ಸೌಲಭ್ಯಗಳನ್ನು ಪಡೆಯಬಹುದು.

ಕೇಂದ್ರದಲ್ಲಿ OCT, Fundus Photography, Corneal Topography ಮತ್ತು Optical Biometry ಸೇರಿದಂತೆ ಅತ್ಯಾಧುನಿಕ ಡಯಾಗ್ನೋಸ್ಟಿಕ್ ಸೌಲಭ್ಯಗಳಿವೆ. ಶಸ್ತ್ರಚಿಕಿತ್ಸಾ ತಂತ್ರಜ್ಞಾನದಲ್ಲಿ Advanced Phacoemulsification, Femtosecond Laser-Assisted Cataract Surgery, LASIK, Femto-LASIK, SMILE ಮತ್ತು Contoura Vision ಸೌಲಭ್ಯಗಳು ಲಭ್ಯವಿವೆ. ತುರ್ತು ಮತ್ತು ಟ್ರಾಮಾ ನೇತ್ರ ಆರೈಕೆಯನ್ನೂ ಇಲ್ಲಿ ಒದಗಿಸಲಾಗುತ್ತದೆ. ಆಂಬ್ಯುಲೆನ್ಸ್ ಬೆಂಬಲಕ್ಕಾಗಿ ಸಮೀಪದ ಸೌಲಭ್ಯದೊಂದಿಗೆ ಟೈಅಪ್ ಮಾಡುವ ಯೋಜನೆಯೂ ಇದೆ.

ಡಾ. ಶ್ರೀನಿವಾಸನ್ ಜಿ. ರಾವ್, ರೀಜನಲ್ ಹೆಡ್ಕ್ಲಿನಿಕಲ್ ಸರ್ವಿಸಸ್, ಕರ್ನಾಟಕ, ಡಾ. ಅಗರ್ವಾಲ್ಸ್ ಕಣ್ಣಿನ ಆಸ್ಪತ್ರೆ, ಸರ್ಜಾಪುರ, ಮಾತನಾಡಿ,

ಸರ್ಜಾಪುರ ಕೇಂದ್ರವನ್ನು ಅತ್ಯಾಧುನಿಕ ಡಯಾಗ್ನೋಸ್ಟಿಕ್ಸ್ನಿಂದ ಹಿಡಿದು ಸಂಕೀರ್ಣ ಶಸ್ತ್ರಚಿಕಿತ್ಸಾ ವಿಧಾನಗಳವರೆಗೆ ಪ್ರತಿಯೊಂದು ಹಂತದ ನೇತ್ರ ಆರೈಕೆಯನ್ನು ಒಂದೇ ಸೂರಿನಡಿ ಒದಗಿಸುವ ಉದ್ದೇಶದಿಂದ ನಿರ್ಮಿಸಲಾಗಿದೆ. ಇನ್ನು ಮುಂದೆ ಪ್ರದೇಶದ ರೋಗಿಗಳು ವಿಶೇಷ ಚಿಕಿತ್ಸೆಗೆ ನಗರದ ಬೇರೆ ಭಾಗಗಳಿಗೆ ತೆರಳಬೇಕಾದ ಅಗತ್ಯವಿಲ್ಲ. ಸಾಮಾನ್ಯ ಸಮಾಲೋಚನೆಯಾಗಿರಲಿ, ಕ್ಯಾಟರಾಕ್ಟ್ ಮೌಲ್ಯಮಾಪನವಾಗಿರಲಿ ಅಥವಾ ಸಂಕೀರ್ಣ ರೆಟಿನಾ ಅಥವಾ ಕಾರ್ನಿಯಾ ಸಮಸ್ಯೆಯಾಗಿರಲಿ, ನಮ್ಮ ತಂಡ ಮತ್ತು ತಂತ್ರಜ್ಞಾನಗಳು ಇಲ್ಲಿಯೇ ಅದನ್ನು ನಿರ್ವಹಿಸಲು ಸಜ್ಜಾಗಿವೆ. ನಮ್ಮ ಎಲ್ಲಾ ಪ್ರಮುಖ ಕೇಂದ್ರಗಳಲ್ಲಿ ಅನುಸರಿಸುವ ಅದೇ ಕ್ಲಿನಿಕಲ್ ಗುಣಮಟ್ಟವನ್ನು ಇಲ್ಲಿಯೂ ಒದಗಿಸುತ್ತೇವೆ.”

