IMG 20210502 WA0010

ಪಾವಗಡ: ಲಾಕ್ ಡೌನ್ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ…!

DISTRICT NEWS ತುಮಕೂರು

ಪಾವಗಡ:  ಲಾಕ್‌ಡೌನ್‌ ನಿಯಮ ಉಲ್ಲಂಘನೆ: ವಾಹನ ಜಪ್ತಿ ಮಾಡುವುದಾಗಿ ಎಚ್ಚರಿಕೆ. ಜನ-ವಾಹನಗಳ ಸಂಚಾರವಿಲ್ಲದೇ ಬಹುತೇಕ ಎಲ್ಲ ಪ್ರಮುಖ ರಸ್ತೆಗಳು, ವೃತ್ತಗಳು ಬಿಕೋ ಎನ್ನುತ್ತಿದ್ದವು

. ಪಟ್ಟಣದಲ್ಲಿ ಕಂದಾಯ, ಪೊಲೀಸ್‌ ಇಲಾಖೆ, ಪುರಸಭೆ ಮತ್ತು ಪೊಲೀಸ್‌ಇಲಾಖೆ ಅಧಿಕಾರಿಗಳುಜಂಟಿಯಾಗಿ ಬೆಳಿಗ್ಗೆ ರಸ್ತೆಗಳಿದ ಪರಿಣಾಮ ಜನರು ಮನೆಯಿಂದ ಬರಲಿಲ್ಲ. ಪಾವಗಡ ಲಾಕ್‌ಡೌನ್‌ ನಿಯಮಗಳನ್ನು ಮೀರಿ ಅಂಗಡಿ ತೆರೆದ ಮಾಲೀಕರು, ಅನವಶ್ಯಕವಾಗಿ ತಿರುಗಾಡಿದ ವಾಹನ ಸವಾರರಿಗೆ ಪೊಲೀಸ್, ತಹಶೀಲ್ದಾರ್ ಹಾಗೂ ಪಟ್ಟಣ ಪುರಸಭೆ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿ ದಂಡ ವಿಧಿಸಿದರು

.ಮಾಸ್ಕ್ ಹಾಕದೇ ಅನವಶ್ಯಕವಾಗಿ ತಿರುಗಾಡುತ್ತಿದ್ದ ದ್ವಿಚಕ್ರ ವಾಹನ ಸವಾರರನ್ನು ತಹಶೀಲ್ದಾರ್ ನಾಗರಾಜು ಹಾಗೂ ಪಿಎಸ್ಐ ವೆಂಕಟೇಶ್ ತಡೆದು ದಂಡ ಹಾಕುವ ಜತೆಗೆ ವಾಹನಗಳನ್ನು ಜಪ್ತಿ ಮಾಡುವುದಾಗಿ ಎಚ್ಚರಿಕೆ ನೀಡಿದರು

ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಅರ್ಚನಾ ಹಾಗೂ ಸಿಬ್ಬಂದಿ ವರ್ಗದವರು ಪೊಲೀಸ್ ಇಲಾಖೆ ಸಿಬ್ಬಂದಿ ವರ್ಗದವರು ಕಂದಾಯ ಇಲಾಖೆ ಅಧಿಕಾರಿಗಳು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಿವಕುಮಾರಯ್ಯ. ಹಾಗೂ ಇನ್ನೂ ಮುಂತಾದವರು ಉಪಸ್ಥಿತರಿದ್ದರು

 

ವರದಿ: ಬುಲೆಟ್ ವೀರಸೇನಯಾದವ್