ಕೇಂದ್ರದ ಉದ್ಘಾಟನೆಯ ಅಂಗವಾಗಿ, ಹೊಸ ಕೇಂದ್ರಕ್ಕೆ ಭೇಟಿ ನೀಡುವ ಎಲ್ಲಾ ರೋಗಿಗಳಿಗೆ ಉಚಿತ ಕಣ್ಣಿನ ಸಮಾಲೋಚನೆ ನೀಡಲಾಗುತ್ತಿದೆ. ಇದರ ಜೊತೆಗೆ, ಸಮೀಪದ ಪ್ರದೇಶಗಳಲ್ಲಿ ಉಚಿತ ಸಮುದಾಯ ನೇತ್ರ ತಪಾಸಣಾ ಶಿಬಿರಗಳು ಹಾಗೂ ಕ್ಯಾಟರಾಕ್ಟ್, ಗ್ಲಾಕೋಮಾ, ಡಯಾಬಿಟಿಕ್ ರೆಟಿನೋಪತಿ ಮತ್ತು ಮಕ್ಕಳ ಕಣ್ಣಿನ ಆರೋಗ್ಯ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಸರ್ಜಾಪುರಕ್ಕೆ ಪ್ರವೇಶಿಸುವುದು ಬೆಂಗಳೂರಿನ ವೇಗವಾಗಿ ಬೆಳೆಯುತ್ತಿರುವ ವಸತಿ ಪ್ರದೇಶಗಳಲ್ಲಿ ಒಂದನ್ನು ಗಮನದಲ್ಲಿಟ್ಟುಕೊಂಡಿರುವ ದತ್ತಾಂಶ ಆಧಾರಿತ ವಿಸ್ತರಣಾ ಯೋಜನೆಯ ಭಾಗವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ IT ವೃತ್ತಿಪರರು, ಯುವ ಕುಟುಂಬಗಳು ಮತ್ತು ವಲಸೆ ಬಂದಿರುವ ಜನಸಂಖ್ಯೆ ಹೊಂದಿರುವ ಪ್ರದೇಶವು Wipro Sarjapur, Bellandur, RMZ Ecospace ಮತ್ತು Embassy TechVillage ಮುಂತಾದ ಪ್ರಮುಖ ಉದ್ಯೋಗ ಕೇಂದ್ರಗಳಿಗೆ ಸಮೀಪದಲ್ಲಿದೆ. HSR Layout ಮತ್ತು Bellandurಗೆ ಉತ್ತಮ ಸಂಪರ್ಕ ಹೊಂದಿರುವುದರಿಂದ, ಡಾ. ಅಗರ್ವಾಲ್ಸ್ ಹಾಸ್ಪಿಟಲ್ಗೆ ಪ್ರದೇಶದಲ್ಲಿ ಸ್ಥಳೀಯ ಮತ್ತು ಸುಲಭವಾಗಿ ತಲುಪಬಹುದಾದ ನೇತ್ರ ಆರೈಕೆ ಮಾದರಿಯನ್ನು ವಿಸ್ತರಿಸಲು ಉತ್ತಮ ಅವಕಾಶ ದೊರೆಯುತ್ತದೆ.

ಡಾ. ಸೌಮ್ಯಾ ಎಂ., ಸೀನಿಯರ್ ಕನ್ಸಲ್ಟೆಂಟ್ಆಫ್ತಾಲ್ಮಾಲಜಿಸ್ಟ್, ಡಾ. ಅಗರ್ವಾಲ್ಸ್ ಕಣ್ಣಿನ ಆಸ್ಪತ್ರೆ, ಸರ್ಜಾಪುರ, ಮಾತನಾಡಿ,

ಸರ್ಜಾಪುರದಲ್ಲಿ ಯುವ ವೃತ್ತಿಪರರು ಮತ್ತು ಕುಟುಂಬಗಳ ಸಂಖ್ಯೆ ಹೆಚ್ಚಿದ್ದು, ಸ್ಕ್ರೀನ್ ಬಳಕೆಯಿಂದ ಉಂಟಾಗುವ ಕಣ್ಣಿನ ಸಮಸ್ಯೆಗಳ ಪರಿಣಾಮವನ್ನು ನಾವು ಈಗಾಗಲೇ ಗಮನಿಸುತ್ತಿದ್ದೇವೆ. ಡಿಜಿಟಲ್ ಸ್ಟ್ರೈನ್ನಿಂದ ಹಿಡಿದು ಮಕ್ಕಳಲ್ಲಿ ಹೆಚ್ಚುತ್ತಿರುವ ಮಯೋಪಿಯಾ ವರೆಗೆ ಹಲವು ಸಮಸ್ಯೆಗಳು ಕಂಡುಬರುತ್ತಿವೆ. ರೋಗಿಗಳು ಸಮಸ್ಯೆ ಗಂಭೀರವಾದ ನಂತರ ಮಾತ್ರ ಚಿಕಿತ್ಸೆ ಪಡೆಯುವುದಕ್ಕಿಂತ, ಆರಂಭಿಕ ಹಂತದಲ್ಲಿಯೇ ನಿಯಮಿತ ತಪಾಸಣೆ ಮತ್ತು ಸುಲಭವಾಗಿ ಲಭ್ಯವಿರುವ ಆರೈಕೆಯ ಮೂಲಕ ಸಮಸ್ಯೆಗಳನ್ನು ಗುರುತಿಸುವುದು ನಮ್ಮ ಉದ್ದೇಶವಾಗಿದೆ.”

ಹೊಸ ಕೇಂದ್ರದೊಂದಿಗೆ, ಡಾ. ಅಗರ್ವಾಲ್ಸ್ ಕಣ್ಣಿನ ಆಸ್ಪತ್ರೆ ಇದೀಗ ಬೆಂಗಳೂರಿನಲ್ಲಿ 16 ಕೇಂದ್ರಗಳನ್ನು ನಿರ್ವಹಿಸುತ್ತಿದೆ. ಇದು ಕರ್ನಾಟಕದಲ್ಲಿ ತನ್ನ ಸ್ಥಳೀಯ ವಿಸ್ತರಣಾ ಕಾರ್ಯತಂತ್ರವನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ, ದಕ್ಷಿಣ ಭಾರತದಲ್ಲಿ ತನ್ನ ನೇತ್ರ ಆರೈಕೆ ನಾಯಕತ್ವವನ್ನು ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ರೋಗಿಗಳು ನಗರದ ದೂರದ ಪ್ರದೇಶಗಳಿಗೆ ಪ್ರಯಾಣಿಸುವ ಅಗತ್ಯವನ್ನು ಕಡಿಮೆ ಮಾಡುವುದರ ಜೊತೆಗೆ, ಕೇಂದ್ರವು ಸಮಗ್ರ ಮತ್ತು ಸುಲಭವಾಗಿ ಲಭ್ಯವಿರುವ ನೇತ್ರ ಆರೈಕೆಯನ್ನು ಒದಗಿಸುತ್ತದೆ.

ಬೆಂಗಳೂರಿನ IT ಉದ್ಯೋಗಿಗಳಲ್ಲಿ ಹೆಚ್ಚುತ್ತಿರುವ Computer Vision Syndrome ಮತ್ತು Dry Eye, ಚಿಕ್ಕ ವಯಸ್ಸಿನಲ್ಲೇ ಸ್ಕ್ರೀನ್ ಬಳಕೆಯಿಂದ ಹೆಚ್ಚುತ್ತಿರುವ ಮಕ್ಕಳ ಮಯೋಪಿಯಾ, ಹಾಗೂ ಡಯಾಬಿಟಿಕ್ ರೆಟಿನೋಪತಿ ಮತ್ತು ಗ್ಲಾಕೋಮಾಗಾಗಿ ನಿಯಮಿತ ತಪಾಸಣೆಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರವನ್ನು ಆರಂಭಿಸಲಾಗಿದೆ. ವಿಸ್ತರಣೆಯ ಭಾಗವಾಗಿ, ಬೆಂಗಳೂರಿನ ಸಮೀಪದ ನೇತ್ರ ತಜ್ಞರು, ಕ್ಲಿನಿಕ್ಗಳು ಮತ್ತು ಆರೋಗ್ಯ ಸಂಸ್ಥೆಗಳೊಂದಿಗೆ ಸಹಯೋಗ ಹಾಗೂ ರೆಫರಲ್ ಪಾಲುದಾರಿಕೆಗಳನ್ನು ರೂಪಿಸುವ ಯೋಜನೆಯೂ ಇದೆ.

Leave a Reply

Your email address will not be published. Required fields are marked *